ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದ್ರೆ ಈ ಲಸ್ಸಿ ಕುಡಿಯಿರಿ…
ಬೇಸಿಗೆಯಲ್ಲಿ, ಜನರು ಹೆಚ್ಚಾಗಿ ಲಸ್ಸಿ ಕುಡಿಯಲು ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಾಗಿಸುವುದು ಮಾತ್ರವಲ್ಲದೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ನೀವು ಬಯಸಿದರೆ, ನೀವು ಅದನ್ನು ತೂಕ ಇಳಿಸಲು ಬಳಸಬಹುದು. ಅದರ ಬಗ್ಗೆ ತಿಳಿದುಕೊಳ್ಳೋಣ…
ಲಸ್ಸಿ ಕುಡಿಯಲು ಎಷ್ಟು ರುಚಿಕರವಾಗಿದೆಯೋ, ಅದು ದೇಹಕ್ಕೆ ಅಷ್ಟೇ ಪ್ರಯೋಜನಕಾರಿ. ಬೇಸಿಗೆಯಲ್ಲಿ, ಜನರು ಲಸ್ಸಿ ಕುಡಿಯಲು ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತೆ. ಆದರೆ ಲಸ್ಸಿ ಈ ಋತುವಿನಲ್ಲಿ ತೂಕ ಇಳಿಸಿಕೊಳ್ಳಲು (weight loss) ಉತ್ತಮ ಪಾನೀಯ.
ದೇಹವನ್ನು ಹೈಡ್ರೇಟ್ (Hydrate) ಮಾಡುವ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ಪಾನೀಯವನ್ನು ಕುಡಿಯುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ, ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಈ ಲಸ್ಸಿ (Lassi) ಬಗ್ಗೆ ತಿಳಿದುಕೊಳ್ಳೋಣ …
ಮ್ಯಾಂಗೋ ಲಸ್ಸಿ (Mango Lassi)
ಬೇಕಾಗುವ ಸಾಮಾಗ್ರಿಗಳು:
ಒಂದು ಕಪ್ ಮೊಸರು
ಒಂದು ಲೋಟ ಕೋಲ್ಡ್ ನೀರು (cold water )
ಕತ್ತರಿಸಿದ ಮಾವಿನಹಣ್ಣು
ಸಕ್ಕರೆ ಅರ್ಧ ಕಪ್
ಒಣಗಿದ ಪುದೀನಾ ಎಲೆಗಳು
ತಯಾರಿಸೋದು ಹೇಗೆ?
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ ನಲ್ಲಿ ಒಟ್ಟಿಗೆ ಸೇರಿಸಿ ಮತ್ತು ಮಿಶ್ರಣ ಮಾಡಿ. ಅದನ್ನು ತಣ್ಣಗೆ ಸರ್ವ್ ಮಾಡಿ ಮತ್ತು ಆನಂದಿಸಿ. ಪುದೀನಾ ಸೊಪ್ಪು ನಿಮಗೆ ಬೇಕಿದ್ದರೆ ಮಾತ್ರ ಹಾಕಿ. ಇದನ್ನು ಕೋಲ್ಡ್ ಆಗಿ ಕುಡೀಯೋದಕ್ಕೆ ಚೆನ್ನಾಗಿರುತ್ತೆ.
ರೋಸ್ ಲಸ್ಸಿ (Rose Lassi)
ಬೇಕಾಗುವ ಸಾಮಾಗ್ರಿಗಳು:
250 ಗ್ರಾಂ ಮೊಸರು
ಒಂದು ಅಥವಾ ಎರಡು ಕಪ್ ನೀರು
ಸಕ್ಕರೆ ಅರ್ಧ ಕಪ್
ಒಂದು ಅಥವಾ ಎರಡು ಚಮಚ ರೋಸ್ ವಾಟರ್ .
