Air fryerನಲ್ಲಿ ಕರಿದ ಬೋಂಡಾ, ಬಜ್ಜಿ ಗರಿ ಗರಿ ಆಗ್ಬೇಕು ಅಂದ್ರೆ ಹೀಗ್ ಮಾಡಿ
Air fryer ಸೇರಿ ಅಡುಗೆ ಮನೆಯಲ್ಲಿರುವ ಹಲವು ಎಲೆಕ್ಟ್ರಿಕ್ ಉಪಕರಣಗಳು ನಮಗೆ ವಿಧ ವಿಧವಾಗಿ ಸಹಕರಿಸುತ್ತದೆ. ಅದರಲ್ಲಿಯೂ ಏರ್ ಫ್ರೈಯರ್‌ನಲ್ಲಿ ಮಾಡಿದ ಕುರುಕು ತಿಂಡಿಗಳು ಗರಿ ಗರಿಯಾಗಲೇನು ಮಾಡಬೇಕು? ನಿಮಗಾಗಿ ಟಿಪ್ಸ್.

ಎಲ್ಲರ ಮನೆಯಲ್ಲೂ ಇರಬೇಕು ಏರ್ ಫ್ರೈಯರ್
ಈಗ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಕರಿದಿದ್ದ ಆಹಾರ ಪದಾರ್ಥಗಳನ್ನು ತಿನ್ನೋಲ್ಲ, ಫಾಸ್ಟ್ ಫುಡ್‌ನಿಂದ ಕೆಲವರು ದೂರ ಇರ್ತಾರೆ. ಅದಕ್ಕೆ ಎಲ್ಲರ ಮನೆಯಲ್ಲೂ ಏರ್ ಫ್ರೈಯರ್ ಇರುತ್ತೆ. ಆದರೆ, ಅದರಲ್ಲಿ ಬೋಂಡಾ, ಬಜ್ಜಿ ಸಹ ಮಾಡಬಹುದಾ? ಗರಿ ಗರಿ ಆಗಬೇಕು ಅಂದ್ರೆ ಏನು ಮಾಡಬೇಕು?
ಮಾಡ್ರನ್ ಅಡುಗೆ ಮನೆಯಲ್ಲಿರಬೇಕಾದ ವಸ್ತುಗಳು
ಮಾಡರ್ನ್ ಅಡುಗೆ ಮನೆಯಲ್ಲಿ ಓವನ್, ಮಿಕ್ಸಿ, ಎಲೆಕ್ಟ್ರಿಕ್ ಕುಕರ್, ಗ್ರೈಂಡರ್ ಜೊತೆಗೊಂದು ಏರ್ ಫ್ರೈಯರ್ ಸಹ ತಪ್ಪದೇ ಇರುತ್ತದೆ. ಇವೆಲ್ಲವೂ ಮಾಡುವ ಅಡುಗೆ ಟೈಮ್ ಉಳಿಸುವುದಲ್ಲದೇ, ಇಂಧನ ಉಳಿತಾಯಕ್ಕೆ ಹೆಲ್ಪ್ ಮಾಡುತ್ತೆ.
ಮಾಡ್ರನ್ ಕಿಚನ್‌ನಲ್ಲಿ ವಾಟರ್ ಕೆಟಲ್ ಇರಲಿ
ಇನ್ನೊಂದು ಉಪಯುಕ್ತ ಎಲೆಕ್ಟ್ರಿಕ್ ಕಿಚನ್ ಐಟಂ ಅಂದ್ರೆ ವಾಟರ್ ಕೆಟಲ್. ಅನ್ನ ಬೇಗ ಮಾಡಬೇಕು, ಇಲ್ಲವೇ ಬಿಸಿ ಬಿಸಿ ನೀರು ಕುಡಿಯಬೇಕು ಅಂದ್ರೆ ಕ್ಷಣ ಮಾತ್ರದಲ್ಲಿ ಕುದ್ದ ನೀರು ನಮಗೆ ಇದರಿಂದ ಸಿಗುತ್ತೆ. ಇದು ಪ್ರತಿಯೊಂದೂ ಮಾಡರ್ನ್ ಕಿಚನ್‌ನಲ್ಲಿ ಇರಲೇ ಬೇಕಾದ ಐಟಮ್.
ಟೈಮ್ ಉಳಿಸುವ ಗೃಹಪಯೋಗಿ ವಸ್ತುಗಳ ಬಗ್ಗೆ ಐಡಿಯಾ ಇರಲಿ
ಯಾವ ಯಾವ ವಸ್ತುವನ್ನು ಹೇಗೆ ಬಳಸಿದರೆ ಟೈಮ್ ಉಳಿಯುತ್ತೆ. ಮಾಡೋ ಅಡುಗೆ ರುಚಿಯಾಗುತ್ತೆ ಅನ್ನೋ ಐಡಿಯಾ ಮಾತ್ರ ಹಲವರಿಗೆ ಇರೋಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರಿದ್ದರೆ ಗ್ರೈಂಡರ್‌ನಲ್ಲಿ ವಾರಕ್ಕೆ ಆಗುವಷ್ಟು ಇಡ್ಲಿ, ದೋಸೆ ಹಿಟ್ಟನ್ನು ಮಾಡಿಟ್ಟುಕೊಂಡರೆ ಬೆಳಗ್ಗೆ ತಿಂಡಿಯ ತಲೆ ಬಿಸಿಯೇ ಕಡಿಮೆಯಾಗುತ್ತದೆ.
ದಿನನಿತ್ಯದ ಅಡುಗೆ ಮನೆ ಬಳಕೆಗೆ ಮಿಕ್ಸಿ ಬೇಕೇ ಬೇಕು
ಮಿಕ್ಸಿ ಹೇಗೆ ಬಳಸೋದು ಅಂತ ಹೇಳುವುದೇನೂ ಬೇಡ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಇದು ಹಲವು ದಶಕಗಳಿಂದ ರಾರಾಜಿಸುತ್ತಲೇ ಇವೆ. ಓವನ್ ಸಹ ವಿಧ ವಿಧವಾಗಿ ಅಗತ್ಯಕ್ಕೆ ತಕ್ಕಂತೆ ಬಳಸುವ ಜಾಣ್ಮೆ ಮನೆಯಲ್ಲಿ ಅಡುಗೆ ಮಾಡುವವಗಿರಬೇಕಷ್ಟೇ. ಬರೀ ಕೇಕ್, ಚಾಕೋಲೇಟ್ ಮಾಡಲು ಅಲ್ಲ. ಬೇರೆ ಬೇರೆ ಆಹಾರ ಪದಾರ್ಥಗಳನ್ನೂ ಮಾಡಲೂ ಇದು ಸಹಕರಿಸುತ್ತೆ.
ಗರಿಗರಿಯಾಗಿ ಬೋಂಡಾ, ಬಜ್ಜಿ ಮಾಡೋದು ಹೇಗೆ?
ಏರ್ ಫ್ರೈಯರ್‌ನಲ್ಲಿ ಬೋಂಡಾ, ಬಜ್ಜಿ ಮಾಡಬಹುದು ಅಂತ ಎಲ್ಲರಿಗೂ ಗೊತ್ತು. ಆದರೆ, ಅದು ಗಟ್ಟಿಯಾಗುತ್ತೆ. ಗರಂ ಗರಂ ಆಗುವ ಹಾಗೆ ಏನು ಮಾಡಬಹುದು ಅಂತ ಹಲವರಿಗೆ ಗೊತ್ತಿರೋಲ್ಲ. ಅದು ಹೇಗೆ ಅಂತ ನಾವು ಹೇಳ್ತೇವೆ ಇಲ್ ಕೇಳಿ.
ಈರುಳ್ಳಿ, ಪುದೀನಾ ಪಕೋಡಾ ರೆಸಿಪಿ
ಈರುಳ್ಳಿ, ಪುದೀನಾ ಪಕೋಡಾ ಮಾಡಬೇಕು ಅಂತಿಟ್ಟುಕೊಳ್ಳಿ. 100-120 ಗ್ರಾಮ್ ಕಡಲೆ ಹಿಟ್ಟು, 2 ದೊಡ್ಡ ಚಮಚ ಅಕ್ಕಿ ಹಿಟ್ಟು, ಎರಡು ಮಧ್ಯಮ ಗಾತ್ರದ ಈರುಳ್ಳಿ, ಒಂದು ಮುಷ್ಠಿಯಷ್ಟು ಪುದೀನಾ ಎಲೆ, ಹಸಿಮೆಣಸಿನ ಕಾಯಿ, ಉಪ್ಪು (Salt), ಖಾರದಪುಡಿ, ಅರಿಶಿನ, ಓಂ ಕಾಳು, ಚಿಟಿಕೆಯಷ್ಟು Baking Soda, 10 ಮಿಲಿ ಚೆನ್ನಾಗಿ ಕಾದ ಎಣ್ಣೆ ಎಲ್ಲ ಹಾಕಿ ನೀರು ಹಾಕದೆಯೇ ಈರುಳ್ಳಿ ರಸದಲ್ಲೇ ಗಟ್ಟಿಯಾಗಿ ಹಿಟ್ಟನ್ನು ಕಲಿಸಿಕೊಳ್ಳಬೇಕು.
Air Fryerನಲ್ಲಿ 375 ಡಿಗ್ರಿ F ಟೆಂಪರೇಚರ್‌ನಲ್ಲಿ 15 ನಿಮಿಷ ಬೇಯಿಸಿ
Air Fryerನಲ್ಲಿ 375 ಡಿಗ್ರಿ F ಟೆಂಪರೇಚರ್‌ನಲ್ಲಿ ಸುಮಾರು 15 ನಿಮಿಷ ಒಂದು ಕಡೆ ಬೇಯಿಸಬೇಕು. ಮತ್ತೆ ಉಲ್ಟಾ ಮಾಡಿ ಒಂದೈದು ನಿಮಿಷ ಬೇಯಿಸಬೇಕು.
ಪಕೋಡ ಮೇಲೆ ಒಂದೆರಡು ಹನಿ ಆಲೀವ್ ಎಣ್ಣೆ ಹಚ್ಚಿ
ಆದರೆ, ಬೇಯುವಾಗ ಪಕೋಡಾ ಮೇಲೆ ಒಂದೆರಡು ಹನಿಯಷ್ಟು ಆಲೀವ್ ಎಣ್ಣೆ ಲೇಪಿಸಬೇಕಷ್ಟೇ. ಆಗ ಪಕೋಡದ ಮೇಲ್ಮೈ ಒಣಗುವುದಿಲ್ಲ. ಎಣ್ಣೆಯಲ್ಲಿ ಅದ್ದಿ ಪಕೋಡಾ ಮಾಡಿದ ರುಚಿಯೇ ಬರುತ್ತದೆ. ಸುಮಾರ 12-13 ಪಕೋಡಕ್ಕೆ 13-15 ಮಿಲಿ ಎಣ್ಣೆ ಸಾಕಷ್ಟೇ.
Aif Fryer ಬಳಸಿದಾಗ ಪಾತ್ರೆ ತೊಳೆಯುವ ತಲೆನೋವು ಇರಲ್ಲ
ಹೆಲ್ದಿಯೂ ಹೌದು. ಎಣ್ಣೆಯಲ್ಲಿ ಕರಿದಾಗ ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸೋದು, ಖರ್ಚು ಮಾಡೋದು, ಎಣ್ಣೆ ಬಾಣಲೆ ತೊಳೆಯೋದು ಸೇರಿ ಹಲವು ತಲೆ ನೋವಿನ ಕೆಲಸಗಳು ಈ Aif Fryer ಬಳಸಿದಾಗ ಇರೋಲ್ಲ.
ಹೀಗೆ ಟ್ರೈ ಮಾಡಿ ನೋಡಿ
ಹೀಗೆಯೇ ಮಸಾಲೆ ಒಡೆ, ಅಂಬೊಡೆ ಸೇರಿ ಎಣ್ಣೆಯಲ್ಲಿ ಕರಿಯಬೇಕಾದ ಪ್ರತಿಯೊಂದು ಪದಾರ್ಥಕ್ಕೂ ಟ್ರೈ ಮಾಡಿ. ಆಗ ಏರ್ ಫ್ರೈಯರ್ ಎಷ್ಟು ಒಳ್ಳೇಯದು ಅಂತ ನಿಮ್ಮ ಗಮನಕ್ಕೆ ಬರುತ್ತೆ. ಇವತ್ತೇ ಟ್ರೈ ಮಾಡ್ತೀರಿ ಅಲ್ವಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

