Please..ಯಾವುದೇ ಕಾರಣಕ್ಕೂ ಮೂಲಂಗಿ ತಿಂದು ಚಹಾ ಕುಡಿಯಬೇಡಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...
ಯಾಕೆ ಮೂಲಂಗಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು? ಈ ತಪ್ಪುಗಳನ್ನು ಮಾಡಬೇಡಿ ನಿಮಗೆ ಸಮಸ್ಯೆ ಆಗೋದು ಗ್ಯಾರಂಟಿ.

ಪ್ರತಿಯೊಂದು ತರಕಾರಿ ಅದರದ್ದೆ ಪ್ರಾಮುಖ್ಯತೆ ಹೊಂದಿರುತ್ತದೆ. ಮಳೆಗಾಲದಲ್ಲಿ ಯಾವುದು ಸೇವಿಸಬೇಕು? ಚಳಿಗಾಲದಲ್ಲಿ ಯಾವುದು ಬೆಸ್ಟ್ ಹಾಗೂ ಸೀಸನ್ ಲೆಕ್ಕವಿದ್ದ ಸೇವಿಸಬಹುದಾದದ್ದು ಯಾವುದು ಅಂತ. ಲಿಸ್ಟ್‌ಗೆ ಸೇರಿದ್ದು ಮೂಲಂಗಿ.
ಹೌದು! ಮೂಲಂಗಿಯನ್ನು ಹೆಚ್ಚಾಗಿ ಮಳೆಗಾಲದಲ್ಲಿ ಸೇವಿಸುತ್ತಾರೆ. ಪ್ರಮುಖ ಕಾರಣ ಏನೆಂದರೆ ದೇಹವನ್ನು ಬೆಚ್ಚಗಿಡಲು ಉತ್ತಮವೆಂದು. ಆದರೆ ಇದನ್ನು ಸೇವಿಸುವಾಗಿ ಬೇರೆಯದನ್ನು ಮಿಸ್ಕ್ ಮಾಡಿ ಸೇವಿಸಬಾರದು.
ಹಸಿ ಮೂಲಂಗಿ ಅಥವಾ ಮೂಲಂಗಿ ಸಾರು ಊಟ ಮಾಡಿದ ನಂತರ ಚಹಾ ಕುಡಿಯಬಾರದು.ಏಕೆಂದರೆ ಮೂಲಂಗಿ ನಿಮ್ಮ ದೇಹವನ್ನು ತಣ್ಣಗಿರುತ್ತದೆ ಆದರೆ ಚಹಾ ನಿಮ್ಮ ದೇಹವನ್ನು ಬಿಸಿಯಾಗಿಸುತ್ತದೆ. ಎರಡೂ ವಿರುದ್ಧವಾಗಿರುವ ನಿಮ್ಮ ಸಮಸ್ಯೆ ಆಗಬಹುದು ಎಂದು ಬೇಡ ಎನ್ನುತ್ತಾರೆ.
ಇನ್ನೂ ಮೂಲಂಗಿ ಮತ್ತು ಸೌತೆಕಾಯಿ ಒಟ್ಟಿಗೆ ಸೇವಿಸಬಾರದು ಎಂದು ನಾವು ಪುಟ್ಟಮಕ್ಕಳು ಆಗಿದ್ದಾಗಿನಿಂದ ಕೇಳಿರುತ್ತೀವಿ. ಏಕೆಂದರೆ ಸೌತೆಕಾಯಿಯಲ್ಲಿ ಇರುವ ಆಸ್ಕೋರ್ಬೇಟ್ ಅಂಶ ವಿಟಮಿನ್ ಸಿ ಯನ್ನು ಹೀರಿಕೊಳ್ಳುತ್ತದೆ.
ಮೂಲಂಗಿಯನ್ನು ಸಲಾಡ್ ಮಾಡಲು ಬಳಸುತ್ತಾರೆ. ಬಳಸಿ ಬೇಡ ಅನ್ನಲ್ಲ ಆದರೆ ಪನೀರ್ ಜೊತೆ ಸೇರಿಸಬಾರದು. ಈ ಎರಡನ್ನು ಒಟ್ಟಿಗೆ ಸೇವಿಸಿದರೆ ನಿಮ್ಮ ಚರ್ಮದ ಸಮಸ್ಯೆ ಹೆಚ್ಚಿಸುತ್ತದೆ.
ಮಕ್ಕಳಿ ಊಟ ಆದ್ಮೇಲೆ ಹಾಲು ಕುಡಿಯುವ ಅಭ್ಯಾಸ ಮಾಡಿಸಿರುತ್ತಾರೆ. ಇದು ಒಳ್ಳೆಯದು ಆದರೆ ಮೂಲಂಗಿ ತಿಂದ ಮೇಲೆ ಕುಡಿಯಬೇಡಿ. ಈ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಚರ್ಮಸ ಸಮಸ್ಯೆಗಳನ್ನು ಸರಿ ಮಾಡಲು ಬೇಗ ಆಗುವುದಿಲ್ಲ ಎನ್ನುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.