MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಕಣ್ಣಿನ ಶೇಪ್ ಮೂಲಕ ತಿಳಿಯರಿ ನಿಮ್ಮವರ ಗುಣ ಹೇಗಿದೆ ಎಂದು

ಕಣ್ಣಿನ ಶೇಪ್ ಮೂಲಕ ತಿಳಿಯರಿ ನಿಮ್ಮವರ ಗುಣ ಹೇಗಿದೆ ಎಂದು

ಒಬ್ಬ ವ್ಯಕ್ತಿಯು ತನ್ನ ನಾಲಗೆಯಿಂದ ಏನನ್ನು ಹೇಳಲು ಸಾಧ್ಯವಿಲ್ಲವೋ, ಅದನ್ನು ಅವನ ಕಣ್ಣುಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಒಬ್ಬ ವ್ಯಕ್ತಿಯ ಕಣ್ಣುಗಳು ಅವನ ಮಾತುಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕಣ್ಣುಗಳು ಎಷ್ಟು ಪರಿಣಾಮಕಾರಿಯಾಗಿವೆಯೆಂದರೆ, ಅನೇಕ ಬಾರಿ ಕಣ್ಣುಗಳನ್ನು ನೋಡುವ ಮೂಲಕ ನಮ್ಮ ಮುಂದಿರುವ ವ್ಯಕ್ತಿಯ ಮನಸ್ಸಿನಲ್ಲಿ ಏನೆಲ್ಲಾ ಯೋಚನೆಗಳು ಓಡಾಡುತ್ತಿರುತ್ತವೆ ಅನ್ನೋದನ್ನು ನಾವು ತಿಳಿದುಕೊಳ್ಳುತ್ತೇವೆ. ಹಾಗಾದ್ರೆ ಕಣ್ಣು ಯಾವ ರೀತಿ ಇದ್ರೆ ಆ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಅನ್ನೋದನ್ನು ತಿಳಿಯಬಹುದು.

2 Min read
Suvarna News
Published : Aug 27 2022, 02:53 PM IST
Share this Photo Gallery
  • FB
  • TW
  • Linkdin
  • Whatsapp
18

ಸಮುದ್ರ ವಿಜ್ಞಾನದಲ್ಲಿ, ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅವನ ದೇಹದ ರಚನೆಯಿಂದ ಪಡೆಯಬಹುದು. ಅಂತೆಯೇ, ವ್ಯಕ್ತಿಯ ಸ್ವಭಾವವನ್ನು ವ್ಯಕ್ತಿಯ ಕಣ್ಣುಗಳ ಬಣ್ಣ (color of eyes) ಮತ್ತು ಅವುಗಳ ವಿನ್ಯಾಸದಿಂದ ತಿಳಿಯಬಹುದು. ನಿಮ್ಮ ಕಣ್ಣಿನ ಶೇಪ್ ಪ್ರಕಾರ ನಿಮ್ಮ ನಿಜಗುಣ ಏನೆಂದು ತಿಳಿಯಿರಿ. 

28

ಕಣ್ಣುಗಳು ಸಹ ಅನೇಕ ಆಕಾರಗಳು ಮತ್ತು ಬಣ್ಣಗಳನ್ನು ಹೊಂದಿವೆ. ಅವುಗಳೆಂದರೆ ದುಂಡು, ಸಣ್ಣ, ಆಳವಾದ ಮತ್ತು ಕೆಂಪು, ನೀಲಿ, ಕಪ್ಪು ಇತ್ಯಾದಿ. ಕಣ್ಣುಗಳ ಮೂಲಕ ವ್ಯಕ್ತಿಯ ಸ್ವಭಾವದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು ಎಂದು ಸಮುದ್ರ ವಿಜ್ಞಾನದಲ್ಲಿ ತಿಳಿಸಲಾಗಿದೆ. ಆದ್ದರಿಂದ ನಿಮ್ಮ ಕಣ್ಣುಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ ಎಂದು ತಿಳಿಯೋಣ ಬನ್ನಿ.

38
ಉಬ್ಬಿ ಬಂದ ಕಣ್ಣುಗಳು

ಉಬ್ಬಿ ಬಂದ ಕಣ್ಣುಗಳು

ಸಮುದ್ರ ವಿಜ್ಞಾನದ ಪ್ರಕಾರ, ಕಣ್ಣುಗಳು ದೊಡ್ಡದಾಗಿರುವ, ಎತ್ತರವಾದ ಮತ್ತು ಹೊರಚಾಚಿಕೊಂಡಿರುವ ಜನರು ಸ್ವಭಾವತಃ ತುಂಬಾ ವಿನಮ್ರ ಮತ್ತು ಬಹಳ ಒಳ್ಳೆಯ ಹೃದಯದ ಜನರು. ಅಂತಹ ಜನರು ಇತರರ ಭಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಸಹ ಹೊಂದಿರುತ್ತಾರೆ. ಅಲ್ಲದೆ, ದೊಡ್ಡ ಮತ್ತು ಬ್ರೈಟ್ ಕಣ್ಣುಗಳನ್ನು ಹೊಂದಿರುವ ಜನರು ತುಂಬಾ ಬುದ್ಧಿವಂತರು.
 

