Astro Tips: ಈ ತಪ್ಪುಗಳು ನಿಮ್ಮ ಆಯಸ್ಸು ಮೊಟಕುಗೊಳಿಸುತ್ವೆ, ಎಚ್ಚರ!

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ದೀರ್ಘಾಯುಷ್ಯ ಮತ್ತು ಸಂತೋಷವನ್ನು ಅನುಭವಿಸಲು ಬಯಸುತ್ತಾನೆ. ಆದರೆ ಪ್ರತಿಯೊಬ್ಬರೂ ಸಾಕಷ್ಟು ಅದೃಷ್ಟವಂತರಲ್ಲ. ಧೀರ್ಘಾಯಸ್ಸು ಬೇಕಂದ್ರೆ ಈ ಕೆಲ ತಪ್ಪುಗಳನ್ನು ಮಾಡಬಾರದು ಎನ್ನುತ್ತದೆ ಜ್ಯೋತಿಷ್ಯ. 

Due to these 6 mistakes the life of a person decreases skr

ಯಾರಿಗೆ ತಾನೇ ಧೀರ್ಘಾಯಸ್ಸು ಬೇಡ? ಪ್ರತಿಯೊಬ್ಬರೂ ಆರೋಗ್ಯವಾಗಿ ಬಹಳ ವರ್ಷಗಳ ಕಾಲ ಇರಲು ಬಯಸುತ್ತಾರೆ. ಆದರೂ, ತಮಗರಿವಿಲ್ಲದೆ ಅವರು ಮಾಡುವ ಕೆಲ ತಪ್ಪುಗಳು ವ್ಯಕ್ತಿಗಳ ಜೀವಿತಾವಧಿ ಕಡಿಮೆ ಮಾಡುತ್ತಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ. 

ಹೌದು, ನಮ್ಮ ಕೆಲವು ಅಭ್ಯಾಸಗಳು ಅಥವಾ ನಡವಳಿಕೆಗಳು ಜೀವಿತಾವಧಿಯನ್ನು ಮನುಷ್ಯನ ಆಯುಷ್ಯವನ್ನು ಮೊಟಕುಗೊಳಿಸುವುದಲ್ಲದೆ ಅಕಾಲಿಕ ಮರಣ, ಭೀಕರ ಅಶಾಂತಿ ಮತ್ತು ಸಂಕಟವನ್ನು ತರುತ್ತವೆ. ಅವುಗಳಿಂದ ದೂರವುಳಿಯುವ ಮೂಲಕ ಆಯಸ್ಸು ಹೆಚ್ಚಿಸಿಕೊಳ್ಳಬಹುದು. ಆಯಸ್ಸನ್ನು ಕಡಿತಗೊಳಿಸುತ್ತಿರಬಹುದಾದ ನಮ್ಮ ದುರಭ್ಯಾಸಗಳು ಯಾವೆಲ್ಲ ನೋಡೋಣ. 

ದೇವರು ಮತ್ತು ಶಾಸ್ತ್ರಗಳನ್ನು ನಿರ್ಲಕ್ಷಿಸುವುದು
ದೇವರನ್ನು ನಂಬದ ಜನರು ಧರ್ಮಗ್ರಂಥಗಳನ್ನು ಕಡೆಗಣಿಸುತ್ತಾರೆ, ಗುರುಗಳನ್ನು, ಸಂತರನ್ನು ಅವಮಾನಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅವರು ದುಷ್ಕರ್ಮಿಗಳಾಗುತ್ತಾರೆ, ಅವರ ಆಯುಷ್ಯ ಕಡಿಮೆಯಾಗುತ್ತದೆ.

Solar Eclipse 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು?

ದಿನದ ಆರಂಭದ ತಪ್ಪು
ಕೆಲವರು ಬೆಳಗನ್ನು ತುಂಬಾ ತಪ್ಪಾಗಿ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಹಲ್ಲು ಕಚ್ಚುವುದು, ಉಗುರು ಕಚ್ಚುವುದು, ವಿನಾಕಾರಣ ಪೇಪರ್ ಹರಿಯುವುದು, ವಿನಾಕಾರಣ ಪಾದಗಳನ್ನು ಕದಲುವುದು, ಬ್ರಶ್ ಮಾಡದೇ ಆಹಾರ ಸೇವಿಸುವುದು, ದೇವರನ್ನು ಸ್ಮರಿಸದೇ ಇರುವುದು, ಮತ್ತೊಬ್ಬರಿಗೆ ಬೈಯ್ಯುವುದು ಮುಂತಾದ ಚಡಪಡಿಕೆಯ ವರ್ತನೆಯಿಂದ ಆಯುಷ್ಯ ಮೊಟಕುಗೊಳ್ಳುತ್ತದೆ.

ಬೆಳಗಿನ ಜಾವ ಮೂರು ಗಂಟೆಗೆ ಮಲಗುವುದು ಅಥವಾ ತಿನ್ನುವುದು
ಬೆಳಗಿನ ಜಾವ ಮೂರು ಗಂಟೆಗೆ ತಿನ್ನುವ ಅಥವಾ ಮಲಗುವ ಜನರು ತಮ್ಮ ಜೀವನದ ಆಯಸ್ಸನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಬೆಳಗಿನ ಜಾವ ಮೂರು ಗಂಟೆಗೆ ಮಲಗುವ ಅಥವಾ ಊಟ ಮಾಡುವವರು ಅತಿಯಾಗಿ ಮಾತನಾಡುತ್ತಾರೆ, ಬೇಗ ಕೋಪಗೊಳ್ಳುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮತ್ತೊಂದೆಡೆ, ಸಂಜೆ ದೇವರನ್ನು ಪೂಜಿಸುವ, ದೇವರನ್ನು ಸ್ಮರಿಸುವ, ಯೋಚಿಸುವ, ಧ್ಯಾನ ಮಾಡುವ ಜನರ ಆಯಸ್ಸು ಖಂಡಿತವಾಗಿಯೂ ಹೆಚ್ಚಾಗುತ್ತದೆ.

ಮೇ 16ರವರೆಗೂ ಸರಿಯಿಲ್ಲ ಈ ರಾಶಿಗಳ ಗ್ರಹಚಾರ; ಹೆದರಬೇಕಿಲ್ಲ, ಇಲ್ಲಿದೆ ಪರಿಹಾರ

ಗ್ರಹಣ ಅಥವಾ ಮಧ್ಯಾಹ್ನದ ಸಮಯದಲ್ಲಿ ಸೂರ್ಯನನ್ನು ನೋಡುವುದು
ಧರ್ಮಗ್ರಂಥಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೋಡುವ ಜನರು ಕಡಿಮೆ ಜೀವಿತಾವಧಿಯನ್ನು ಹೊಂದುತ್ತಾರೆ. ಇದಲ್ಲದೆ ಅಮವಾಸ್ಯೆ, ಪೂರ್ಣಿಮಾ, ಚತುರ್ದಶಿ, ಅಷ್ಟಮಿ ಅಥವಾ ಏಕಾದಶಿಯಂತಹ ಪವಿತ್ರ ದಿನಗಳಲ್ಲಿ ಬ್ರಹ್ಮಚರ್ಯವನ್ನು ಆಚರಿಸಬೇಕು. ಇಲ್ಲದಿದ್ದಲ್ಲಿ ಆಯಸ್ಸು ಕಡಿಮೆಯಾಗುತ್ತದೆ.

ಕಠೋರ ಮಾತುಗಳು
ಇನ್ನೊಬ್ಬರಿಗೆ ಕಟುವಾಗಿ ಮಾತನಾಡುವುದು ತುಂಬಾ ಕೆಟ್ಟದು. ದೇಹದ ಮೇಲಿನ ಗಾಯಗಳನ್ನು ಔಷಧಿಯಿಂದ ವಾಸಿ ಮಾಡಬಹುದು, ಆದರೆ ಪದಗಳ ಬಾಣಗಳು ಹೃದಯವನ್ನು ಚುಚ್ಚಿದಾಗ, ವಾಸಿಯಾಗುವುದು ಕಷ್ಟ. ಧರ್ಮಗ್ರಂಥಗಳಲ್ಲಿ ಇಂತಹ ಕೆಲಸಗಳನ್ನು ಮಾಡುವುದನ್ನು ಮಹಾಪಾಪವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ಈ ಜನರ ಜೀವನವು ಕಡಿಮೆಯಾಗುತ್ತದೆ.

ಇತರರನ್ನು ಅಪಹಾಸ್ಯ ಮಾಡುವುದು ಮತ್ತು ನಿಂದಿಸುವುದು
ದೈಹಿಕ ದೌರ್ಬಲ್ಯ, ಬಣ್ಣ, ನೋಟ, ಬಡತನದ ಆಧಾರದ ಮೇಲೆ ಯಾರಾದರೂ ಯಾರನ್ನೂ ಅಪಹಾಸ್ಯ ಮಾಡಬಾರದು ಅಥವಾ ನಿಂದಿಸಬಾರದು. ಅಂತಹ ಜನರೊಂದಿಗೆ ಯಾವಾಗಲೂ ಸಹಾನುಭೂತಿ ಮತ್ತು ಪ್ರೀತಿಯಿಂದ ಮಾತನಾಡಿ. ಇತರರನ್ನು ಹೀಗೆ ನಡೆಸಿಕೊಳ್ಳುವವರು ದೀರ್ಘಕಾಲ ಬದುಕಲಾರರು. ಇದು ನಿಮ್ಮ ಒಳ್ಳೆಯ ಕರ್ಮವನ್ನು ನಾಶಪಡಿಸುತ್ತದೆ.

Latest Videos
Follow Us:
Download App:
  • android
  • ios