ಪರೀಕ್ಷೆ ಹತ್ತಿರ ಬರ್ತಿದೆ, ಪ್ರತಿ ದಿನ ಮಕ್ಕಳಿಗೆ ಇದನ್ನ ಕೊಟ್ರೆ ಓದಿದ್ದೆಲ್ಲ ನೆನಪಿರುತ್ತೆ
memory boosting shake : ಮಕ್ಕಳಿಗೆ ಓದಿದ್ದು ನೆನಪಿರೋದಿಲ್ಲ ಎಂಬುದು ಪಾಲಕರ ದೂರು. ನಿಮ್ಮ ಮಕ್ಕಳೂ ಇದೇ ಸಮಸ್ಯೆಯಲ್ಲಿದ್ರೆ ಒಂದೇ ಒಂದು ಶೇಕ್ ಕುಡಿಸಿ. ಅದನ್ನು ಮಾಡೋ ವಿಧಾನ ಹೇಗೆ, ಅದರಿಂದ ಪ್ರಯೋಜನ ಏನು ಎಂಬ ಮಾಹಿತಿ ಇಲ್ಲಿದೆ.

ದುರ್ಬಲ ನೆನಪಿನ ಶಕ್ತಿ
ಹೊಸ ವರ್ಷ ಶುರುವಾದ ಎರಡೇ ತಿಂಗಳಿಗೆ ಮಕ್ಕಳಿಗೆ ಪರೀಕ್ಷೆ ಶುರು. ಎಗ್ಸಾಂ ಹತ್ತಿರ ಬರ್ತಿದ್ದಂತೆ ಮಕ್ಕಳಿಗೆ ಓದಿನ ಒತ್ತಡ ಹೆಚ್ಚಾಗುತ್ತೆ. ಮಕ್ಕಳು ಎಷ್ಟೇ ಓದಿದ್ರೂ ಪರೀಕ್ಷೆಯಲ್ಲಿ ಮರೆತೋಯ್ತು ಎನ್ನುವ ಉತ್ತರ ಸಾಮಾನ್ಯ. ಇನ್ನು ಕೆಲ ಮಕ್ಕಳಿಗೆ ಓದಿದ ತಕ್ಷಣ ನೆನಪಿರುವ ವಿಷ್ಯ ಮರುದಿನ ಕೇಳಿದ್ರೆ ನೆನಪಿರೋದಿಲ್ಲ. ಾವರು ಯಾವುದೇ ವಿಷ್ಯವನ್ನು ತಲೆಯಲ್ಲಿ ಇಟ್ಕೊಳ್ಳೋದಿಲ್ಲ. ಇದಕ್ಕೆ ದುರ್ಬಲ ನೆನಪಿನ ಶಕ್ತಿ ಕಾರಣ. ಮಕ್ಕಳ ಸ್ಮರಣೆಯನ್ನು ಬಲಪಡಿಸುವುದು ಬಹಳ ಮುಖ್ಯ.
ನೆನಪಿನ ಶಕ್ತಿಗೆ ಶೇಕ್
ಮಕ್ಕಳು ವಿಷಯಗಳನ್ನು ನೆನಪಿಟ್ಟುಕೊಳ್ಳಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಅವರ ಸ್ಮರಣೆಯನ್ನು ಬಲಪಡಿಸಲು ಒಂದು ಶೇಕ್ ಸಹಾಯ ಮಾಡುತ್ತದೆ. ಅದಕ್ಕೆ ಮಕ್ಕಳ ಮೆದುಳನ್ನು ಸಕ್ರಿಯಗೊಳಿಸುವ ಪದಾರ್ಥಗಳನ್ನು ಬಳಸಲಾಗುತ್ತದೆ. ಇದು ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಮೆದುಳನ್ನು ಹೆಚ್ಚಿಸುವ ಶೇಕ್ ಗೆ ಬೇಕಾದ ಪದಾರ್ಥಗಳು
ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಮಾಡಬೇಕಾದ ಶೇಕ್ ನಲ್ಲಿ 1 ಮಾಗಿದ ಬಾಳೆಹಣ್ಣು, 5-6 ನೆನೆಸಿದ ವಾಲ್ನಟ್ಸ್, 1 ಗ್ಲಾಸ್ ಹಾಲು, 1 ಟೀಚಮಚ ಜೇನುತುಪ್ಪ ಅಥವಾ ಖರ್ಜೂರ, 1 ಚಿಟಿಕೆ ದಾಲ್ಚಿನ್ನಿ ಪುಡಿ ಅಗತ್ಯವಿದೆ.
