MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿದ್ರೆ ಕಾಡುತ್ತೆ ಬಂಜೆತನ ಸಮಸ್ಯೆ?

ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿದ್ರೆ ಕಾಡುತ್ತೆ ಬಂಜೆತನ ಸಮಸ್ಯೆ?

ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ನೀರನ್ನು ಕುಡಿಯುತ್ತೇವೆ, ಅಥವಾ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುತ್ತೇವೆ, ಕೆಲವೊಮ್ಮೆ ನೀರಿನ ಬಾಟಲಿಯನ್ನು ಬಿಸಿಯಾದ ಕಾರಿನಲ್ಲಿ ಹಾಗೇ ಬಿಡುತ್ತೇವೆ. ಈ ಎಲ್ಲಾ ಸಂದರ್ಭಗಳಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ.  

2 Min read
Suvarna News
Published : Feb 24 2024, 02:57 PM IST
Share this Photo Gallery
  • FB
  • TW
  • Linkdin
  • Whatsapp
18

ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ನಿಜ, ಆದರೆ ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಜನರು ನೀರು ಕುಡಿಯೋದಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕಚೇರಿಗೂ ಒಯ್ಯುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಗೊತ್ತಾ?.

28

ಪ್ಲಾಸ್ಟಿಕ್ ಗಳು ಪರಿಸರ ಮಾಲಿನ್ಯವನ್ನು ಹೆಚ್ಚಿಸುತ್ತವೆ. ಕೆಲವೊಮ್ಮೆ ನಾವು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು (using plastic bottles)ಮರು ಬಳಕೆ ಕೂಡ ಮಾಡುತ್ತೆವೆ. ಆದರೆ ನಿರಂತರವಾಗಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಮಾಡೋದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಪರಿಸರ ಮಾಲಿನ್ಯ ಕೂಡ ಹೆಚ್ಚಾಗುತ್ತದೆ. 

38

ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಪ್ಲಾಸ್ಟಿಕ್ ಬಾಟಲಿಗಳು:  ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವ ವಸ್ತು ಅಲ್ಲವೇ ಅಲ್ಲ, ಪ್ರತಿದಿನ ಎಸೆಯುವ ಪ್ಲಾಸ್ಟಿಕ್ ಬಾಟಲಿ ನಮ್ಮ ಸುತ್ತಲಿನ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳ ವಿಷಕಾರಿ ಪರಿಣಾಮಗಳಿಂದಾಗಿ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಇರಿಸಿ ಕುಡಿಯುವುದು  ಸಹ ಆರೋಗ್ಯಕ್ಕೆ ಅಪಾಯಕಾರಿ.

48

ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ದೀರ್ಘಕಾಲದವರೆಗೆ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು (health issues) ಉಂಟಾಗಬಹುದು. ಪ್ಲಾಸ್ಟಿಕ್ ನ ಕೆಟ್ಟ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಇತರ ರೀತಿಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಪ್ಪಿಸಬೇಕು. ಅದರ ಬದಲಾಗಿ ಇತರ ಬಾಟಲಿ ಬಳಕೆ ಮಾಡಬಹುದು.
 

58

ವಿಷಕಾರಿ ರಾಸಾಯನಿಕ: ಬಿಸಾಡಬಹುದಾದ ಅಥವಾ ಇತರ ಪ್ಲಾಸ್ಟಿಕ್ ಬಾಟಲಿಗಳು ರಾಸಾಯನಿಕ (chemical) ಮಾಲಿನ್ಯ ಮತ್ತು ವಿಷತ್ವಕ್ಕೆ ಕಾರಣವಾಗಬಹುದು. ಸೂರ್ಯನ ಬೆಳಕು ಮತ್ತು ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಪ್ಲಾಸ್ಟಿಕ್ ನಿಂದ ವಿಷಕಾರಿ ರಾಸಾಯನಿಕಗಳು ನೀರಿಗೆ ಬಿಡುಗಡೆ ಆಗಬಹುದು. ಇದರರ್ಥ ನೀರಿನ ಬಾಟಲಿಗಳನ್ನು ತೆರೆದ ಸ್ಥಳಗಳಲ್ಲಿ ಬಿಡುವುದರಿಂದ ಅವು ಬಿಸಿಯಾಗಬಹುದು. ಬಾಟಲಿಗಳನ್ನು ದೀರ್ಘಕಾಲದವರೆಗೆ ಬೆಚ್ಚಗಿನ ಸ್ಥಳದಲ್ಲಿ ಬಿಟ್ಟಾಗ, ಅವು ಮೈಕ್ರೋಪ್ಲಾಸ್ಟಿಕ್ಗಳಿಂದ ಕಲುಷಿತಗೊಂಡಿರುವುದು ಕಂಡುಬಂದಿದೆ.

