Asianet Suvarna News Asianet Suvarna News

Health Tips : ಮಲಬದ್ಧತೆ ದೂರ ಮಾಡುತ್ತೆ ಈ ಯೋಗಾಸನ

ಈಗಿನ ದಿನಗಳಲ್ಲಿ ಮಲಬದ್ಧತೆ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಹೊರ ಬರೋದು ಈಗ ಸವಾಲಾಗಿದೆ. ಆಹಾರ, ಜೀವನ ಶೈಲಿ ಬದಲಾವಣೆ ಜೊತೆ ಯೋಗ ಮಾಡಿದ್ರೆ ಇದ್ರಿಂದ ಬೇಗ ಮುಕ್ತಿ ಸಾಧ್ಯ. 
 

Yoga Asanas For Constipation
Author
First Published Feb 21, 2023, 5:04 PM IST

ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಮಲಬದ್ಧತೆಗೆ ದೊಡ್ಡ ಕಾರಣವಾಗ್ತಿದೆ. ಬಹುತೇಕರಿಗೆ ಮಲಬದ್ಧತೆ ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ. ಚಳಿಗಾಲದಲ್ಲಿ ಈ ಸಮಸ್ಯೆ ದುಪ್ಪಟ್ಟಾಗುತ್ತದೆ.  ಮಲಬದ್ಧತೆ ಸಮಸ್ಯೆಯಿಂದ ರಕ್ಷಣೆ ಪಡೆಯಲು ನಾವು ಜೀವನ ಶೈಲಿಯಲ್ಲಿ ಬದಲಾವಣೆ ಮಾಡ್ಬೇಕು. ಆಹಾರದಲ್ಲಿ ಬದಲಾವಣೆ ತರಬೇಕು. ಪ್ರತಿ ದಿನ ಮಲಬದ್ಧತೆ ನಿವಾರಣೆಗೆ ಮಾತ್ರೆ ಸೇವನೆ ಮಾಡುವವರಿದ್ದಾರೆ. ಮಾತ್ರೆ ಸೇವನೆ ಆ ಕ್ಷಣಕ್ಕೆ ಪರಿಹಾರ ನೀಡುತ್ತದೆ ನಿಜ. ಆದ್ರೆ ಅದ್ರಿಂದ ಅಡ್ಡಪರಿಣಾಮವಾಗುವ ಸಾಧ್ಯತೆಯಿದೆ. 

ಮಲಬದ್ಧತೆ (Constipation) ಯನ್ನು ತೊಡೆದುಹಾಕಲು ಸುಲಭ ವಿಧಾನವೆಂದ್ರೆ ಯೋಗ (Yoga). ಪ್ರತಿ ನಿತ್ಯ ನಿಯಮಿತವಾಗಿ ಯೋಗ ಮಾಡುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡಬಹುದು. ಯೋಗದಿಂದ ನಾನಾ ಉಪಯೋಗವಿದೆ. ಯೋಗದಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಜೀರ್ಣಕ್ರಿಯೆ (Digestion) ಸರಿಯಾಗಿ ಆದ್ರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಕರುಳಿಗೆ ಸಂಬಂಧಿಸಿದ ಸಮಸ್ಯೆ ದೂರವಾಗ್ಬೇಕು, ಮಲಬದ್ಧತೆ ಕಡಿಮೆಯಾಗ್ಬೇಕು ಅಂದ್ರೆ ನೀವು ನಿತ್ಯ ಒಂದೇ ಒಂದು ಆಸನ ಮಾಡಿದ್ರೆ ಸಾಕು. ನಾವಿಂದು ಮಲಬದ್ಧತೆ ಕಡಿಮೆ ಮಾಡಲು ನೆರವಾಗುವ ಒಂದು ಆಸನ ಯಾವುದು ಮತ್ತೆ ಅದ್ರ ಇತರ ಪ್ರಯೋಜನ ಏನು ಎಂಬುದನ್ನು ನಿಮಗೆ ಹೇಳ್ತೇವೆ.  

