ಔಷಧಿ ಬೇಡ… ಜಾಂಡೀಸ್ ನಿವಾರಣೆಗೆ ಈ ಗಿಡಮೂಲಿಕೆ ಸಾಕು
ಲಿವರ್ (Liver) ಸರಿಯಾಗಿ ಕೆಲಸ ಮಾಡದಿದ್ದಾಗ, ಅದು ರಕ್ತದಲ್ಲಿ ಬಿಲಿರುಬಿನ್ (Bilirubin) ಎಂಬ ಕೊಳಕು ವಸ್ತುವನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ರಕ್ತದಲ್ಲಿ ಈ ಪದಾರ್ಥದ ಹೆಚ್ಚಳದಿಂದಾಗಿ, ಕಣ್ಣು ಮತ್ತು ಉಗುರಿನಲ್ಲಿ ಹಳದಿಯಾಗುವುದು ಕಂಡುಬರುತ್ತೆ. ರೋಗಿಯು ಆಯಾಸ (Strain), ಕಿಬ್ಬೊಟ್ಟೆ ನೋವು, ತೂಕ ನಷ್ಟ (Weight Loss), ವಾಂತಿ ಮತ್ತು ಜ್ವರದಂತಹ ಹಲವು ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಔಷಧದಲ್ಲಿ ಜಾಂಡೀಸ್ (Jaundice) ಗೆ ಅನೇಕ ರೀತಿಯ ಚಿಕಿತ್ಸೆಗಳಿವೆ, ಆದರೆ ಕೆಲವು ಮನೆಮದ್ದುಗಳ ಮೂಲಕವೂ ನೀವು ಸಮಸ್ಯೆ ನಿವಾರಿಸಬಹುದು.
ಕಾಮಾಲೆ (jaundice) ಒಂದು ಸಾಮಾನ್ಯ ಕಾಯಿಲೆಯಾಗಿದ್ದು, ಅನೇಕ ಜನರು ಇದನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಈ ರೋಗದಲ್ಲಿ, ಚರ್ಮ, ಲೋಳೆಯ ಪೊರೆ ಮತ್ತು ಕಣ್ಣುಗಳ ಬಿಳಿ ಭಾಗದಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಮೂತ್ರ ಹಳದಿಯಾಗುತ್ತದೆ, ಜೊತೆಗೆ ದೇಹದ ದ್ರವಗಳ ಬಣ್ಣವು ಹಳದಿ (Yellow) ಬಣ್ಣಕ್ಕೆ ತಿರುಗಬಹುದು. ಕಾಮಾಲೆಯು ಹೆಚ್ಚಾಗಿ ಯಕೃತ್ತು ಅಥವಾ ಪಿತ್ತರಸದ ನಾಳಗಳ ಸಮಸ್ಯೆಗೆ ಸಂಬಂಧಿಸಿದೆ.
ಕಾಮಾಲೆಗೆ ಕಾರಣವೇನು?
ಯಕೃತ್ತು (Liver) ಸರಿಯಾಗಿ ಕೆಲಸ ಮಾಡದಿದ್ದಾಗ, ಅದು ರಕ್ತದಲ್ಲಿ ಬಿಲಿರುಬಿನ್ ಎಂಬ ಕೆಟ್ಟ ವಸ್ತುವನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ರಕ್ತದಲ್ಲಿ ಈ ಪದಾರ್ಥದ ಹೆಚ್ಚಳದಿಂದಾಗಿ, ಕಣ್ಣುಗಳು ಮತ್ತು ಉಗುರು ಹಳದಿಯಾಗುತ್ತೆ (yellow color). ಬಿಲಿರುಬಿನ್ ಹೆಚ್ಚಾಗೋದರಿಂದ ದೇಹ ಹಸಿರು ಬಣ್ಣಕ್ಕೆ ಬದಲಾಗಬಹುದು. ಈ ರೋಗವು ಯಾರಿಗೆ ಬೇಕಾದರೂ ಉಂಟಾಗಬಹುದು, ಮಕ್ಕಳು ಮತ್ತು ವಯಸ್ಸಾದವರಲ್ಲಿ ಸಹ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತೆ.
ಕಾಮಾಲೆ ರೋಗದ ಲಕ್ಷಣಗಳು :
ಚರ್ಮ, ಕಣ್ಣುಗಳು ಮತ್ತು ಉಗುರುಗಳು ಹಳದಿಯಾಗುವುದು, ಮೂತ್ರದ ಹಳದಿಯಾಗುವಿಕೆ ಮತ್ತು ತುರಿಕೆ ಉಂಟಾಗುತ್ತೆ. ಇವುಗಳಲ್ಲದೆ, ರೋಗಿಯು ಆಯಾಸ, ಕಿಬ್ಬೊಟ್ಟೆ ನೋವು, ತೂಕ ನಷ್ಟ, ವಾಂತಿ ಮತ್ತು ಜ್ವರದಂತಹ ರೋಗಲಕ್ಷಣಗಳನ್ನು ಸಹ ಅನುಭವಿಸಬಹುದು.
ಕಾಮಾಲೆ ರೋಗಕ್ಕೆ ಗಿಡಮೂಲಿಕೆಗಳ ಪರಿಹಾರ
ತೊಗರಿ ಬೇಳೆಯ ಎಲೆಗಳನ್ನು ರುಬ್ಬಿ ಅದರ ರಸ ಹೊರತೆಗೆಯಿರಿ ಮತ್ತು ಪ್ರತಿದಿನ ಕನಿಷ್ಠ 60 ಮಿಲಿ ರಸವನ್ನು ಸೇವಿಸುವುದರಿಂದ ಕಾಮಾಲೆ ರೋಗ ಗುಣವಾಗುತ್ತೆ. ದ್ವಿದಳ ಧಾನ್ಯಗಳು ಸಹ ತುಂಬಾ ಪೌಷ್ಟಿಕವಾಗಿವೆ ಮತ್ತು ಅವುಗಳನ್ನು ಆಹಾರದಲ್ಲಿ ಸೇರಿಸಬಹುದು.
ಹಾಗಲಕಾಯಿ ಎಲೆಗಳು
ಸುಮಾರು 7-10 ಹಾಗಲಕಾಯಿ ಎಲೆಗಳನ್ನು (bittergourd leaves)ತೆಗೆದುಕೊಳ್ಳಿ ಮತ್ತು ಅದನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ತಣ್ಣಗಾಗಲು ಬಿಡಿ. 10-15 ಕೊತ್ತಂಬರಿ ತೆಗೆದುಕೊಂಡು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಇದನ್ನು ಮೊದಲೇ ತಯಾರಿಸಿದ ಕಷಾಯದೊಂದಿಗೆ ಮಿಕ್ಸ್ ಮಾಡಿ. ಕಾಮಾಲೆಯ ಪರಿಣಾಮಕಾರಿ ಚಿಕಿತ್ಸೆಗಾಗಿ ದಿನಕ್ಕೆ ಕನಿಷ್ಠ ಮೂರು ಬಾರಿ ಇದನ್ನು ಕುಡಿಯಿರಿ.
ಮೂಲಂಗಿ ಎಲೆ
ಮೂಲಂಗಿಯ ಕೆಲವು ಎಲೆಗಳನ್ನು (radish leaves) ತೆಗೆದುಕೊಂಡು ಅದರ ರಸ ತೆಗೆದು ಸ್ಟ್ರೈನರ್ ಸಹಾಯದಿಂದ ರಸ ಬೇರ್ಪಡಿಸಿ. ಪ್ರತಿದಿನ ಸುಮಾರು ಅರ್ಧ ಲೀಟರ್ ಹೊರತೆಗೆದ ರಸ ಸೇವಿಸಿ, ಸುಮಾರು ಹತ್ತು ದಿನಗಳಲ್ಲಿ ರೋಗಿಯು ರೋಗದಿಂದ ಮುಕ್ತಿ ಪಡೆಯುತ್ತಾನೆ.
ಪಪ್ಪಾಯಿ ಎಲೆಗಳು
ಒಂದು ಟೀಸ್ಪೂನ್ ಪಪ್ಪಾಯಿ ಎಲೆಯ (papaya leaves) ಪೇಸ್ಟ್ ಗೆ ಒಂದು ಟೀಸ್ಪೂನ್ ಜೇನುತುಪ್ಪ ಸೇರಿಸಿ. ಇದನ್ನು ಸುಮಾರು ಒಂದು ಅಥವಾ ಎರಡು ವಾರಗಳ ಕಾಲ ನಿಯಮಿತವಾಗಿ ಸೇವಿಸಿ. ಕಾಮಾಲೆಗೆ ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಇದರಿಂದ ಬೇಗನೆ ಆರೋಗ್ಯ ಉತ್ತಮವಾಗಬಹುದು.
ತುಳಸಿ ಎಲೆಗಳು
ಸುಮಾರು 10-15 ತುಳಸಿ ಎಲೆಗಳನ್ನು (tulsi leaves) ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ. ಅದಕ್ಕೆ ಅರ್ಧ ಲೋಟ ಹೊಸದಾಗಿ ತಯಾರಿಸಿದ ಮೂಲಂಗಿ ರಸ ಸೇರಿಸಿ. ಉತ್ತಮ ಫಲಿತಾಂಶಕ್ಕಾಗಿ ಸುಮಾರು ಎರಡರಿಂದ ಮೂರು ವಾರಗಳವರೆಗೆ ಪ್ರತಿದಿನ ಈ ರೀತಿ ರಸ ತೆಗೆದು ಸೇವಿಸಿ.