MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ನೂರು ವರ್ಷ ಬದುಕಬೇಕಾ? ಹಾಗೆ ಬದುಕಿದವರು ಏನು ತಿಂತಾರೆ ಗೊತ್ತು ಮಾಡ್ಕೊಳ್ಳಿ!

ನೂರು ವರ್ಷ ಬದುಕಬೇಕಾ? ಹಾಗೆ ಬದುಕಿದವರು ಏನು ತಿಂತಾರೆ ಗೊತ್ತು ಮಾಡ್ಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವ ಜನರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನಶೈಲಿ. ನಿಮಗೆ  ದೀರ್ಘಕಾಲದವರೆಗೂ ಬದುಕುವ ಆಸೆ ಇದೆಯೇ? ಹಾಗಿದ್ರೆ ನೀವು ಇಲ್ಲಿ ಹೇಳಿರೋ ಸೀಕ್ರೆಟ್ ಫಾಲೋ ಮಾಡಿ ಅಷ್ಟೇ.  

2 Min read
Suvarna News
Published : Sep 15 2023, 04:53 PM IST
Share this Photo Gallery
  • FB
  • TW
  • Linkdin
  • Whatsapp
18

ನೀವು ದೀರ್ಘಕಾಲದವರೆಗೆ (long life) ಆರೋಗ್ಯಕರ ಜೀವನವನ್ನು ನಡೆಸಬೇಕು ಎಂದು ಬಯಸಿದರೆ ತೂಕದ ಬಗ್ಗೆ ನೀವು ಗಮನ ಹರಿಸಬೇಕು. ಇದು ಅನೇಕ ಸಂಶೋಧನೆಗಳಲ್ಲಿಯೂ ಬಹಿರಂಗವಾಗಿದೆ. ನೀವು ಆರೋಗ್ಯಕರ ಆಹಾರ ಸೇವಿಸಿದ್ರೆ, ವ್ಯಾಯಾಮ ಮಾಡಿದರೆ, ಚಯಾಪಚಯ (Digestive System) ಆರೋಗ್ಯಕರವಾಗಿರಿಸಿದರೆ, ನಿಮ್ಮ ವಯಸ್ಸು ಹೆಚ್ಚಾಗಬಹುದು. ನೀವು ಯಾವುದೇ ಕಾಯಿಲೆಗೆ ಸಿಲುಕದೆ ಜೀವನವನ್ನು ನಡೆಸಬಹುದು, ಆದರೆ ವಯಸ್ಸನ್ನು ಹೆಚ್ಚಿಸಲು, ನೀವು 5 ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.
 

28

ಹೆಲ್ತ್ಲೈನ್ ಪ್ರಕಾರ, ನೀವು ಸರಿಯಾದ ಆಹಾರವನ್ನು ಸೇವಿಸಿದರೆ, ವ್ಯಾಯಾಮ ಮಾಡಿದರೆ, ಒತ್ತಡ ನಿರ್ವಹಣೆಯನ್ನು (stress management) ಕಲಿತರೆ, ಚೆನ್ನಾಗಿ ನಿದ್ರೆ ಮಾಡಿದರೆ ಮತ್ತು ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಸಾಮಾಜಿಕ ಬೆಂಬಲವನ್ನು (Social Support) ಪಡೆದರೆ, ನೀವು ಖಂಡಿತವಾಗಿ ದೀರ್ಘಾಯಸ್ಸು ಪಡೆಯಬಹುದು. 
 

38

ಒತ್ತಡ, ನಿದ್ರೆ ಮಾತ್ರವಲ್ಲದೇ ನಿಮ್ಮ ಜೀನ್ಸ್, ಪರಿಸರ ಮತ್ತು ಕೆಲವೊಮ್ಮೆ ಅದೃಷ್ಟವು ದೀರ್ಘಾಯುಷ್ಯದ ಹಿಂದಿನ ಪ್ರಮುಖ ವಿಷಯವೂ ಆಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ, ಆದರೆ ತೂಕದಲ್ಲಿನ ನಿರಂತರ ಬದಲಾವಣೆಗಳು ದೀರ್ಘಾಯುಷ್ಯದ ಮೇಲೆ ಪರಿಣಾಮ ಬೀರುತ್ತವೆ
 

48

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದಾಗ, ಮಹಿಳೆಯರು ತೂಕವನ್ನು ಸರಿಯಾಗಿ ಮ್ಯಾನೇಜ್ ಮಾಡಿದ್ರೆ, ದೀರ್ಘಕಾಲ ಬದುಕಬಹುದು. ವಯಸ್ಸಾದಂತೆ ಸಾವಿಗೆ ದೊಡ್ಡ ಕಾರಣವೆಂದರೆ ಹೃದ್ರೋಗ, ಸ್ತನ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳು ಎಂದು ಕಂಡುಬಂದಿದೆ. ಈ ಸಂಶೋಧನೆಯಲ್ಲಿ 30,000 ಕ್ಕೂ ಹೆಚ್ಚು ಮಹಿಳೆಯರನ್ನು ಸೇರಿಸಲಾಯಿತು, ಇದರಲ್ಲಿ 56 ಪ್ರತಿಶತದಷ್ಟು ಮಹಿಳೆಯರು 90 ವರ್ಷ ವಯಸ್ಸಿನವರೆಗೆ (90 year people)ಬದುಕುಳಿದಿದ್ದಾರೆ.  
 

58

ಈ ಸಂಶೋಧನೆಯಲ್ಲಿ, ಜೀವನಪೂರ್ತಿ ಒಂದೇ ತೂಕವನ್ನು ಹೊಂದಿರುವ ಮಹಿಳೆಯರು 90, 95 ಮತ್ತು 100 ವರ್ಷ ವಯಸ್ಸಿನವರೆಗೆ ಆರೋಗ್ಯವಾಗಿರೋದು ಕಂಡು ಬಂದಿದೆ. ಸ್ಥಿರ ತೂಕ ನಿರ್ವಹಣೆ ಮಾಡುವ ಮಹಿಳೆಯ ತೂಕವು 5 ಕೆಜಿ ಕಡಿಮೆಯಾದರೆ, ಅವರನ್ನು ತೂಕ ನಷ್ಟದ ವರ್ಗದಲ್ಲಿ ಇಡಲಾಗುತ್ತದೆ, ತೂಕವು 5 ಕೆಜಿ ಹೆಚ್ಚಾದರೆ, ಅವರನ್ನು ತೂಕ ಹೆಚ್ಚಳದ ವರ್ಗದಲ್ಲಿ ಇರಿಸಲಾಗುತ್ತದೆ, ಆದರೆ ತೂಕವು 5 ಕೆಜಿಯೊಳಗೆ ಕಡಿಮೆಯಾದರೆ, ಅದನ್ನು ಸ್ಥಿರ ತೂಕದ (balanced weight) ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಈ ರೀತಿಯಾಗಿ, ಯಾರ ತೂಕವು ಒಂದೇ ಆಗಿರುತ್ತದೆಯೋ, ಅವರ ಜೀವಿತಾವಧಿಯು ದೀರ್ಘವಾಗಿರುತ್ತದೆ ಎಂದು ಸಂಶೋಧನೆ ತಿಳಿಸಿದೆ.
 

68

ವಯಸ್ಸಾದ ಮಹಿಳೆಯರು ತಮ್ಮ ಆಯಸ್ಸನ್ನು ಹೆಚ್ಚಿಸಲು ಬಯಸಿದರೆ, ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಅದೇನೆಂದರೆ 
ಆರೋಗ್ಯಕರ ಲಘು ಆಹಾರವನ್ನು ಸೇವಿಸಿ
ತರಕಾರಿಗಳು, ತೆಳ್ಳಗಿನ ಪ್ರೋಟೀನ್ ಗಳು, ಧಾನ್ಯಗಳು, ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿ.
ಸಂಸ್ಕರಿಸಿದ ಆಹಾರದಿಂದ ದೂರವಿರಿ. 
ದೈಹಿಕವಾಗಿ ಸಕ್ರಿಯರಾಗಿರಿ, ಅತಿಯಾಗಿ ತಿನ್ನುವುದನ್ನು ತಪ್ಪಿಸಿ.
ಯೋಗ ಮಾಡಿ, ಹೈಡ್ರೇಶನ್ ಬಗ್ಗೆ ಕಾಳಜಿ ವಹಿಸಿ,
ಚೆನ್ನಾಗಿ ನಿದ್ರೆ ಮಾಡಿ, ಆರೋಗ್ಯ ಪರೀಕ್ಷೆ (Health Check UP) ಮಾಡಿಸೋದನ್ನು ಮರೆಯಬೇಡಿ. 

78

ಈ ರೀತಿಯಾಗಿ, ನಿಮ್ಮ ಆಹಾರ (Food), ವ್ಯಾಯಾಮದ ಬಗ್ಗೆ ನೀವು ಜಾಗರೂಕರಾಗಿದ್ದಲ್ಲಿ, ಚಯಾಪಚಯವನ್ನು ಉತ್ತಮವಾಗಿಡಲು ಪ್ರಯತ್ನಿಸಿದರೆ ಮತ್ತು ಧೂಮಪಾನ ಅಥವಾ ಮದ್ಯಪಾನದಿಂದ ದೂರವಿದ್ದರೆ, ನೀವು ನಿಮ್ಮ ತೂಕ ಕಾಪಾಡಿಕೊಳ್ಳಬಹುದು. ಜೊತೆಗೆ ದೀರ್ಘಾಯಸ್ಸು ಪಡೆಯಬಹುದು. 

88

ನಿಮ್ಮ ಜೀವನದಲ್ಲಿ (Life) ಒತ್ತಡವಿದ್ದರೆ, ಅದನ್ನು ನಿರ್ವಹಿಸಲು ನೀವು ಜನರೊಂದಿಗೆ ಬೆರೆಯೋದನ್ನು ಅಥವಾ ಸೋಶಿಯಲ್ ಆಗೋದನ್ನು ಕಲಿಯಬೇಕು. ಈ ರೀತಿಯಾಗಿ, ಮಾಡಿದ್ರೆ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ, ನೀವು ದೀರ್ಘಕಾಲದವರೆಗೆ ಸಕ್ರಿಯ ಜೀವನವನ್ನು (active life) ನಡೆಸಲು ಸಾಧ್ಯವಾಗುತ್ತದೆ.  
 

About the Author

SN
Suvarna News
ಆರೋಗ್ಯ
ಆಹಾರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved