ಬಾಳೆಹಣ್ಣು ತುಂಬಾ ದಿನ ಫ್ರೆಶ್ ಆಗಿ ಉಳಿಯಬೇಕಾ? ಹೀಗ್ ಮಾಡ್ಬಹುದು ನೋಡಿ
ಬಾಳೆಹಣ್ಣು ತರುವಾಗ ಒಂದೆರಡು ತರಲು ಸಾಧ್ಯವಾಗಲ್ಲ, ಅದಕ್ಕಾಗಿ ಒಂದು ಡಜನ್ ತರುತ್ತಾರೆ. ಆದರೆ ಅದನ್ನು ಒಂದೆರಡು ದಿನ ಇಡೋಣ ಎಂದರೆ ಬೇಗ ಹಾಳಾಗುವ ಭೀತಿ. ಒಂದು ದಿನ ಅವೆಲ್ಲವೂ ಹಸಿರು ಬಣ್ಣದಲ್ಲಿ ಗೋಚರಿಸುತ್ತವೆ, ಮತ್ತು ಮುಂದಿನ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅತಿಯಾದ, ಕಂದು ಬಾಳೆಹಣ್ಣುಗಳನ್ನು ಕಾಣುತ್ತೀರಿ. ಹಾಗಾದರೆ ಅದನ್ನು ಫ಼್ರೆಶ್ ಆಗಿ ಇಡೋದು ಹೇಗೆ? ಹಳದಿ ಹಣ್ಣುಗಳನ್ನು ತಾಜಾವಾಗಿಡಲು ಇಲ್ಲಿದೆ ಸುಲಭ ಉಪಾಯ.
ಬಾಳೆಹಣ್ಣುಗಳನ್ನು ನೇತು ಹಾಕಿ
ಬಾಳೆಹಣ್ಣಿನ ಕೊನೆ ತೆಗೆದ ಕೂಡಲೇ ಹಣ್ಣಾಗಲು ಪ್ರಾರಂಭಿಸುತ್ತವೆ. ಅವುಗಳನ್ನು ಕಿತ್ತ ತಕ್ಷಣ, ಕಾಂಡವು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹಣ್ಣನ್ನು ನೇತು ಹಾಕಿದಾಗ ಹಣ್ಣಾಗುವುದು ನಿಧಾನವಾಗುತ್ತದೆ. ಹಣ್ಣುಗಳನ್ನು ಯಾವುದಾದರೂ ಹಗ್ಗ ಅಥವಾ ಹ್ಯಾಂಗರ್ ಬಳಕೆ ಮಾಡುವ ಮೂಲಕ ನೇತು ಹಾಕಬಹುದು.
ಹಸಿರು ಬಾಳೆಹಣ್ಣುಗಳನ್ನು ಖರೀದಿಸಿ
ಸೂಪರ್ ಮಾರ್ಕೆರಟ್‌ನಲ್ಲಿದ್ದರೆ, ಹಸಿರು ಮತ್ತು ಹಳದಿ ಬಾಳೆಹಣ್ಣುಗಳಲ್ಲಿ ಯಾವುದನ್ನು ಬೇಕಾದರೂ ಖರೀದಿಸುವುದು ಎಂದು ಯೋಚಿಸುತ್ತೇವೆ. ಆಯ್ಕೆ ಮಾಡುವುದಾದರೆ ಹಸಿರು ಬಣ್ಣದ ಬಾಳೆಹಣ್ಣನ್ನೇ ಆಯ್ಕೆ ಮಾಡಿ, ಇದು ಒಂದೆರಡು ದಿನ ತಾಜಾವಾಗಿ ಇರುತ್ತದೆ. ಜೊತೆಗೆ ಇದರಿಂದ ವಿವಿಧ ರೀತಿಯ ತಿನಿಸುಗಳನ್ನು ಸಹ ಮಾಡಬಹುದು.
ಪ್ಲಾಸ್ಟಿಕ್ ಫಾಯಿಲ್‌ನಲ್ಲಿ ಕಾಂಡವನ್ನು ಕಟ್ಟಿಕೊಳ್ಳಿ
ಎಥಿಲೀನ್ ನೆನಪಿದೆಯೇ? ಕಾಂಡವು ನೀಡುವ ಅನಿಲ? ಮಾಗುವ ಪ್ರಕ್ರಿಯೆಯನ್ನು ವೇಗಗೊಳಿಸುವುದನ್ನು ತಡೆಯಲು ಒಂದು ಮಾರ್ಗವಿದೆ! ಕಾಂಡವನ್ನು ಕೆಲವು ಪ್ಲಾಸ್ಟಿಕ್ ಫಾಯಿಲ್ ಅಥವಾ ಟಿನ್ ಫಾಯಿಲ್‌ನಲ್ಲಿ ಸುತ್ತಿಡಿ.