Health Tips : ಕುಡಿದ ನಶೆಯಂತೆ ಏರುವ ಈ ಖಾಯಿಲೆ ಯಾವ್ದು ಗೊತ್ತಾ?

ಮಲಬದ್ಧತೆ ಕಡಿಮೆ ಮಾಡುತ್ತೆ ಆಕರ್ಣ ಧನುರಾಸನ : ಆಕರ್ಣ ಧನುರಾಸನದಲ್ಲಿ ನಾಲ್ಕು ಶಬ್ದಗಳು ಸೇರಿವೆ. ಮೊದಲ ಪದ “ಆ” ಎಂದರೆ ಬಾ ಎಂದರ್ಥ. ಎರಡನೇ ಶಬ್ದ “ಕರ್ಣ” ಎಂದರೆ ಕಿವಿ. “ಧನು” ಎಂದರೆ ಕಿವಿ. ಕೊನೆಯದಾಗಿ “ಆಸನ”  ಎಂದರೆ ಭಂಗಿ. ಈ ಆಸನದಲ್ಲಿ ದೇಹವು ಬಾಣದಂತೆ ಆಗುತ್ತದೆ. ಬಿಲ್ಲುಗಾರ ಬಿಲ್ಲನ್ನು ಹಿಡಯುವ ಭಂಗಿ ಇದಾದ್ದರಿಂದ ಇದನ್ನು ಆಕರ್ಣ ಧನುರಾಸನ ಎಂದು ಕರೆಯುತ್ತಾರೆ.
ಆಕರ್ಣ ಧನುರಾಸನವನ್ನು ಪ್ರತಿನಿತ್ಯ 20 ಸೆಕೆಂಡುಗಳ ಕಾಲ ಮಾಡಬೇಕೆಂದು ಹೇಳಲಾಗುತ್ತೆ. ಪ್ರತಿ ಬಾರಿಯೂ ಒಂದರ ನಂತರ ಒಂದು ಕಾಲಿನಿಂದ ಇದನ್ನು ಮಾಡಬೇಕು. ಇದರಿಂದ ಶರೀರಕ್ಕೆ ಅನೇಕ ಲಾಭಗಳಿವೆ. ಆಕರ್ಣ ಧನುರಾಸನ ಮಾಡುವುದ್ರಿಂದ  ಕಾಲುಗಳ ಹಿಗ್ಗಿ ಬಲಪಡೆಯುತ್ತವೆ. ಶರೀರದಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸಲು ಇದು ಬಹಳ ಸಹಕಾರಿ. ಅಲ್ಲದೆ, ದೊಡ್ಡ ಕರುಳು ಮತ್ತು ಕಿಬ್ಬೊಟ್ಟೆಯ ನೋವನ್ನು ನಿವಾರಿಸುತ್ತದೆ. ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ಮಲಬದ್ಧತೆ ಹೋಗ್ಬೇಕೆಂದ್ರೆ ಆಕರ್ಣ ಧನುರಾಸನವನ್ನು ಯಾವಾಗ ಮಾಡಬೇಕು? :  ಆಕರ್ಣ ಧನುರಾಸನವನ್ನು ಬೆಳಿಗ್ಗೆ ಮಾಡುವುದು ಹೆಚ್ಚು ಪ್ರಯೋಜನಕಾರಿ.     ಸಂಜೆಯ ಹೊತ್ತಿನಲ್ಲಿ ಈ ಆಸನ ಮಾಡುವವರು ಊಟಕ್ಕಿಂತ 4-6 ಗಂಟೆ ಮೊದಲೇ ಮಾಡಬೇಕು. ವ್ಯಾಯಾವ ಮಾಡುವ ಮೊದಲು ಮಲವಿಸರ್ಜನೆ ಮಾಡಬೇಕು. ಈ ಆಸನ ಮಾಡುವಾಗ ಹೊಟ್ಟೆ ಸಂಪೂರ್ಣವಾಗಿ ಖಾಲಿ ಇರುವಂತೆ ನೋಡಿಕೊಳ್ಳಿ.

