Health Tips: ಈ ರೀತಿ ನೀರು ಕುಡಿಯೋದ್ರಿಂದ ಅನಾರೋಗ್ಯ ಕಾಡೋದೇ ಇಲ್ಲ!
ನೀರಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಬಾಯಾರಿಕೆಯನ್ನು ತಣಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ ಮತ್ತು ಮೆದುಳಿಗೆ ಪ್ರಯೋಜನವನ್ನು ನೀಡುತ್ತದೆ. ಆದರೆ, ನೀರು ಕುಡಿಯಲು ಸರಿಯಾದ ಮಾರ್ಗದ ಬಗ್ಗೆ ತಿಳಿದುಕೊಳ್ಳೋದು ಬಹಳ ಮುಖ್ಯ.
ಕುಡಿಯುವ ನೀರು (Drinking Water) ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ನೀರು ದೇಹದ ಅಂಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತೆ ಮತ್ತು ದೇಹದ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತಲುಪಿಸುತ್ತೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಆದ್ದರಿಂದ, ಸರಿಯಾದ ಪ್ರಮಾಣದ ನೀರನ್ನು ಕುಡಿಯೋದು ಮುಖ್ಯ.
ಜನ ಹೆಚ್ಚಿನ ಪ್ರಮಾಣದಲ್ಲಿ ನೀರನ್ನೇನೋ ಕುಡಿತಾರೆ ಆದರೆ, ಹೆಚ್ಚಿನ ಜನರಿಗೆ ನೀರು ಕುಡಿಯಲು ಸರಿಯಾದ ಮಾರ್ಗ ತಿಳಿದಿಲ್ಲ. ಇದು ನಿಮಗೆ ಪ್ರಯೋಜನಕ್ಕಿಂತ ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತದೆ. ಜನರು ಹೆಚ್ಚಾಗಿ ನೀರನ್ನು ವೇಗವಾಗಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ, ಮೂತ್ರದ ಮೂಲಕ ನೀರು ಹೊರಬರುತ್ತದೆ, ಇದರಿಂದಾಗಿ ದೇಹಕ್ಕೆ ಅಗತ್ಯವಾದ ಅಂಶಗಳು ಸಿಗೋದಿಲ್ಲ. ಇದಲ್ಲದೆ, ಒಂದು ಸಮಯದಲ್ಲಿ ಹೆಚ್ಚು ನೀರು ಕುಡೀಯೋದ್ರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು, ಏಕೆಂದರೆ ದೇಹವು ನೀರನ್ನು ಸಂಸ್ಕರಿಸಲು ಸಮಯ ತೆಗೆದುಕೊಳ್ಳುತ್ತೆ. ಅಲ್ಲದೆ, ಹೆಚ್ಚು ನೀರು ಕುಡಿಯೋದ್ರಿಂದ ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗುತ್ತೆ. ಇದು ಮೆದುಳಿನ ಕೋಶಗಳು ಮತ್ತು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.
ಆರೋಗ್ಯಕರವಾಗಿರಲು ಅಗತ್ಯವಾದ ಕುಡಿಯುವ ನೀರಿಗೆ ಕೆಲವು ನಿಯಮಗಳಿವೆ. ಆಯುರ್ವೇದದ (Ayurveda) ಪ್ರಕಾರ, ನೀರನ್ನು ಯಾವಾಗಲೂ ನಿಧಾನವಾಗಿ ಬಾಯಲಿಟ್ಟು ಕುಡಿಯಬೇಕು. ಇದರೊಂದಿಗೆ, ನಮ್ಮ ಬಾಯಿಯಲ್ಲಿರುವ ಲಾಲಾರಸವು ಹೊಟ್ಟೆಗೆ ಹೋಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿರುತ್ತೆ.
ತಜ್ಞರು ಬಾಯಿಯಲ್ಲಿ ನೀರನ್ನು ಇಟ್ಟುಕೊಂಡು ನಿಧಾನವಾಗಿ ಕುಡಿಯೋದ್ರಿಂದ ತುಂಬಾನೆ ಪ್ರಯೋಜನಗಳಿವೆ ಎನ್ನುತ್ತಾರೆ. ನೀರನ್ನು ಯಾವತ್ತೂ ಒಂದೇ ಸಲಕ್ಕೆ ನುಂಗಬೇಡಿ, ಆದರೆ ಅದನ್ನು ಬಾಯಿಯಲ್ಲಿಟ್ಟು ನಿಧಾನವಾಗಿ ಕುಡಿಯಿರಿ. ಇದು ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ನೀಡುತ್ತೆ ಎನ್ನುತ್ತಾರೆ ತಜ್ಞರು.ಇದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ನೋಡೋಣ.
ಜೀರ್ಣಕ್ರಿಯೆ ಬಲವಾಗಿರುತ್ತದೆ (Strong Digestion): ಬಾಯಲ್ಲಿ ನೀರನ್ನು ಇಟ್ಟು ಕುಡಿಯೋದ್ರಿಂದ, ನಮ್ಮ ಬಾಯಿಯಲ್ಲಿರುವ ಲಾಲಾರಸವು ಹೊಟ್ಟೆಗೆ ಹೋಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ, ಲಾಲಾರಸವು ನೈಸರ್ಗಿಕ ಕ್ಷಾರೀಯತೆಯನ್ನು ಹೊಂದಿರುತ್ತದೆ, ಅದು ಅದನ್ನು ನೀರಿನೊಂದಿಗೆ ಬೆರೆಸುತ್ತದೆ. ಇದು ಆಹಾರವನ್ನು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ನೀರನ್ನು ಬಾಯಿಯಲ್ಲಿ ಇರಿಸುವ ಮೂಲಕ ನಿಧಾನವಾಗಿ ಕುಡಿಯುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತೆ.
ಹೈಡ್ರೇಟ್ ಆಗಿರಿಸುತ್ತದೆ (Hydrate): ಬೇಸಿಗೆಯಲ್ಲಿ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಆದರೆ, ನೀರನ್ನು ಬಾಯಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಕುಡಿಯೋದ್ರಿಂದ ನೀರನ್ನು ನೀರು ಚೆನ್ನಾಗಿ ಹೀರಿಕೊಳ್ಳುತ್ತೆ, ಇದು ನಿರ್ಜಲೀಕರಣವನ್ನು ತಡೆಯುತ್ತದೆ. ಇದಲ್ಲದೆ, ನಿರ್ಜಲೀಕರಣವು ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯಾಗಿ ನೀರು ಕುಡಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ.
ತೂಕ ಕಡಿಮೆ (Weight Loss): ನೀರು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಂದ್ರೆ ತೂಕ ಇಳಿಸಿಕೊಳ್ಳಲು ಸಹ ಉಪಯುಕ್ತವಾಗಿದೆ. ನೀರನ್ನು ಕುಡಿಯುವುದು ನಿಮಗೆ ಹೆಚ್ಚಿನ ಹಸಿವಾಗೋದಿಲ್ಲ. ಇದು ನಿಮಗೆ ಕಡಿಮೆ ತಿನ್ನುವಂತೆ ಮಾಡುತ್ತೆ ಜೊತೆಗೆ ನಿಮ್ಮ ತೂಕವನ್ನು ಸಮತೋಲನದಲ್ಲಿರಿಸುತ್ತೆ.
ಸಾಕಷ್ಟು ನೀರು ಕುಡಿಯುವುದರ ಪ್ರಯೋಜನಗಳೇನು?
ಸ್ನಾಯುಗಳನ್ನು ಬಲಪಡಿಸುತ್ತದೆ.
ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತೆ.
ತಲೆನೋವು ಮತ್ತು ಮೈಗ್ರೇನ್ ನಿವಾರಿಸುತ್ತೆ. (migrain)
ಶಕ್ತಿಯಿಂದ ತುಂಬಿರುತ್ತದೆ.
ಇತರ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತೆ.
ಚರ್ಮಕ್ಕೆ ಹೊಳಪನ್ನು ತರುತ್ತೆ.
ವಯಸ್ಸಾಗುವಿಕೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಚರ್ಮ ಸಂಬಂಧಿತ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ನಿರ್ಜೀವ ಕೂದಲಿಗೆ ಹೊಸ ಜೀವವನ್ನು ತರುತ್ತದೆ.
ಮೂತ್ರದ ಸೋಂಕನ್ನು ನಿವಾರಿಸುತ್ತದೆ.
ಮೂತ್ರಪಿಂಡಗಳನ್ನು ಆರೋಗ್ಯಕರವಾಗಿರಿಸುತ್ತದೆ.