ಮಲಗಿ ಎದ್ದಾಗ ಕುತ್ತಿಗೆ ನೋವಾ ? ತಕ್ಷಣ ಕಡಿಮೆಯಾಗಲು ಹೀಗೆ ಮಾಡಿ

ರಾತ್ರಿ (Night) ಊಟ ಮಾಡಿ ಮಲಗುವವರೆಗೂ ಏನೂ ತೊಂದರೆಯಿರುವುದಿಲ್ಲ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ಆಚೆ ಈಚೆ ತಿರುಗಿಸಲೂ ಕೂಡ ಕಷ್ಟವಾಗುತ್ತದೆ. ವಿಪರೀತ ಕುತ್ತಿಗೆ ನೋವಿನಿಂದ (Neckpain) ನರಳುವಂತಾಗುತ್ತದೆ. ಕೆಲವರಿಗೆ ಇದು  ಕೆಲವು ಗಂಟೆಗಳಲ್ಲಿ ಕಡಿಮೆಯಾದರೆ, ಇನ್ನು ಕೆಲವರಿಗೆ ಕೆಲವು ದಿನಗಳ ಹಾಗೆಯೇ ಇದ್ದು ಕತ್ತನ್ನು ಅತ್ತಿತ್ತ ತಿರುಗಿಸಲೂ ಸಾಧ್ಯವಾಗದೆ ಹಿಂಸೆ ಕೊಡುತ್ತದೆ. ಹಾಗಿದ್ರೆ ಈ ದಿಢೀರ್‌ ಕುತ್ತಿಗೆ ನೋವಿಗೆ ಕಾರಣವೇನು ? ಇದಕ್ಕೆ ಪರಿಹಾರವೇನು ?

Having Neck Pain After Sleep, Tips To Help Relieve This Pain Vin

ಇವತ್ತಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಲವಾರು ಆರೋಗ್ಯ ಸಮಸ್ಯೆ (Health Problem)ಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಕುತ್ತಿಗೆ ನೋವು (Neckpain). ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ಆಚೆ ಈಚೆ ತಿರುಗಿಸಲೂ ಕೂಡ ಕಷ್ಟವಾಗುತ್ತದೆ. ವಿಪರೀತ ಕುತ್ತಿಗೆ ನೋವಿನಿಂದ ನರಳುವಂತಾಗುತ್ತದೆ. ಕೆಲವರಿಗೆ ಇದು  ಕೆಲವು ಗಂಟೆಗಳಲ್ಲಿ ಕಡಿಮೆಯಾದರೆ, ಇನ್ನು ಕೆಲವರಿಗೆ ಕೆಲವು ದಿನಗಳ ಹಾಗೆಯೇ ಇದ್ದು ಕತ್ತನ್ನು ಅತ್ತಿತ್ತ ತಿರುಗಿಸಲೂ ಸಾಧ್ಯವಾಗದೆ ಹಿಂಸೆ ಕೊಡುತ್ತದೆ. ಕಂಪ್ಯೂಟರ್ ಕೆಲಸ (Computer Work), ಹೆಚ್ಚು ಮೊಬೈಲ್ ಬಳಸುವ ಅಭ್ಯಾಸ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಆದರೆ ಇದಲ್ಲದೆಯೂ ಕೆಲವರಲ್ಲಿ ಮಲಗಿ ಎದ್ದಾಕ್ಷಣ ಯಾವಾಗಲೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದಿದೆ. ಇದಕ್ಕೇನು ಕಾರಣ ಮತ್ತು ಪರಿಹಾರ ಎಂಬುದನ್ನು ತಿಳಿದುಕೊಳ್ಳೋಣ.

ಕುತ್ತಿಗೆ ನೋವಿಗೆ ಕಾರಣವೇನು ?

