ಅಡುಗೆಮನೆಯಲ್ಲಿರುವ ಈ 7 ಪದಾರ್ಥ ತಕ್ಷಣಕ್ಕೆ ಲೂಸ್ ಮೋಷನ್ ಕಂಟ್ರೋಲ್ ಮಾಡುತ್ತೆ
ಲೂಸ್ ಮೋಷನ್‌ನಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಸುಸ್ತಾಗೋಕೆ ಶುರುವಾಗುತ್ತೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅದು ಗಂಭೀರ ರೂಪವನ್ನು ಪಡೆಯಬಹುದು. ಆದರೆ ಕೆಲವು ಮನೆಮದ್ದುಗಳು ಈ ಸಮಸ್ಯೆಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ.

ಎರಡಕ್ಕೂ ಸರಿಯಾದ ಚಿಕಿತ್ಸೆ ಅಗತ್ಯ
Loose Motions Home Remedies: ಅನೇಕ ಬಾರಿ ಕಳಪೆ ಆಹಾರ ಪದ್ಧತಿಯಿಂದಾಗಿ ಲೂಸ್ ಮೋಷನ್ ಅಂದರೆ ಅತಿಸಾರದ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಜೊತೆಗೆ ಸುಸ್ತಾಗೋಕೆ ಶುರುವಾಗುತ್ತೆ. ಅಂದಹಾಗೆ ಲೂಸ್ ಮೋಷನ್‌ನಲ್ಲಿ ಎರಡು ವಿಧಗಳಿವೆ. ಕೇವಲ 1-2 ದಿನಗಳವರೆಗೆ ಇರುವ ತೀವ್ರವಾದ ಅತಿಸಾರ. ಮತ್ತು ಎರಡು ದಿನಗಳಿಗಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ಅತಿಸಾರ. ಎರಡಕ್ಕೂ ಸರಿಯಾದ ಚಿಕಿತ್ಸೆ ಅಗತ್ಯ. ಏಕೆಂದರೆ ಇದು ಮಾರಕವೂ ಆಗಬಹುದು. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಲೂಸ್ ಮೋಷನ್ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣಕ್ಕೆ ಪರಿಹಾರವನ್ನು ನೀಡುವ 7 ಮನೆಮದ್ದುಗಳು ಇಲ್ಲಿವೆ...
ಉಪ್ಪು-ಸಕ್ಕರೆ ದ್ರಾವಣ
ಉಪ್ಪು-ಸಕ್ಕರೆ ದ್ರಾವಣವು ಯಾವುದೇ ಟಾನಿಕ್‌ಗಿಂತ ಕಡಿಮೆಯಿಲ್ಲ. ಇದು ನೀರಿನ ಕೊರತೆಯನ್ನೂ ನೀಗಿಸುತ್ತದೆ. ನೀರನ್ನು ಕುದಿಸಿ ಅದರಲ್ಲಿ ಸಮಾನ ಪ್ರಮಾಣದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಜೀರಿಗೆ ನೀರು
ಜೀರಿಗೆ ನೀರು ಅತಿಸಾರ (Diarrhea) ನಿಯಂತ್ರಿಸುವಲ್ಲಿಯೂ ಸಹ ಬಹಳ ಪರಿಣಾಮಕಾರಿಯಾಗಿದೆ. ಒಂದು ಲೀಟರ್ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ಕುದಿಸಿ ಅದು ತಣ್ಣಗಾದ ನಂತರ ಕುಡಿಯಿರಿ. ಇದರ ಪರಿಣಾಮ ಶೀಘ್ರದಲ್ಲೇ ಗೋಚರಿಸುತ್ತದೆ.
ನಿಂಬೆ ರಸ
ದಿನಕ್ಕೆ ಎರಡರಿಂದ ಮೂರು ಬಾರಿ ನಿಂಬೆ ನೀರನ್ನು ಕುಡಿಯಬೇಕು. ಇದು ತಕ್ಷಣಕ್ಕೆ ಪರಿಹಾರವನ್ನು ನೀಡುತ್ತದೆ. ನಿಂಬೆ ರಸವು ಕರುಳನ್ನು ಸಹ ಶುದ್ಧಗೊಳಿಸುತ್ತದೆ. ಬೇಸಿಗೆಯಲ್ಲಿ ಸಾಮಾನ್ಯ ನೀರಿನೊಂದಿಗೆ ಮತ್ತು ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಒಳ್ಳೆಯದು.
ಮೊಸರು
ಮೊಸರಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳಿದ್ದು, ಇದು ಕರುಳನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಮೊಸರಿನಲ್ಲಿ ಪ್ರೋಬಯಾಟಿಕ್ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾಗಳು ಇರುತ್ತವೆ. ಇದು ಅತಿಸಾರಕ್ಕೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ಕೊಂದು ಪರಿಹಾರ ನೀಡುತ್ತದೆ.
ಎಳನೀರು
ಪೊಟ್ಯಾಶಿಯಂ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು ಅತಿಸಾರದಿಂದ ಪರಿಹಾರ ನೀಡುತ್ತದೆ. ಇದು ದೇಹದಲ್ಲಿನ ನೀರಿನ ಕೊರತೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಲೂಸ್ ಮೋಷನ್‌ಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಸುಡುವ ಸಂವೇದನೆಯನ್ನು ಸಹ ಕಡಿಮೆ ಮಾಡುತ್ತದೆ.
ಶುಂಠಿ
ಶುಂಠಿಯನ್ನು ಆಯುರ್ವೇದದಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಇದು ಹೊಟ್ಟೆಗೆ ಅತ್ಯಂತ ಪ್ರಯೋಜನಕಾರಿ. ಇದನ್ನು ಹೊಟ್ಟೆ ಉಬ್ಬರಕ್ಕೆ ಮಾತ್ರವಲ್ಲ, ಲೂಸ್ ಮೋಷನ್‌ನಿಂದ ಪರಿಹಾರ ಪಡೆಯಲು ಸಹ ಬಳಸಲಾಗುತ್ತದೆ. ಶುಂಠಿಯ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಜೀರ್ಣಕ್ರಿಯೆಗೆ ಸೋಂಕು ತರುವ ಬ್ಯಾಕ್ಟೀರಿಯಾಗಳಿಂದ ಪರಿಹಾರ ನೀಡುತ್ತದೆ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಇದ್ದು, ಇದು ಎಲೆಕ್ಟ್ರೋಲೈಟ್‌ಗಳ ಕೊರತೆಯನ್ನು ನಿವಾರಿಸುತ್ತದೆ ಮತ್ತು ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ. ಆದ್ದರಿಂದ, ಅತಿಸಾರದ ಸಂದರ್ಭದಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದು.