ರೆಮೋ ಡಿಸೋಜಾ ಪತ್ನಿ 40 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಇಲ್ಲಿದೆ ಡಯಟ್, ವರ್ಕೌಟ್ ವಿವರ
ಬಾಲಿವುಡ್‌ನ ಪ್ರಸಿದ್ಧ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಪತ್ನಿ ಲಿಜೆಲ್ 105 ಕೆಜಿ ಇದ್ದರು. ಆದರೆ, 2 ವರ್ಷಗಳ ಸಾಧನೆಯಲ್ಲಿ ಅವರು ಬರೋಬ್ಬರಿ 40 ಕೆಜಿ ತೂಕ ಕಳೆದುಕೊಂಡಿದ್ದಾರೆ.

ತೂಕವನ್ನು ಕಳೆದುಕೊಳ್ಳುವುದು ಒಂದು ದಿನದ ಸಾಧನೆಯಲ್ಲ, ಇದು ಸಾಕಷ್ಟು ಏರುಪೇರುಗಳಿಂದ ತುಂಬಿದ ಪ್ರಯಾಣವಾಗಿದ್ದು ಬದ್ಧತೆ ಇಲ್ಲದಿದ್ದರೆ ಖಂಡಿತಾ ಸಾಧನೆ ಸಾಧ್ಯವಿಲ್ಲ. ಎಷ್ಟೋ ಜನರು ತೂಕ ಇಳಿಸುವ ಪ್ರಯತ್ನವನ್ನು ಅರ್ಧದಲ್ಲೇ ಕೈ ಬಿಡುತ್ತಾರೆ. ಆದರೆ, ನಿಜವಾಗಿ ಹಟ ಹಿಡಿದು ಮಾಡಿದರೆ ತೂಕ ಇಳಿಕೆ ಖಂಡಿತಾ ನಿಮಗೆ ನೀವು ಕೊಟ್ಟುಕೊಳ್ಳುವ ದೊಡ್ಡ ಬಹುಮಾನವಾಗಿದೆ.
ಇದೋ ಇಲ್ನೋಡಿ ಬಾಲಿವುಡ್‌ನ ಪ್ರಸಿದ್ಧ ನೃತ್ಯ ಸಂಯೋಜಕ ರೆಮೋ ಡಿಸೋಜಾ ಅವರ ಪತ್ನಿ ಲಿಜೆಲ್ಲೆ ಅವರ ಪ್ರೇರಣಾದಾಯಕ ರೂಪಾಂತರ.
ಬರೋಬ್ಬರಿ 105 ಕೆಜಿ ತೂಗುತ್ತಿದ್ದ ಲಿಜೆಲ್ ಹಟ ಹಿಡಿದು ತೂಕ ಇಳಿಕೆ ಪ್ರಯಾಣದಲ್ಲಿ ತೊಡಗಿದ್ದಕ್ಕೆ 2.5 ವರ್ಷಗಳಲ್ಲಿ 40 ಕೆಜಿ ಇಳಿಸಿ ಇಂದು ಫಿಟ್ ಆಗಿದ್ದಾರೆ. ಇವರ ಫ್ಯಾಟ್ ಟು ಫಿಟ್ ಕತೆ ಪ್ರೇರಣಾದಾಯಕವಾಗಿದೆ.
ಕಷ್ಟಪಟ್ಟಿದ್ದು ಸಾರ್ಥಕ
ಈ ರೂಪಾಂತರಕ್ಕಾಗಿ ನಾನು ನನ್ನ ಜೀವನಶೈಲಿಯನ್ನು ಬದಲಾಯಿಸಿದೆ, ನಾನು ಇದಕ್ಕಾಗಿ ತಡವಾಗಿ ಕೆಲಸ ಮಾಡಿದೆ. ಇದಕ್ಕಾಗಿ ನಾನು ತಿನ್ನುವುದನ್ನು ಬದಲಾಯಿಸಿದೆ. ಇದಕ್ಕಾಗಿ ನಾನು ಬೆವರು ಹರಿಸುತ್ತೇನೆ.
ಇದಕ್ಕಾಗಿ ನಾನು ಅಳುತ್ತಿದ್ದೆ. ಇದಕ್ಕಾಗಿ ನಾನು ಭಾರ ಎತ್ತುತ್ತೇನೆ. ಇದಕ್ಕಾಗಿ ಪ್ರತಿ ದಿನ ವರ್ಕ್ ಔಟ್ ಮಾಡುತ್ತೇನೆ. ನಾನು ಇದನ್ನು ಮಾಡಿದ್ದೇನೆ ಮತ್ತು ಇದು ಯೋಗ್ಯವಾಗಿದೆ. ನಾನು ಅದಕ್ಕೆ ಯೋಗ್ಯಳಾಗಿದ್ದೇನೆ ಎಂದು ಲಿಜೆಲ್ ಹೇಳುತ್ತಾರೆ.
ಲಿಜೆಲ್ ಡಯಟ್ ಮತ್ತು ವರ್ಕೌಟ್ ವಿವರ
ಜನವರಿ 2019 ರಲ್ಲಿ ತನ್ನ ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಿದ ಲಿಜೆಲ್, ಮೊದಲ ವರ್ಷದಲ್ಲಿ ಸುಮಾರು 15-20 ಕಿಲೋಗಳನ್ನು ಕಳೆದುಕೊಂಡರು. ಇದಕ್ಕಾಗಿ ಆರಂಭದಲ್ಲಿ ಅವರು ಇಂಟರ್ಮಿಟೆಂಟ್ ಫಾಸ್ಟಿಂಗ್ ಕೈಗೊಂಡರು.
15 ಗಂಟೆಗಳ ಕಾಲ ಉಪವಾಸದಿಂದ ಶುರು ಮಾಡಿದ ಲಿಜಿಲ್, ನಂತರ 20 ಗಂಟೆಗಳ ಕಾಲ ಉಪವಾಸ ಇರುತ್ತಿದ್ದರಂತೆ. ಅಂದರೆ, ದಿನಕ್ಕೆ ಒಂದೇ ಬಾರಿ ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೂಡಾ ಕಾರ್ಬೋಹೈಡ್ರೇಟ್ ಸೇವಿಸುತ್ತಿರಲಿಲ್ಲ.
ನಂತರ ವರ್ಕೌಟ್ ಆರಂಭಿಸಿದ ಆಕೆ ತೂಕ ತರಬೇತಿ ಹಾಗೂ ಪ್ರತಿ ಸಂಜೆ ವಾಕಿಂಗ್ ಮಾಡುತ್ತಿದ್ದರು. ಈ ರೀತಿಯಾಗೇ ಮೊದಲ ವರ್ಷ 20 ಕೆಜಿ ಹತ್ತಿರ ಕಳೆದುಕೊಂಡರು.
ಬಳಿಕ ಕೀಟೋ ಡಯಟ್ ಬಗ್ಗೆ ಎಲ್ಲರೂ ಹೆದರಿಸಿದರೆಂದು ಡಯಟ್ ಬದಲಿಸಿಕೊಂಡರಂತೆ. ಚೀಟ್ ಡೇಸ್‌ನಲ್ಲಿ ಪಿಜ್ಜಾ ಬರ್ಗರ್ ಸೇವಿಸುವ ಬದಲಿಗೆ ಪಾನಿಪೂರಿ, ಸ್ಪ್ರೌಟ್ಸ್ ಚಾಟ್‌ನಂಥ ಆಹಾರ ಅನುಸರಿಸಿದರು.
ಏನೇ ಆದರೂ ಸೋಲೊಪ್ಪಿಕೊಳ್ಳದ, ಬದ್ಧತೆ ಇರುವ ಗುಣವೇ ತನಗೆ ವರವಾಯಿತು ಎಂದು ಲಿಜೆಲ್ ಹೇಳಿದ್ದಾರೆ. ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ. ಏನಂತೀರಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.