ಬಹಳ ಬೇಗ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; 21-21-21 ಸೀಕ್ರೆಟ್ ರಿವೀಲ್ ಮಾಡಿದ ಫಿಟ್ನೆಸ್ ಟ್ರೈನರ್
ಕಪಿಲ್ ಶರ್ಮಾ ತೂಕ ಇಳಿಸಿಕೊಂಡಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಏಕೆಂದರೆ

ತೂಕ ಇಳಿಸಿಕೊಂಡ ರಹಸ್ಯ
ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರ ಫಿಟ್ನೆಸ್ ಪ್ರಯಾಣದ ಕುರಿತು ಎಲ್ಲರೂ ಪ್ರಭಾವಿತರಾಗಿದ್ದಾರೆ. ಏಕೆಂದರೆ ಅವರು ತಮ್ಮ ತೂಕವನ್ನು ಬಹಳ ವೇಗವಾಗಿ ಇಳಿಸಿಕೊಂಡರು. ಹಾಗಾದರೆ ಕಪಿಲ್ ಶರ್ಮಾ ತೂಕ ಇಳಿಸಿಕೊಂಡ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ...
ಫಲಿತಾಂಶವೂ ಚೆನ್ನಾಗಿತ್ತು
ಕಪಿಲ್ ಶರ್ಮಾ ತೂಕ ಇಳಿಸಿಕೊಂಡಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಏಕೆಂದರೆ ಅವರ ಫಿಟ್ನೆಸ್ ತರಬೇತುದಾರ ತೂಕ ಇಳಿಸುವ ರಹಸ್ಯವನ್ನು ಬಹಿರಂಗಪಡಿಸಿದ್ದು, "ಕಪಿಲ್ ಶರ್ಮಾ ತಮ್ಮ ತೂಕ ಇಳಿಸಿಕೊಳ್ಳಲು ತುಂಬಾ ಶ್ರಮಿಸಿದರು. ಇದರ ಫಲಿತಾಂಶವೂ ತುಂಬಾ ಚೆನ್ನಾಗಿತ್ತು" ಎಂದು ತಿಳಿಸಿದ್ದಾರೆ.
ರಿವೀಲ್ ಮಾಡಿದ್ರು ಫಿಟ್ನೆಸ್ ಟ್ರೈನರ್
ಕಪಿಲ್ ಶರ್ಮಾ ಅವರ ಫಿಟ್ನೆಸ್ ಟ್ರೈನರ್ ಯೋಗೇಶ್ ಭಟೇಜಾ ತೂಕ ಇಳಿಸುವ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಯೋಗೇಶ್ ಪ್ರಕಾರ, ಕಪಿಲ್ ಶರ್ಮಾ 21-21-21 ನಿಯಮವನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ.
ಏನಿದು 21-21-21 ರೂಲ್ಸ್
21-21-21 ತೂಕ ಇಳಿಸುವ ಪರಿಣಾಮಕಾರಿ ನಿಯಮವಾಗಿದ್ದು, ಇದರಲ್ಲಿ ಫಿಟ್‌ನೆಸ್ ಪ್ರಯಾಣವನ್ನು 21-21-21 ಮೂರು ಭಾಗಗಳಾಗಿ ನಿರ್ಧರಿಸಲಾಗುತ್ತದೆ. ಮೊದಲ 21 ದಿನಗಳು ವ್ಯಾಯಾಮದ ಮೇಲೆ ಕೇಂದ್ರೀಕರಿಸಲಾಗುತ್ತೆ. ಮುಂದಿನ 21 ದಿನಗಳು ಆಹಾರ ನಿಯಂತ್ರಣದ ಮೇಲೆ ಕೇಂದ್ರೀಕರಿಸಲಾಗುತ್ತದೆ. ಮತ್ತೆ ಮುಂದಿನ 21 ದಿನಗಳು ಧೂಮಪಾನ, ಮದ್ಯ ಮತ್ತು ಕೆಫೀನ್ ಅನ್ನು ತ್ಯಜಿಸಲು ಹೇಳಲಾಗುತ್ತದೆ.
ಮೊದಲ 21 ದಿನಗಳಲ್ಲಿ ಏನು ಮಾಡಬೇಕು?
ಕಪಿಲ್ ಶರ್ಮಾ ಅವರ ಫಿಟ್ನೆಸ್ ತರಬೇತುದಾರ ಯೋಗೇಶ್ ಭಟೇಜಾ ಅವರ ಪ್ರಕಾರ, ಮೊದಲ 21 ದಿನಗಳವರೆಗೆ ನೀವು ದೈಹಿಕ ಚಟುವಟಿಕೆಯ ಮೇಲೆ ಮಾತ್ರ ಗಮನಹರಿಸಬೇಕು. ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ.
ಎರಡನೇ ಹಂತದ 21 ದಿನಗಳ ಯೋಜನೆ
ಎರಡನೇ ಹಂತದ 21 ದಿನಗಳವರೆಗೆ ನೀವು ಆರೋಗ್ಯಕರ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಯೋಗೇಶ್ ಭಟೇಜಾ ಹೇಳಿದ್ದಾರೆ. ಇದರಲ್ಲಿ ನೀವು ಹಾಲು ಮತ್ತು ಸಕ್ಕರೆ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
ಕೊನೆಯ 21 ದಿನಗಳು ಅತ್ಯಂತ ಮುಖ್ಯ
ಈ ತೂಕ ಇಳಿಸುವ ಪ್ರಯಾಣದಲ್ಲಿ ಕೊನೆಯ 21 ದಿನಗಳು ಅತ್ಯಂತ ಮುಖ್ಯವಾದವು ಎಂದು ಯೋಗೇಶ್ ಭಟೇಜಾ ಹೇಳಿದರು. ಏಕೆಂದರೆ ಈ ದಿನಗಳಲ್ಲಿ ನಿಮಗೆ ಹಾನಿಕಾರಕವಾದ ನಿಮ್ಮ ಅಭ್ಯಾಸಗಳಿಂದ ದೂರವಿರಬೇಕು. ಇದರಲ್ಲಿ, ನೀವು ಧೂಮಪಾನ, ಮದ್ಯ ಮತ್ತು ಕೆಫೀನ್ ಅನ್ನು ತ್ಯಜಿಸುವಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
63 ದಿನಗಳಲ್ಲಿ ಹೀಗಾಗ್ತೀರಿ
ಯೋಗೇಶ್ ಭಟೇಜಾ ಅವರ ಪ್ರಕಾರ, ನೀವು 21 ದಿನಗಳನ್ನು ತಲುಪಿದಾಗ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳನ್ನು ನೋಡಬಹುದು. ಇದು ಮುಂದಿನ ಗುರಿಯನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಮುಂದಿನ 21 ದಿನಗಳಲ್ಲಿ ನಿಮ್ಮ ದೇಹವು ಸಂಪೂರ್ಣವಾಗಿ ಬದಲಾದಂತೆ ಕಾಣುತ್ತದೆ. ಕೊನೆಗೆ 63 ದಿನಗಳನ್ನು ಪೂರ್ಣಗೊಳಿಸಿದ ನಂತರ ನೀವು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತೀರಿ.