ಗರ್ಭಿಣಿಯರು ಗೋಡಂಬಿ ತಿಂದರೆ ಮಾಡುತ್ತೆ ಆರೋಗ್ಯದ ಮೇಲೆ ಮ್ಯಾಜಿಕ್!
ಗರ್ಭಿಣಿ ಮಹಿಳೆಗೆ ಗೋಡಂಬಿ ಒಳ್ಳೆಯದೇ? ಈ ಪ್ರಶ್ನೆಗೆ ಉತ್ತರ ನಿಜವಾಗಿಯೂ ಸರಳವಾಗಿದೆ. ಸಹಜವಾಗಿ, ನೀವು ಗೋಡಂಬಿಗೆ ಅಲರ್ಜಿಯನ್ನು ಹೊಂದಿಲ್ಲದಿದ್ದರೆ ಅವು ನಿಮಗೆ ಒಳ್ಳೆಯದು.ಅವುಗಳ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಈ ಸ್ಟೋರಿ ಓದಿ.
ಗೋಡಂಬಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ
ಗೋಡಂಬಿ(Cashew) ಮೈಕ್ರೋ ನ್ಯೂಟ್ರಿಯೆಂಟ್ಸ್ ಉತ್ತಮ ಮೂಲ. ನಿಮ್ಮ ಮಗು ಬೆಳೆಯಲು ಸಾಕಷ್ಟು ಪ್ರೋಟೀನ್ಸ್ ಮತ್ತು ಆರೋಗ್ಯಕರ ಕೊಬ್ಬು ಬೇಕಾಗುತ್ತವೆ. ಗೋಡಂಬಿ ಇವುಗಳ ಅತ್ಯುತ್ತಮ ಮೂಲ. ಅವು ನಿಮಗೆ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಹ ನೀಡುತ್ತವೆ, ಇದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ಹೃದ್ರೋಗ ತಡೆಯಲು ಅವಶ್ಯಕ. ಗರ್ಭಧಾರಣೆ ಸಮಯದಲ್ಲಿ ನೀವು ಹೃದಯದ ಸಮಸ್ಯೆಗೆ ಒಳಗಾಗಿದ್ದರೆ. ಅಪಾಯಗಳನ್ನು ಕಡಿಮೆ ಮಾಡಲು ನೀವು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಇದನ್ನು ಆರೋಗ್ಯಕರ ರೀತಿಯಲ್ಲಿ ತೆಗೆದುಕೊಳ್ಳಬೇಕು.
1 ಔನ್ಸ್. ಹುರಿದ ಗೋಡಂಬಿ ಬೀಜಗಳು 1.7 ಮಿಗ್ರಾಂ ಕಬ್ಬಿಣಾಂಶವನ್ನು ಹೊಂದಿರುತ್ತವೆ
ಗೋಡಂಬಿ ಬೀಜಗಳಲ್ಲಿ ಕಬ್ಬಿಣದ ಮಟ್ಟ ತುಂಬಾ ಹೆಚ್ಚಾಗಿದೆ. ಪ್ರತಿದಿನ 27 ಮಿಗ್ರಾಂ ಕಬ್ಬಿಣದ ಅಗತ್ಯವಿರುವ ಗರ್ಭಿಣಿಯರಿಗೆ ಗೋಡಂಬಿ ತುಂಬಾ ಒಳ್ಳೇದು. ಇಂದು ಜನರು ರಕ್ತಹೀನತೆಗೆ ಹೆಚ್ಚು ಒಳಗಾಗುತ್ತಿದ್ದಾರೆ, ಇದು ಕಬ್ಬಿಣದ ಕೊರತೆಯಿಂದ ಉಂಟಾಗುತ್ತೆ, ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ರಕ್ತಹೀನತೆಯ ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತೆ, ಏಕೆಂದರೆ ಮಗು ಹೊಟ್ಟೆಯಲ್ಲಿ ಬೆಳೆಯುವಾಗ ಅವರ ದೇಹವು ಹೆಚ್ಚಿನ ರಕ್ತ ಉತ್ಪಾದಿಸಬೇಕು. ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಐರನ್(Iron) ಪ್ರಮುಖ ಪಾತ್ರ ವಹಿಸುತ್ತೆ, ಆದ್ದರಿಂದ ನಿಮ್ಮ ರಕ್ತವು ಆರೋಗ್ಯಕರವಾಗಿರಲು ಬಯಸೋದಾದ್ರೆ ನೀವು ಗೋಡಂಬಿ ತೆಗೆದುಕೊಳ್ಳಬೇಕು.
ಗೋಡಂಬಿ ವಿಟಮಿನ್ ಕೆ ಯ(Vitamin K) ಅತ್ಯುತ್ತಮ ಮೂಲ
ಈ ಸೂಪರ್ಫುಡ್ ನಿಮ್ಮ ರಕ್ತಕ್ಕೆ ಸಹಾಯ ಮಾಡುವ ಮತ್ತೊಂದು ವಿಧಾನ. ಏಕೆಂದರೆ ವಿಟಮಿನ್ ಕೆ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದನ್ನು ಖಚಿತಪಡಿಸುತ್ತೆ. ಗರ್ಭಾವಸ್ಥೆಯಲ್ಲಿ ಪ್ರತಿದಿನ 90 ಎಂಸಿಜಿ ಈ ವಿಟಮಿನ್ ಸೇವಿಸೋದರಿಂದ ಹೆರಿಗೆಯ ಸಮಯದಲ್ಲಿ ಭ್ರೂಣದ ರಕ್ತಸ್ರಾವದ ಅಪಾಯವನ್ನು ಕಡಿಮೆ ಮಾಡುತ್ತೆ. ಗರ್ಭಾವಸ್ಥೆಯಲ್ಲಿ ಗೋಡಂಬಿ ಸೇವನೆಯು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತೆ .
.
ಗೋಡಂಬಿಯಲ್ಲಿ ಕಾಪರ್(Copper) ಸಮೃದ್ಧವಾಗಿದೆ
ರಕ್ತನಾಳ, ನರಮಂಡಲ ಮತ್ತು ಹೃದಯದ ಬೆಳವಣಿಗೆಗೆ ತಾಮ್ರವು ಅತ್ಯಗತ್ಯವಾಗಿರೋದರಿಂದ ಭ್ರೂಣಕ್ಕೆ ಇದು ಬಹಳ ಮುಖ್ಯ. ತಾಮ್ರಕ್ಕೆ ಅಗತ್ಯವಿರುವ ದೈನಂದಿನ ಪ್ರಮಾಣವು 1 ಮಿಗ್ರಾಂ, ಮತ್ತು ಗೋಡಂಬಿ ಬೀಜಗಳ 1 ಔಜ್ ನಲ್ಲಿ 0.6 ಮಿಗ್ರಾಂ ತಾಮ್ರ ಹೊಂದಿರುತ್ತೆ. ಆದರೆ, ಅದರ ಅತಿಯಾದ ಪ್ರಮಾಣವು ಅತಿಸಾರ, ಹೃದಯ ಸಮಸ್ಯೆಗಳು ಮತ್ತು ತಲೆನೋವನ್ನು ಪ್ರಚೋದಿಸೋದರಿಂದ ನೀವು ಜಾಗರೂಕರಾಗಿರಬೇಕು.
ಗೋಡಂಬಿಯಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಖನಿಜವೆಂದರೆ ಮೆಗ್ನೀಷಿಯಮ್(Magnesium)
ಇದು ಕ್ಯಾಲ್ಸಿಯಂನೊಂದಿಗೆ ಗರ್ಭಿಣಿ ಮಹಿಳೆಯರಲ್ಲಿ ಸ್ನಾಯು ಮತ್ತು ಮೂಳೆಗಳ ಆರೋಗ್ಯ ಉತ್ತೇಜಿಸುತ್ತೆ, ಜೊತೆಗೆ ಅಧಿಕ ರಕ್ತದೊತ್ತಡ, ಉದ್ವೇಗ, ಆಯಾಸ ಮತ್ತು ಮೈಗ್ರೇನ್ ವಿರುದ್ಧ ರಕ್ಷಿಸುತ್ತೆ. ಗೋಡಂಬಿಯಲ್ಲಿರುವ ಮೆಗ್ನೀಸಿಯಮ್ ತಾಯಿ ಮತ್ತು ಮಗುವಿನ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತೆ.
ಮಲಬದ್ಧತೆಯನ್ನು(Constipation) ನಿವಾರಿಸುತ್ತೆ
ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ ಕಾಮನ್. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕೂಡ ಇರುತ್ತೆ. ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತೆ.
ಮಗುವಿನ ಬೆಳವಣಿಗೆಗೆ(Child development) ಸಹಾಯ ಮಾಡುತ್ತೆ
ಗೋಡಂಬಿ ಸೇವನೆಯು ಹುಟ್ಟಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತೆ . ಹಾಗಾಗಿ ಪ್ರೀ ಮೆಚ್ಯೂರ್ ಡೆಲಿವರಿಯನ್ನು ತಡೆಯುತ್ತೆ. ಇದನ್ನು ಸೇವಿಸುವುದರಿಂದ ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡಬಹುದು.
ಮಧುಮೇಹದಲ್ಲಿ(Diabetes) ಪ್ರಯೋಜನಕಾರಿ
ಗೋಡಂಬಿ ದೇಹದಲ್ಲಿ ಗ್ಲೂಕೋಸನ್ನು ವೇಗವಾಗಿ ಉತ್ಪಾದಿಸಲು ಅನುಮತಿಸೋದಿಲ್ಲ, ಇದು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತೆ. ಈ ಕಾರಣದಿಂದಾಗಿ, ಮಧುಮೇಹ ನಿಯಂತ್ರಿಸಲ್ಪಡುತ್ತೆ. ಗರ್ಭಾವಸ್ಥೆಯಲ್ಲಿ, ದಿನಕ್ಕೆ 30 ಗ್ರಾಂ ಅಥವಾ 15 ಗೋಡಂಬಿ ತಿನ್ನಬಹುದು. ಗೋಡಂಬಿ ತಿನ್ನೋದರಿಂದ ಮಗುವಿಗೆ ಅಲರ್ಜಿ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತೆ.
ಗೋಡಂಬಿ ಸೇವನೆಯಿಂದ ಯಾವ ಅಡ್ಡಪರಿಣಾಮಗಳು ಉಂಟಾಗುತ್ತೆ
ಹೆಚ್ಚು ಗೋಡಂಬಿ ತಿನ್ನುವುದು ತೂಕ ಹೆಚ್ಚಿಸುತ್ತೆ(Weight gain) , ಆದ್ದರಿಂದ ಅವುಗಳನ್ನು ಮಿತವಾಗಿ ಸೇವಿಸಬೇಕು. ನಿಮ್ಮ ದೈನಂದಿನ ಸೇವನೆಯನ್ನು ನೀವು ನಿಯಂತ್ರಿಸಬೇಕು ಮತ್ತು ಅದು 1 ಔನ್ಸ್ ಮೀರೋದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಗರ್ಭಿಣಿ ಮಹಿಳೆ ತೂಕವನ್ನು ಹೆಚ್ಚಿಸೋದು ಅನಿವಾರ್ಯ ಎಂದು, ಕೆಲವು ಹೆಚ್ಚುವರಿ ಪೌಂಡ್ ಗಳು ಸೇವಿಸಿದ್ರೆ ನಿಮಗೆ ಮತ್ತು ನಿಮ್ಮ ಭವಿಷ್ಯದ ಮಗುವಿಗೆ ಹಾನಿ ಮಾಡಬಹುದು.
ಈ ಸೂಪರ್ ಫುಡ್ ಅತಿಯಾದ ಸೇವನೆಯು ಮೂತ್ರಪಿಂಡಗಳು (Kidney) ಮತ್ತು ಪಿತ್ತಕೋಶದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಗೋಡಂಬಿ ಬೀಜಗಳಲ್ಲಿ ಆಕ್ಸಲೇಟ್ಸ್ ಉಪಸ್ಥಿತಿಯ ಪರಿಣಾಮವಾಗಿರಬಹುದು. ಆಕ್ಸಲೇಟ್ಸ್ ದೇಹದ ದ್ರವಗಳಲ್ಲಿ ಕೇಂದ್ರೀಕರಿಸುತ್ತವೆ ಮತ್ತು ಮೇಲೆ ತಿಳಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಗರ್ಭಿಣಿಯರು ವಿಶೇಷವಾಗಿ ಜಾಗರೂಕರಾಗಿರಬೇಕು.
ಗೋಡಂಬಿ ತಿನ್ನುವುದು ಹೇಗೆ?
ಈ ಅದ್ಭುತವಾದ ರುಚಿಕರ ಮತ್ತು ಆರೋಗ್ಯಕರ ಗೋಡಂಬಿ ತಿನ್ನಲು ನೂರಾರು ಮಾರ್ಗಗಳಿವೆ. ಹೆಚ್ಚಿನ ಶಕ್ತಿಯ ಅಂಶವು ಅವುಗಳನ್ನು ಉತ್ತಮ ಸ್ನ್ಯಾಕ್(Snack) ಹಾಗೆ ಮಾಡುತ್ತೆ. ಬೆರಳೆಣಿಕೆಯಷ್ಟು ಗೋಡಂಬಿಗಳನ್ನು ಬ್ಲೆಂಡರ್ ನಲ್ಲಿ ನಯವಾಗುವವರೆಗೆ ಮಿಕ್ಸ್ಸಿ ಮಾಡೋ ಮೂಲಕ ನೀವು ಸುಲಭವಾಗಿ ಗೋಡಂಬಿ ಬೆಣ್ಣೆಯನ್ನು ತಯಾರಿಸಬಹುದು. ಇತರ ಡ್ರೈ ಫ್ರೂಟ್ ಮತ್ತು ಬೀಜಗಳೊಂದಿಗೆ ಬೆರೆಸಿ ತಿಂದರೆ, ಅದು ಗರ್ಭಿಣಿ ಮಹಿಳೆಯರಿಗೆ ಶಕ್ತಿ ನೀಡುತ್ತೆ.