ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿಯೇ 'ಆಸ್ಟಿಯೋಪೊರೊಸಿಸ್' ಸಮಸ್ಯೆ: ವಯಸ್ಸು 40 ಆಗಿದ್ರೆ ಎಚ್ಚರ!
ಮನುಷ್ಯನ ದೇಹಕ್ಕೆ ಆಧಾರವಾಗಿರುವ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಆಸ್ಟಿಯೋಪೊರೋಸಿಸ್ ಕಾಣಿಸಿಕೊಳ್ಳುತ್ತಿದೆ. ಏನಿದು ಸಮಸ್ಯೆ? ಮುಂಜಾಗ್ರತ ಕ್ರಮಗಳೇನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಆಸ್ಟಿಯೋಪೊರೋಸಿಸ್
ಹುಬ್ಬಳ್ಳಿ: ಮನುಷ್ಯನ ದೇಹಕ್ಕೆ ನೈಜ ಆಕಾರ, ಆಧಾರ ಮತ್ತು ರಕ್ಷಣೆ ನೀಡುವ ಮೂಳೆಗಳು ದುರ್ಬಲವಾದರೆ ಸ್ನಾಯುಗಳ ಶಕ್ತಿ ಕುಂಠಿತವಾಗಲಿವೆ. ದೀರ್ಘಕಾಲದವರೆಗೆ ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಆಸ್ಟಿಯೋಪೊರೋಸಿಸ್‌ನಂತಹ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ಬಾಲಾಜಿ ಆಸ್ಪತ್ರೆಯ ಎಲುಬು-ಕೀಲು ತಜ್ಞ ಡಾ. ಸುನೀಲ್ ದಾಸಪ್ಪನವರ ಹೇಳಿದರು.
ಸಂಭಾವ್ಯ ಮೂಳೆ ಸವೆತ
ಬಾಲಾಜಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ 35 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಬರಬಹುದಾದ ಸಂಭಾವ್ಯ ಮೂಳೆ ಸವೆತ ಅಥವಾ ಅಸ್ಥಿ ರಂಧ್ರತೆ (ಆಸ್ಟಿಯೋಫೋರೊಸಿಸ್) ಕಾಯಿಲೆಗೆ ಉಚಿತ ತಪಾಸಣಾ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿ ಡಾ. ಸುನೀಲ್ ದಾಸಪ್ಪನವರ ಅವರು ಮಾತನಾಡಿದರು.
ಮುಂಜಾಗ್ರತ ಕ್ರಮ
ಇತ್ತೀಚಿಗೆ ಆಸ್ಟಿಯೋಪೊರೊಸಿಸ್ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತಿದೆ. ಅದರಲ್ಲೂ 40 ವಯಸ್ಸಿನಲ್ಲೇ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದ ಡಾ. ಸುನೀಲ್ ದಾಸಪ್ಪನವರ, ಕೆಲವು ಮುಂಜಾಗ್ರತ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.
ಇದನ್ನೂ ಓದಿ: Cancer Prevention: ಈ ಎರಡು ಕೆಟ್ಟ ಚಟ ಬಿಟ್ರೆ ಸಾಕು, ಕ್ಯಾನ್ಸರ್ ಹತ್ತಿರಕ್ಕೂ ಬರಲ್ಲ!
ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?
ನಿಯಮಿತವಾದ ವ್ಯಾಯಾಮ, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳಿರುವ ಆಹಾರ ಸೇವನೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಹಲವು ಉತ್ತಮ ಜೀವನಶೈಲಿಗಳನ್ನು ರೂಢಿಸಿಕೊಂಡರೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಆಸ್ಪತ್ರೆ ಚೇರ್‌ಮನ್ ಡಾ. ಕ್ರಾಂತಿಕಿರಣ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 35ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡರು.
ಇದನ್ನೂ ಓದಿ: 2 ವರ್ಷದ ಹಿಂದೆ ನಾಪತ್ತೆಯಾದ ಮೂಗು ಬೊಟ್ಟು ಶ್ವಾಸಕೋಶದಲ್ಲಿ ಪತ್ತೆ, ನಿದ್ರೆ ಮಾಡ್ವಾಗ ಹುಷಾರ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
