Asianet Suvarna News Asianet Suvarna News

ಮಕ್ಕಳಲ್ಲಿ ಮಧುಮೇಹ ತಡೆಗಟ್ಟಲು ಇಲ್ಲಿದೆ ಟಿಪ್ಸ್

ಕೊರೊನಾ ಲಾಕ್‌ಡೌನ್‌ನಿಂದಾಗಿ ಒಂದೂವರೆ ವರ್ಷದಿಂದ ಮಕ್ಕಳು ಮನೆಯಲ್ಲೇ ಜಡವಾಗಿ, ಯಾವ ಚಟುವಟಿಕೆಗಳೂ ಇಲ್ಲದೆ ಕೂತಿದ್ದಾರೆ. ಇದರಿಂದ ಮಕ್ಕಳಿಗೆ ಮಧುಮೇಹ ಬರುವ ರಿಸ್ಕ್ ಹೆಚ್ಚಿದೆ. ಮಧುಮೇಹದ ರಿಸ್ಕ್ ಫ್ಯಾಕ್ಟರ್‌ಗಳು, ನಿವಾರಣೋಪಾಯ ಹೇಗೆ, ತಿಳಿಯೋಣ.

 

Tips to prevent type 2 diabetes in Kids and make them healthy and fit
Author
Bengaluru, First Published Sep 23, 2021, 5:28 PM IST

ಕೊರೊನಾ ವೈರಸ್‌ ಲಾಕ್‌ಡೌನ್‌ ಪರಿಣಾಮ ಮಕ್ಕಳ ಮೇಲೂ ಆಗುತ್ತಿದೆ. ಹೇಗೆ ಅಂತೀರಾ? ಲಾಕ್‌ಡೌನ್‌ನಿಂದಾಗಿ ಒಂದೂವರೆ ವರ್ಷದಿಂದ ಮಕ್ಕಳು ಮನೆಯಲ್ಲೇ ಜಡವಾಗಿ, ಯಾವ ಚಟುವಟಿಕೆಗಳೂ ಇಲ್ಲದೆ ಕೂತಿದ್ದಾರೆ. ಇದರಿಂದ ಮಕ್ಕಳಿಗೆ ಮಧುಮೇಹ ಬರುವ ರಿಸ್ಕ್ ಹೆಚ್ಚಿದೆ. ನಿಮ್ಮ ಮಗುವು ಅಧಿಕ ತೂಕ ಹೊಂದಿದ್ದರೆ, ಆರೋಗ್ಯಕರ ರೀತಿಯಲ್ಲಿ ಆಹಾರ ಸೇವಿಸದಿದ್ದರೆ, ಪ್ರತಿದಿನ ದೈಹಿಕ ವ್ಯಾಯಾಮ ಮಾಡದಿದ್ದರೆ, ಮಧುಮೇಹದ ಸಾಧ್ಯತೆ ಇದೆ. ಬನ್ನಿ, ಮಧುಮೇಹದ (diabetes) ರಿಸ್ಕ್ ಫ್ಯಾಕ್ಟರ್‌ಗಳು, ನಿವಾರಣೋಪಾಯ ಹೇಗೆ, ತಿಳಿಯೋಣ.

ಕಾರಣಗಳೇನು?
ಬೊಜ್ಜು: ಭಾರತದಲ್ಲಿ ಸುಮಾರು 1.4 4 ಕೋಟಿ ಮಕ್ಕಳಲ್ಲಿ ಬೊಜ್ಜು ತುಂಬಿದೆಯಂತೆ. ಭಾರತವು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೊಜ್ಜು ಇನ್ಸುಲಿನ್ ಪ್ರತಿರೋಧತೆಯನ್ನು ಉಂಟುಮಾಡುತ್ತದೆ. ಇದು ಟೈಪ್ -2 ಮಧುಮೇಹದ ಬೆಳವಣಿಗೆಯನ್ನು ಮಕ್ಕಳಲ್ಲಿ ಪ್ರಚೋದಿಸುತ್ತದೆ.

ದೈಹಿಕ ಚಟುವಟಿಕೆಯ ಕೊರತೆ: ಈ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ತಮ್ಮ ಗ್ಯಾಜೆಟ್‌ಗಳಿಗೆ ಅಂಟಿಕೊಂಡಿದ್ದಾರೆ. ವಿಶೇಷವಾಗಿ ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ. ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳು ಟೈಪ್ -2 ಮಧುಮೇಹವನ್ನು ಬೆಳೆಸಿಕೊಳ್ಳುವ ಅಪಾಯವನ್ನು ಹೆಚ್ಚಿಸಿದೆ. ಏಕೆಂದರೆ ಜಡ ಜೀವನಶೈಲಿ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುತ್ತಿದೆ.

ವಯಸ್ಸು: ತಮ್ಮ ಹದಿಹರೆಯದಲ್ಲಿ ಇರುವ ಮಕ್ಕಳು ಟೈಪ್ -2 ಮಧುಮೇಹವನ್ನು ಬೆಳೆಸಿಕೊಳ್ಳುವ ಅಪಾಯವನ್ನು ಹೊಂದಿರುತ್ತಾರೆ ಏಕೆಂದರೆ ಪ್ರೌಢಾವಸ್ಥೆಯಲ್ಲಿ, ವಿಶೇಷವಾಗಿ ಹುಡುಗಿಯರಲ್ಲಿ ಹೆಚ್ಚಿನ ಹಾರ್ಮೋನ್ ಚಟುವಟಿಕೆ ಇರುತ್ತದೆ.

ಅಪಾಯಕಾರಿ ಅಂಶಗಳು
ಕೆಲವು ಸಂಗತಿಗಳು ಮಕ್ಕಳ(Children) ಲ್ಲಿ ಮಧುಮೇಹ ಕಾಣಿಸಿಕೊಳ್ಳಲು ನೆರವಾಗುತ್ತವೆ. ಅವುಗಳ ಬಗ್ಗೆಯೂ ತಿಳಿದಿರಿ.

ಸ್ತನಗಳಲ್ಲಿ ಈ ರೀತಿಯ ನೋವು ಕಂಡು ಬಂದರೆ ಕ್ಯಾನ್ಸರ್ ಲಕ್ಷಣವೇ?

- ನಿಮ್ಮ ಕುಟುಂಬದಲ್ಲಿ (Family History) ಯಾರಿಗಾದರೂ ಮಧುಮೇಹ ಇದ್ದರೆ, ಅದು ಮುಂದಿನ ತಲೆಮಾರಿನಲ್ಲೂ ಮುಂದುವರಿಯಬಹುದು.
- ಗರ್ಭದಲ್ಲಿ ಮಗು ಇದ್ದಾಗ ಮಧುಮೇಹವನ್ನು ಹೊಂದಿದ್ದ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು.
- ಜಡ ಜೀವನಶೈಲಿಯನ್ನು ನಡೆಸುವ ಸ್ಥೂಲಕಾಯದ ಮಕ್ಕಳಲ್ಲಿ ಹೆಚ್ಚು ಅಪಾಯ. ಇದರ ಜೊತೆಗೆ ಜಂಕ್‌ಫುಡ್‌ ಸೇವನೆಯೂ ಸೇರಿದರೆ ಮತ್ತಷ್ಟು ಅಪಾಯ.

ಅಪಾಯವನ್ನು ಕಡಿಮೆ ಮಾಡಲು ಏನು ಮಾಡಬಹುದು?
- ಪೋಷಕರು ತಮ್ಮ ಮಕ್ಕಳ ಟೈಪ್ -2 ಮಧುಮೇಹದ ಅಪಾಯ ಸಾಧ್ಯತೆ ಕಡಿಮೆ ಮಾಡಲು ತಮ್ಮ ಮಕ್ಕಳ ಆಹಾರ ಮತ್ತು ದೈಹಿಕ ಚಟುವಟಿಕೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮೊದಲಾಗಿ ನೀವೇ ಬದಲಾಗಿ. ಜಂಕ್‌ಫುಡ್‌ ಸೇವಿಸಬೇಡಿ. ಹೆಚ್ಇಚನ ದೈಹಿಕ ಚಟುವಟಿಕೆ ಇಟ್ಟುಕೊಳ್ಳಿ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ, ಸರಿಯಾದ ಸಮಯಕ್ಕೆ ಮಲಗಿ ಹಾಗೂ ಏಳಿರಿ. ಊಟದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಪ್ರೊಟೀನ್ ಸಮಪ್ರಮಾಣದಲ್ಲಿರಲಿ.

ಮಹಿಳೆಯರಿಗೆ ಮಾತ್ರವಲ್ಲ, ಪುರುಷರನ್ನು ಕಾಡುತ್ತೆ ಈ ರೋಗ

- ಹೆಚ್ಚು ನೀರು ಕುಡಿಯಿರಿ (Drink Sufficient water). ಪ್ಯಾಕ್ ಮಾಡಿದ ಪಾನೀಯಗಳನ್ನು, ಸಾಫ್ಟ್ ಡ್ರಿಂಕ್‌ (Soft Drinks)ಗಳನ್ನು ಕುಡಿಯುವುದನ್ನು ತಪ್ಪಿಸಿ. ಬದಲಾಗಿ ಫ್ರೆಶ್ ಹಣ್ಣಿನ ಜ್ಯೂಸ್ ಕುಡಿಯುವುದನ್ನು ಪ್ರೋತ್ಸಾಹಿಸಿ.
- ಮಕ್ಕಳ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಅನ್ನ ಕಡಿಮೆ ಸೇವಿಸಿದರೂ ತೊಂದರೆಯಿಲ್ಲ. ತರಕಾರಿ, ಬೇಳೆಕಾಳು ಹೆಚ್ಚಿರಲಿ.
- ನಿಮ್ಮ ಮಗುವನ್ನು ಅತಿಯಾಗಿ ತಿನ್ನುವಂತೆ ಒತ್ತಾಯಿಸಬೇಡಿ. ಆಹಾರ ಒಂದು ಮಿತಿಯಲ್ಲಿರಲಿ. ಜಂಕ್ ಫುಡ್‌ಗಳನ್ನು ತಿನ್ನಲು ಬಿಡಬೇಡಿ. ನೀವೂ ತಿನ್ನಬೇಡಿ.
- ಸಂಜೆ ಅಥವಾ ಮುಂಜಾನೆ ವಾಕಿಂಗ್ (Walking) ಹೋಗುವಾಗ ಅವರನ್ನೂ ಕರೆದೊಯ್ಯಿರಿ . ಪಾರ್ಕ್‌ಗಳಲ್ಲಿರುವ ಚಿಲ್ಡ್ರನ್ ಪ್ಲೇ ಏರಿಯಾಗಳನ್ನು ಬಳಸಿಕೊಳ್ಳಿ.
- ದಿನಕ್ಕೆ ಮೂರು ಬಾರಿ ಹೊಟ್ಟೆ ತುಂಬಾ ಆಹಾರ ಸೇವಿಸುವುದಕ್ಕಿಂತಲೂ ನಾಲ್ಕು ಅಥವಾ ಐದು ಬಾರಿ ಸ್ವಲ್ಪ ಸ್ವಲ್ಪವೇ ಸೇವಿಸುವುದು ಒಳ್ಳೆಯದು.
- ಯಾವುದಾದರೂ ಒಂದು ಕ್ರೀಡೆಯನ್ನು ಮಕ್ಕಳ ಜೊತೆಗೆ ಆಡಿ. ಅಥವಾ ಅದರಲ್ಲಿ ಆಸಕ್ತಿ ಮೂಡುವಂತೆ ಮಾಡಿ- ಬ್ಯಾಡ್ಮಿಂಟನ್, ಟೆನಿಸ್, ಕ್ರಿಕೆಟ್ (Cricket), ಸ್ಕೇಟಿಂಗ್- ಹೀಗೆ ಯಾವುದೂ ಆಗಬಹುದು.
- ಪ್ರತಿದಿನ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಗಳಲ್ಲಿ (Physical Exercise) ತೊಡಗಿಸಿಕೊಳ್ಳಿ.

ಬೇವು -ಕಲ್ಲು ಸಕ್ಕರೆ ಆರೋಗ್ಯಕಾರಿ: ಪ್ರಧಾನಿ ಮೋದಿ ಫಿಟ್‌ನೆಸ್ ಸೀಕ್ರೇಟ್!

Follow Us:
Download App:
  • android
  • ios