ಶೇಕ್ ಮಾಡುವ ವಿಧಾನ
ವಾಲ್ನಟ್ಸ್ ಅನ್ನು ರಾತ್ರಿಯಿಡೀ ಅಥವಾ ಕನಿಷ್ಠ 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತ್ರ ಬಾಳೆಹಣ್ಣು, ನೆನೆಸಿದ ವಾಲ್ನಟ್ಸ್, ಹಾಲು ಮತ್ತು ಜೇನುತುಪ್ಪ ಅಥವಾ ಖರ್ಜೂರವನ್ನು ಬ್ಲೆಂಡರ್ಗೆ ಸೇರಿಸಿ. ಮಿಶ್ರಣವು ನಯವಾದ ಮತ್ತು ಕೆನೆಯಾಗುವವರೆಗೆ ಚೆನ್ನಾಗಿ ಮಿಕ್ಸಿ ಮಾಡಿ. ನಂತ್ರ ಈ ಮಿಶ್ರಣಕ್ಕೆ ದಾಲ್ಚಿನ್ನಿ ಪುಡಿಯನ್ನು ಹಾಕಬೇಕು. ಬೆಳಿಗ್ಗೆ ಉಪಾಹಾರಕ್ಕಾಗಿ ಅಥವಾ ಸಂಜೆ ಅಧ್ಯಯನ ಮಾಡುವ ಮೊದಲು ತಿಂಡಿಯಾಗಿ ಮಕ್ಕಳಿಗೆ ಇದನ್ನು ನೀಡಬೇಕು.
ಬಾಳೆ ಹಣ್ಣು
ಬಾಳೆಹಣ್ಣುಗಳು ಅಧ್ಯಯನದ ಸಮಯದಲ್ಲಿ ತ್ವರಿತ ಶಕ್ತಿ ಮತ್ತು ನೈಸರ್ಗಿಕ ಗ್ಲೂಕೋಸ್ ಅನ್ನು ಒದಗಿಸುತ್ತವೆ. ಇದು ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ವಾಲ್ನಟ್ಸ್
ವಾಲ್ನಟ್ಸ್ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಸ್ಮರಣಶಕ್ತಿ, ಕಲಿಕೆ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹಾಲು
ಹಾಲು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ಮೆದುಳು ಮತ್ತು ನರಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶೇಕ್ ಗೆ ಹಾಲನ್ನು ಬಳಸುವುದ್ರಿಂದ ಮಕ್ಕಳು ಓದಿದ್ದನ್ನು ಸುಲಭವಾಗಿ ನೆನಪಿಟ್ಟುಕೊಳ್ಳುತ್ತಾರೆ.
ದಾಲ್ಚಿನ್ನಿ
ದಾಲ್ಚಿನ್ನಿ ಸೇವಿಸುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಮೆದುಳು ಸಕ್ರಿಯವಾಗಿರುತ್ತದೆ. ಇದ್ರಿಂದ ಮಕ್ಕಳಿಗೆ ಓದಿದ ವಿಷ್ಯ ನೆನಪಿನಲ್ಲಿರುತ್ತದೆ.
ಶೇಕ್ ಸೇವನೆ ವೇಳೆ ಇದು ನೆನಪಿರಲಿ
ಲ್ಯಾಕ್ಟೋಸ್ ಅಲರ್ಜಿ ಇರುವ ಮಕ್ಕಳಿಗೆ ಆಕಳ ಹಾಲನ್ನು ನೀಡಬೇಡಿ. ಸಸ್ಯ ಆಧಾರಿತ ಹಾಲನ್ನು ಬಳಸಬಹುದು. ವಾಲ್ನಟ್ಸ್ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಈ ಶೇಕನ್ನು ಬೆಳಿಗ್ಗೆ ಅಥವಾ ಸಂಜೆ ಸೇವಿಸಬೇಕು. ಆದ್ರೆ ತಡರಾತ್ರಿ ಇದನ್ನು ಕುಡಿಯಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

