Asianet Suvarna News Asianet Suvarna News

ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗಿಯಾದ ಮಕ್ಕಳಲ್ಲಿ ತೀವ್ರ ತಲೆನೋವಿನ ಸಮಸ್ಯೆ; ಅಧ್ಯಯನದಿಂದ ಶಾಕಿಂಗ್ ಮಾಹಿತಿ

ಕೊರೋನಾ ಸೋಂಕು (Corona virus) ಎಲ್ಲೆಡೆ ವ್ಯಾಪಕವಾಗಿ ಹರಡಿದ್ದ ಕಳೆದೆರಡು ವರ್ಷಗಳಲ್ಲಿ ಜನಜೀವನ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಲಾಕ್‌ಡೌನ್‌ (Lockdown), ಕರ್ಫ್ಯೂನಿಂದಾಗಿ ಜನರು ಅಕ್ಷರಶಃ ಮನೆಯೊಳಗಡೆ ಬಂಧಿಯಾಗಿದ್ದರು. ಆನ್‌ಲೈನ್‌ ಕ್ಲಾಸ್ (Online class), ವರ್ಕ್ ಫ್ರಂ ಹೋಮ್‌ ಸಹ ಶುರುವಾಯ್ತು. ಮಕ್ಕಳ (Children) ಆರೋಗ್ಯದ ದೃಷ್ಟಿಯಿಂದ ಆನ್‌ಲೈನ್‌ ಕ್ಲಾಸ್ ವ್ಯವಸ್ಥೆಯನ್ನು ಹೆಚ್ಚು ಸಮಯ ಮುಂದುವರಿಸಲಾಗಿತ್ತು. ಆದರೆ ಇದರಿಂದ ಹೊಸ ಸಮಸ್ಯೆಯೊಂದು ಶುರುವಾಗಿದೆ.

The Online Learning Experience And Reported Headaches Associated With Screen Exposure Vin
Author
Bengaluru, First Published Jun 28, 2022, 10:08 AM IST

ಕೋವಿಡ್‌ (Covid) ಸೋಂಕಿನ ಪ್ರಭಾವ ಇನ್ನೇನು ಕಡಿಮೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೋವಿಡ್ ಕಾಟ ಶುರುವಾಗಿದೆ. ದೇಶಾದ್ಯಂತ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ದೀರ್ಘಾವಧಿಯ ಕೋವಿಡ್ ರೋಗ ಲಕ್ಷಣಗಳು (Long covid symptoms) ಹಲವರಲ್ಲಿ ಭೀತಿ ಹುಟ್ಟಿಸುತ್ತಿವೆ. ಬಿಟ್ಟೂ ಬಿಡದೆ ಕಾಡುವ ಜ್ವರ, ವಾಸನೆ ಗ್ರಹಿಕೆ ಇಲ್ಲದಿರುವುದು, ನಿರಂತರ ಕೆಮ್ಮಿನ ಸಮಸ್ಯೆಯಿಂದ ಈಗಾಗಲೇ ಹಲವರು ಬಳಲುತ್ತಿದ್ದಾರೆ. ಈ ಮಧ್ಯೆ ಅಧ್ಯಯನ (Study)ವೊಂದು ಶಾಕಿಂಗ್ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಈ ಅಧ್ಯಯನದ ಮಾಹಿತಿಯ ಪ್ರಕಾರ ಪ್ರತಿ ಮೂವರು ಶಾಲಾ ಮಕ್ಕಳಲ್ಲಿ (Children) ಒಬ್ಬರು ತೀವ್ರ ತಲೆನೋವಿನಿಂದ (Headache) ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡಿದ್ದ ಕಳೆದೆರಡು ವರ್ಷಗಳಲ್ಲಿ ಜನಜೀವನ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಲಾಕ್‌ಡೌನ್‌, ಕರ್ಫ್ಯೂನಿಂದಾಗಿ ಜನರು ಅಕ್ಷರಶಃ ಮನೆಯೊಳಗಡೆ ಬಂಧಿಯಾಗಿದ್ದರು. ಯಾರೂ ಮನೆಯಿಂದ ಹೊರಗಡೆ ಕಾಲಿಡುತ್ತಿರಲ್ಲಿಲ್ಲ. ದಿನ, ಮೆಡಿಸಿನ್ ಎಲ್ಲವೂ ಮನೆ ಬಾಗಿಲಿಗೇ ಬರುತ್ತಿತ್ತು. ಆನ್‌ಲೈನ್‌ ಕ್ಲಾಸ್, ವರ್ಕ್ ಫ್ರಂ ಹೋಮ್‌ ಸಹ ಶುರುವಾಯ್ತು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆನ್‌ಲೈನ್‌ ಕ್ಲಾಸ್ ವ್ಯವಸ್ಥೆಯನ್ನು ಹೆಚ್ಚು ಸಮಯ ಮುಂದುವರಿಸಲಾಗಿತ್ತು. ಆದರೆ ಇದರಿಂದ ಹೊಸ ಸಮಸ್ಯೆಯೊಂದು ಶುರುವಾಗಿದೆ.