ಆಕರ್ಣ ಧನುರಾಸನ ಮಾಡುವಾಗ ಈ ಮುನ್ನೆಚ್ಚರಿಕೆ ವಹಿಸಿ : ಬೆನ್ನುಮೂಳೆಗಳಲ್ಲಿ ನೋವಿರುವವರು ಈ ಆಸನವನ್ನು ಮಾಡಬಾರದು. ಅತಿಸಾರವಾದಾಗಲೂ ಈ ಯೋಗ ಬೇಡಬಾರದು. ಕುತ್ತಿಗೆಯ ನೋವಿರುವವರು ಧನುರಾಸನ ಮಾಡಬೇಡಿ. ಹಾಗೆಯೇ ಭುಜದಲ್ಲಿ ನೋವಿರುವಾಗ ಕೈಗಳನ್ನು ಮೇಲಕ್ಕೆತ್ತಬೇಡಿ. ಮೊಣಕಾಲಿನ ನೋವು ಅಥವಾ ಸಂಧಿವಾತ ಇರುವವರು ಗೋಡೆಯ ಸಹಾಯ ಪಡೆದು ಅಭ್ಯಾಸ ಮಾಡುವುದು ಒಳ್ಳೆಯದು. ಹೃದ್ರೋಗಿಗಳು ಮತ್ತು ಬಿಪಿ ಸಮಸ್ಯೆ ಇರುವವರಿಗೆ ಧನುರಾಸನ ಒಳ್ಳೆಯದಲ್ಲ. ಧನುರಾಸನವನ್ನು ತರಬೇತುದಾರರ ಸಹಾಯದಿಂದಲೇ ಕಲಿಯಿರಿ.  ಈ ಆಸನವನ್ನು ಮಾಡುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. 

ಮರೆವು ಹೆಚ್ಚಾಗ್ತಾ ಇದೆಯಾ? ಡೆಮೆನ್ಷಿಯಾ ಬಗ್ಗೆ ಹೊಸ ಸ್ಟಡಿ ಏನನ್ನುತ್ತೆ?

ಇಂದಿನ ಜೀವನ ಶೈಲಿಯಲ್ಲಿ ನಮ್ಮ ದೇಹದ ಸಮತೋಲವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಧನುರಾಸನ ನಮಗೆ ಅತ್ಯಗತ್ಯವಾಗಿದೆ. ಆಕರ್ಣ ಧನುರಾಸನ ಯೋಗ ವಿಜ್ಞಾನದ ಅತ್ಯಂತ ಒಳ್ಳೆಯ ಆಸನವೂ ಹೌದು. ಇದು ನಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುವುದಲ್ಲದೇ ಮನಸ್ಸನ್ನು ಕೂಡ ಸ್ಥಿರವಾಗಿಡುತ್ತದೆ. ಧನುರಾಸನವನ್ನು ಆರಂಭಿಸುವ ಮೊದಲು ನಿಮ್ಮನ್ನು ನೀವು ಇದಕ್ಕೆ ಅಣಿಗೊಳಿಸಬೇಕು. ಭಯವನ್ನು ದೂರಮಾಡಿಕೊಳ್ಳಬೇಕು. ಆರಂಭದ ಹಂತದಲ್ಲಿ ತುಸು ಏರುಪೇರಾದರೂ ಅಭ್ಯಾಸಬಲದಿಂದ ಮತ್ತು ಉತ್ತಮ ಮಾರ್ಗದಶರ್ನದಿಂದ ಆಕರ್ಣ ಧನುರಾಸನದ ಸಿದ್ಧಿ ಸಾಧ್ಯ.
 

Follow Us:
Download App:
  • android
  • ios