ಕಸೂರಿ ಮೇಥಿಯನ್ನು ನಿಯಮಿತವಾಗಿ ಸೇವಿಸಿ ಆರೋಗ್ಯವಂತರಾಗಿ!
ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಕಸೂರಿ ಮೇಥಿ (Kasoori Methi) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಸೂರಿ ಮೇಥಿಯನ್ನು ಸೇವಿಸುವುದರಿಂದ, ಅನೇಕ ರೋಗಗಳಿಂದ ಸುರಕ್ಷಿತವಾಗಿರಬಹುದು. ಆಯುರ್ವೇದದಲ್ಲಿ (ayurveda) ಕಸೂರಿ ಮೇಥಿಯ ಅನೇಕ ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಆಯುರ್ವೇದ ತಜ್ಞರ ಪ್ರಕಾರ ಕಸೂರಿ ಮೇಥಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು ಎನ್ನಲಾಗಿದೆ. ಇದು ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಏನಿದು ಕಸೂರಿ ಮೆತಿ?
ಕಸೂರಿ ಮೇಥಿಯನ್ನು ಮೆಂತ್ಯದ ಎಲೆಗಳನ್ನು (fenugreek leaves) ಒಣಗಿಸಿ ತಯಾರಿಸಲಾಗುತ್ತದೆ. ಮೆಂತ್ಯ ಸಸ್ಯವು ಫ್ಯಾಬಾಸೀ ಕುಟುಂಬಕ್ಕೆ ಸೇರಿದೆ. ಇದರ ಎಲೆಗಳು ಮತ್ತು ಬೀಜಗಳನ್ನು ಗರಂ ಮಸಾಲೆಯಾಗಿ ಬಳಸಲಾಗುತ್ತದೆ. ರುಚಿಯ ಜೊತೆಗೆ, ಇದು ಅನೇಕ ಔಷಧೀಯ ಗುಣ (Medicinal Qualities) ಗಳನ್ನು ಹೊಂದಿದೆ.
ಕಸೂರಿ ಮೇಥಿಯಲ್ಲಿರುವ ಔಷಧೀಯ ಗುಣಗಳು ಜೀರ್ಣಕ್ರಿಯೆಗೆ(digestion) ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಮಧುಮೇಹವನ್ನು (diabetes) ನಿಯಂತ್ರಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳಿವೆ. ಅವುಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕಸೂರಿ ಮೆತಿಯ ಆರೋಗ್ಯಕರ ಲಾಭಗಳು
1. ಇನ್ಫೆಕ್ಷನ್ ನಿಂದ (Infection) ನಿಂದ ರಕ್ಷಣೆ ನೀಡುತ್ತದೆ - ಕಸೂರಿ ಮೆಂತ್ಯವು ವಿಟಮಿನ್-ಸಿ (Vitamin C) ಮತ್ತು ಕಬ್ಬಿಣವನ್ನು (Iron) ಹೊಂದಿರುತ್ತದೆ, ಇದು ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದೇ ವೇಳೆ ಇದು ಆ ಬ್ಯಾಕ್ಟೀರಿಯಾವನ್ನು ಸಹ ನಾಶಪಡಿಸುತ್ತದೆ, ಬ್ಯಾಕ್ಟೀರಿಯಾ (bacteria) ಕಾರಣ ಮೊಡವೆ (Acne) ಸಮಸ್ಯೆ ಎದುರಾಗುತ್ತದೆ.
2. ಅನೀಮಿಯಾ (Anemia)ದಲ್ಲಿ ತುಂಬಾ ಲಾಭಕಾರಿ - ರಕ್ತಹೀನತೆಯ ರೋಗವು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಕಸೂರಿ ಮೆಂತ್ಯೆಯನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸಿ. ಮೆಂತ್ಯ ಸೊಪ್ಪನ್ನು ತಿನ್ನುವುದು ಕೂಡ ರಕ್ತಹೀನತೆಯ ರೋಗದಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
3. ಹಾಲುಣಿಸುವ ತಾಯಂದಿರರಿಗೆ (breast feeding mothers) ಇದು ಲಾಭಕಾರಿ - ಹಾಲುಣಿಸುವ ಮಹಿಳೆಯರಿಗೆ ಕಸೂರಿ ಮೆಂತ್ಯ ತುಂಬಾ ಪ್ರಯೋಜನಕಾರಿ. ಕಸೂರಿ ಮೇಥಿಯಲ್ಲಿ ಕಂಡುಬರುವ ಒಂದು ರೀತಿಯ ಸಂಯುಕ್ತವು ಹಾಲುಣಿಸುವ ಮಹಿಳೆಯರಲ್ಲಿ ಎದೆ ಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಹೊಟ್ಟೆಯ ಇನ್ಫೆಕ್ಷನ್ (stomach infection) ನಿಂದ ರಕ್ಷಣೆ ನೀಡುತ್ತದೆ - ಹೊಟ್ಟೆಯ ಕಾಯಿಲೆಗಳನ್ನು ತಪ್ಪಿಸಲು ಬಯಸಿದರೆ, ಕಸೂರಿ ಮೇಥಿಯನ್ನು ಆಹಾರದ ಭಾಗವಾಗಿ ಮಾಡಿ. ಕಸೂರಿ ಮೇಥಿಯು ಹೃದಯ, ಗ್ಯಾಸ್ಟ್ರಿಕ್ ಮತ್ತು ಕರುಳಿನ (Guts) ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.
5. ಕೂದಲಿನ ಆರೋಗ್ಯಕ್ಕೆ (hair health) ತುಂಬಾ ಲಾಭಕಾರಿ - ಕಸೂರಿ ಮೇಥಿಯನ್ನು ಅನೇಕ ಕೂದಲಿನ ಸಮಸ್ಯೆಗಳನ್ನುತೊಡೆದು ಹಾಕಲು ಬಳಸಲಾಗುತ್ತದೆ. ಕೂದಲು ಉದುರುವುದರಿಂದ, (hair fall) ಅವುಗಳನ್ನು ಬಲಪಡಿಸುವವರೆಗೆ ಅನೇಕ ಸಮಸ್ಯೆಗಳನ್ನು ಕಸೂರಿ ಮೇಥಿ ನಿವಾರಣೆ ಮಾಡುತ್ತದೆ.
ಕಸೂರಿ ಮೇಥಿಯಲ್ಲಿರುವ ಪ್ರೋಟೀನ್ (protein), ಲೆಕ್ಟಿನ್ ಮತ್ತು ನಿಕೋಟಿನ್ ನಂತಹ ಪೋಷಕಾಂಶಗಳು ಕೂದಲಿನ ಬೆಳವಣಿಗೆ ಹಾಗೂ ಕೂದಲನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿವೆ. ಇದಲ್ಲದೇ, ಕೂದಲಿನ ಬೇರು (Hair Root)ಗಳನ್ನು ಬಲಪಡಿಸಲು ಮತ್ತು ಕೂದಲನ್ನು ದಪ್ಪವಾಗಿಸಲು ಇದು ಪ್ರಯೋಜನಕಾರಿಯಾಗಿದೆ.