ದೀರ್ಘಾವದಿಯ ಕೋವಿಡ್ ಅಪಾಯ ಪುರುಷರಿಗಿಂತ ಮಹಿಳೆಯರಿಗೆ ಶೇ.22ರಷ್ಟು ಹೆಚ್ಚು !

ಆನ್‌ಲೈನ್ ಕ್ಲಾಸ್ ವ್ಯವಸ್ಥೆಯಿಂದ ಮಕ್ಕಳಲ್ಲಿ ತೀವ್ರ ತಲೆನೋವು
ಆನ್‌ಲೈನ್ ಕ್ಲಾಸ್ ವ್ಯವಸ್ಥೆ ಮಕ್ಕಳು, ಪೋಷಕರು ಯಾರಿಗೂ ಇಷ್ಟವಿರದಿದ್ದರೂ ವೈರಸ್ ಹರಡದಂತೆ ತಡೆಯಲು ಈ ಪದ್ಧತಿ ಅನಿವಾರ್ಯವಾಗಿತ್ತು. ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳ ಕಣ್ಣು, ಮೆದುಳಿಗೆ ಹಾನಿ ಎಂದು ಪೋಷಕರು ಚಿಂತೆಗೀಡಾದರೆ, ಮಕ್ಕಳು ದೈಹಿಕ ಚಟುವಟಿಕೆಗಳಿಲ್ಲದೆ ಕಂಗಾಲಾದರು. ಆನ್‌ಲೈನ್‌ ಕ್ಲಾಸ್‌ನಿಂದ ಆಗಿರುವ ಸಮಸ್ಯೆ ಇಷ್ಟೇ ಅಲ್ಲ, ಪ್ರತಿ ಮೂವರು ಶಾಲಾ ಮಕ್ಕಳಲ್ಲಿ ಒಬ್ಬರು ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ ಎಂಬುದು ಅಧ್ಯಯನಿಂದ ತಿಳಿದುಬಂದಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಪಾಠಗಳನ್ನ ಆಲಿಸಿದ ಮಕ್ಕಳಲ್ಲಿ ಈ ರೋಗಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.

