ಡೆಂಘೆ ಜ್ವರ; ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಿಸಲು ಈ 8 ಆಹಾರ ಸೇವಿಸಿ
ಭಾರತದಲ್ಲಿ ಡೆಂಘೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಕರ್ನಾಟಕ, ಉತ್ತರಾಖಂಡ, ಮುಂಬೈ ಮತ್ತು ದೆಹಲಿ ಈ ಕ್ಷಣದಲ್ಲಿ ಹೆಚ್ಚು ಡೆಂಘೆ ಕೇಸ್ ಹೊಂದಿದ ರಾಜ್ಯಗಳಲ್ಲಿ ಸೇರಿವೆ. ಈ ಕಾಯಿಲೆ ಬಂದಾಗ ಪ್ಲೇಟ್‌ಲೆಟ್ ಸಂಖ್ಯೆಗಳ ಇಳಿಕೆಯೇ ತಲೆಬಿಸಿ ಮಾಡಿಸುವುದು.
ಡೆಂಘೆ ಜ್ವರದ ಪ್ರಮಾಣವು ರಾಷ್ಟ್ರವ್ಯಾಪಿ ಹೆಚ್ಚುತ್ತಿದೆ, ಮತ್ತು ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದರೂ, ಪ್ಲೇಟ್‌ಲೆಟ್ ಸಂಖ್ಯೆಯಲ್ಲಿ ತ್ವರಿತ ಕುಸಿತ ಸೇರಿದಂತೆ ಸೋಂಕಿನ ಕೆಲವು ಗಂಭೀರ ಲಕ್ಷಣಗಳು ಮತ್ತು ಅಡ್ಡಪರಿಣಾಮಗಳು ಭಯ ಹುಟ್ಟಿಸುತ್ತವೆ.
ಪ್ಲೇಟ್‌ಲೆಟ್‌ಗಳು ಅಥವಾ ಥ್ರಂಬೋಸೈಟ್‌ಗಳು ನಮ್ಮ ರಕ್ತದಲ್ಲಿನ ಸಣ್ಣ ಜೀವಕೋಶದ ತುಣುಕುಗಳಾಗಿವೆ, ಅದು ಹೆಪ್ಪುಗಟ್ಟುವಿಕೆಯನ್ನು ರೂಪಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ನಮ್ಮ ಮೂಳೆಗಳನ್ನು ತುಂಬುವ ಸ್ಪಂಜಿನಂತಹ ಮೂಳೆ ಮಜ್ಜೆಯಲ್ಲಿ ಅವುಗಳನ್ನು ರಚಿಸಲಾಗಿದೆ. ಡೆಂಗ್ಯೂ ಸೋಂಕಿನ ಪ್ರಕರಣಗಳಲ್ಲಿ ಸಾಮಾನ್ಯ ಪ್ಲೇಟ್ಲೆಟ್ ಸಂಖ್ಯೆ 1.5 ಲಕ್ಷದಿಂದ 4 ಲಕ್ಷವಿರುವುದು 20,000 40,000 ಪ್ಲೇಟ್ಲೆಟ್ಗಳಿಗೆ ಇಳಿಯಬಹುದು.
ಕೆಲವೊಮ್ಮೆ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ರಕ್ತ ವರ್ಗಾವಣೆಯನ್ನು ಬಳಸಲಾಗುತ್ತದೆ. ಆದಾಗ್ಯೂ, ಕಬ್ಬಿಣ, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 12 ಸೇರಿದಂತೆ ಅಗತ್ಯವಾದ ಖನಿಜಗಳೊಂದಿಗೆ ಆಹಾರ ಸೇವಿಸುವುದು ಮುಖ್ಯವಾಗಿದೆ.
ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾದರೆ ಏನಾಗುತ್ತದೆ?
ಡೆಂಘೆ ಸೊಳ್ಳೆಗಳಿಂದ ಹರಡುತ್ತದೆ ಮತ್ತು ಥ್ರಂಬೋಸೈಟೋಪೆನಿಯಾವನ್ನು ಉಂಟುಮಾಡಬಹುದು, ಪ್ಲೇಟ್‌ಲೆಟ್ ಎಣಿಕೆಯಲ್ಲಿ ಗಮನಾರ್ಹ ಕುಸಿತವು ಭಾರೀ (ಅಸಾಮಾನ್ಯ) ರಕ್ತಸ್ರಾವದ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂದು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಅನುಸರಿಸುವುದು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಮತ್ತು ಬಳಲುತ್ತಿರುವ ಸಮಯದಲ್ಲಿ ಮತ್ತು ನಂತರ ಚೇತರಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.
ದೇಶದಲ್ಲಿ ಡೆಂಘೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರೋಗದಿಂದ ಚೇತರಿಸಿಕೊಳ್ಳಲು, ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬುದಿಲ್ಲಿದೆ.
ಪಪ್ಪಾಯಿ ಎಲೆಗಳು
ಡೆಂಘೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಅಪಾಯಕಾರಿ ಕಡಿಮೆ ಮಟ್ಟಕ್ಕೆ ಬೀಳುವ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯಿ ಸಹಾಯ ಮಾಡುತ್ತದೆ. ಪಪ್ಪಾಯ ಕಾಯಿ ಮತ್ತು ಎಲೆಗಳನ್ನು ಸೇವಿಸುವುದು ಉತ್ತಮ. ನೀವು ಎಲೆಗಳ ರಸ ತೆಗೆದು ಅದನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಸೇವಿಸಬಹುದು.
ಅರಿಶಿನ
ಅರಿಶಿನವು ಅದ್ಭುತವಾದ ಸಸ್ಯವಾಗಿದ್ದು, ಡೆಂಘೆಯಿಂದ ಚೇತರಿಸಿಕೊಳ್ಳುವಾಗ ನೀವು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಚಯಾಪಚಯ ವರ್ಧಕವಾಗಿದೆ.
ಅಲೋವೆರಾ
ಅಶ್ವಗಂಧ, ತುಳಸಿ ಮತ್ತು ಅಲೋವೆರಾ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇವು ಕೂಡಾ ಚೇತರಿಕೆಯ ಪ್ರಕ್ರಿಯೆಯಲ್ಲಿ ನಿಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.
ಕಿತ್ತಳೆ ಹಣ್ಣು
ವಿಟಮಿನ್ ಸಿ ಯ ಸಮೃದ್ಧ ಮಿಶ್ರಣವಾಗಿರುವ ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.
ಮಸಾಲೆ ಪದಾರ್ಥಗಳು
ಶುಂಠಿ, ಬೆಳ್ಳುಳ್ಳಿ, ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿ ಮುಂತಾದ ಮಸಾಲೆಗಳನ್ನು ಚೇತರಿಕೆ ಸಮಯದಲ್ಲಿ ಆಹಾರದೊಂದಿಗೆ ಸೇವಿಸಿ.
ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ವಿಟಮಿನ್ ಕೆ ಇರುವುದರಿಂದ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೇಕೆ ಹಾಲು ಕೂಡಾ ಸಸ್ಯಗಳ ಔಷಧೀಯ ಗುಣಗಳನ್ನು ಒದಗಿಸಿ ಪ್ಲೇಟ್‌ಲೆಟ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಮಸಾಲಾ ಟೀ
ಗಿಡಮೂಲಿಕೆ ಚಹಾವು ಏಲಕ್ಕಿ, ಪುದೀನಾ, ದಾಲ್ಚಿನ್ನಿ, ಶುಂಠಿ ಮತ್ತು ನಿಂಬೆಯನ್ನು ಬಳಸಿ ತಯಾರಿಸುವುದಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಎಳನೀರು
ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಎಳನೀರನ್ನು ಸೇವಿಸಿ. ಇದು ದೇಹ ಡಿಹ್ರೈಡ್ರೇಟ್ ಆಗದಂತೆಯೂ ನೋಡಿಕೊಳ್ಳುತ್ತದೆ.