ದಿನಾಲೂ ನಾಲ್ಕು ಸ್ಪೂನ್ ದಾಳಿಂಬೆ ತಿನ್ನಿ, ತೆಳ್ಳಗಾಗಲು ಇದೇ ಬೆಸ್ಟ್ ಮದ್ದು
ನೀವು ತೂಕ ಇಳಿಸಿಕೊಳ್ಳಬೇಕು ಎಂದು ಬಯಸ್ತಿದ್ದೀರಾ? ಹಾಗಿದ್ರೆ ಜಿಮ್, ವ್ಯಾಯಾಮ ಜೊತೆಗೆ ಪ್ರತಿದಿನ ನಾಲ್ಕು ಚಮಚ ದಾಳಿಂಬೆ ತಿನ್ನೋದ್ರಿಂದ ತೂಕ ಫಟಾಫಟ್ ಆಗಿ ಕಳೆದು ಹೋಗುತ್ತೆ.
ದಾಳಿಂಬೆಗಳು ಸಮೃದ್ಧ ಪೌಷ್ಠಿಕಾಂಶದ ಕಾರಣದಿಂದ ತುಂಬಾ ಆರೋಗ್ಯಕರ. ಅವು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದರಿಂದ ತೂಕ ಸಹ ಕಳೆದುಕೊಳ್ಳಬಹುದು.
ಇಂದಿನ ದಿನಗಳಲ್ಲಿ ತೂಕ ಇಳಿಸೋದು (weight loss) ಸವಾಲಿನ ಕೆಲಸವೇ ಸರಿ. ಜಂಕ್ ಫುಡ್, ಪ್ಯಾಕೇಜ್ ಮಾಡಿದ ಜ್ಯೂಸ್ ಮತ್ತು ಚಾಕೊಲೇಟ್ಸ್ ನೋಡಿದ್ರೆ, ಅವುಗಳನ್ನು ತಿನ್ನದೇ ಇರಲು ಸಾಧ್ಯವಾಗೋದಿಲ್ಲ. ಆದರೆ ಇವೆಲ್ಲವನ್ನೂ ತಿನ್ನುವುದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ತೂಕ ನಿಯಂತ್ರಣದಲ್ಲಿಡಲು, ಕೆಲವರು ವ್ಯಾಯಾಮ ಮಾಡುತ್ತಾರೆ, ಕೆಲವರು ದೊಡ್ಡ ಡಯಟ್ ಪ್ಲ್ಯಾನ್ ಮಾಡ್ತಾರೆ.
ಅನೇಕ ಬಾರಿ ಏನಾಗುತ್ತೆ ಅಂದ್ರೆ, ಡಯಟ್, ವರ್ಕೌಟ್ ಮಾಡಿದ ನಂತರವೂ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಿದ್ರೆ ಏನು ಮಾಡುವುದು? ನೀವು ತೂಕ ಇಳಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದರೆ, ದಾಳಿಂಬೆಯನ್ನು ನಿಮ್ಮ ಡಯಟ್ ನಲ್ಲಿ ಯಾವಾಗಲೂ ಸೇರಿಸಿ.
ದಾಳಿಂಬೆಯಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ, ಇದು ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ದಾಳಿಂಬೆಯನ್ನು ಹೇಗೆ ಸೇವಿಸುವುದು ಎಂದು ತಿಳಿಯೋಣ. ಇಲ್ಲಿದೆ ತೂಕ ಇಳಿಸಲು ದಾಳಿಂಬೆಯನ್ನು ಹೇಗೆ ತಿನ್ನಬಹುದು ಅನ್ನೋದನ್ನು ನೋಡೋಣ.
ದಾಳಿಂಬೆಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?
ದಾಳಿಂಬೆಯಲ್ಲಿ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಫ್ಲೇವನಾಯ್ಡ್ಗಳಿವೆ. ಈ ಎಲ್ಲಾ ಪೋಷಕಾಂಶಗಳನ್ನು ಸಂಯೋಜಿಸುವ ಮೂಲಕ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ದೇಹದ ಕೊಲೆಸ್ಟ್ರಾಲ್ ಮಟ್ಟ (cholesterol level) ಕಡಿಮೆ ಮಾಡಲು ದಾಳಿಂಬೆ ತುಂಬಾ ಸಹಾಯಕ.
ಪ್ರತಿದಿನ ಸುಮಾರು 250-300 ಗ್ರಾಂ ದಾಳಿಂಬೆಯನ್ನು ಸುಲಭವಾಗಿ ತಿನ್ನಬಹುದು. ಇದಲ್ಲದೆ, ನೀವು ದಾಳಿಂಬೆ ಜ್ಯೂಸ್ ಸಹ ಕುಡಿಯಬಹುದು, ಆದರೆ ಅದರಲ್ಲಿ ಫೈಬರ್ ಇರುವುದಿಲ್ಲ ಎಂಬುದನ್ನು ನೆನಪಿಡಿ.ಅದರ ಬದಲಾಗಿ ದಾಳಿಂಬೆ ಬೀಜಗಳನ್ನು (pomegranate seeds) ತಿನ್ನೋದ್ರಿಂದ ತೂಕ ನಷ್ಟವಾಗುವ ಸಾಧ್ಯತೆ ಇದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ದಾಳಿಂಬೆ ಶಕ್ತಿ ವರ್ಧಕ
ದಾಳಿಂಬೆಯಲ್ಲಿ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ, ಇದು ದೇಹದ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಸ್ವಲ್ಪ ಕೆಲಸ ಮಾಡಿದ ನಂತರ ಆಯಾಸಗೊಳ್ಳುವ ಅಥವಾ ವ್ಯಾಯಾಮದ ಸಮಯದಲ್ಲಿ ಉಸಿರಾಟದ ತೊಂದರೆ ಅನುಭವಿಸುವ ಜನರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ. ದಾಳಿಂಬೆ ತಿನ್ನುವುದು ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ. ತೂಕ ಇಳಿಸುತ್ತದೆ.
ದಾಳಿಂಬೆ ಹಸಿವನ್ನು ನಿಯಂತ್ರಿಸುತ್ತದೆ
ದಾಳಿಂಬೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ನೀರು ಇರುತ್ತದೆ, ಇದು ದೇಹವನ್ನು ಒಳಗಿನಿಂದ ಹೈಡ್ರೇಟ್ ಆಗಿರಿಸುತ್ತದೆ. ದಾಳಿಂಬೆ ತಿಂದ ನಂತರ, ಅದು ಹಸಿವನ್ನು ನಿಯಂತ್ರಿಸಲು (control hunger) ಸಹಾಯ ಮಾಡುತ್ತದೆ. ಅನೇಕ ಜನರು ಆಹಾರ ಸೇವಿಸಿದ ನಂತರವೂ ಅನೇಕ ರೀತಿಯ ಜಂಕ್ ಫುಡ್ ಗಳನ್ನು ಸೇವಿಸುತ್ತಾರೆ. ಈ ಕಾರಣದಿಂದಾಗಿ ಅವರ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಂತಹ ಜನರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸಬೇಕು.
ದಾಳಿಂಬೆ ಕೊಬ್ಬನ್ನು ಕರಗಿಸುತ್ತದೆ (fat burn)
ದಾಳಿಂಬೆಯಲ್ಲಿ ಹೇರಳವಾದ ಉತ್ಕರ್ಷಣ ನಿರೋಧಕಗಳಿವೆ, ಇದು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ತುಂಬಾ ಕಡಿಮೆ ಇರುವುದು ಕಂಡುಬಂದಿದೆ, ಆದ್ದರಿಂದ ಇದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.