68

ಪ್ಲಾಸ್ಟಿಕ್ ಬಾಟಲಿಯಿಂದ ಏನೆಲ್ಲಾ ಅಪಾಯ ಇದೆ?: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಬಿಸ್ಫೆನಾಲ್ ಎ ಮತ್ತು ಥಾಲೇಟ್ ಗಳು ದೇಹವನ್ನು ಸೇರಿಕೊಳ್ಳುತ್ತವೆ, ಕ್ರಮೇಣ ಇವು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು, ಅಂದರೆ ಬಂಜೆತನ (infertility) ಕಾಡಬಹುದು. ಅಷ್ಟೇ ಅಲ್ಲ ಇದರಿಂದ ಥೈರಾಯ್ಡ್ (thyroid)ಸಮಸ್ಯೆ ಹೆಚ್ಚಬಹುದು ಮತ್ತು ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು.

78

ಹೆಚ್ಚಿನ ಮನೆಗಳಲ್ಲಿ, ಬಾಟಲಿಗಳನ್ನು ಹೆಚ್ಚಿನ ತಾಪಮಾನದಲ್ಲಿ ಡಿಶ್ ವಾಶರ್ ನಲ್ಲಿ (Dish washer)ಸ್ವಚ್ಛಗೊಳಿಸಲಾಗುತ್ತದೆ. ಬಾಟಲಿಗಳ ಮೇಲೆ ಹೆಚ್ಚು ಶಾಖವನ್ನು ಬಳಸಿದರೆ, ಅದು ರಾಸಾಯನಿಕವನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ನೀರಿನ ಬಾಟಲಿಗಳನ್ನು ಶಾಖದಲ್ಲಿ ಅಥವಾ ಬಿಸಿ ಕಾರಿನಲ್ಲಿ ಬಿಟ್ಟರೂ ಇದು ಸಂಭವಿಸಬಹುದು. ಇದು ಆರೋಗ್ಯಕ್ಕೆ ಮಾರಕವಾಗಿದೆ. 
 

88

ಗಾಜು ಮತ್ತು ಸ್ಟೇನ್ ಲೆಸ್ ಸ್ಟೀಲ್ ನೀರಿನ ಬಾಟಲಿ ಅತ್ಯುತ್ತಮ: ಗಾಜಿನ ಬಾಟಲಿ (glass bottle) ಕುಡಿಯುವ ನೀರಿಗೆ ಸುರಕ್ಷಿತ ಬಾಟಲಿಯಾಗಿದೆ. ಇದು ರುಚಿ ಮತ್ತು ಪರಿಶುದ್ಧತೆ ಎರಡನ್ನೂ ನೀಡುತ್ತದೆ. ಸ್ಟೇನ್ಲೆಸ್ ಸ್ಟೀಲ್ (stainless steel) ಇನ್ಸುಲೇಷನ್ ಪ್ರಯೋಜನಗಳನ್ನು ಒದಗಿಸುತ್ತದೆ, ಇದು ನೀರನ್ನು ಬೆಚ್ಚಗೆ ಅಥವಾ ತಂಪಾಗಿರಿಸುತ್ತದೆ. ಜೊತೆಗೆ ಇದರಿಂದ ಯಾವುದೇ ಅಡ್ಡಪರಿಣಾಮ ಸಹ ಉಂಟಾಗೋದಿಲ್ಲ. 
 

About the Author

SN
Suvarna News
ನೀರು
ಆರೋಗ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved