ಜಿಲೇಬಿ ಕೇವಲ ಸ್ವೀಟ್ ಅಲ್ಲ… ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ
ಸಿಹಿ ತಿನಿಸುಗಳಲ್ಲಿ ಒಂದಾದ ಜಿಲೇಬಿ ತಿನ್ನೋದಕ್ಕೆ ಬಾಯಿಗೆ ರುಚಿ ಇರಬಹುದು. ಇದರ ಜೊತೆಗೆ ಈ ಸಿಹಿ ತಿಂಡಿ ಹಲವು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತೆ.

ಹೆಚ್ಚಿನ ಜನರಿಗೆ ಜಿಲೇಬಿ (Jalebi)ತಿನ್ನೋದು ಅಂದ್ರೆ ತುಂಬಾನೆ ಇಷ್ಟ . ಇದು ತುಂಬಾನೆ ರುಚಿಯಾಗಿರುತ್ತೆ. ಆದ್ರೆ ನಿಮಗೆ ಗೊತ್ತಾ? ಜಿಲೇಬಿ ಕೇವಲ ರುಚಿ ಮಾತ್ರ ಅಲ್ಲ, ಇದು ಆರೋಗ್ಯಕ್ಕೂ ಒಳ್ಳೆಯದು ಎಂದು. ಹೌದು, ಜಿಲೇಬಿ ಅನೇಕ ರೋಗಗಳಿಂದ ಪರಿಹಾರ ನೀಡುತ್ತದೆ . ಬನ್ನಿ ಇದ್ರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡೋಣ.
ಆರೋಗ್ಯಕ್ಕೂ ಒಳ್ಳೆಯದು
ಸ್ವೀಟ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದು ಗುಲಾಬ್ ಜಾಮುನ್ ಆಗಿರಲಿ, ರಸ್ ಮಲೈ, ರಸ ಗುಲ್ಲಾ, ಮೈಸೂರು ಪಾಕ್ ಎಲ್ಲವೂ ಜನರಿಗೆ ಇಷ್ಟ. ಅದರಲ್ಲೂ ಜಲೇಬಿ ಅಂದ್ರೆ ಇಷ್ಟ ಇಲ್ಲದವರು ಯಾರಿದ್ದಾರೆ. ಸುರುಳಿ ಆಕಾರದ ಈ ಸ್ವೀಟ್, ಬಾಯಿಗೆ ಸಿಹಿ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ (good for health).
ಆಯುರ್ವೇದದಲ್ಲಿ ಹೆಚ್ಚಿನ ಮಹತ್ವ
ಆಯುರ್ವೇದದಲ್ಲಿ, (ayurveda) ಇದನ್ನು ಔಷಧವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಧರ್ಮದಲ್ಲೂ ಸಹ ಇದಕ್ಕೆ ಪ್ರಮುಖ ಸ್ಥಾನಮಾನವಿದೆ. ಆಯುರ್ವೇದದಲ್ಲಿ ಜಿಲೇಬಿಯ ಮಹತ್ವವನ್ನು ತಿಳಿದುಕೊಳ್ಳೋಣ.
ಮೈಗ್ರೇನ್‌ಗೆ ಪವಾಡ ಚಿಕಿತ್ಸೆ
ಆಯುರ್ವೇದದಲ್ಲಿ, ಜಿಲೇಬಿಯನ್ನು ಕೇವಲ ಸಿಹಿ ಪದಾರ್ಥವೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಔಷಧವಾಗಿಯೂ ಪರಿಗಣಿಸಲಾಗುತ್ತದೆ. ಅಸೈಟ್ಸ್ (ಅಸೈಟ್ಸ್ ಎಂದರೆ ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗುವ ಕಾಯಿಲೆ) ಎಂಬ ಕಾಯಿಲೆಯ ಚಿಕಿತ್ಸೆಯಾಗಲಿ ಅಥವಾ ಮಲಬದ್ಧತೆ ಮತ್ತು ತೀವ್ರ ತಲೆನೋವಿಗಾಗಲಿ ಇದನ್ನು ಅತ್ಯುತ್ತಮ ಮದ್ದಾಗಿ ಪರಿಗಣಿಸಲಾಗುತ್ತೆ. ಅಷ್ಟೇ ಅಲ್ಲ ಜಿಲೇಬಿಯನ್ನು ಮೈಗ್ರೇನ್‌ಗೆ (migrain) ರಾಮಬಾಣವೆಂದು ಸಹ ಪರಿಗಣಿಸಲಾಗುತ್ತದೆ.
ಮಲಬದ್ಧತೆಯಿಂದ ಪರಿಹಾರ
'ಜಿಲೇಬಿ ರುಚಿಕರವಾದ ಸಿಹಿತಿಂಡಿಯಾಗಿದ್ದು, ಅದರ ಸರಿಯಾದ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಇದು ವಾತ ಮತ್ತು ಪಿತ್ತ ದೋಷವನ್ನು ಸಹ ನಿವಾರಿಸುತ್ತದೆ. ಮಲಬದ್ಧತೆಯ (constipation) ಸಮಸ್ಯೆಯೂ ಗುಣವಾಗುತ್ತದೆ.
ಕರುಳಿನೊಂದಿಗಿನ ಸಂಬಂಧ
ಸೂರ್ಯೋದಯಕ್ಕೂ ಮುನ್ನ ಜಿಲೇಬಿಯನ್ನು ಹಾಲಿನೊಂದಿಗೆ ತಿನ್ನುವುದರಿಂದ ಮೈಗ್ರೇನ್ ಮತ್ತು ತಲೆನೋವಿನಿಂದ ಪರಿಹಾರ ಸಿಗುತ್ತದೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಜಿಲೇಬಿ ಸಹ ಕರುಳಿನ ಆಕಾರದಲ್ಲಿ ಸುರುಳಿಯಾಗಿದ್ದು, ಇದು ಮಲಬದ್ಧತೆಗೆ ರಾಮಬಾಣವಾಗಿದೆ.
ತಲೆನೋವಿನಿಂದ ಪರಿಹಾರ
ಇನ್ನು ವಾತದಿಂದ ಉಂಟಾಗುವ ನೋವನ್ನು ತೊಡೆದುಹಾಕಲು, ಸೂರ್ಯೋದಯಕ್ಕೆ ಮೊದಲು ಖಾಲಿ ಹೊಟ್ಟೆಯಲ್ಲಿ ರಬಡಿ ಜೊತೆ ಜಿಲೇಬಿ ತಿನ್ನಬೇಕು. ಇದು ತಲೆನೋವಿನಿಂದ ಪರಿಹಾರ ನೀಡುತ್ತದೆ. ಜೊತೆಗೆ, ಸಿಹಿತಿಂಡಿಗಳನ್ನು ತಿನ್ನುವುದರಿಂದ ಡೋಪಮೈನ್ ಹಾರ್ಮೋನ್ ಅನ್ನು ಸಕ್ರಿಯಗೊಳಿಸುತ್ತದೆ, ಇದು ಮನಸ್ಸನ್ನು ಸಂತೋಷಪಡಿಸುತ್ತದೆ ಎಂದು ವೈಜ್ಞಾನಿಕವಾಗಿ ನಂಬಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

