Gut Health: ಕರುಳಿನ ಆರೋಗ್ಯ ಹಾಳುಮಾಡುತ್ತವೆ ಈ 7 ಡೇಂಜರಸ್ ಫುಡ್ಸ್, ಹುಶಾರ್ ಆಗಿರಿ!
ನಾವು ಪ್ರತಿದಿನ ತಿನ್ನುವ ಆಹಾರವೇ ನಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಕರುಳಿನ ಆರೋಗ್ಯ ಕೆಡಿಸುವ 7 ಪ್ರಮುಖ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಆಹಾರಗಳನ್ನು ಆದಷ್ಟೂ ಅವೈಡ್ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ!

ಕರುಳಿನ ಆರೋಗ್ಯ ಕೆಡಿಸುವ 7 ಪ್ರಮುಖ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ
ನಾವು ಪ್ರತಿದಿನ ತಿನ್ನುವ ಆಹಾರವೇ ನಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಕರುಳಿನ ಆರೋಗ್ಯ ಕೆಡಿಸುವ 7 ಪ್ರಮುಖ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಆಹಾರಗಳನ್ನು ಬೇಕಾಬಿಟ್ಟಿ ತಿಂದು ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ!
ಚಿಪ್ಸ್ ಹಾಗೂ ಫಾಸ್ಟ್ ಫುಡ್ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ
ಪ್ಯಾಕೆಟ್ ಚಿಪ್ಸ್, ಸ್ನ್ಯಾಕ್ಸ್ ಹಾಗೂ ಫಾಸ್ಟ್ ಫುಡ್ಗಳಲ್ಲಿ ಉಪ್ಪು ಮತ್ತು ಪ್ರಿಸರ್ವೇಟಿವ್ಸ್ ಅತಿಯಾಗಿರುತ್ತದೆ. ಇವು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ.
ಬೋಬಾ ಟೀ ಅತಿಯಾಗಿ ಕುಡಿದರೆ ಆರೋಗ್ಯಕ್ಕೆ ದೊಡ್ಡ ಕುತ್ತು
ಬೋಬಾ ಟೀಯಲ್ಲಿ ಸಕ್ಕರೆ, ಕ್ಯಾಲೋರಿ ಹಾಗೂ ಪಿಷ್ಟದ ಅಂಶ ಹೆಚ್ಚಿರುತ್ತದೆ. ಇದನ್ನು ಅತಿಯಾಗಿ ಕುಡಿದರೆ ಆರೋಗ್ಯಕ್ಕೆ ದೊಡ್ಡ ಕುತ್ತು. ಜೀರ್ಣಕ್ರಿಯೆ ಸಮಸ್ಯೆ (ಹೊಟ್ಟೆ ಉಬ್ಬರ), ತೂಕ ಹೆಚ್ಚಳ ಹಾಗೂ ಟೈಪ್ 2 ಮಧುಮೇಹದಂತಹ ಅಡ್ಡಪರಿಣಾಮಗಳು ಎದುರಾಗುತ್ತವೆ.
ಎನರ್ಜಿ ಡ್ರಿಂಕ್ಸ್ ಕುಡಿದರೆ ಕರುಳಿನ ಸಮಸ್ಯೆಗಳು ಗ್ಯಾರಂಟಿ
ಕಠಿಣ ವ್ಯಾಯಾಮ ಮಾಡುವಾಗ ಕ್ರೀಡಾಪಟುಗಳಿಗೆ ಎನರ್ಜಿ ಡ್ರಿಂಕ್ಸ್ ಸಹಾಯ ಮಾಡಬಹುದು. ಆದರೆ ಇದರಲ್ಲಿರುವ ಅತಿಯಾದ ಕೆಫೀನ್ ಹಾಗೂ ಸಕ್ಕರೆ ಅಂಶ ಕರುಳಿನ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದನ್ನು ಅತಿಯಾಗಿ ಕುಡಿದರೆ ಹೃದಯದ ಸಮಸ್ಯೆ ಹಾಗೂ ನರಮಂಡಲದ ತೊಂದರೆಗಳು ಬರಬಹುದು.
ಎಣ್ಣೆಯಲ್ಲಿ ಕರಿದ ಆಹಾರಗಳು ಕರುಳಿನಲ್ಲಿ ಊತ ಉಂಟುಮಾಡುತ್ತವೆ
ಎಣ್ಣೆಯಲ್ಲಿ ಕರಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಕೆಟ್ಟ ಎಣ್ಣೆಯಲ್ಲಿ ಕರಿದ ಆಹಾರಗಳು ಬೇಗ ಜೀರ್ಣವಾಗುವುದಿಲ್ಲ. ಇವು ಕರುಳಿನಲ್ಲಿ ಊತ (ಇನ್ಫ್ಲಮೇಷನ್) ಉಂಟುಮಾಡುತ್ತವೆ.
ಪ್ಯಾಕೆಟ್ ಮಿಲ್ಕ್ ಶೇಕ್ಗಳಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಅಂಶ ಹೆಚ್ಚಿರುತ್ತದೆ
ರೆಡಿಮೇಡ್ ಪ್ಯಾಕೆಟ್ ಮಿಲ್ಕ್ ಶೇಕ್ಗಳಲ್ಲಿ ಸಕ್ಕರೆ, ಕ್ಯಾಲೋರಿ ಹಾಗೂ ಕೆಟ್ಟ ಕೊಬ್ಬಿನಂಶ ತುಂಬಿರುತ್ತದೆ. ಇದರಲ್ಲಿ ಪೌಷ್ಟಿಕಾಂಶಗಳು ತೀರಾ ಕಡಿಮೆ. ಇವುಗಳನ್ನು ಕುಡಿದರೆ ತೂಕ ಹೆಚ್ಚಾಗುವುದರ ಜೊತೆಗೆ ಕರುಳಿನ ಆರೋಗ್ಯವೂ ಕೆಡುತ್ತದೆ.
ಪ್ರೋಟೀನ್ ಬಾರ್ಗಳಲ್ಲಿರುವ ಸಕ್ಕರೆ ಹಾಗೂ ಪ್ರಿಸರ್ವೇಟಿವ್ಸ್ ಕರುಳಿಗೆ ಡೇಂಜರ್
ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ರೋಟೀನ್ ಬಾರ್ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಹುತೇಕ ಬಾರ್ಗಳಲ್ಲಿ ಸಕ್ಕರೆ, ಕೃತಕ ಸಿಹಿ ಹಾಗೂ ಪ್ರಿಸರ್ವೇಟಿವ್ಸ್ ಸೇರಿಸಿರುತ್ತಾರೆ. ಇವು ನಮ್ಮ ಕರುಳಿನ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ.
ಕ್ರೀಮ್ ಕೇಕ್ ತಿಂದರೆ ಬೊಜ್ಜು ಜೊತೆಗೆ ಕರುಳಿಗೂ ಕುತ್ತು
ಬಗೆಬಗೆಯ ಕ್ರೀಮ್ ಕೇಕ್ ಗಳು ತಿನ್ನಲು ಸಖತ್ ಟೇಸ್ಟಿ. ಆದರೆ ಇವು ಬೊಜ್ಜು ಹೆಚ್ಚಿಸುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಡ್ಯಾಮೇಜ್ ಮಾಡುತ್ತವೆ. ಇದರಲ್ಲಿ ಫೈಬರ್ ಅಥವಾ ಪ್ರೋಟೀನ್ ಇರುವುದಿಲ್ಲ. ಬದಲಾಗಿ ರಕ್ತದಲ್ಲಿ ಸಕ್ಕರೆ ಅಂಶವನ್ನು ದಿಢೀರ್ ಅಂತ ಹೆಚ್ಚಿಸುತ್ತವೆ.
ಕರುಳಿನ ಆರೋಗ್ಯ ಹಾಳುಮಾಡುವ 7 ಡೇಂಜರಸ್ ಫುಡ್ಸ್
ನಾವು ಪ್ರತಿದಿನ ತಿನ್ನುವ ಆಹಾರವೇ ನಮ್ಮ ಕರುಳಿನ ಆರೋಗ್ಯವನ್ನು ನಿರ್ಧರಿಸುತ್ತದೆ. ಊಟದಲ್ಲಿ ಹಣ್ಣು, ತರಕಾರಿ ಹಾಗೂ ಫೈಬರ್ ಅಂಶ ಹೆಚ್ಚಾಗಿರಬೇಕು. ಇದರ ಜೊತೆಗೆ ಅಲ್ಟ್ರಾ-ಪ್ರೊಸೆಸ್ಡ್ (ಅತಿಯಾಗಿ ಸಂಸ್ಕರಿಸಿದ) ಆಹಾರಗಳನ್ನು ಕಡಿಮೆ ಮಾಡಿದರೆ ಕರುಳಿನ ಆರೋಗ್ಯ ಸೂಪರ್ ಆಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಕಡಿಮೆಯಾದರೆ ಗ್ಯಾಸ್ಟ್ರಿಕ್ ಗ್ಯಾರಂಟಿ
ಪ್ಯಾಕೆಟ್ ಫುಡ್ಸ್ ತಿನ್ನಲು ಈಸಿ ಅನ್ನಿಸಬಹುದು. ಆದರೆ ಇದರಲ್ಲಿರುವ ಸಕ್ಕರೆ, ಸೋಡಿಯಂ, ಕೆಟ್ಟ ಕೊಬ್ಬು ಹಾಗೂ ಕೃತಕ ಬಣ್ಣಗಳು ನಮ್ಮ ಕರುಳಿನ ಆರೋಗ್ಯವನ್ನು ಹಾಳುಮಾಡುತ್ತವೆ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬ್ಯಾಲೆನ್ಸ್ ತಪ್ಪಿದರೆ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕರುಳಿನ ಆರೋಗ್ಯ ಕೆಡಿಸುವ ಆ 7 ಆಹಾರಗಳು ಯಾವುವು ಅಂತ ಇಲ್ಲಿ ನೋಡೋಣ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

