ಸೆಕ್ಸ್ ಅತಿಯಾದ್ರೆ ಹಾರ್ಟ್ ಎಟ್ಯಾಕ್..! ಯಾಕೆ ಹೀಗಾಗುತ್ತೆ ?
ಹೃದಯದ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಕೇವಲ ಧೂಮಪಾನ (smoking)ಮತ್ತು ಮದ್ಯಪಾನ (alcohol) ಮಾಡೋದರಿಂದ ಮಾತ್ರ ಹೃದಯಕ್ಕೆ ತೊಂದರೆ ಉಂಟಾಗುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕೆಂದರೆ ನೀವು ಪ್ರತಿದಿನ ಮಾಡುವ ಕೆಲವೊಂದು ವಿಷಯಗಳು ಅಥವಾ ತಪ್ಪುಗಳಿಂದಲೂ ಹೃದಯಾಘಾತ ಅಪಾಯ ಹೆಚ್ಚುತ್ತದೆ. ಆ ಕಾರಣಗಳ ಬಗ್ಗೆ ತಿಳಿಯೋಣ...
ನಿದ್ರೆಯ ಕೊರತೆ (Less sleep): ದಿನವಿಡೀ ಕೆಲಸ ಮಾಡಿ ಆಯಾಸದ ನಂತರ ಪ್ರತಿದಿನ ನಿಮಗೆ ಸಾಕಷ್ಟು ನಿದ್ರೆ ದೊರೆಯುತ್ತಿಲ್ಲದಿದ್ದರೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದು. ಒಂದು ಅಧ್ಯಯನದ ಪ್ರಕಾರ, 6-8 ಗಂಟೆಗಳ ಕಾಲ ಮಲಗುವವರಿಗೆ ಹೋಲಿಸಿದರೆ, ರಾತ್ರಿಯಲ್ಲಿ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರಿಗೆ ಹೃದಯಾಘಾತದ ಅಪಾಯ ಎರಡು ಪಟ್ಟು ಹೆಚ್ಚಾಗುತ್ತದೆ.. ಕಡಿಮೆ ನಿದ್ರೆ ಮಾಡುವುದು ರಕ್ತದೊತ್ತಡ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ.
ಮೈಗ್ರೇನ್ (Migraine) :ಮೈಗ್ರೇನ್ ಸಮಸ್ಯೆಯಿಂದ ಪಾರ್ಶ್ವವಾಯು, ಎದೆ ನೋವು ಮತ್ತು ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಯಾರಿಗಾದರೂ ಹೃದ್ರೋಗ ಮತ್ತು ಮೈಗ್ರೇನ್ ಸಮಸ್ಯೆ ಎರಡೂ ಇದ್ದರೆ, ಅವರು ರಕ್ತನಾಳಗಳ ಸಂಕುಚಿತಗೊಳ್ಳುವುದರಿಂದ ಮೈಗ್ರೇನ್ ಔಷಧವಾದ ಟ್ರಿಪ್ಟನ್ ಅನ್ನು ತೆಗೆದುಕೊಳ್ಳಬಾರದು. ಅದನ್ನು ಸೇವಿಸುವುದೇ ಆದರೆ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.
ಕೋಲ್ಡ್ ವೆದರ್ (cold weather): ಶೀತ ಹವಾಮಾನವಿರುವುದರಿಂದ ಅಪಧಮನಿಗಳು ತೆಳ್ಳಗಾಗುತ್ತವೆ ಮತ್ತು ಇದು ನಾಳಗಳಿಂದ ಹೃದಯಕ್ಕೆ ರಕ್ತ ಪೂರೈಕೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಇಂತಹ ಋತುವಿನಲ್ಲಿ ಹೃದಯದ ಸ್ನಾಯುಗಳನ್ನು ಬೆಚ್ಚಗಿಡಲು ದೈಹಿಕ ಚಟುವಟಿಕೆಯನ್ನುತಪ್ಪದೆ ಮಾಡಬೇಕು.
ಅತಿಯಾದ ಆಹಾರ ಸೇವನೆ (Over eating) : ಒಂದು ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತಿನ್ನುವುದು ದೇಹದಲ್ಲಿ ಒತ್ತಡದ ಹಾರ್ಮೋನ್ ನೋರಾಪಿನೆಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುವ ಮೂಲಕ ಹೃದಯಾಘಾತವನ್ನು ಪ್ರಚೋದಿಸುತ್ತದೆ. ಎರಡನೆಯದಾಗಿ, ಹೆಚ್ಚು ಕೊಬ್ಬಿನ ಆಹಾರವನ್ನು ತಿನ್ನುವುದು ಇದ್ದಕ್ಕಿದ್ದಂತೆ ರಕ್ತದಲ್ಲಿನ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ರಕ್ತನಾಳಗಳನ್ನು ಹಾನಿಗೊಳಿಸಬಹುದು.
