ಪುಟಾಣಿ ಬಾಳೆಹಣ್ಣಲ್ಲಿದೆ ಹಲವು ಸಮಸ್ಯೆ ನಿವಾರಿಸೋ ಸೂಪರ್ ಪವರ್
ಬಾಳೆಹಣ್ಣಿನಲ್ಲಿ ಒಳ್ಳೆಯ ಗುಣಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ? ವಿಟಮಿನ್ ಬಿ6 ಸಮೃದ್ಧವಾಗಿರುವುದನ್ನು ಹೊರತುಪಡಿಸಿ, ಬಾಳೆಹಣ್ಣುಗಳು ವಿಟಮಿನ್ ಸಿ, ಆಹಾರದ ನಾರು ಮತ್ತು ಮ್ಯಾಂಗನೀಸ್ (manganese) ನ ಉತ್ತಮ ಮೂಲವಾಗಿದೆ. ಬಾಳೆಹಣ್ಣುಗಳು ಕೊಬ್ಬು ಮುಕ್ತ, ಕೊಲೆಸ್ಟ್ರಾಲ್ ಮುಕ್ತ ಮತ್ತು ವಾಸ್ತವವಾಗಿ ಸೋಡಿಯಂ ಮುಕ್ತವಾಗಿವೆ. ಹಾಗಾದರೆ ನಿಮ್ಮ ಆರೋಗ್ಯಕ್ಕೆ ಇವುಗಳನ್ನು ಪ್ರತಿದಿನ ಯಾಕೆ ಸೇರಿಸಬೇಕು ನೋಡೋಣ?

ಬಾಳೆಹಣ್ಣು ಜೀರ್ಣಕ್ರಿಯೆ (Digestion) ವ್ಯೂಹಕ್ಕೆ ಯಾವುದೇ ರೀತಿಯ ಕಿರಿಕಿರಿ ಉಂಟು ಮಾಡದೆ ಜೀರ್ಣಕ್ರಿಯೆ (digestion) ವೃದ್ಧಿಸುವುದು. ಇದರಲ್ಲಿ ಉನ್ನತ ಮಟ್ಟದ ನಿರೋಧಕ ಪಿಷ್ಠವಿದ್ದು, ಇದು ಸುಲಭವಾಗಿ ಜೀರ್ಣವಾಗಲ್ಲ ಮತ್ತು ದೊಡ್ಡ ಕರುಳಿಗೆ ಇದು ಸಾಗಿ ಆರೋಗ್ಯಕರ ಬ್ಯಾಕ್ಟೀರಿಯಾ (Bacteria) ಬೆಳವಣಿಗೆ ಮಾಡುವುದು. ಅಜೀರ್ಣ ಅಥವಾ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಗ ನೀವು ಬಾಳೆಹಣ್ಣು ಸೇವಿಸಿ.
ರಕ್ತದೊತ್ತಡದಿಂದ (blood pressure) ಬಳಲುತ್ತಿದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡವು ಸಾಮಾನ್ಯಕ್ಕೆ ಬರುವುದು. ಇದರಲ್ಲಿ 420 ಗ್ರಾಂನಷ್ಟು ಪೊಟಾಶಿಯಂ (potassium) ಇರುವುದೇ ಇದಕ್ಕೆ ಕಾರಣ. ಇದನ್ನು ನಿಯಮಿತವಾಗಿ ಸೇವಿಸಲು ಮರೆಯಬೇಡಿ.
ದಿನಕ್ಕೆರಡು ಸಣ್ಣ ಬಾಳೆಹಣ್ಣು ಸೇವನೆ ಮಾಡಿದರೆ ಆಗ ಅದು ತೂಕ ಕಳೆದುಕೊಳ್ಳಲು ಸಹಕಾರಿಯಾಗಲಿದೆ. ಇದರಲ್ಲಿರುವಂತಹ ಉನ್ನತ ಮಟ್ಟದ ನಾರಿನಾಂಶವು (fiber) ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಬೇರೆ ಏನು ತಿನ್ನುವ ಅಗತ್ಯ ಇರೋದಿಲ್ಲ.
ರಕ್ತಹೀನತೆಯಿಂದ ಬಳಲುವ ಸಮಸ್ಯೆಯನ್ನು ಬಾಳೆಹಣ್ಣು ಕಡಿಮೆ ಮಾಡುವುದು. ಹಿಮೋಗ್ಲೋಬಿನ್ (Hemoglobin) ಕಡಿಮೆ ಇರುವುದರಿಂದ ನಿಶ್ಯಕ್ತಿ (Weakness) ಮತ್ತು ಆಯಾಸವಾಗುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಕಬ್ಬಿಣಾಂಶವು ಕೆಂಪು ರಕ್ತದ ಕಣಗಳನ್ನು (red blood cells) ಉತ್ಪತ್ತಿ ಮಾಡಲು ಉತ್ತೇಜಿಸುವುದು.
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 (vitamin B6) ಸಮೃದ್ಧವಾಗಿದೆ ಮತ್ತು ಶೇ.20ರಷ್ಟು ವಿಟಮಿನ್ ಇದರಲ್ಲಿದೆ. ಇದು ಹಿಮೋಗ್ಲೋಬಿನ್, ಇನ್ಸುಲಿನ್ (Insulin) ಮತ್ತು ಅಮಿನೊ ಆಮ್ಲದ ಉತ್ಪತ್ತಿಗೆ ನೆರವಾಗುವುದು. ಇದರಿಂದ ಆರೋಗ್ಯಕರ ಕೋಶಗಳು ನಿರ್ಮಾಣವಾಗುವುದು.
ಕೆಲಸ ಮಾಡಲು ಶಕ್ತಿ ಇಲ್ಲದಂತೆ ಭಾಸವಾಗುತ್ತಿದೆಯೇ? ಹಾಗಾದರೆ ನೀವು ಬೆಳಗ್ಗೆ ಉಪಾಹಾರಕ್ಕೆ ಎರಡು ಬಾಳೆಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮಲ್ಲಿ ಶಕ್ತಿ ಹೇಗೆ ಬರುವುದು ನೋಡಿ. ಇದರಲ್ಲಿರುವಂತಹ ಪೊಟಾಶಿಯಂ ದೇಹದಲ್ಲಿ ಶಕ್ತಿ (energy) ನಿರ್ಮಾಣ ಮಾಡಲು ನೆರವಾಗುವುದು.
ಬಾಳೆಹಣ್ಣು ಒತ್ತಡದ ಮಟ್ಟ (stress level) ಕಡಿಮೆ ಮಾಡುವುದು ಮತ್ತು ಮನಸ್ಥಿತಿ ಸುಧಾರಿಸುವುದು. ಯಾಕೆಂದರೆ ಇರಲ್ಲಿರುವ ಟ್ರಿಪ್ಟೊಫಾನ್ ಎನ್ನುವ ಅಂಶವು ದೇಹದಲ್ಲಿ ಸಂತಸದ ಹಾರ್ಮೋನು ಸೆರೊಟೊನಿನ್ ಉತ್ಪತ್ತಿ ಮಾಡಲು ನೆರವಾಗುವುದು.
ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಇದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ಆ ಮೂಲಕ ಹೃದಯ ಸ್ತಂಭನೆಯ (heart attack) ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು (pregnant women) ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹ ಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.