ಒಂದು ವೇಳೆ ನೀರು ಕಡಿಮೆ ಕುಡಿದ್ರೆ ಏನಾಗುತ್ತೆ?
ನೀರು ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಗಂಭೀರ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ.

ನೀರು ಕುಡಿಯದಿದ್ರೂ ಆರೋಗ್ಯ ಸಮಸ್ಯೆ
ಉತ್ತಮ ಆರೋಗ್ಯಕ್ಕೆ ಆಹಾರದಷ್ಟೇ ನೀರು ಮುಖ್ಯ. ಸಾಕಷ್ಟು ನೀರು ಕುಡಿಯದಿದ್ದರೆ ಆರೋಗ್ಯ ಸಮಸ್ಯೆಗಳು ಬರಬಹುದು. ನೀರು ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀರು ಕಡಿಮೆ ಕುಡಿದರೆ ಏನಾಗುತ್ತೆ ನೋಡೋಣ...
ಡಿಹೈಡ್ರೇಶನ್ (ನಿರ್ಜಲೀಕರಣ)...
ಸಾಕಷ್ಟು ನೀರು ಕುಡಿಯದಿದ್ದರೆ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ದೇಹದ ದ್ರವ ಸಮತೋಲನ ತಪ್ಪಿ ತಲೆನೋವು, ಆಯಾಸ, ತಲೆಸುತ್ತು ಬರಬಹುದು.
ಮೆದುಳಿನ ಕಾರ್ಯಕ್ಷಮತೆ..
ನೀರಿನ ಕೊರತೆ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಗಮನ, ಏಕಾಗ್ರತೆ ಕಡಿಮೆಯಾಗುತ್ತದೆ. ಸರಿಯಾಗಿ ನೀರು ಕುಡಿಯದಿದ್ದರೆ ಯೋಚನಾ ಶಕ್ತಿ ಕೂಡ ಕುಂಠಿತಗೊಳ್ಳುತ್ತದೆ. ಹಾಗಾಗಿ ನೀರು ಕುಡಿಯುವುದು ಮುಖ್ಯ.
ಮಲಬದ್ಧತೆ
ನೀರು ಕಡಿಮೆ ಕುಡಿದರೆ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರು ಸರಿಯಾಗಿ ಕುಡಿಯದಿರುವುದೇ ಇದಕ್ಕೆ ಕಾರಣ.
ಚರ್ಮದ ಸಮಸ್ಯೆಗಳು
ನೀರಿನ ಕೊರತೆಯಿಂದ ಚರ್ಮ ಒಣಗಿ, ಸುಕ್ಕುಗಳು, ಆರೋಗ್ಯಕರ ಹೊಳಪು ಕಡಿಮೆಯಾಗುತ್ತದೆ.
ಮೂತ್ರನಾಳದ ಸೋಂಕುಗಳು
ನೀರು ಕಡಿಮೆ ಕುಡಿದರೆ ಮೂತ್ರನಾಳದ ಸೋಂಕುಗಳು ಬರಬಹುದು. ಮೂತ್ರಪಿಂಡಗಳಿಗೆ ಹಾನಿಯಾಗಬಹುದು. ಮೂತ್ರದ ಬಣ್ಣ ಕೂಡ ಬದಲಾಗುತ್ತದೆ.
ಶಕ್ತಿಯ ಕೊರತೆ
ನೀರಿನ ಕೊರತೆಯಿಂದ ದಿನನಿತ್ಯದ ಕೆಲಸಗಳಲ್ಲಿ ಆಯಾಸ ಹೆಚ್ಚಾಗುತ್ತದೆ.
ದಿನಕ್ಕೆ ಎಷ್ಟು ನೀರು ಕುಡಿಯಬೇಕು..?
ಪುರುಷರು ದಿನಕ್ಕೆ ಕನಿಷ್ಠ 4 ಲೀಟರ್ ನೀರು ಕುಡಿಯಬೇಕು. ಮಹಿಳೆಯರು ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು. ಬೇಸಿಗೆಯಲ್ಲಿ ಇನ್ನೂ ಹೆಚ್ಚು ನೀರು ಕುಡಿಯಬೇಕು. ಶಿಶುಗಳಿಗೆ ತಾಯಿ ಹಾಲು ಮಾತ್ರ ಕೊಡಬೇಕು. ದೊಡ್ಡ ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ನೀರು ಕುಡಿಸಬೇಕು.