ಇದನ್ನು ತಯಾರಿಸಲು, ಒಂದು ಬಟ್ಟಲನ್ನು ತೆಗೆದುಕೊಳ್ಳಿ, ಅದಕ್ಕೆ ಮೊಸರು ಸೇರಿಸಿ. ಚಮಚದ ಸಹಾಯದಿಂದ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ನೀರು, ಸಕ್ಕರೆ ಸೇರಿಸಿ. ಈ ಮಿಶ್ರಣಕ್ಕೆ ರೋಸ್ ವಾಟರ್ ಅಥವಾ ದಳಗಳನ್ನು ಸೇರಿಸಿ. ಕನಿಷ್ಠ ಒಂದು ಗಂಟೆ ಫ್ರಿಡ್ಜ್ ನಲ್ಲಿ ಇರಿಸಿ ಮತ್ತು ತಣ್ಣಗೆ ಸರ್ವ್ ಮಾಡಿ.
ಬಾಳೆಹಣ್ಣು ಮತ್ತು ನಟ್ ಲಸ್ಸಿ (Banana and Nut Lassi)
ಬೇಕಾಗುವ ಸಾಮಾಗ್ರಿಗಳು:
1 ಕಪ್ ಮೊಸರು,
1 ಬಾಳೆಹಣ್ಣು,
3-4 ವಾಲ್ನಟ್,
1 ಟೀಸ್ಪೂನ್ ಅಗಸೆಬೀಜ ಎಳ್ಳು ಮಿಶ್ರಣ, ಮತ್ತು
1 ಟೀಸ್ಪೂನ್ ಜೇನುತುಪ್ಪ.
ಈ ರುಚಿಕರವಾದ ಲಸ್ಸಿಯನ್ನು ತಯಾರಿಸಲು, ಮೊಸರು, ಅಗಸೆಬೀಜ, ಎಳ್ಳು, ವಾಲ್ನಟ್, ಜೇನುತುಪ್ಪ ಮತ್ತು ಬಾಳೆಹಣ್ಣುಗಳನ್ನು ಬ್ಲೆಂಡರ್‌ಗೆ ಸೇರಿಸಿ. ಅದು ದಪ್ಪವಾಗುವವರೆಗೆ ಮಿಶ್ರಣ ಮಾಡಿ. ಈಗ ಅದಕ್ಕೆ ಕತ್ತರಿಸಿದ ವಾಲ್ನಟ್ಗಳನ್ನು ಸೇರಿಸಿ. ಇದನ್ನು ಕೋಲ್ಡ್ ಆಗಿ ಕುಡಿಯಲು ಚೆನ್ನಾಗಿರುತ್ತೆ.
ಪುದೀನಾ ಲಸ್ಸಿ (Mint Lassi)
ಬೇಕಾಗುವ ಸಾಮಾಗ್ರಿಗಳು:
250 ಗ್ರಾಂ ಮೊಸರು,
1 ಟೇಬಲ್ ಚಮಚ ಒಣಗಿದ ಪುದೀನಾ ಎಲೆಗಳು
ಜೀರಿಗೆ (ಹುರಿದದ್ದು),
ರುಚಿಗೆ ತಕ್ಕಷ್ಟು ಉಪ್ಪು,
3-4 ಐಸ್ ಕ್ಯೂಬ್ಸ್
ಮೊಸರು, ಒಣಗಿದ ಪುದೀನಾ ಎಲೆಗಳು, ಉಪ್ಪು ಮತ್ತು ಹುರಿದ ಜೀರಿಗೆಯನ್ನು ಬ್ಲೆಂಡರ್ ನಲ್ಲಿ ಹಾಕಿ. ನಯವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಕೆಲವು ಐಸ್ ಕ್ಯೂಬ್ ಗಳನ್ನು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ. ರುಬ್ಬಿದ ಜೀರಿಗೆ ಬೀಜಗಳು ಮತ್ತು ತಾಜಾ ಪುದೀನಾ ಎಲೆಗಳಿಂದ ಅಲಂಕರಿಸಿ ಮತ್ತು ಅದನ್ನು ಸೇವಿಸಿ.