ಮಲಗೋ ಮುನ್ನ ಮಕ್ಕಳಿಗೆ ಕಥೆ ಹೇಳೋದ್ರಿಂದ ಏನಾಗುತ್ತೆ ಗೊತ್ತಾ?
ಮಲಗುವಾಗ ಮಕ್ಕಳಿಗೆ ಕಥೆಗಳನ್ನು ಹೇಳುವ ಪ್ರವೃತ್ತಿ ಶತಮಾನಗಳಿಂದ ನಡೆಯುತ್ತಿದೆ. ಈ ಹಿಂದೆ ಅಜ್ಜ ಮತ್ತು ಅಜ್ಜಿ ರಾತ್ರಿಯಲ್ಲಿ ಮಕ್ಕಳಿಗೆ ಕಥೆ ಹೇಳುತ್ತಿದ್ದರು. ಆದರೆ, ಇಂದಿನ ಜೀವನಶೈಲಿಯಲ್ಲಿ ಮೊಬೈಲ್ ಈ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಕಥೆ ಹೇಳುವ ಪ್ರವೃತ್ತಿ ಗಮನಾರ್ಹವಾಗಿ ಕಡಿಮೆಯಾಗಿದೆ. ಆದ್ರೆ ಹೀಗೆ ಕತೆ ಹೇಳೋದ್ರಿಂದ ತುಂಬಾನೆ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?
ಹಿಂದಿನ ಕಾಲದಲ್ಲಿ ಟಿವಿ, ಮೊಬೈಲ್ ಏನೂ ಇಲ್ಲವಾಗಿತ್ತು, ಆವಾಗ ಅಜ್ಜಿಯರು ಮಕ್ಕಳಿಗೆ ಕತೆ ಹೇಳುತ್ತಿದ್ದರು(Story telling)., ಮಕ್ಕಳು ಮಲಗುವಾಗ ಕಥೆ ಕೇಳೋದರಿಂದ ಒಂದಲ್ಲ, ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದ್ಯಾ? ಇದು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ವೇಗಗೊಳಿಸುತ್ತೆ. ಆದ್ದರಿಂದ ಮಕ್ಕಳಿಗೆ ಕಥೆ ಹೇಳೋದರಿಂದ ಆಗೋ ಕೆಲವು ವಿಶಿಷ್ಟ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ನಿದ್ರೆ ಮಾಡಲು ಸಹಾಯ ಮಾಡುತ್ತೆ
ಮಕ್ಕಳು ಸಾಮಾನ್ಯವಾಗಿ ಮಲಗುವ ಮೊದಲು ಫೋನ್ ಅಥವಾ ವೀಡಿಯೊ ಗೇಮ್(Video game) ಆಡಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ತಡವಾಗಿ ಮಲಗುತ್ತಾರೆ.ಹೀಗೆ ತಡವಾಗಿ ಮಲಗೋದರಿಂದ ಆಗೋ ನಿದ್ರೆಯ ಕೊರತೆಯಿಂದಾಗಿ, ಮಕ್ಕಳ ಸ್ವಭಾವವು ಕಿರಿಕಿರಿಗೊಳ್ಳಲು ಪ್ರಾರಂಭಿಸುತ್ತೆ.
ಇದಕ್ಕೆ ಬೆಸ್ಟ್ ಸೊಲ್ಯೂಷನ್, ಮಲಗುವ ಮೊದಲು ಮಕ್ಕಳಿಗೆ ಕಥೆ ಹೇಳುವುದು ಉತ್ತಮ ಆಯ್ಕೆಯಾಗಿದೆ. ಇದು ಮಕ್ಕಳನ್ನು ಬೇಗನೆ ನಿದ್ರೆಗೆ ಜಾರುವಂತೆ ಮಾಡೋದು ಮಾತ್ರವಲ್ಲ. ಬದಲಾಗಿ, ಅವರು ತುಂಬಾ ಚೆನ್ನಾಗಿ ನಿದ್ರೆಯನ್ನು(Sleep) ಪಡೆಯಲು ಸಾಧ್ಯವಾಗುತ್ತೆ.
ಏಕಾಗ್ರತೆಯ ಶಕ್ತಿ ಹೆಚ್ಚಾಗುತ್ತೆ
ಕಥೆಯನ್ನು ನಿರೂಪಿಸುವಾಗ, ಮಕ್ಕಳ ಎಲ್ಲಾ ಗಮನವು ಕಥೆಯ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತೆ. ಇದರಿಂದ ಮಕ್ಕಳ ಗಮನ ಅಲ್ಲಿ, ಇಲ್ಲಿ ಎಂದು ಎಲ್ಲೆಲ್ಲೋ ಹೋಗೋದಿಲ್ಲ. ಬದಲಾಗಿ ಮಕ್ಕಳ ಕಾನ್ಸಂಟ್ರೇಶನ್ (Concentration)ಎಲ್ಲಾ ಕಥೆ ಮೇಲೆ ಮಾತ್ರ ಇರುತ್ತೆ.
ಹಾಗಾಗಿ ಪ್ರತಿದಿನ ಕಥೆ(Story) ಕೇಳುವುದು ಮಕ್ಕಳ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತೆ. ಅಲ್ಲದೆ, ಮಕ್ಕಳ ಮನಸ್ಸು ಕೇಂದ್ರೀಕೃತವಾಗಿರುತ್ತೆ. ಆದ್ದರಿಂದ ಪ್ರತಿದಿನ ತಪ್ಪದೆ ಕಥೆ ಹೇಳೋ ಮತ್ತು ಕಥೆ ಕೇಳೋ ಅಭ್ಯಾಸ ರೂಡಿಸಿಕೊಳ್ಳಿ.
ಇಮ್ಯಾಜಿನೇಶನ್ ಸ್ಕಿಲ್ (Imaginatiopn skill) ಹೆಚ್ಚಾಗುತ್ತೆ
ಕಥೆಯನ್ನು ನಿರೂಪಿಸುವಾಗ, ಮಕ್ಕಳು ಕಥೆಗಳಲ್ಲಿ ಕಳೆದುಹೋಗೋದು ಮಾತ್ರವಲ್ಲದೆ ಕಥೆಯನ್ನು ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ ಮಕ್ಕಳಲ್ಲಿ ಆಲೋಚಿಸುವ ಸಾಮರ್ಥ್ಯ ಬೆಳೆಯುತ್ತೆ ಮತ್ತು ಮಕ್ಕಳ ಕಲ್ಪನೆಯು ತುಂಬಾ ಬಲಗೊಳ್ಳುತ್ತೆ.
ಮಕ್ಕಳು ಕಥೆಗಳೊಂದಿಗೆ ಕ್ರಿಯೇಟಿವ್ (Creative) ಆಗ್ತಾರೆ
ಕಥೆ ಹೇಳುವಾಗ, ಮಕ್ಕಳು ಕಥೆಯ ಎಲ್ಲಾ ಅಂಶಗಳನ್ನು ನೋಡುತ್ತಾರೆ. ಅಲ್ಲದೆ, ಮಕ್ಕಳು ಈ ಕಥೆಗಳಿಂದ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುತ್ತಾರೆ. ಈ ಕಾರಣದಿಂದಾಗಿ ಮಕ್ಕಳ ಮನಸ್ಸು ತುಂಬಾ ಕ್ರಿಯೇಟಿವ್ ಆಗುತ್ತೆ. ಅಲ್ಲದೆ, ಕಥೆ ಹೇಳುವ ಮೂಲಕ, ನೀವು ಮಕ್ಕಳನ್ನು ಸಂಸ್ಕೃತಿ ಮತ್ತು ಆಚರಣೆಗಳೊಂದಿಗೆ ಸಂಪರ್ಕಿಸಬಹುದು.
ಪುಸ್ತಕಗಳನ್ನು ಓದುವ(Reading) ಹವ್ಯಾಸ
ಮಲಗುವ ಮೊದಲು ಕಥೆಯನ್ನು ಕೇಳೋದು ಮಕ್ಕಳ ಕಥೆಗಳಲ್ಲಿ ಆಸಕ್ತಿಯನ್ನು ಬೆಳೆಸುತ್ತೆ . ಹಾಗಾಗಿ ಮಕ್ಕಳು ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಬಳಕೆ ಕಡಿಮೆ ಮಾಡುವ ಮೂಲಕ ಪುಸ್ತಕಗಳನ್ನು ಓದಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಅಲ್ಲದೆ, ಮಕ್ಕಳು ಬೆಳೆದಂತೆ, ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸವಾಗುತ್ತೆ .