48
ಸಣ್ಣ ಕಣ್ಣುಗಳು

ಸಣ್ಣ ಕಣ್ಣುಗಳು

ಅನೇಕ ಜನರು ತುಂಬಾ ಸಣ್ಣ ಕಣ್ಣುಗಳನ್ನು ಹೊಂದಿರೋದನ್ನು ನೀವು ನೋಡಿರಬಹುದು. ಸಣ್ಣ ಕಣ್ಣುಗಳನ್ನು ಹೊಂದಿರುವ ಜನರು ತುಂಬಾ ಧೈರ್ಯಶಾಲಿಗಳಲ್ಲ. ಅಂತಹ ಜನರು ಸ್ವಲ್ಪ ಹೆಚ್ಚು ಕೋಪಗೊಳ್ಳುತ್ತಾರೆ. ಅವರು ವಿಷಯಗಳ ಬಗ್ಗೆ ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂತಹ ಜನರು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇವರು ವರ್ತಮಾನದ ಬಗ್ಗೆ ಹೆಚ್ಚು ಯೋಚಿಸುತ್ತಾರೆ.

58
ದುಂಡಗಿನ ಕಣ್ಣುಗಳು

ದುಂಡಗಿನ ಕಣ್ಣುಗಳು

ದುಂಡಗಿನ ಕಣ್ಣುಗಳನ್ನು ಹೊಂದಿರುವ ಜನರು ಸುತ್ತಾಡಲು ಹೆಚ್ಚು ಬಯಸುತ್ತಾರೆ. ಅವಕಾಶ ಸಿಕ್ಕ ತಕ್ಷಣ, ಅಂತಹ ಜನರು ಒಂದಲ್ಲ ಒಂದು ಟ್ರಾವೆಲ್ ಮಾಡಲು ತಯಾರಿ ನಡೆಸುತ್ತಾರೆ. ಈ ಜನರು ಪ್ರಪಂಚದಾದ್ಯಂತದಿಂದ ಮಾಹಿತಿಯನ್ನು ಪಡೆಯಲು ಇಷ್ಟಪಡುತ್ತಾರೆ. ಆದ್ದರಿಂದ, ಈ ಜನರು ವಿಷಯಗಳನ್ನು ಚೆನ್ನಾಗಿ ಅನ್ವೇಷಿಸಲು ದೂರದ ಪ್ರಯಾಣ ಮಾಡಲು ಬಯಸುತ್ತಾರೆ.

68
ಬ್ರೈಟ್ ಕಣ್ಣುಗಳು

ಬ್ರೈಟ್ ಕಣ್ಣುಗಳು

ಕೆಂಪು ಬಣ್ಣ ಮತ್ತು ಕಲ್ಲಿದ್ದಲಿನಂತಹ ಉರಿಯುವ ಕಣ್ಣುಗಳನ್ನು ಹೊಂದಿರುವ ಜನರು ಬೇಗ ಕೋಪಗೊಳ್ಳುತ್ತಾರೆ. ಅಂತಹ ಜನರಲ್ಲಿ ಸಹನೆ ಕೊರತೆಯೂ ಇದೆ. ಈ ಜನರು ವಿಷಯಗಳನ್ನು ನೇರವಾಗಿ ಹೇಳುತ್ತಾರೆ. ಅನೇಕ ಬಾರಿ ಅವರ ಕೋಪವು ಅವರಿಗೆ ಹಾನಿಯನ್ನುಂಟು ಮಾಡಿರುವ ಉದಾಹರಣೆಗಳೂ ಇವೆ.

78
ನಸು ನೀಲಿ ಕಣ್ಣುಗಳು

ನಸು ನೀಲಿ ಕಣ್ಣುಗಳು

ನಸು ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ಆದಾಗ್ಯೂ, ಅಂತಹ ಜನರು ಸ್ವಭಾವತಃ ಸಾಕಷ್ಟು ಚತುರರು ಆಗಿರುತ್ತಾರೆ. ಯಾವ ಸಂದರ್ಭವನ್ನು ಯಾವ ರೀತಿ ಡೀಲ್ ಮಾಡಬೇಕು ಅನ್ನೋದು ಇವರಿಗೆ ತಿಳಿದಿರುತ್ತೆ.

88
ಆಳವಾದ ಕಣ್ಣುಗಳು

ಆಳವಾದ ಕಣ್ಣುಗಳು

ಯಾರ ಕಣ್ಣುಗಳು ಆಳವಾಗಿರುತ್ತವೆಯೋ, ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ಚತುರರಾಗಿರುತ್ತಾರೆ. ಈ ಜನರಿಗೆ ಇತರರನ್ನು ಹೇಗೆ ಮನವೊಲಿಸುವುದು ಎಂದು ಚೆನ್ನಾಗಿ ತಿಳಿದಿದೆ. ಯಾರನ್ನೂ ಕೂಡ ಇವರು ತಮ್ಮ ಮಾತುಗಳ ಮೂಲಕ ಒಲಿಸಬಲ್ಲರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved