ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿನ್ನೋದ್ರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ
ಹಸಿ ಬೆಳ್ಳುಳ್ಳಿ ಬಹಳ ಖಾರವಾಗಿರುತ್ತೆ. ಇದನ್ನು ಹಾಗೆಯೇ ತಿನ್ನಲಾಗದು ತಿಂದರೆ ನಾಲಗೆಯ ಸಿಪ್ಪೆ ಹೋಗೋದು ಗ್ಯಾರಂಟಿ, ಹೀಗಿರುವಾಗ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹಾಗಿದ್ದರೆ ಅದೇನು ಅಂತ ತಿಳಿದುಕೊಳ್ಳೋಣ

ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯ ಆರೋಗ್ಯ ಲಾಭಗಳು
ತುಪ್ಪ ಮತ್ತು ಬೆಳ್ಳುಳ್ಳಿ ಎರಡೂ ಅಡುಗೆ ಮನೆಯ ಪ್ರಮುಖ ಪದಾರ್ಥಗಳು. ಕೆಲವರು ಬೆಳ್ಳುಳ್ಳಿಯನ್ನು ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ. ಇನ್ನು ಕೆಲವರು ಹುರಿದು ತಿನ್ನುತ್ತಾರೆ. ಆದರೆ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ವಿಚಾರ ನಿಮಗೆ ಗೊತ್ತಾ? ನಮ್ಮ ಪಾರಂಪರಿಕ ಆಹಾರ ಪದ್ಧತಿಯಲ್ಲೂ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ಅನ್ನದ ಜೊತೆ ತಿನ್ನುವ ಪದ್ಧತಿ ಇದೆ. ಇದಲ್ಲದೆ, ತುಪ್ಪ ಮತ್ತು ಬೆಳ್ಳುಳ್ಳಿ ಸೇರಿದಾಗ ತುಪ್ಪದಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಈ ಲೇಖನದಲ್ಲಿ ತುಪದಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ ಆಗೋ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಮಾತ್ರವಲ್ಲ, ಪಾರಂಪರಿಕ ಔಷಧಿಯಾಗಿಯೂ ಬಳಕೆಯಾಗುತ್ತದೆ. ವಿಟಮಿನ್ ಬಿ, ವಿಟಮಿನ್ ಕೆ, ಕ್ಯಾಲ್ಸಿಯಂ, ತಾಮ್ರ, ರಂಜಕದಂತಹ ಅಂಶಗಳು ಬೆಳ್ಳುಳ್ಳಿಯಲ್ಲಿವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದಲ್ಲದೆ, ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಸ್ ವಿರೋಧಿ, ಶಿಲೀಂಧ್ರ ವಿರೋಧಿ ಗುಣಗಳಿವೆ. ಇವು ಹಲವು ರೋಗಗಳಿಂದ ಮತ್ತು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಬೆಳ್ಳುಳ್ಳಿಯ ಲಾಭಗಳು:
ಅಧಿಕ ರಕ್ತದೊತ್ತಡ ಇರುವವರಿಗೆ ರಕ್ತದೊತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ. ದೇಹದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣಕ್ಕೆ ಹೋಲಿಸಿದರೆ ಒಳ್ಳೆಯ ಕೊಬ್ಬಿನ ಪ್ರಮಾಣ ಹೆಚ್ಚಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲರ್ಜಿ ವಿರೋಧಿ ಗುಣಗಳು ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಮತ್ತು ಸಂಧಿವಾತದಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿವೆ. ಮೆದುಳು ಮತ್ತು ನೆನಪಿನ ಶಕ್ತಿ ವೃದ್ಧಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯದಲ್ಲಿರುವ ಪುರುಷರು ಪ್ರತಿದಿನ ಬೆಳ್ಳುಳ್ಳಿ ತಿನ್ನುವುದು ತುಂಬಾ ಒಳ್ಳೆಯದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ.
ತುಪ್ಪದಲ್ಲಿರುವ ಪೋಷಕಾಂಶಗಳು:
ತುಪ್ಪದಲ್ಲಿ ಒಳ್ಳೆಯ ಕೊಬ್ಬುಗಳು, ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಕೆ, ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಹಲವು ಪೋಷಕಾಂಶಗಳಿವೆ. ಪ್ರತಿದಿನ ಆಹಾರದಲ್ಲಿ ತುಪ್ಪ ಸೇರಿಸಿಕೊಂಡರೆ ಹಲವು ಆರೋಗ್ಯ ಲಾಭಗಳಿವೆ.
ತುಪ್ಪದ ಲಾಭಗಳು
ತುಪ್ಪದಲ್ಲಿರುವ ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಖನಿಜಗಳು ಮೂಳೆಗಳನ್ನು ಗಟ್ಟಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಪ್ರತಿದಿನ ತುಪ್ಪವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ತುಂಬಾ ಒಳ್ಳೆಯದು. ತುಪ್ಪ ನಿಮ್ಮನ್ನು ಯಾವಾಗಲೂ ಚಟುವಟಿಕೆಯಿಂದಿಡಲು ಸಹಾಯ ಮಾಡುತ್ತದೆ. ಪ್ರತಿದಿನ ತುಪ್ಪ ತಿನ್ನುತ್ತಿದ್ದರೆ ದೇಹದಲ್ಲಿನ ನರಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ.
ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ ಆಗೋ ಲಾಭಗಳು:
1. ತುಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದರೆ ಜೀರ್ಣಕ್ರಿಯೆ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಮಲಬದ್ಧತೆ, ಆಮ್ಲೀಯತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಹೊಟ್ಟೆ ಯಾವಾಗಲೂ ಆರೋಗ್ಯವಾಗಿರುತ್ತದೆ.
2. ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮುಖ್ಯವಾಗಿ ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಗಳು ಶೀತ ಮತ್ತು ಕೆಮ್ಮು ಗುಣಪಡಿಸುತ್ತವೆ ಮತ್ತು ವೈರಸ್ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತವೆ.
3. ನೈಸರ್ಗಿಕವಾಗಿಯೇ ಬೆಳ್ಳುಳ್ಳಿ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿದಿನ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿನ್ನುತ್ತಿದ್ದರೆ ದೇಹದಲ್ಲಿ ಒಳ್ಳೆಯ ಕೊಬ್ಬು ಹೆಚ್ಚುತ್ತದೆ, ತೂಕವೂ ನಿಯಂತ್ರಣದಲ್ಲಿರುತ್ತದೆ.
4. ನೈಯಲ್ಲಿ ಹುರಿದ ಬೆಳ್ಳುಳ್ಳಿ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
5. ಪುರುಷರು ನೈಯಲ್ಲಿ ಹುರಿದ ಬೆಳ್ಳುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದರೆ ಟೆಸ್ಟೋಸ್ಟೆರೋನ್ ಮಟ್ಟ ಹೆಚ್ಚುತ್ತದೆ.
6. ನಿದ್ರಾಹೀನತೆ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿನ್ನಿ. ಚೆನ್ನಾಗಿ ನಿದ್ದೆ ಬರುತ್ತದೆ.