ಕುತ್ತಿಗೆ ಮೇಲೆ ಒತ್ತಡ ಬೀಳುವುದು: ಕುತ್ತಿಗೆಯ ಮೇಲೆ ಅತಿಯಾದ ಒತ್ತಡ (Pressure) ಬೀಳುವುದು ಕುತ್ತಿಗೆ ನೋವಿಗೆ ಕಾರಣವಾಗಬಹುದು. ಇದಕ್ಕೆ ಮಲಗುವ ರೀತಿ, ಇಟ್ಟುಕೊಳ್ಳುವ ದಿಂಬು ಸಹ ಕಾರಣವಾಗಬಹುದು. ನೀವು ತುಂಬಾ ಗಟ್ಟಿಯಾದ ದಿಂಬು (Pillow)ಗಳನ್ನು ಬಳಸುತ್ತಿದ್ದರೆ ಅದು ನಿಮ್ಮ ಕುತ್ತಿಗೆಯ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ಹೀಗಿರುವಾಗ ಮೃದುವಾದ ದಿಂಬುಗಳನ್ನು ಆರಿಸಿಕೊಳ್ಳುವುದು ಉತ್ತಮ.

ಬೆನ್ನು ನೋವಿನ ಸಮಸ್ಯೆ: ಗರ್ಭಕಂಠದ ನೋವು ಮುಖ್ಯವಾಗಿ ಕುತ್ತಿಗೆ ನೋವಿಗೆ ಕಾರಣವಾಗುತ್ತದೆ. ಮೊದೆಲ್ಲೆಲ್ಲಾ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗೆಲ್ಲಾ ಮಲಗಿ ಎದ್ದಾಗ ಎಲ್ಲರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ವಿಪರೀತ ಬೆನ್ನು ನೋವಿ (Backpain)ದ್ದಾಗ ಸಹ ಇದು ಒಮ್ಮೊಮ್ಮೆ ಕುತ್ತಿಗೆ ನೋವಿಗೆ ಕಾರಣವಾಗುತ್ತದೆ. ಬೆನ್ನು ಮತ್ತು ಕುತ್ತಿಗೆ ಕನೆಕ್ಟ್‌ ಆಗಿರುವುದರಿಂದ ಈ ನೋವು ಸ್ಪ್ರೆಡ್ ಆಗುತ್ತದೆ.

ಮಕ್ಕಳನ್ನು ಬೆಳ್ಳಂಬೆಳಗ್ಗೆ ಏಳೋ Early Birds ಆಗಿಸೋಕೆ ಸುಲಭ Tips

ಮೊಬೈಲ್, ಲ್ಯಾಪ್‌ಟಾಪ್‌ ಬಳಸುವ ರೀತಿ: ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ದಿನಪೂರ್ತಿ ಮೊಬೈಲ್, ಲ್ಯಾಪ್‌ಟಾಪ್‌ (Laptop) ಬಳಸುತ್ತಾರೆ. ನಿರಂತರವಾಗಿ ಒಂದೇ ಕೋನದಲ್ಲಿ ಇವುಗಳನ್ನು ಬಳಸುವ ರೀತಿ ಕುತ್ತಿಗೆ ನೋವಿಗೆ ಕಾರಣವಾಗುತ್ತದೆ. ಹೆಚ್ಚಿನವರು ತಮ್ಮ ಮೊಬೈಲ್ ಫೋನ್‌ಗಳನ್ನು ನಮ್ಮ ಕಣ್ಣಿನ ವ್ಯಾಪ್ತಿಯ ಕೆಳಗೆ ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾರೆ, ಅದಲ್ಲದೇ ಗಂಟೆಗಟ್ಟಲೆ ಕೆಳಗೆ ನೋಡುತ್ತಾರೆ. ಇದರಿಂದ ಕುತ್ತಿಗೆ ನೋವು ಉಂಟಾಗುತ್ತದೆ. ಲ್ಯಾಪ್ ಟಾಪ್ ಗಳಲ್ಲಿ ಕೆಲಸ ಮಾಡುವವರು ನೇರವಾದ ಭಂಗಿಯನ್ನು ನಿರ್ವಹಿಸಬೇಕು. ಗಂಟೆಗೊಮ್ಮೆ ಎದ್ದು ಓಡಾಡುವುದನ್ನು ಮಾಡಬೇಕು.

ಕುತ್ತಿಗೆ ನೋವು ಕಡಿಮೆಯಾಗಲು ಏನು ಮಾಡಬಹುದು ?

ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಬೇಡಿ: ರಾತ್ರಿ ಮಲಗಿ ಎದ್ದ ತಕ್ಷಣ ಕುತ್ತಿಗೆ ನೋವು ಕಂಡು ಬಂದರೆ, ಯಾವುದೇ ಕಾರಣಕ್ಕೂ ನಿಮ್ಮ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಬೇಡಿ. ಯಾಕೆಂದ್ರೆ ಕುತ್ತಿಗೆಯನ್ನು ಆಚೆ ಈಚೆ ತಿರುಗಿಸಿದರೆ, ಮತ್ತಷ್ಟು ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ..

ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು: ಕುತ್ತಿಗೆ ನೋವಿದ್ದಾಗ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ತುಂಬಾ ಒಳ್ಳೆಯದು.  ಅದರಲ್ಲೂ ನೋವು ಕಂಡುಬರುವ ಕುತ್ತಿಗೆಯ ಭಾಗಕ್ಕೆ ಬಿಸಿ ನೀರು ಹಾಕುವುದನ್ನು ಮರೆಯಬೇಡಿ. ಇಲ್ಲಾಂದ್ರೆ ಬಿಸಿಬಿಸಿ ನೀರಿನ ಶಾಖ ಇಡುವುದನ್ನು ರೂಢಿ ಮಾಡಿಕೊಳ್ಳಿ. ಏಕೆಂದರೆ ನೀರಿನಲ್ಲಿರುವ ಬಿಸಿಯ ತಾಪಮಾನ, ಊರಿಯೂತ ಸಮಸ್ಯೆ ಯನ್ನು ನಿವಾರಿಸುವ ಎಲ್ಲಾ ಗುಣಲಕ್ಷಣಗಳನ್ನ ಹೋಂದಿರುತ್ತದೆ.

ಮಲಗಿದ ಕೆಲವೇ ನಿಮಿಷದಲ್ಲಿ ನಿದ್ದೆ ಬರುವಂತೆ ಮಾಡೋದ್ಹೇಗೆ ? ಇದು ಅಮೆರಿಕ ಯೋಧರ ಟ್ರಿಕ್ !

ಮೃದುವಾದ ದಿಂಬುಗಳನ್ನು ಆರಿಸಿಕೊಳ್ಳಿ: ಮಲಗುವಾಗ ಯಾವಾಗಲೂ ಮೃದುವಾದ ದಿಂಬುಗಳನ್ನು ಆರಿಸಿಕೊಳ್ಳಿ. ಇದು ಕುತ್ತಿಗೆ ನೋವಿನ ವಿರುದ್ಧ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಕುತ್ತಿಗೆಯ ವ್ಯಾಯಾಮ ಮಾಡಿ: ವೈದ್ಯರ ಸಲಹೆಯಂತೆ ಕುತ್ತಿಗೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ತಲೆಯನ್ನು ಪ್ರದಕ್ಷಿಣಾಕಾರವಾಗಿ ಮತ್ತು ಪ್ರದಕ್ಷಿಣಾಕಾರವಾಗಿ 2 ನಿಮಿಷಗಳ ಕಾಲ ತಿರುಗಿಸುವುದು ನೋವನ್ನು ಹಿಡಿತದಲ್ಲಿ ಇರಿಸಲು ಸಹಾಯ ಮಾಡುತ್ತದೆ

ಹಣ್ಣು, ತರಕಾರಿಗಳನ್ನು ಹೆಚ್ಚು ತಿನ್ನಿ: ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇರಿಸುವ ಮೂಲಕ, ನಿಮ್ಮ ದೇಹವನ್ನು ತಲುಪಲು ಎಲ್ಲಾ ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳನ್ನು ನೀವು ಸೇವಿಸುತ್ತೀರಿ. ಇವು ನಿಮ್ಮ ಮೂಳೆ ಮತ್ತು ನರಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಮೂಳೆಗಳು ಬಲವಾಗಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗ್ಲೂ ಕುತ್ತಿಗೆ ನೋವು ಬಂದ್ಮೇಲೆ ಏನ್ಮಾಡೋದು ಅನ್ನೋದಕ್ಕಿಂತ ಕುತ್ತಿಗೆ ನೋವು ಬರದ ಹಾಗೆ ಎಚ್ಚರಿಕೆ ವಹಿಸಿ.

Latest Videos
Follow Us:
Download App:
  • android
  • ios