ಮನೆಯಲ್ಲೇ ಟೊಮೆಟೊ ಫೇಸ್ ಪ್ಯಾಕ್: ಹೊಳೆಯುವ ತ್ವಚೆಗೆ ಸಲಹೆಗಳು
ಇತ್ತೀಚೆಗೆ ಆರೋಗ್ಯದ ಜೊತೆಗೆ ಸೌಂದರ್ಯದ ಬಗ್ಗೆಯೂ ಜನರ ಆಸಕ್ತಿ ಹೆಚ್ಚುತ್ತಿದೆ. ಮಹಿಳೆಯರಷ್ಟೇ ಪುರುಷರೂ ಬ್ಯೂಟಿ ಪಾರ್ಲರ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದು ದುಬಾರಿ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದಲೇ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಫೇಸ್ ಪ್ಯಾಕ್ ಬಳಸಿದರೆ ಮುಖ ಹೊಳೆಯುವುದು ಖಚಿತ. ಟೊಮೆಟೊ ಫೇಸ್ ಪ್ಯಾಕ್ ಮಾಡುವುದು ಹೇಗೆ? ಇದರಿಂದ ಆಗುವ ಲಾಭಗಳೇನು? ಅಂತ ಇಲ್ಲಿ ನೋಡೋಣ.

ಬ್ಯೂಟಿ ಪಾರ್ಲರ್‌ನಲ್ಲಿ ಬಳಸುವ ಪ್ರಾಡಕ್ಟ್‌ಗಳಲ್ಲಿ ಸ್ವಲ್ಪ ಮಟ್ಟಿಗೆ ರಾಸಾಯನಿಕಗಳಿರುತ್ತವೆ. ಇವು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದರೆ ನೈಸರ್ಗಿಕವಾಗಿ ಸಿಗುವ ಟೊಮೆಟೊದಿಂದ ಚರ್ಮಕ್ಕೆ ಯಾವುದೇ ತೊಂದರೆ ಇಲ್ಲ. ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ನೈಸರ್ಗಿಕ ಆಮ್ಲಗಳು ನಿಮ್ಮ ಚರ್ಮವನ್ನು ಕಾಪಾಡುತ್ತವೆ. ದುಬಾರಿ ಬ್ಯೂಟಿ ಪ್ರಾಡಕ್ಟ್‌ಗಳಿಗಿಂತ ಟೊಮೆಟೊದಿಂದ ಮಾಡಿದ ಫೇಸ್ ಪ್ಯಾಕ್ ತುಂಬಾ ಉಪಯುಕ್ತ. ನಿಮ್ಮ ಕೆನ್ನೆಗಳು ಟೊಮೆಟೊದಂತೆ ಕೆಂಪಗೆ, ಗುಲಾಬಿ ಬಣ್ಣಕ್ಕೆ ತಿರುಗಬೇಕೆಂದರೆ ಈ ಫೇಸ್ ಪ್ಯಾಕ್ ಟ್ರೈ ಮಾಡಿ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಟೊಮೆಟೊವನ್ನು ಹಲವು ವರ್ಷಗಳಿಂದ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಆಂಟಿ ಏಜಿಂಗ್ ಗುಣಗಳಿವೆ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೆ, ಕ್ಲೀನ್ ಆಗಿ, ಯೌವನದಿಂದಿರಿಸುತ್ತದೆ.
ಟೊಮೆಟೊ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು: 1 ಟೊಮೆಟೊ, 1 ಟೀ ಚಮಚ ಜೇನುತುಪ್ಪ, 1 ಚಿಟಿಕೆ ಅರಿಶಿನ, 1 ಟೀ ಚಮಚ ನಿಂಬೆ ರಸ. ಫೇಸ್ ಪ್ಯಾಕ್ ತಯಾರಿಸುವ ವಿಧಾನ: ಮೊದಲು ಫ್ರೆಶ್ ಟೊಮೆಟೊವನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ತಿರುಳನ್ನು ತೆಗೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ, ಚಿಟಿಕೆ ಅರಿಶಿನ ಸೇರಿಸಿ. ಜೇನುತುಪ್ಪ ಚರ್ಮಕ್ಕೆ ತೇವಾಂಶ, ಹೊಳಪು ನೀಡುತ್ತದೆ, ಅರಿಶಿನ ನೈಸರ್ಗಿಕ ಆಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ.
ಟೊಮೆಟೊ ಫೇಸ್ ಪ್ಯಾಕ್‌ನ ಲಾಭಗಳುನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ ನಿಂಬೆ ರಸವನ್ನೂ ಸೇರಿಸಿ. ಈ ಮಿಶ್ರಣವನ್ನು ಹಣೆ, ಕೆನ್ನೆಗಳ ಮೇಲೆ ಚೆನ್ನಾಗಿ ಹಚ್ಚಿ. ಕಣ್ಣಿಗೆ ಹೋಗದಂತೆ ಎಚ್ಚರ ವಹಿಸಿ. 20 ರಿಂದ 30 ನಿಮಿಷಗಳ ನಂತರ ಬಿಸಿ ನೀರಿನಿಂದ ಮುಖ ತೊಳೆಯಿರಿ.
ಟೊಮೆಟೊ ಫೇಸ್ ಪ್ಯಾಕ್‌ನ ಉಪಯೋಗಗಳು: ಟೊಮೆಟೊದಲ್ಲಿ ನೈಸರ್ಗಿಕ ಆಮ್ಲಗಳು, ವಿಟಮಿನ್ ಸಿ ಇದೆ. ಇವು ಚರ್ಮದ ಬಣ್ಣವನ್ನು ಹೊಳೆಯುವಂತೆ ಮಾಡುತ್ತವೆ. ಇದು ಚರ್ಮಕ್ಕೆ ಗುಲಾಬಿ ಬಣ್ಣ ನೀಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಟೊಮೆಟೊ ಫೇಸ್ ಪ್ಯಾಕ್
ಇದು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಟೊಮೆಟೊದಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಚರ್ಮಕ್ಕೆ ತೇವಾಂಶ ನೀಡಿ ಮೃದುವಾಗಿಸುತ್ತದೆ. ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆಯಲು ಟೊಮೆಟೊ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ. ಚರ್ಮ ಸುಟ್ಟಾಗ ಟೊಮೆಟೊ ಫೇಸ್ ಪ್ಯಾಕ್ ಆರಾಮ ನೀಡುತ್ತದೆ. ಚರ್ಮ ತಂಪಾಗುತ್ತದೆ.