ಮೋರಟಗಿ [ಜ.15]:  ಗ್ರಾಮದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ದೃಷ್ಟಿ ದೋಷವಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕಗಳನ್ನು ನೇತ್ರ ತಜ್ಞ ವೈದ್ಯಾಧಿಕಾರಿ ಶ್ವೇತಾ ಕೋರಿ ಈಚೆಗೆ ವಿತರಿಸಿದರು.

ನಂತರ ಮಾತ​ನಾಡಿ, ಕಣ್ಣು ಮನುಷ್ಯನಿಗೆ ಅತ್ಯಮೂಲ್ಯ. ಕಣ್ಣು ಕಳೆದುಕೊಂಡರೆ ಜಗತ್ತೇ ಕತ್ತಲುಮಯವಾಗುತ್ತದೆ. ಮಕ್ಕಳು ಮೊಬೈಲ್‌, ಟಿವಿಯನ್ನು ಅತೀ ಸಮೀಪದಿಂದ ವೀಕ್ಷಿಸು​ವು​ದ​ರಿಂದ ಕಣ್ಣಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಸರಿಯಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಕನಸು ಕಟ್ಟಿಕೊಂಡವರು ನೀವು. ಕಣ್ಣಿನ ಬಗ್ಗೆ ಕಾಳಜಿ ವಹಿಸಿ ಸಮಸ್ಯೆ ಇದ್ದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ತಮ್ಮ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಹಲವಾರ ಯೋಜನೆಗಳ ಮೂಲಕ ಉಚಿತ ಚಿಕಿತ್ಸೆ ನೀಡುತ್ತಿದೆ. ಇದರ ಸದೂಪಯೋಗ ಪಡೆದುಕೊಳ್ಳಿ ಎಂದರು.

ಬಿ.ಎಸ್‌.ಪಾಟೀಲ, ಗುರುರಾಜ ನಡವಿನಕೇರಿ, ಎಂ.ರಂಗಣ್ಣ, ಎಸ್‌.ಜಿ.ಬಿರಾದಾರ, ಚೌಗಲೆ, ಮುತ್ತು ನೆಲ್ಲಗಿ ಅನೇ​ಕರಿ​ದ್ದರು.