ಕೋಪ, ಒತ್ತಡ ಇತ್ಯಾದಿ (Strong feeling) : ಕೋಪ, ದುಃಖ ಮತ್ತು ಒತ್ತಡದಂತಹ ಭಾವನೆಗಳು ಹೃದಯದ ಸಮಸ್ಯೆಗಳನ್ನು ಪ್ರಚೋದಿಸುತ್ತವೆ ಎಂದು ತಿಳಿದುಬಂದಿದೆ. ಅತಿಯಾದ ಸಂತೋಷವು ಆಗಾಗ್ಗೆ ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಯಾವುದೇ ಭಾವನೆಗಳನ್ನು ಹೆಚ್ಚಾಗೆ ಮನಸ್ಸಿಗೆ ಹಚ್ಚಿಕೊಳ್ಳಲು ಹೋಗಬೇಡಿ. ಅದನ್ನು ಸಾಮಾನ್ಯ ವಿಷಯದಂತೆ ಸ್ವೀಕರಿಸಲು ಕಲಿಯಿರಿ.
ಶೀತ ಜ್ವರ (Cold and fever) : ಅಧ್ಯಯನದ ಪ್ರಕಾರ, ಜ್ವರದ ಒಂದು ವಾರದ ನಂತರ ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಆರು ಪಟ್ಟು ಹೆಚ್ಚು. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲ, ಆದರೆ ತಜ್ಞರು ಸೋಂಕಿನ ವಿರುದ್ಧ ಹೋರಾಡುವಾಗ ರಕ್ತವು ಅಂಟುತ್ತದೆ ಮತ್ತು ಅದು ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.
ವ್ಯಾಯಾಮ (exercise ) : ಪ್ರತಿದಿನ ವ್ಯಾಯಾಮ ಮಾಡುವುದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚು ವ್ಯಾಯಾಮ ಮಾಡುವುದರಿಂದ ಹೃದಯಾಘಾತಕ್ಕೂ ಕಾರಣವಾಗಬಹುದು. ತಜ್ಞರು ಹೇಳುವಂತೆ ಸುಮಾರು 6 ಪ್ರತಿಶತ ದಷ್ಟು ಹೃದಯಾಘಾತಗಳು ವಿಪರೀತ ಮಟ್ಟದ ದೈಹಿಕ ಪ್ರಯತ್ನಗಳಿಂದ ಉಂಟಾಗುತ್ತವೆ. ಆದುದರಿಂದ ಅತಿ ಹೆಚ್ಚು ಜಿಮ್ ಮಾಡೋದು ತಪ್ಪಿಸಿ.
ಲೈಂಗಿಕ ಕ್ರಿಯೆ (Sex): ಲೈಂಗಿಕ ಚಟುವಟಿಕೆ, ವ್ಯಾಯಾಮದಂತೆ, ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚಿನ ಜನರಿಗೆ ಲೈಂಗಿಕತೆಯು ಮುಖ್ಯ ಮತ್ತು ಆರೋಗ್ಯಕರವಾಗಿರಬೇಕು. ಇದು ಜೀವನದ ಭಾಗವಾಗಿದೆ. ಆದರೆ ನಿಮಗೆ ಹೃದಯದ ಸಮಸ್ಯೆ ಇದ್ದರೆ, ವೈದ್ಯರೊಂದಿಗೆ ಒಮ್ಮೆ ಮಾತನಾಡಬೇಕು. ಅತಿಯಾದ ಲೈಂಗಿಕ ಕ್ರಿಯೆ ಹೃದಾಯಾಘಾತಕ್ಕೆ ಕಾರಣವಾಗಬಹುದು.
ಅತಿಯಾದ ಕಾಫಿ ಸೇವನೆ (Drink more coffee): ಕಾಫಿ, ಆಲ್ಕೋಹಾಲ್ ನಂತೆ, ಅದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಇದರಲ್ಲಿ ಇರುವ ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಕುಡಿಯುವ ಜನರಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರು ಹೇಳುತ್ತಾರೆ.
ಬೆಳಿಗ್ಗೆ ಹಾಸಿಗೆಯಿಂದ ಏಳುವುದು (wake up in morning): ಒಬ್ಬ ವ್ಯಕ್ತಿಗೆ ಬೆಳಿಗ್ಗೆ ಹೃದಯಾಘಾತವಾಗುವುದು ತುಂಬಾ ಸಾಮಾನ್ಯ. ವಾಸ್ತವವಾಗಿ, ಮೆದುಳು ದೇಹದಲ್ಲಿ ಹಾರ್ಮೋನುಗಳನ್ನು ತುಂಬುತ್ತದೆ, ಅದು ನಮಗೆ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಮೇಲಿನ ಹೆಚ್ಚುವರಿ ಒತ್ತಡ ಹೆಚ್ಚಾಗುತ್ತದೆ. ದೀರ್ಘ ನಿದ್ರೆಯ ನಂತರ ನಿರ್ಜಲೀಕರಣಕ್ಕೆ ಒಳಗಾಗಿರಬಹುದು, ಇದು ಹೃದಯವನ್ನು ಹೆಚ್ಚು ಶ್ರಮಿಸುವಂತೆ ಮಾಡಬಹುದು.