ಮನೆಯಲ್ಲಿ ನಾಲ್ಕು -ಐದು ಬಾಳೆಹಣ್ಣುಗಳಿದ್ದರೆ, ಅವುಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ, ಅವುಗಳ ಬುಡವನ್ನು ಪ್ಲಾಸ್ಟಿಕ್ ನಿಂದ ಮುಚ್ಚಿ, ಇದು ಬಾಳೆಹಣ್ಣು ಕೆಲವು ದಿನಗಳವರೆಗೆ ಫ್ರೆಶ್ ಆಗಿಡಲು ಸಹಾಯ ಮಾಡುತ್ತದೆ.
ಮಾಗಿದ ಬಾಳೆಹಣ್ಣನ್ನು ನಿಮ್ಮ ಫ್ರಿಜ್ ನಲ್ಲಿಡಿ
ಏನು? ಫ್ರಿಜ್ನಲ್ಲಿ ಬಾಳೆಹಣ್ಣುಗಳು? ಇದನ್ನು ಮೊದಲು ನೋಡಿಲ್ಲ ಅಲ್ವಾ? ಅಥವಾ ಟೇಸ್ಟಿ ಹಳದಿ ಹಣ್ಣನ್ನು ಎಲ್ಲಿ ಇಡಬೇಕು ಎಂದು ನಿರ್ಧರಿಸಿಲ್ಲ. ಆದರೆ ಇದು ನಿಜ: ಮಾಗಿದ, ಹಳದಿ ಬಾಳೆಹಣ್ಣುಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಹಣ್ಣಿನ ಜೀವಿತಾವಧಿಯನ್ನು ವಿಸ್ತರಿಸಬಹುದು.
ಹಸಿರು ಬಾಳೆಹಣ್ಣುಗಳೊಂದಿಗೆ ಇದನ್ನು ಮಾಡುವುದು ಒಳ್ಳೆಯದಲ್ಲ. ಅಂದರೆ ಹಸಿರು ಬಾಳೆ ಹಣ್ಣನ್ನು ಫ್ರಿಜ್‌ನಲ್ಲಿಟ್ಟರೆ ಅದು ಹಾಗೇ ಉಳಿಯುತ್ತದೆ. ಅದರ ಬದಲಾಗಿ ಹಣ್ಣಾದ ಬಾಳೆಹಣ್ಣನ್ನು ಮಾತ್ರ ಫ್ರಿಜ್‌ನಲ್ಲಿ ಇಡಿ.
ಬಾಳೆಹಣ್ಣುಗಳನ್ನು ಫ್ರೀಜ್ ಮಾಡಿ
ಬಾಳೆಹಣ್ಣುಗಳನ್ನು ಉತ್ತಮವಾಗಿಡಲು ಮತ್ತೊಂದು ಮಾರ್ಗವೆಂದರೆ, ಅವುಗಳನ್ನು ಘನೀಕರಿಸುವ ಮೂಲಕ! ಅವು ಹಣ್ಣಾದಾಗ ಹಾಗೆ ಮಾಡುವುದು ಉತ್ತಮ ವಿಧಾನ. ಪೂರ್ಣ ಹಣ್ಣನ್ನು ಹಾಗೆ ಇಡಬೇಡಿ, ಕನಿಷ್ಠ ಅವುಗಳ ಸಿಪ್ಪೆ ತೆಗೆಯಿರಿ.
ಬಾಳೆಹಣ್ಣನ್ನು ಮೊದಲಿಗೆ ಕತ್ತರಿಸಿ ಫ್ರಿಜರ್ ನಲ್ಲಿಡಿ. ಫ್ರೋಜನ್ ಮಾಡಿದ ಹಣ್ಣನ್ನು ನಂತರ ಕುಕಿಂಗ್ ಮಾಡಲು ಬಯಸಿದರೆ ಇದು ತುಂಬಾ ಸುಲಭವಾಗುತ್ತದೆ! ಇದನ್ನು ಶೇಕ್ ಮಾಡಲು, ಸ್ವೀಟ್ ಮಾಡಲು, ಗಾರ್ನಿಶ್ ಮಾಡಲು ಬಳಸಬಹುದು.
ಬಾಳೆಹಣ್ಣು ಪೆಟ್ಟಿಗೆಯನ್ನು ಖರೀದಿಸಿ
ಕೆಲಸಕ್ಕೆ ಹೋಗುವಾಗ ಬಾಳೆಹಣ್ಣನ್ನು ತೆಗೆದುಕೊಳ್ಳುತ್ತಿದ್ದೀರಿ, ಆದರೆ ಕೆಲಸದ ಸ್ಥಳಕ್ಕೆ ಬರುವ ಹೊತ್ತಿಗೆ, ಎಲ್ಲವೂ ಕಂದು ಬಣ್ಣದ್ದಾಗಿರುತ್ತದೆ. ಈ ಸಮಯದಲ್ಲಿ ಬಾಳೆಹಣ್ಣು ಪೆಟ್ಟಿಗೆ ಸಹಾಯಕ್ಕೆ ಬರುತ್ತದೆ. ಹೌದು ಬಾಳೆಹಣ್ಣಿಗೆ ಹಾರ್ಡ್ ಕೇಸ್, ಇದು ಹಣ್ಣನ್ನು ತಾಜವಾಗಿಡಲು ಸಹಾಯ ಮಾಡುತ್ತದೆ.