ಗುಟ್ಕಾ, ಪಾನ್ ತಿಂದು ಹಲ್ಲಿನ ಬಣ್ಣ ಕೊಳಕಾಗಿದೆಯಾ? ಹಲ್ಲು ಫಳಫಳ ಹೊಳೆಯಲು ಮಾಡುವ ಟಿಪ್ಸ್
ಗುಟ್ಕಾ, ಪಾನ್ ಮಸಾಲಾದಿಂದ ಉಂಟಾದ ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಈ ಲೇಖನವು ಪರಿಣಾಮಕಾರಿ ಮನೆಮದ್ದನ್ನು ವಿವರಿಸುತ್ತದೆ. ಮೂರು ವಸ್ತು ಬಳಸಿ ತಯಾರಿಸಿದ ಮಿಶ್ರಣವನ್ನು ಏಳು ದಿನಗಳ ಕಾಲ ಬಳಸುವುದರಿಂದ ಹಲ್ಲುಗಳನ್ನು ಮತ್ತೆ ಫಳಫಳ ಹೊಳೆಯುವಂತೆ ಮಾಡಬಹುದು.

ಕೊಳಕು ಹಲ್ಲುಗಳಿಗೆ ಮುಕ್ತಿ
ಇಂದು ಗುಟ್ಕಾ, ಪಾನ್ ಮಸಾಲಾ ತಿನ್ನೋ ಜನರ ಸಂಖ್ಯೆ ಏರಿಕೆಯಾಗುತ್ತಿದೆ. ಗುಟ್ಕಾ-ಪಾನ್ ಮಸಾಲಾ ತಿನ್ನೋರ ಹಲ್ಲುಗಳನ್ನು ನೋಡಿದ್ರೆ ವಾಂತಿ ಬರುತ್ತದೆ. ಇಂತಹವರ ಸ್ಮೈಲ್‌ಗೆ ಫಿದಾ ಆಗೋ ಬದಲು ಮೂರ್ಛೆ ಹೋಗುವ ಸಾಧ್ಯತೆಗಳಿರುತ್ತವೆ. ಗುಟ್ಕಾ, ಪಾನ್ ತಿಂದು ನಿಮ್ಮ ಹಲ್ಲುಗಳ ಬಣ್ಣ ಕೊಳಕು ಆಗಿದೆಯಾ? ಹಾಗಿದ್ರೆ ಹಲ್ಲುಗಳು ಫಳ ಫಳ ಅಂತ ಹೊಳೆಯುವಂತೆ ಮಾಡುವ ಮನೆಮದ್ದು ಇಲ್ಲಿದೆ.
ಹಲ್ಲುಗಳು ಫಳಫಳ
ಮನೆಯಲ್ಲಿರುವ ಮೂರು ವಸ್ತುಗಳಿಂದ ಹಲ್ಲುಗಳು ಫಳಫಳ ಹೊಳಯುವಂತೆ ಮಾಡಬಹುದು. ಡೆಂಟಿಸ್ಟ್‌ಗಳು ಇದೇ ರೀತಿ ಹಲ್ಲು ಕ್ಲೀನ್ ಮಾಡಲು ಸಾವಿರಾರು ರೂಪಾಯಿ ಚಾರ್ಜ್ ಮಾಡುತ್ತಾರೆ. ಈ ಮನೆಮದ್ದು ಬಳಕೆ ಮಾಡೋದರಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ತುಂಬಾ ಕ್ಷೀಣ. ಇದಕ್ಕೆ ಕಾರಣ ಮನೆಮದ್ದು ತಯಾರಿಕೆಯಲ್ಲಿ ಬಳಕೆ ಮಾಡುವ ವಸ್ತುಗಳನ್ನು ನಾವು ಆಹಾರದಲ್ಲಿ ಬಳಕೆ ಮಾಡುತ್ತವೆ.
ಮೂರು ವಸ್ತುಗಳು
ಹಲ್ಲುಗಳನ್ನು ಫಳಫಳ ಮಾಡುವ ಮನೆಮದ್ದು ತಯಾರಿಸಲು ನಿಮಗೆ ಮೂರು ವಸ್ತುಗಳು ಬೇಕು. ನಿಂಬೆಹಣ್ಣು, ಅಡುಗೆಸೋಡಾ ಮತ್ತು ಸೈಂದಲವಣ (ಕೆಂಪು ಉಪ್ಪು). ಈ ಮೂರು ವಸ್ತುಗಳಿಂದ ಮನೆಮದ್ದು ತಯಾರಿಸಿಕೊಳ್ಳಬಹುದು.
ಮದ್ದು ತಯಾರಿಕೆ ಹೇಗೆ?
ಮೊದಲಿಗೆ ಸೈಂದ ಲವಣವನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ಒಂದು ಟೀ ಸ್ಪೂನ್‌ನಷ್ಟು ಸೈಂದ ಲವಣಕ್ಕೆ ಎರಡು ಟೀ ಸ್ಪೂನ್‌ನಷ್ಟು ನಿಂಬೆರಸ ಸೇರಿಸಿಕೊಳ್ಳಬೇಕು. ನಂತರಕ್ಕೆ ಇದಕ್ಕೆ ಅರ್ಧ ಟೀ ಸ್ಪೂನ್‌ನಷ್ಟು ಅಡುಗೆಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡ್ರೆ ನಿಮ್ಮ ಔಷಧ ರೆಡಿಯಾಗುತ್ತದೆ.
ಇದನ್ನೂ ಓದಿ: ಸುವಾಸನೆ ಜೊತೆ ಮನೆ – ಮನ ಫ್ರೆಶ್ ಆಗಿರ್ಬೇಕು ಅಂದ್ರೆ ಬಾಲ್ಕನಿಯಲ್ಲಿ ಈ ಗಿಡ ಬೆಳೆಸಿ
ಹೇಗೆ ಬಳಕೆ?
ಈ ಮಿಶ್ರಣವನ್ನು ಬೆರಳಲ್ಲಿ ತೆಗೆದುಕೊಂಡು ನಿಧಾನವಾಗಿ ನಿಮ್ಮ ಕೊಳಕು ಹಲ್ಲುಗಳ ಲೇಪಿಸಿಕೊಳ್ಳಿ. 5 ರಿಂದ 10 ನಿಮಿಷ ಹಲ್ಲುಗಳ ಮೇಲೆ ಮೃದುವಾಗಿ ಈ ಮಿಶ್ರಣದಿಂದ ಮಸಾಜ್ ರೀತಿ ಮಾಡಿ. ಇದೇ ರೀತಿಯಾಗಿ ಏಳು ದಿನಗಳವರೆಗೆ ಮಾಡಬೇಕು. ಇದರಿಂದ ಹಲ್ಲುಗಳ ಮೇಲೆ ಅಂಟಿಕೊಂಡಿರುವ ಹಳದಿ ಕಲೆಗಳು ಮಾಯವಾಗುತ್ತವೆ. ಈ ಮಿಶ್ರಣವನ್ನು ಬೇಕಿದ್ದಾಗಲೇ ಮಾತ್ರ ಮಾಡಿಕೊಳ್ಳಿ. ಸ್ಟೋರ್ ಮಾಡಿಕೊಳ್ಳೋದರಿಂದ ಇದರಲ್ಲಿನ ರಾಸಾಯನಿಕ ಗುಣಗಳು ಕಡಿಮೆಯಾಗುತ್ತವೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: ಮೆಹಂದಿ ಸೊಪ್ಪಿಲ್ದೆ ಮನೆಯಲ್ಲೇ ಮೆಹಂದಿ ತಯಾರಿಸೋದು ಹೇಗೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

