ಜ್ವರ ಬಿಟ್ಟರೂ ಬಾಯಿ ರುಚಿ ಸರಿ ಹೋಗಿಲ್ವಾ? ರುಚಿ ಬರಿಸಿಕೊಳ್ಳಲು ಇಲ್ಲಿವೆ ಮನೆ ಮದ್ದು
ಅನೇಕ ಬಾರಿ ಜ್ವರ ಬಂದಾಗ ರೋಗಿಯ ಸ್ಥಿತಿ ತುಂಬಾನೆ ಹದಗೆಡುತ್ತದೆ. ಆದರೆ ಕೆಲವೊಮ್ಮೆ ಜ್ವರ ಬಿಟ್ಟ ನಂತರವೂ ಕೆಲವೊಂದು ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರುತ್ತೆ, ಅದರಲ್ಲಿ ಬಾಯಿಯ ಕಹಿ ಕೂಡ ಒಂದು. ನೀವು ಬಾಯಿಯ ರುಚಿಯನ್ನು ಬದಲಾಯಿಸಲು ಬಯಸಿದರೆ ಏನು ಮಾಡಬಹುದು ನೋಡಿ.
ಜ್ವರ ಬಂದಾಗ ಕೆಲವರ ಸ್ಥಿತಿ ತುಂಬಾನೆ ಕೆಟ್ಟದಾಗುತ್ತದೆ. ಜ್ವರ ಬಂದಾಗ ಮತ್ತು ಜ್ವರ (fever) ಗುಣವಾದ ನಂತರವೂ, ಕೆಲವೊಮ್ಮೆ ಬಾಯಿಯ ರುಚಿ ಇಲ್ಲದಿರೋದು ಅಥವಾ ಕಹಿ ಅನುಭವವಾಗಲು ಪ್ರಾರಂಭಿಸುತ್ತದೆ. ಅಂತಹ ಸ್ಥಿತಿಯಲ್ಲಿ, ರುಚಿಕರವಾದ ಖಾದ್ಯವೂ ರುಚಿಯಿಲ್ಲದಂತೆ ಭಾಸವಾಗುತ್ತೆ ಮತ್ತು ಕಹಿ (bitterness in mouth) ಅನುಭವವನ್ನು ನೀಡುತ್ತದೆ. ಒಂದು ವೇಳೆ, ನೀವು ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವಾಗಲೂ ಇದು ಸಂಭವಿಸುತ್ತದೆ.
ಸಾಮಾನ್ಯವಾಗಿ ಜ್ವರ ಬಂದಾಗ ಹಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮಗೂ ಜ್ವರ ಬಿಟ್ಟ ಬಳಿಕವೂ ಬಾಯಿ ರುಚಿ ಇಲ್ಲದೇ ಕಹಿ ಎನಿಸುತ್ತಿದೆಯೇ? ಹಾಗಿದ್ರೆ ಕೆಲವು ಮನೆಮದ್ದುಗಳನ್ನು ನಾವು ನಿಮಗೆ ಹೇಳುತ್ತೇವೆ, ಇವು ಜ್ವರದ ನಂತರ ಬಾಯಿ ರುಚಿ ಹೆಚ್ಚಿಸಲು ಸಹಾಯ ಮಾಡುತ್ತೆ.
ಟೊಮೆಟೊ ಸೂಪ್ (Tomato Soup)
ಟೊಮೆಟೊದಲ್ಲಿ ಅನೇಕ ರೀತಿಯ ಜೀವಸತ್ವಗಳಿವೆ, ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಟೊಮೆಟೊ ಸೂಪ್ ಬಾಯಿಯ ಕಹಿಯನ್ನು ತೆಗೆದು ಹಾಕುತ್ತದೆ, ಆದ್ದರಿಂದ ಜ್ವರದಿಂದ ಚೇತರಿಸಿಕೊಂಡ ನಂತರ, ಪ್ರತಿದಿನ ಸುಮಾರು 1 ಕಪ್ ಸೂಪ್ ಕುಡಿಯಿರಿ.
ಟೊಮೆಟೊ ಸೂಪ್ ಮಾಡೋದು ಹೇಗೆ?
ಟೊಮೆಟೊ ಸೂಪ್ ತಯಾರಿಸಲು, ಮೊದಲು ಟೊಮೆಟೊ ತೆಗೆದುಕೊಳ್ಳಿ.
ಅವುಗಳನ್ನು ಚೆನ್ನಾಗಿ ತೊಳೆದು, ದೊಡ್ಡ ತುಂಡುಗಳಾಗಿ ಕತ್ತರಿಸಿ ಬೇಯಲು ಬಿಡಿ.
ಟೊಮೆಟೊಗಳು ಚೆನ್ನಾಗಿ ಬೆಂದ ಬಳಿಕ ಮತ್ತು ಅವು ಸಂಪೂರ್ಣವಾಗಿ ಮೃದುವಾದಾಗ, ಗ್ಯಾಸ್ ನಿಂದ ಇಳಿಸಿ.
ಈ ಟೋಮೆಟೋವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದಕ್ಕೆ ಬೆಣ್ಣೆ,ಬ್ಲ್ಯಾಕ್ ಸಾಲ್ಟ್, (black salt) ಸಕ್ಕರೆ, ಕರಿಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 6-7 ನಿಮಿಷಗಳ ಕಾಲ ಕುದಿಸಿ.
ಇದರ ನಂತರ, ಗ್ಯಾಸ್ ಆಫ್ ಮಾಡಿ.ಟೋಮೆಟೋ ಸೂಪ್ ರೆಡಿ.
ಅರಿಶಿನ (Turmeric)
ಅರಿಶಿನವು ಅನೇಕ ರೋಗಗಳನ್ನು ನಾಶಪಡಿಸುತ್ತದೆ ಅನ್ನೋದು ನಿಮಗೆ ಗೊತ್ತಿರಬಹೂದ್. ಇದು ಉತ್ಕರ್ಷಣ ನಿರೋಧಕ ಮತ್ತು ಆಂಟಿ ಇಂಫ್ಲಮೆಟರಿ ಗುಣ ಹೊಂದಿದೆ. ಬಾಯಿ ಕಹಿಯಾಗುತ್ತಿರುವ ಸಂದರ್ಭದಲ್ಲಿ, ನಿಂಬೆ ರಸದಲ್ಲಿ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ನಂತರ ಅದರಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಬಾಯಿಯಲ್ಲಿನ ಕಹಿ ರುಚಿ ದೂರವಾಗುತ್ತದೆ.
ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿ (gargling in salt water)
ಆರೋಗ್ಯ ತಜ್ಞರ ಪ್ರಕಾರ, ಉಪ್ಪಿನಲ್ಲಿರುವ ನಂಜುನಿರೋಧಕ ಗುಣಗಳು ಬಾಯಿಯ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತವೆ. ಆದ್ದರಿಂದ, ಪ್ರತಿದಿನ ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಬಾಯಿಯ ರುಚಿಯನ್ನು ಗುಣಪಡಿಸುತ್ತದೆ. ಈ ವಿಧಾನವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಅಲೋವೆರಾ ಜ್ಯೂಸ್ (Aloe Vera Juice)
ಅಲೋವೆರಾದಲ್ಲಿ ಆಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ, ಇದು ಬಾಯಿಯ ಕಹಿ ಮತ್ತು ಆಸ್ಟ್ರಿಂಜೆನ್ಸಿಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಅಲೋವೆರಾ ರಸವನ್ನು ಕುಡಿಯುವ ಮೂಲಕ ನಿಮ್ಮ ಬಾಯಿಯ ರುಚಿಯನ್ನು ಮರಳಿ ತರಬಹುದು.