ಸುಸ್ಸು ಮಾಡಿದ ಕೂಡಲೇ ನೀರು ಕುಡಿತೀರಾ? ಹಾಗಾದ್ರೆ ಈ ವಿಷಯ ನಿಮಗೆ ಗೊತ್ತಿರಲಿ
Drink Water Immediately after Urinating: ಮೂತ್ರ ವಿಸರ್ಜನೆ ಬಳಿಕ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ಏನಾಗುತ್ತದೆ? ಹಾಗಾದ್ರೆ ನೀರು ಯಾವಾಗ ಕುಡಿಯಬೇಕು?

ಆರೋಗ್ಯವಾಗಿರಲು ಹೆಚ್ಚು ನೀರು ಕುಡಿಬೇಕು ಎಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯೋದರಿಂದ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಬಹುದು. ಆದರೆ ನೀರು ಯಾವಾಗ ಕುಡಿಯಬೇಕು ಎಂಬ ನಿಯಮಗಳಿವೆ ಕೆಲವೊಮ್ಮೆ ಮಿತಿಗಿಂತ ಅಧಿಕವಾಗಿ ನೀರು ಕುಡಿದ್ರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಕೆಲವರು ಮೂತ್ರ ವಿಸರ್ಜಿಸಿದ ಬಳಿಕ ಅರ್ಧ ಲೀಟರ್‌ನಷ್ಟು ನೀರು ಕುಡಿಯುತ್ತಾರೆ. ಮೂತ್ರ ವಿಸರ್ಜನೆಯ ನಂತರ ನೀರು ಕುಡಿಯುವುದರಿಂದ ದೇಹಕ್ಕೆ ಹೇಗೆ ಹಾನಿಯಾಗುತ್ತೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಮೂತ್ರ ವಿಸರ್ಜನೆ ಬಳಿಕ ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ?
ಮೂತ್ರ ವಿಸರ್ಜನೆ ಬಳಿಕ ನೀರು ಕುಡಿಯೋದರಿಂದ ಮೂತ್ರಪಿಂಡ ಮತ್ತು ಮೂತ್ರಕೋಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ನೀವು ತಕ್ಷಣ ನೀರು ಕುಡಿದ್ರೆ ಶೌಚಾಲಯದ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನೀರು ಕುಡಿದ್ರೆ ಮೂತ್ರಪಿಂಡಗಳು ಮತ್ತು ಮೂತ್ರಕೋಶವು ವಿಶ್ರಾಂತಿ ಪಡೆಯಲು ಅವಕಾಶ ಸಿಗುವುದಿಲ್ಲ.
ಪ್ರತಿದಿನ ಮೂತ್ರ ವಿಸರ್ಜನೆ ಬಳಿಕ ನೀರು ಕುಡಿಯುತ್ತಿದ್ದರೆ ಮೂತ್ರಪಿಂಡದ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಲು ಆರಂಭಿಸುತ್ತದೆ. ಭವಿಷ್ಯದಲ್ಲಿ ಮೂತ್ರಪಿಂಡಗಳ ನಾಶಕ್ಕೆ ಕಾರಣವಾಗಲೂಬಹುದು. ಕೆಲವೊಮ್ಮೆ ಇದು ಜೀರ್ಣಕ್ರಿಯೆ ಮೇಲೆಯೇ ಪರಿಣಾಮ ಬೀರುತ್ತದೆ.
ತಕ್ಷಣ ನೀರು ಕುಡಿಯೋದರಿಂದ ಮೂತ್ರ ವಿಸರ್ಜನಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೂತ್ರನಾಳದಲ್ಲಿ ಸೋಂಕು ಉಂಟಾದಾಗ, ಮೂತ್ರ ವಿಸರ್ಜಿಸುವಾಗ ನೋವು ಉಂಟಾಗುತ್ತದೆ. ಇಂತಹ ಸಮಸ್ಯೆಗಳು ಈ ಕಾರಣದಿಂದಲೇ ಬರುವ ಸಾಧ್ಯತೆಗಳಿರುತ್ತವೆ.
ಮೂತ್ರಕೋಶದಲ್ಲಿ ಕಲ್ಲುಗಳ ಸಂಗ್ರಹಕ್ಕೂ ಇದು ಕಾರಣವಾಗಬಹುದು. ಮೂತ್ರ ವಿಸರ್ಜಿಸಿದ ಮರುಕ್ಷಣವೇ ಅತಿಯಾಗಿ ನೀರು ಕುಡಿಯೋದರಿಂದ ಮೂತ್ರಕೋಶಗಳ ಮೇಲೆ ಹೆಚ್ಚಿನ ಒತ್ತಡ ಹಾಕಿದಂತಾಗುತ್ತದೆ.
ಯಾವಾಗ ನೀರು ಕುಡಿಯಬೇಕು?
ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿಯಬಾರದು. ಒಂದು ವೇಳೆ ನಿಮಗೆ ತುಂಬಾ ಬಾಯಾರಿಕೆಯಾಗಿದ್ದರೆ, ಮೂತ್ರ ವಿಸರ್ಜನೆಯ ನಂತರ 10 ರಿಂದ 15 ನಿಮಿಷಗಳ ನಂತರ ನೀವು ನೀರು ಕುಡಿಯಬಹುದು ಅಥವಾ ಮೂತ್ರ ವಿಸರ್ಜನೆಗೂ ಮುನ್ನವೇ ನೀರು ಕುಡಿಯಬಹುದು. ಇದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