Men Fertility Health: ನಪುಂಸಕತೆ ಬೇಡವಾದ್ರೆ ಕೊಬ್ಬು ಕರಗಿಸಿಕೊಳ್ಳಿ
ಪುರುಷರಲ್ಲಿ ನಪುಂಸಕತೆ ಹೆಚ್ಚಲು ಅನೇಕ ಕಾರಣಗಳಿವೆ. ಅವುಗಳಲ್ಲಿ ದೇಹದಲ್ಲಿ ಹೆಚ್ಚಾಗುವ ಕೊಬ್ಬೂ ಪ್ರಮುಖ ಕಾರಣ. ಕೊಬ್ಬು ಕರಗಿಸಿಕೊಳ್ಳುವ ಮೂಲಕ ಈ ಅಪಾಯದಿಂದ ಬಚಾವಾಗಬಹುದು.
ಪುರುಷರಲ್ಲಿ ನಪುಂಸಕತೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬ ವರದಿಗಳನ್ನು ಆಗಾಗ ನಾವು ಓದುತ್ತಲೇ ಇರುತ್ತೇವೆ. ನಪುಂಸಕತೆಯೂ ಆಧುನಿಕ ಜೀವನಶೈಲಿಯ ಕೊಡುಗೆಯಾಗಿದೆ ಎನ್ನಬಹುದು. ಇದಕ್ಕೆ ಹಲವಾರು ಆನುವಂಶಿಕ ಹಾಗೂ ದೈಹಿಕ ಕಾರಣಗಳು ಇರಬಹುದಾದರೂ ಆಧುನಿಕ ಜೀವನಶೈಲಿಯ ಕೊಡುಗೆಯನ್ನೂ ಕಡೆಗಣಿಸುವಂತಿಲ್ಲ. ಏಕೆಂದರೆ, ದೇಹದಲ್ಲಿ ಹೆಚ್ಚಾಗುವ ಕೊಬ್ಬು ಕೂಡ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಕೊಬ್ಬು ಹೆಚ್ಚಾಗುವುದು ನೇರವಾಗಿ ಜೀವನಶೈಲಿಗೆ ಸಂಬಂಧಿಸಿದೆ. ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಲ್ಲೂ ಎರಡು ವಿಧ. ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಉತ್ತಮ ಕೊಲೆಸ್ಟ್ರಾಲ್. ಉತ್ತಮ ಕೊಬ್ಬು ದೇಹಕ್ಕೆ ಅಗತ್ಯವಾಗಿ ಬೇಕಾಗುವಂಥದ್ದು. ಇದು ದೇಹದ ಅನೇಕ ಕಾರ್ಯಗಳಿಗೆ ಅನಿವಾರ್ಯ. ಆದರೆ, ಕೆಟ್ಟ ಕೊಬ್ಬು ಏತಕ್ಕೂ ಬೇಡವಾದದ್ದು. ಇಂದಿನ ಜೀವನಶೈಲಿಯಿಂದ ಹೆಚ್ಚು ಸಂಗ್ರಹವಾಗುವುದು ಇದೇ ಕೊಬ್ಬು. ಕೊಬ್ಬು ಲಿವರ್ ನಲ್ಲಿ ಸೃಷ್ಟಿಯಾಗುತ್ತದೆ. ಅಲ್ಲಿ ಹೆಚ್ಚು ಸಂಗ್ರಹವಾಗುವ ಕೊಬ್ಬನ್ನೇ ಫ್ಯಾಟಿ ಲಿವರ್ ಎನ್ನಲಾಗುತ್ತದೆ. ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ಬೇಕೇ ಬೇಕು. ಆದರೆ, ಕೆಟ್ಟ ಕೊಬ್ಬು ಹೆಚ್ಚುವುದರಿಂದ ರಕ್ತದ ಧಮನಿಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲ, ಪುರುಷರಲ್ಲಿ ಕೆಟ್ಟ ಕೊಬ್ಬಿನಿಂದ ನಿಮಿರುವಿಕೆಯ ಸಮಸ್ಯೆ ಅಥವಾ ಬಂಜೆತನವೂ ಉಂಟಾಗಬಹುದು. ಇದನ್ನು ತಡೆಗಟ್ಟಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸುವುದು ಅನಿವಾರ್ಯ. ತಜ್ಞರು ಹೇಳುವಂತೆ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಅಗತ್ಯ. ಹಾಗಾದರೆ ಏನೇನು ಬದಲಾವಣೆ ಅಗತ್ಯ?
ಧೂಮಪಾನ (Smoking) ಬಿಟ್ಟುಬಿಡಿ:
ಸಿಗರೇಟ್ ನಲ್ಲಿ ಹೃದಯದ (Heart) ಸಮಸ್ಯೆಗೆ ಕಾರಣವಾಗುವ ಅನೇಕ ರಾಸಾಯನಿಕಗಳಿರುತ್ತವೆ. ಶ್ವಾಸಕೋಶಗಳಿಗೆ (Lungs) ಕಾರ್ಬನ್ ಮೋನೊಆಕ್ಸೈಡ್ ಪ್ರವೇಶವಾಗುತ್ತದೆ. ಅವುಗಳ ಮೂಲಕ ಈ ಅಂಶ ರಕ್ತಕ್ಕೆ (Blood) ಸೇರ್ಪಡೆಗೊಳ್ಳುತ್ತದೆ. ರಕ್ತದಲ್ಲಿ ಮೋನೊಆಕ್ಸೈಡ್ ಪ್ರವೇಶವಾದಾಗ ಕೆಂಪುರಕ್ತಕಣಗಳಿಗೆ ಆಮ್ಲಜನಕ (Oxygen) ಕಡಿಮೆ ಪ್ರಮಾಣದಲ್ಲಿ ಲಭ್ಯವಾಗಲು ಆರಂಭವಾಗುತ್ತದೆ. ಅಲ್ಲದೆ, ರಕ್ತನಾಳಗಳ ಗೋಡೆಗಳು ಬಿರುಸಾಗಲು ಆರಂಭವಾಗುತ್ತವೆ. ಇದರಿಂದ ಹೃದಯಾಘಾತದ (Heart Attack) ಸಂಭವ ಹೆಚ್ಚುತ್ತದೆ. ರಕ್ತನಾಳಗಳಲ್ಲಿ ಕಟ್ಟಿರುವ ಕೊಬ್ಬು (Fat) ಕರಗುವುದಿಲ್ಲ.
ಮದ್ಯಪಾನವೂ (Drinking) ಸಲ್ಲದು:
ನೀವು ಕೊಬ್ಬನ್ನು ಕರಗಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತಿದ್ದೀರಿ ಎಂದಾದರೆ ಮದ್ಯಪಾನ ಬಿಡುವುದು ಲಾಭದಾಯಕ. ಮದ್ಯಪಾನ ಮಾಡುವುದರಿಂದ ಉತ್ತಮ ಹಾಗೂ ಕೆಟ್ಟ ಕೊಬ್ಬು (Bad Cholesterol) ಎರಡೂ ಪ್ರಮಾಣ ಹೆಚ್ಚಾಗುತ್ತದೆ. ಜತೆಗೆ, ಟ್ರೈಗ್ಲಿಸರೈಡ್ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ.
ಇದನ್ನೂ ಓದು: ಹೆಣ್ಣನ್ನು ಮಾತ್ರವಲ್ಲ, ಪುರುಷರನ್ನೂ ಹಿಂಡಿ ಹಿಪ್ಪೆ ಮಾಡುತ್ತೆ ಸ್ತನ ಕ್ಯಾನ್ಸರ್
ಸ್ಯಾಚುರೇಟೆಡ್ ಕೊಬ್ಬು (Saturated Fat):
ಸ್ಯಾಚುರೇಟೆಡ್ ಕೊಬ್ಬು ಎಂದರೆ ಕೆಟ್ಟ ಕೊಬ್ಬಿನ ಮೂಲವೇ ಆಗಿದೆ. ಇದನ್ನು ಅನೇಕ ಆಹಾರ ಪದಾರ್ಥಗಳು ಹೆಚ್ಚಿಸುತ್ತವೆ. ಅನ್ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾದರೆ ದೇಹಾರೋಗ್ಯಕ್ಕೆ ಅನುಕೂಲ. ಹೀಗಾಗಿ, ಸಸ್ಯಮೂಲದ ತೈಲ, ನಟ್ಸ್ (Nuts), ಮೀನು (Fish)ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಸ್ಯಾಚುರೇಟೆಡ್ ಕೊಬ್ಬನ್ನೇ ಹೆಚ್ಚು ಸೇವನೆ ಮಾಡುವುದರಿಂದ ಲಿವರ್ (Liver) ಕಾರ್ಯಕ್ಷಮತೆಯ ವಿಧಾನ ಬದಲಾಗುತ್ತದೆ.
ದಿನವೂ ವ್ಯಾಯಾಮ (Exercise) ಮಾಡಿ:
ಕೊಬ್ಬನ್ನು ಕರಗಿಸಲು ವ್ಯಾಯಾಮ ಅತ್ಯುತ್ತಮ ಮಾರ್ಗ. ಜರ್ನಲ್ ಆಫ್ ಒಬೆಸಿಟಿ ಪ್ರಕಟಿಸಿದ್ದ ಒಂದು ಅಧ್ಯಯನದ ಪ್ರಕಾರ, ಬೊಜ್ಜು (Obesity) ದೇಹಿಗಳು ಕಡಿಮೆ ಕೊಬ್ಬಯುಕ್ತ ಆಹಾರ ಸೇವನೆ ಮಾಡುವ ಜತೆಗೆ ದಿನವೂ ವ್ಯಾಯಾಮ ಮಾಡಬೇಕು, ವಾಕಿಂಗ್ (Walking), ಜಾಗಿಂಗ್, ಹೊಟ್ಟೆ ಕರಗಿಸುವ ವ್ಯಾಯಾಮ ಮಾಡುವುದು ಅಗತ್ಯ.
ಇದನ್ನೂ ಓದಿ: 'ಬ್ಲೂ ಬಾಲ್' ಎಂಬ ಪುರುಷರನ್ನು ಕಾಡುವ ಸಮಸ್ಯೆಯಿಂದ ಮುಕ್ತಿ ಹೇಗೆ?
ತೂಕ ಇಳಿಸಿಕೊಳ್ಳುವುದು (Weight Loss):
ಕೊಬ್ಬು ಕರಗಿಸಲು ತೂಕ ಇಳಿಸಿಕೊಳ್ಳಬೇಕಾಗುತ್ತದೆ. ತೂಕ ಇಳಿಸಿಕೊಂಡರೆ ಕೊಬ್ಬಿನ ಸಮಸ್ಯೆ ಅತಿ ಕಡಿಮೆ ಆಗುತ್ತದೆ. ಇದಕ್ಕೆ ಕಟ್ಟುನಿಟ್ಟಿನ ಜೀವನಶೈಲಿ (Lifestyle) ಅಗತ್ಯ. ಬಾಹ್ಯ ತಿಂಡಿತಿನಿಸುಗಳನ್ನು ವರ್ಜಿಸುವುದು, ದೈಹಿಕ ಶ್ರಮದ ಕೆಲಸ ಮಾಡುವುದು, ಆಹಾರ ಸೇವನೆ ಮೇಲೆ ನಿಗಾ ಇಡುವುದನ್ನು ಮಾಡುವ ಮೂಲಕ ಕೊಬ್ಬು ಕರಗುತ್ತದೆ.