MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Red Banana : ಸಿಗರೇಟು ವಿಮೋಚನೊ ಈ ಹಣ್ಣು the best

Red Banana : ಸಿಗರೇಟು ವಿಮೋಚನೊ ಈ ಹಣ್ಣು the best

ಬಾಳೆಹಣ್ಣಿನ (Banana)  ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅನೇಕ ವಿಟಮಿನ್ಸ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇದು ವರ್ಷ ಪೂರ್ತಿ ಸಿಗುವ ಹಣ್ಣು. ಆದರೆ ನೀವು ಎಂದಾದರೂ ಕೆಂಪು ಬಾಳೆಹಣ್ಣುಗಳನ್ನು (Red Banana) ನೋಡಿದ್ದೀರಾ? ಹೌದು, ಪ್ರಪಂಚದಾದ್ಯಂತ ಸಾವಿರಕ್ಕೂ ಹೆಚ್ಚು ಬಾಳೆ ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ಕೆಂಪು ಬಾಳೆಹಣ್ಣು.

2 Min read
Suvarna News | Asianet News
Published : Nov 15 2021, 08:24 PM IST
Share this Photo Gallery
  • FB
  • TW
  • Linkdin
  • Whatsapp
19

ಹಳದಿ ಬಾಳೆಹಣ್ಣುಗಳಂತೆ (yellow banana), ಕೆಂಪು ಮೃದು ಮತ್ತು ಸಿಹಿಯಾಗಿರುತ್ತದೆ. ಆದರೆ ಇದರಲ್ಲಿ ಹಳದಿ ಬಾಳೆಹಣ್ಣಿನಲ್ಲಿ ಇರೋದಕ್ಕಿಂತ ಹೆಚ್ಚಿನ ಪೋಷಕಾಂಶಗಳಿವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ಕೆಂಪು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳೋಣ...

29

ಕೆಂಪು ಬಾಳೆಹಣ್ಣುಗಳಲ್ಲಿ ಇರುವ ಪೋಷಕಾಂಶಗಳು
100 ಗ್ರಾಂ ಕೆಂಪು ಬಾಳೆಹಣ್ಣಿನಲ್ಲಿ 74.91 ಗ್ರಾಂ ನೀರು, 89 ಕ್ಯಾಲೊರಿಗಳು, 0.33 ಗ್ರಾಂ ಕೊಬ್ಬು, 1.9 ಗ್ರಾಂ ಪ್ರೋಟೀನ್, 22.84 ಗ್ರಾಂ ಕಾರ್ಬೋಹೈಡ್ರೇಟ್ಗಳು, 2.6 ಗ್ರಾಂ ಫೈಬರ್, 12.23 ಗ್ರಾಂ ಸಕ್ಕರೆ, 5 ಮಿಗ್ರಾಂ ಕ್ಯಾಲ್ಸಿಯಂ, 0.26 ಮಿಗ್ರಾಂ ಕಬ್ಬಿಣ, 27 ಮಿಗ್ರಾಂ ಮೆಗ್ನೀಸಿಯಮ್, 22 ಮಿಗ್ರಾಂ ರಂಜಕ, 358 ಮಿಗ್ರಾಂ ಪೊಟ್ಯಾಸಿಯಮ್, 8.7 ಮಿಗ್ರಾಂ ವಿಟಮಿನ್ ಸಿ, 0.37 ಮಿಗ್ರಾಂ ವಿಟಮಿನ್ ಬಿ6 ಮತ್ತು 20 ಮೈಕ್ರೊಗ್ರಾಂ ಫೋಲೇಟ್.
 

39

ಕೆಂಪು ಬಾಳೆಹಣ್ಣುಗಳು ಹೇಗೆ ಕಾಣುತ್ತವೆ (how red banana looks)?
ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣುಗಳಿಗಿಂತ ಸ್ವಲ್ಪ ಚಿಕ್ಕದಾಗಿ ಮತ್ತು ದಪ್ಪವಾಗಿರುತ್ತವೆ. ಈ ಬಾಳೆಹಣ್ಣುಗಳು ಸ್ವಲ್ಪ ಮೃದು ಮತ್ತು ಸಿಹಿಯಾಗಿರುತ್ತವೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅದೇ ಸಮಯದಲ್ಲಿ, ಅಗತ್ಯ ಆಂಟಿಆಕ್ಸಿಡೆಂಟ್ ಗಳು ಸಹ ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ.

