ಸ್ಟ್ರೆಸ್ ಮುಕ್ತವಾಗಿಸೋ ಹಸಿರು, ಈ ಸಸ್ಯಗಳು ಇರಲಿ ನಿಮ್ಮನೆ ಸುತ್ತು ಮುತ್ತ!
ಉತ್ತರ ಭಾರತದಲ್ಲಿ ಜನರು ಈ ತಿಂಗಳನ್ನು ಶ್ರಾವಣ ಎಂದು ಕರೆಯುತ್ತಾರೆ. ಸಾವನ್ ಎಂದು ಕರೆಯುವ ಈ ಮಾಸವು ಅವರಿಗೆ ತುಂಬಾ ಪವಿತ್ರ. ಈ ತಿಂಗಳಲ್ಲಿ ದೇವರ ಧ್ಯಾನ ಮಾಡುತ್ತಾ, ಶುಭ ಕಾರ್ಯಗಳನ್ನು ಅವರು ಮಾಡುತ್ತಾರೆ. ಆದರೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ಈ ತಿಂಗಳನ್ನು ಆಷಾಢ ಅಥವಾ ಆಟಿ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಏನೇ ಮಾಡುವುದು ಶುಭವಲ್ಲ ಎನ್ನುವ ನಂಬಿಕೆ. ಇನ್ನು ಉತ್ತರ ಭಾರತದ ಸಾವನ್ ಪ್ರಕಾರ ಈ ತಿಂಗಳು ಕೆಲವೊಂದು ಗಿಡ ನೆಡಬೇಕು ಎನ್ನಲಾಗುತ್ತದೆ.

ಈ ಶ್ರಾವಣ ಶಿವನ ಭಕ್ತಿಯ ದೃಷ್ಟಿಯಿಂದ ಬಹಳ ವಿಶೇಷವಾಗಿರುವುದಲ್ಲದೆ, ಹೊಸ ಜೀವನದ ಆರಂಭದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಗಿಡಗಳನ್ನು ನೆಡುವ ಮೂಲಕ ಪುಣ್ಯ ಪಡೆಯಬಹುದು. ಪರಿಸರಕ್ಕೂ ಪ್ರಯೋಜನವಾಗುತ್ತದೆ. ಈ ತಿಂಗಳಲ್ಲಿ ಯಾವ ಸಸ್ಯಗಳನ್ನು ನೆಟ್ಟರೆ ಒಳಿತು?

ತುಳಸಿ ಗಿಡ: ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಬಹಳ ಮುಖ್ಯ ಮತ್ತು ಶುಭ . ಈ ಧರ್ಮದ ಹೆಚ್ಚಿನ ಅನುಯಾಯಿಗಳು ತಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ಹೊಂದಿರುತ್ತಾರೆ.
ಮನೆಯಲ್ಲಿ ಗಿಡ ಇಲ್ಲದಿದ್ದರೆ ಅಥವಾ ಇನ್ನೊಂದು ಗಿಡವನ್ನು ನೆಡಲು ಬಯಸಿದರೆ, ಶ್ರಾವಣ ತಿಂಗಳು ಇದಕ್ಕೆ ಅತ್ಯಂತ ಶುಭ ಮಾಸ. ಈ ಗಿಡದ ಕೆಳಗೆ ಪ್ರತಿದಿನ ದೀಪಗಳನ್ನು ಹಚ್ಚುವುದರಿಂದ ಮನೆಗೆ ಸುಖ ಸಮೃದ್ಧಿಯುಂಟಾಗುವುದರೊಂದಿಗೆ ಸಂಸಾರವೂ ಚೆನ್ನಾಗಿರುತ್ತದೆ.
ದಾಳಿಂಬೆ ಗಿಡ: ಶ್ರಾವಣ ತಿಂಗಳಲ್ಲಿ ದಾಳಿಂಬೆ ಗಿಡ ನೆಡುವುದು ಕೂಡ ತುಂಬಾ ಶುಭ, ಮನೆ ಮುಂದೆ ನೆಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಬಾಳೆ ಗಿಡ: ಶ್ರಾವಣ ಮಾಸದ ಏಕಾದಶಿ ಅಥವಾ ಗುರುವಾರ ಬಾಳೆ ಗಿಡ ನೆಡಬಹುದು. ವಾಸ್ತವವಾಗಿ ಮನೆಯಲ್ಲಿ ಬಾಳೆ ಮರ ನೆಡುವುದು ಒಳ್ಳೆಯದಲ್ಲ, ಆದರೆ ಅದನ್ನು ಮನೆಯ ಹಿಂದೆ ಅಥವಾ ಛಾವಣಿಯ ಹಿಂದೆ ನೆಡುವುದು ಹಾನಿಕಾರಕವಲ್ಲ.
ಬಾಳೆ ಗಿಡ ನೆಟ್ಟ ನಂತರ, ಪ್ರತಿದಿನ ನೀರನ್ನು ಅರ್ಪಿಸಿ, ಇದು ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಾಗೆಯೇ ಜಾತಕದಲ್ಲಿ ಗುರು ಗ್ರಹವು ಪ್ರಬಲವಾಗಿರುತ್ತದೆ.
ಹತ್ತಿ ಮರ : ಗೂಲರ್ ಅಥವಾ ಹತ್ತಿ ಸಸ್ಯವನ್ನು ಜ್ಯೋತಿಷ್ಯದಲ್ಲಿ ಪವಾಡಸದೃಶ ಸಸ್ಯ ಎಂದು ವಿವರಿಸಲಾಗಿದೆ. ಶ್ರಾವಣ ತಿಂಗಳಲ್ಲಿ ಗೂಲರ್ ಸಸ್ಯವನ್ನು ನೆಡುವುದು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.
ಶಮಿ ಗಿಡ: ಶ್ರಾವಣ ಮಾಸದ ಶನಿವಾರ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಶಮಿ ಯನ್ನು ನೆಡಿ. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಮತ್ತು ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಅಶ್ವತ್ಥ ಗಿಡ: ಶ್ರಾವಣ ಮಾಸದ ಗುರುವಾರ ಒಂದು ಆಲದ ಗಿಡವನ್ನು ನೆಡುವುದರಿಂದ ಮನೆಗೆ ಸಂತೋಷವುಂಟಾಗಲಿದೆ. ಆದರೆ ಈ ಗಿಡವನ್ನು ಮನೆಯಲ್ಲಿ ತಪ್ಪಿಯೂ ನೆಡಬೇಡಿ, ಆದರೆ ಉದ್ಯಾನವನದಲ್ಲಿ, ದೇವಾಲಯದ ಬಳಿ, ರಸ್ತೆ ಬದಿಯಲ್ಲಿ ನೆಡಿರ.