- Home
- Life
- Health
- ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆಯ ಪ್ರಮುಖ ಚಿಹ್ನೆಗಳಿವು : ಈ ಲಕ್ಷಣಗಳಿದ್ದಲ್ಲಿ ನಿರ್ಲಕ್ಷ್ಯ ಬೇಡ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆಯ ಪ್ರಮುಖ ಚಿಹ್ನೆಗಳಿವು : ಈ ಲಕ್ಷಣಗಳಿದ್ದಲ್ಲಿ ನಿರ್ಲಕ್ಷ್ಯ ಬೇಡ
ಮೊದಲೆಲ್ಲಾ ಬಿಪಿ ಶುಗರ್ ಎಂದರೆ 40-50 ವರ್ಷ ದಾಟಿದವರಿಗೆ ಎಂಬ ನಂಬಿಕೆ ಇತ್ತು. ಅದು ನಿಜವೂ ಆಗಿತ್ತು. ಆದರೆ ಈಗ ಸಣ್ಣ ಮಕ್ಕಳಲ್ಲಿಯೂ ಮಧುಮೇಹದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದು ಪೋಷಕರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಬಹುತೇಕ ಪೋಷಕರಿಗೆ ತಮ್ಮ ಮಕ್ಕಳಲ್ಲಿ ಇಂತಹದೊಂದು ಸಮಸ್ಯೆ ಇದೆ ಎಂಬುದರ ಅರಿವೆ ಇರುವುದಿಲ್ಲ. ಹಾಗಿದ್ದರೆ ಈ ಮಕ್ಕಳಲ್ಲಿ ಕಂಡು ಬರುವ ಮಧುಮೇಹದ ಸಮಸ್ಯೆಯನ್ನು ಗುರುತಿಸುವುದು ಹೇಗೆ ಎಂಬುದನ್ನು ಈಗ ನೋಡೋಣ.

ಮಕ್ಕಳಲ್ಲಿ ಇತ್ತೀಚೆಗೆ ಮಧುಮೇಹ ಅದರಲ್ಲೂ ಟೈಪ್2 ಮಧುಮೇಹ ತೀವ್ರವಾಗಿ ಹೆಚ್ಚಾಗುತ್ತಿದೆ. ವಂಶವಾಹಿಯಾಗಿ ಬರುವ ಜೀನ್‌ಗಳು ಹಾಗೂ ಜೀವನಶೈಲಿ ಇದಕ್ಕೆ ಕಾರಣವಾಗಿದೆ. ಆದರೆ ಇದು ಗಂಭೀರ ಹಂತವನ್ನು ತಲುಪುವುದನ್ನು ತಡೆಯುವುದಕ್ಕೆ ಆರಂಭದಲ್ಲೇ ಇದರ ಇರುವಿಕೆಯನ್ನು ಗುರುತಿಸುವುದು ಬಹಳ ಅಗತ್ಯವಾಗಿದೆ.
ಆದರೆ ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು ಸೂಕ್ಷ್ಮವಾಗಿರುತ್ತವೆ. ಹಾಗೂ ಹೀಗಾಗಿ ಇದು ಬೇರೆ ಸಾಮಾನ್ಯ ಕಾಯಿಲೆಗಳ ಜೊತೆ ಗುರುತಿಸಲ್ಪಡುತ್ತದೆ. ಮಕ್ಕಳಲ್ಲಿ ಈ ಕಾಯಿಲೆ ಇದ್ದರೂ ಲಕ್ಷಣಗಳು ತಿಳಿಯದ ಹೊರತು ಇವುಗಳನ್ನು ಗುರುತಿಸಲು ಸಾಧ್ಯವಿಲ್ಲ. ಹೀಗಿರುವಾಗ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಇದೆ ಎಂಬುದನ್ನು ಗುರುತಿಸಬಹುದಾದ ಕೆಲವು ಪ್ರಮುಖ ಲಕ್ಷಣಗಳು ಏನು ಎಂಬುದನ್ನು ಈಗ ಇಲ್ಲಿ ತಿಳಿಯೋಣ.
sipper for kids
ಬಾಯಾರಿಕೆ:
ಸಾಕಷ್ಟು ನೀರು ಕುಡಿದ ನಂತರವೂ ನಿಮ್ಮ ಮಕ್ಕಳಲ್ಲಿ ನಿರಂತರ ಬಾಯಾರಿಕೆ ಕಂಡು ಬಂದರೆ ಅದು ಒಳ್ಳೆಯ ಲಕ್ಷಣ ಅಲ್ಲ, ಇದು ಟೈಪ್-2 ಮಧುಮೇಹದ ಲಕ್ಷಣವಾಗಿರಬಹುದು. ಹೆಚ್ಚಿನ ರಕ್ತದ ಗ್ಲುಕೋಸ್‌ಗಳು ಅಂಗಾಂಶಗಳಿಂದ ರಕ್ತವನ್ನು ಎಳೆಯುತ್ತಿರುತ್ತವೆ. ಇದು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿ ಇದು ಬಾಯಾರಿಕೆಗೂ ಕಾರಣವಾಗಬಹುದು. ಇದರಿಂದಾಗಿ ಹೆಚ್ಚುವರಿ ಗ್ಲೂಕೋಸ್‌ನಿಂದ ಮೂತ್ರಪಿಂಡ ತುಂಬಿ ಹೋದಾಗ, ಅದು ಮೂತ್ರದ ಮೂಲಕ ಹೊರ ಹಾಕಲ್ಪಡುತ್ತದೆ. ಹೀಗಾಗಿ ಅವರು ಬಾಯರಿಕೆಯ ಜೊತೆ ನಿರಂತರವಾಗಿ ಶೌಚಾಲಯಕ್ಕೆ ಹೋಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.
