ಕಣ್ಣು, ಚರ್ಮದಲ್ಲಿ ಈ ಲಕ್ಷಣವಿದ್ದರೆ, ಇರಬಹುದು ಕಿಡ್ನಿ ಸಮಸ್ಯೆ!
ಮೂತ್ರಪಿಂಡ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಮತ್ತು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕುವಲ್ಲಿ ಮತ್ತು ದೇಹದ ಜೀವಕೋಶಗಳು (Cells) ಉತ್ಪಾದಿಸುವ ಆಮ್ಲವನ್ನು ಕಡಿಮೆ ಮಾಡುವಲ್ಲಿ ಈ ಅಂಗ ವಿಶೇಷ ಪಾತ್ರ ಹೊಂದಿದೆ. ಇದಲ್ಲದೆ, ಮೂತ್ರಪಿಂಡಗಳು ನಮ್ಮ ರಕ್ತದಲ್ಲಿನ ನೀರು ಮತ್ತು ಖನಿಜಗಳಾದ ಸೋಡಿಯಂ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ. ಮೂತ್ರಪಿಂಡದಲ್ಲಿನ ಯಾವುದೇ ರೀತಿಯ ಸಮಸ್ಯೆಯು ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಅನೇಕ ರೀತಿಯಲ್ಲಿ ವಿಷ ಹೆಚ್ಚುವ ಅಪಾಯವಿದೆ.
ಆರೋಗ್ಯ ತಜ್ಞರು ಹೇಳುವಂತೆ, ಎಲ್ಲಾ ಜನರು ಕಿಡ್ನಿ(Kidney) ಆರೋಗ್ಯದ ಬಗ್ಗೆ ಗಮನ ಹರಿಸಬೇಕು, ಈ ಅಂಗ ಆರೋಗ್ಯಕರವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಆಹಾರ ಸೇವಿಸಬೇಕು. ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಾಕಷ್ಟು ನೀರು ಕುಡಿಯೋದು ತುಂಬಾನೆ ಅಗತ್ಯ. ಈ ಅಂಗದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದ್ರೆ, ಅದರಿಂದ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ಆದುದರಿಂದ ಎಚ್ಚರವಾಗಿರೋದು ಮುಖ್ಯ.
ಸಾಮಾನ್ಯವಾಗಿ, ಮೂತ್ರವಿಸರ್ಜನೆಯ(Urination) ಸಮಸ್ಯೆಗಳನ್ನು ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳು ಎಂದು ಕರೆಯಲಾಗುತ್ತೆ, ಆದರೆ ಕಿಡ್ನಿ ಸಮಸ್ಯೆ ಇದ್ರೆ ನಿಮ್ಮ ಕಣ್ಣು ಮತ್ತು ಚರ್ಮದ ಮೇಲೆಯೂ ಅದರ ಲಕ್ಷಣಗಳು ಕಾಣಬಹುದು ಎಂದು ನಿಮಗೆ ತಿಳಿದಿದ್ಯಾ? ಯಾವ ರೋಗಲಕ್ಷಣಗಳ ಆಧಾರದ ಮೇಲೆ ಮೂತ್ರಪಿಂಡದ ಸಮಸ್ಯೆಗಳನ್ನು ಕಂಡುಹಿಡಿಯಬಹುದು..
ತಜ್ಞರು ಏನು ಹೇಳುತ್ತಾರೆ?
ಮೂತ್ರಕ್ಕೆ(Urine) ಸಂಬಂಧಿಸಿದ ರೋಗಲಕ್ಷಣಗಳು ಅಥವಾ ಹೊಟ್ಟೆ ನೋವು ಮಾತ್ರ ಕಿಡ್ನಿ ಸಮಸ್ಯೆಯ ಲಕ್ಷಣಗಳು ಅಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಿಡ್ನಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಆದ್ರೆ, ಅದರಿಂದ ಇಡೀ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ, ರಕ್ತದ ಕಲ್ಮಶ ಹೆಚ್ಚಾಗಲು ಪ್ರಾರಂಭಿಸುತ್ತವೆ, ಇದರ ನೇರ ಪರಿಣಾಮ ಅನೇಕ ಅಂಗಗಳ ಮೇಲೆ ಕಾಣಬಹುದು. ಎಲ್ಲಾ ಜನರು ಅದಕ್ಕೆ ಸಂಬಂಧಿಸಿದ ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಸಮಯಕ್ಕೆ ಸರಿಯಾಗಿ ಪರೀಕ್ಷಿಸಬೇಕು.
ಮೂತ್ರಪಿಂಡದ ಸಮಸ್ಯೆಗಳು ಚರ್ಮ(Skin) ಮತ್ತು ಕಣ್ಣುಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ನೋಡೋಣ.
ಮೂತ್ರಪಿಂಡದ ಕಾಯಿಲೆಯಿಂದ ಚರ್ಮದ ಸಮಸ್ಯೆಗಳು
ಕಿಡ್ನಿ ಸರಿಯಾಗಿ ಕೆಲಸ ಮಾಡದೆ ಇದ್ರೆ ಚರ್ಮವು ಶುಷ್ಕ, ಫ್ಲೇಕಿ ಮತ್ತು ತುರಿಕೆಯಿಂದ ಕೂಡಿರುತ್ತೆ ಎಂದು ಸಂಶೋಧಕರು ಹೇಳಿದ್ದಾರೆ. ಕಿಡ್ನಿಗಳು ರಕ್ತದಿಂದ ವಿಷವನ್ನು ಸೋಸಿ ಚರ್ಮಕ್ಕೆ ಶುದ್ಧ ರಕ್ತ ಕಳುಹಿಸುತ್ತವೆ. ಅದು ಸರಿಯಾಗಿ ಕೆಲಸ ಮಾಡದಿದ್ದರೆ, ರಕ್ತದಲ್ಲಿನ ವಿಷ ಹೆಚ್ಚಾದಾಗ, ಅದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ರಕ್ತದಲ್ಲಿ ಹೆಚ್ಚಿದ ವಿಷವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಕಣ್ಣಿನ ಸಮಸ್ಯೆ(Eye problem)
ಚರ್ಮ ಮತ್ತು ಕಿಡ್ನಿ ಸಮಸ್ಯೆಗಳಿಂದಾಗಿ ಕಣ್ಣಿನ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ನಿಮ್ಮ ಕಣ್ಣುಗಳ ಸುತ್ತ ಊತ ಕಂಡೂ ಬಂದಿದ್ದು, ಕಣ್ಣಿನ ಪರೀಕ್ಷೆ ಮಾಡಿದಾಗಲೂ ಸಮಸ್ಯೆಗೆ ಕಾರಣ ಏನೆಂದು ತಿಳಿಯದಾಗ, ಮೂತ್ರಪಿಂಡದ ಪರೀಕ್ಷೆ ಮಾಡೋದನ್ನು ಮರೆಯಬೇಡಿ ಎಂದು ತಜ್ಞರು ಹೇಳುತ್ತಾರೆ.
ಕಿಡ್ನಿ ಸಮಸ್ಯೆಗಳ ಇತರ ಲಕ್ಷಣಗಳು
ದೇಹದ ಭಾಗಗಳಲ್ಲಿನ ಅಸಹಜ ಬದಲಾವಣೆ ಗಮನದಲ್ಲಿಟ್ಟುಕೊಂಡು ಕಿಡ್ನಿ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. ಮೂತ್ರಪಿಂಡದ ಸಮಸ್ಯೆ ಅಥವಾ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ, ಸ್ನಾಯು ನೋವು(Muscle pain), ಉಸಿರಾಟದ ತೊಂದರೆ, ಆಗಾಗ್ಗೆ ಮೂತ್ರದ ಸೋಂಕುಗಳು ಮತ್ತು ಕಾಲುಗಳಲ್ಲಿ ಊತ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತೆ.
ಮೂತ್ರಪಿಂಡಗಳಿಗೆ ಸಂಬಂಧಿಸಿದ ಯಾವುದೇ ನಿರ್ಲಕ್ಷ್ಯವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಎಲ್ಲಾ ಜನರು ಈ ಬಗ್ಗೆ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹಾಗಿದ್ರೆ ಮಾತ್ರ ಉತ್ತಮ ಆರೋಗ್ಯ(Health) ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ. ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.