ಹಲವು ಮಕ್ಕಳಲ್ಲಿ ಮೈಗ್ರೇನ್ ರೋಗಲಕ್ಷಣ, ಆತಂಕದಲ್ಲಿ ಪೋಷಕರು
ಆನ್‌ಲೈನ್ ಪಾಠಗಳು, ಪರೀಕ್ಷೆಗಳನ್ನು ಕೇಳಲು ಮನೆಯಲ್ಲಿ ಸರಿಯಾದ ಪರಿಸ್ಥಿತಿಗಳ ಕೊರತೆ, ಕೋವಿಡ್ -19 ಬಗ್ಗೆ ಆತಂಕ, ಮೈಗ್ರೇನ್ ರೋಗಲಕ್ಷಣಗಳ ಉಲ್ಬಣ ಮತ್ತು ಮೈಗ್ರೇನ್ ತಲೆನೋವಿಗೆ ಹೊಸ ಕಾರಣಗಳು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಟರ್ಕಿಯ ಕರಮನ್‌ನಲ್ಲಿರುವ ಎರ್ಮೆನೆಕ್ ಸ್ಟೇಟ್ ಹಾಸ್ಪಿಟಲ್‌ನಲ್ಲಿ ಪ್ರಮುಖ ಸಂಶೋಧಕರಾದ ಐಸ್ ನೂರ್ ಓಜ್‌ಡಾಗ್ ಅಕಾರ್ಲೆ ಅವರ ನಿರ್ದೇಶನದಲ್ಲಿ ಈ ಅಧ್ಯಯನವನ್ನ ನಡೆಸಲಾಯಿತು. ಈ ಅಧ್ಯಯನವು 10 ರಿಂದ 18 ವರ್ಷದೊಳಗಿನ 851 ಮಕ್ಕಳನ್ನ ಪರೀಕ್ಷಿಸಿದೆ. ಅಧ್ಯಯನದ ಅವಧಿಯಲ್ಲಿ 756 ಜನರು ತಲೆನೋವಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಮಧುಮೇಹ ಇರುವವರಿಗೆ ದೀರ್ಘಾವಧಿಯ ಕೋವಿಡ್‌ ಅಪಾಯ ಹೆಚ್ಚು, ಅಧ್ಯಯನದ ಹೊಸ ವಿಶ್ಲೇಷಣೆ

ಮಕ್ಕಳಲ್ಲಿ ಹದಿನೈದು ಪ್ರತಿಶತದಷ್ಟು ಮಕ್ಕಳು ಸಾಂಕ್ರಾಮಿಕ ಸಮಯದಲ್ಲಿ ಮೈಗ್ರೇನ್ ತಲೆನೋವಿನ ಸಮಸ್ಯೆಯನ್ನು ಎದುರಿಸಲು ಶುರು ಮಾಡಿದರು. ಕಾಲು ಭಾಗದಷ್ಟು ಮಂದಿ ತಲೆನೋವು ತೀವ್ರವಾಗಿದೆ ಎಂದು ಹೇಳಿದರೆ, 61 ಪ್ರತಿಶತದಷ್ಟು ಮಕ್ಕಳು ತಮ್ಮ ತಲೆನೋವು ಯಾವತ್ತೂ ಇರುತ್ತದೆ ಎಂದು ಹೇಳಿದರು. ಇನ್ನು 3 ಪ್ರತಿಶತದಷ್ಟು ಜನರು ತಮ್ಮ ತಲೆನೋವು ಸುಧಾರಿಸಿದೆ ಎಂದು ತಿಳಿಸಿದ್ದಾರೆ.

ನವವಿವಾಹಿತರು ತಿಂಗಳಿಗೆ ಸರಾಸರಿ 8-9 ಬಾರಿ ಈ ಇಂಥಾ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಈ ಗುಂಪಿನ ಅರ್ಧದಷ್ಟು ಮಕ್ಕಳು (43 ಪ್ರತಿಶತ) ಕನಿಷ್ಟ ತಿಂಗಳಿಗೊಮ್ಮೆ ಆಂಟಿಹೈಪರ್ಟೆನ್ಸಿವ್ ಔಷಧಿಗಳನ್ನ ಬಳಸುತ್ತಾರೆ. ಇನ್ನು ಸ್ಥಿರ ಗುಂಪಿನಲ್ಲಿ ಮೂರನೇ ಒಂದು ಭಾಗದಷ್ಟು (33 ಪ್ರತಿಶತ) ಹೋಲಿಸಿದ್ರೆ, ತಲೆನೋವು ಮಾನಸಿಕ ಆರೋಗ್ಯ ಮತ್ತು ಶಾಲೆಯ ಯಶಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

Follow Us:
Download App:
  • android
  • ios