ಚೆನ್ನಾಗಿ ತಿಂದರೂ ತೂಕ ಇಳಿಕೆ:
ನಿಮ್ಮ ಮಗು ಚೆನ್ನಾಗಿ ತಿನ್ನುತ್ತಿದ್ದರೂ ತೂಕ ಇಳಿಕೆಯಾಗುತ್ತಿದ್ದರೆ ಅದು ಕೂಡ ಮಧುಮೇಹದ ಲಕ್ಷಣವಾಗಿರಬಹುದು. ಸಾಮಾನ್ಯ ಹಾಗೂ ತೀವ್ರ ಹಸಿವಿನ ಹೊರತಾಗಿಯೂ ತೂಕ ಇಳಿಕೆ ಲಕ್ಷ್ಣವೂ ಮಕ್ಕಳಲ್ಲಿ ಮಧುಮೇಹದ ಎಚ್ಚರಿಕೆ ಸೂಚಕವಾಗಿರಬಹುದು. ಟೈಪ್ 1 ಸಕ್ಕರೆ ಕಾಯಿಲೆ ಇರುವ ಮಕ್ಕಳಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದ ಕಾರಣ ದೇಹವು ಶಕ್ತಿಗಾಗಿ ದೇಹದಲ್ಲಿರುವ ಗ್ಲುಕೋಸನ್ನು ಬಳಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಇದು ದೇಹದಲ್ಲಿರುವ ಅಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ತೂಕ ಇಳಿಕೆಗೆ ಕಾರಣವಾಗುತ್ತದೆ. ಟೈಪ್ 2 ಮಧುಮೇಹ ಇದ್ದವರಿಗೂ ಇನ್ಸುಲಿನ್ ಪ್ರತಿರೋಧವೂ ಇದೇ ರೀತಿಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಬೊಜ್ಜು ಹೊಂದಿರುವ ಮಕ್ಕಳಲ್ಲಿ..
ನಿಶ್ಯಕ್ತಿ ಹಾಗೂ ತೀವ್ರ ಆಯಾಸ:
ನಿಶ್ಯಕ್ತಿ ಹಾಗೂ ತೀವ್ರ ಆಯಾಸ ಟೈಪ್1 ಮಧುಮೇಹದ ಸಂಕೇತವಾಗಿದೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದೇ ಹೋದರೆ ಗ್ಲುಕೋಸ್ ಜೀವಕೋಶಗಳನ್ನು ಸೇರಲು ಸಾಧ್ಯವಾಗುವುದಿಲ್ಲ, ಹೀಗಾಗಿ ಅವುಗಳಿಗೆ ಶಕ್ತಿ ಇಲ್ಲದೇ ಹಸಿವಾಗಲು ಶುರುವಾಗುತ್ತದೆ. ಹಾಗೂ ಆಯಾಸ ಉಂಟಾಗುತ್ತದೆ. ಇದು ಆಲಸ್ಯ, ಕಿರಿಕಿರಿ ಉಂಟು ಮಾಡುವುದಲ್ಲದೇ ಒಂದು ವಿಷಯದಲ್ಲಿ ಗಮನ ಕೇಂದ್ರೀಕರಿಸುವುದಕ್ಕೆ ಮಕ್ಕಳಿಗೆ ತೊಂದರೆಯಾಗಬಹುದು. ಆದರೆ ಪೋಷಕರು ಇದನ್ನು ನಿದ್ರೆಯ ಕೊರತೆ ಅಥವಾ ಬಾಲ್ಯದ ನಡವಳಿಕೆಗಳು ಎಂದು ಭಾವಿಸುವುದೇ ಹೆಚ್ಚು. ಆದರೆ ಸಕಾರವಿಲ್ಲದೇ ಯಾವಾಗಲೂ ಇದೇ ರೀತಿ ಆಗುವುದಿಲ್ಲ, ಹೀಗಾಗಿ ಸ್ಪಷ್ಟ ಕಾರಣವಿಲ್ಲದೇ ಮಗು ತೀವ್ರವಾಗಿ ದಣಿದಂತೆ ಸುಸ್ತಾದಂತೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ತುಂಬಾ ಮುಖ್ಯ.
ಚರ್ಮ ಕಪ್ಪಾಗುವುದು:
ಕತ್ತು, ಕಂಕುಳು, ತೊಡೆಸಂಧು ಮುಂತಾದ ಕಡೆ ಚರ್ಮ ಕಪ್ಪಾಗುವುದು ಕೂಡ ನಿರ್ಣಾಯಕ ರೋಗ ಲಕ್ಷಣವಾಗಿದೆ. ದೇಹದ ಈ ಸ್ಥಳಗಳಲ್ಲಿ ಕಂಡು ಬರುವ ಅಕಾಂತೋಸಿಸ್ ನಿಗ್ರಿಕನ್ಸ್ ಎಂದು ಕರೆಯಲ್ಪಡುವ ಚರ್ಮದ ಕಪ್ಪು ಇನ್ಸುಲಿನ್ ಪ್ರತಿರೋಧದ ಪ್ರಮುಖ ಸೂಚಕವಾಗಿದೆ. ಇದು ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದ್ದಾಗಿದೆ. ಜನರು ಈ ಲಕ್ಷಣವನ್ನು ಶುಚಿತ್ವದ ಕೊರತೆಯಿಂದ ಅಥವಾ ಸರಿಯಾಗಿ ಸ್ನಾನ ಮಾಡದ ಕಾರಣ ಆಗಿರುವುದು ಎಂದು ಭಾವಿಸುತ್ತಾರೆ. ಆದರೆ ಇದು ಅದಲ್ಲ, ಇಂತಹ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.