49

ತೂಕ ಇಳಿಸುವಲ್ಲಿ ಪರಿಣಾಮಕಾರಿ (weight lose)
ಕೆಂಪು ಬಾಳೆಹಣ್ಣುಗಳಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬುವಂತೆ ಮಾಡುತ್ತದೆ. ಇದು ನಿಮಗೆ ಹಸಿವನ್ನು ನಿಯಂತ್ರಿಸುತ್ತದೆ. ಮತ್ತು ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಕೆಂಪು ಬಾಳೆಹಣ್ಣುಗಳು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿ. 

59

ಮೂತ್ರಪಿಂಡಗಳಿಗೆ ಪ್ರಯೋಜನಕಾರಿ (useful to kidney problems)
ಕೆಂಪು ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದೆ, ಇದು ಮೂತ್ರಪಿಂಡ ಅಥವಾ ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ. ಇದು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಮೂಳೆಗಳ ಬೆಳವಣಿಗೆಗೆ ಒಳ್ಳೆಯದು ಮತ್ತು ಅವುಗಳನ್ನು ಬಲಪಡಿಸುತ್ತದೆ.

69

ಸಿಗರೇಟು ವ್ಯಸನವನ್ನು (cigarette addict) ತೊಡೆದುಹಾಕುತ್ತದೆ
ಕೆಂಪು ಬಾಳೆಹಣ್ಣುಗಳಲ್ಲಿ ಮೆಗ್ನೀಷಿಯಮ್ ಮತ್ತು ಪೊಟ್ಯಾಷಿಯಮ್ ಇವೆ, ಇದು ಧೂಮಪಾನದ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಶಕ್ತಿ ಮತ್ತು ಪೂರ್ಣ ಅನುಭವವನ್ನು ನೀಡುತ್ತದೆ, ಇದು ಮಾನಸಿಕ ಸಮಸ್ಯೆಗಳನ್ನು ಎದುರಿಸಲು  ಸಹಾಯ ಮಾಡುತ್ತದೆ. ಧೂಮಪಾನ ಸಮಸ್ಯೆ ನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ. 

79

ಚರ್ಮಕ್ಕೆ ಅದ್ಭುತ (best for skin)
ಕೆಂಪು ಬಾಳೆಹಣ್ಣು ತಿನ್ನಲು ಮಾತ್ರವಲ್ಲದೆ ಮುಖದ ಮೇಲೆ ಹಚ್ಚಲು ತುಂಬಾ ಒಳ್ಳೆಯದು. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಿ, ಕಲೆಗಳನ್ನು ತೆಗೆದುಹಾಕುತ್ತದೆ. ಇದರ ಫೇಸ್ ಪ್ಯಾಕ್ ತಯಾರಿಸಲು ಓಟ್ಸ್, ಹಿಸುಕಿದ ಕೆಂಪು ಬಾಳೆಹಣ್ಣು ಮತ್ತು ಕೆಲವು ಹನಿ ಜೇನು ತುಪ್ಪವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ ನಂತರ ತೊಳೆಯಿರಿ.

89

ರಕ್ತವನ್ನು ಶುದ್ಧೀಕರಿಸುತ್ತದೆ (blood purifier)
ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ಸ್ ಸಮೃದ್ಧವಾಗಿದ್ದು, ಇದು ದೇಹದಲ್ಲಿನ ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅನ್ನು ಸುಧಾರಿಸುತ್ತದೆ. ಕೆಂಪು ಬಾಳೆಹಣ್ಣು ನಿಮ್ಮನ್ನು ಶಕ್ತಿಯುತವಾಗಿಸುವುದು ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

99

ಜೀರ್ಣಕ್ರಿಯೆಯಲ್ಲಿ ಸಹಾಯಕ (digestion)
ಸಂಶೋಧನೆಯ ಪ್ರಕಾರ, ಕೆಂಪು ಬಾಳೆಹಣ್ಣಿನಲ್ಲಿ ನಿರೋಧಕ ಪಿಷ್ಟವಿರುತ್ತವೆ, ಇದು ಜಠರಗರುಳಿನ ನಾಳಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳನ್ನು ಪರಿಹರಿಸಬಹುದು. ಅತಿಸಾರ ಸಮಸ್ಯೆ ಎದುರಿಸುತ್ತಿದ್ದರೆ ಅವರು ಕೆಂಪು ಬಾಳೆಹಣ್ಣು ಸೇವಿಸಲು ಸಹ ಸೂಚಿಸಲಾಗಿದೆ.

About the Author

SN
Suvarna News
ಆರೋಗ್ಯ
ಜೀವನಶೈಲಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved