- Home
- Life
- Food
- ಹಾಟ್ ಬಾಕ್ಸ್‌ನಲ್ಲಿಟ್ಟ ಕೆಳಗಿನ ಚಪಾತಿ, ರೊಟ್ಟಿ ಒದ್ದೆಯಾಗಿ ಮುದ್ದೆಯಂತೆ ಆಗ್ತಿದ್ಯಾ? ಇಲ್ಲಿದೆ ಬಟ್ಟಲಿನ ಟ್ರಿಕ್
ಹಾಟ್ ಬಾಕ್ಸ್‌ನಲ್ಲಿಟ್ಟ ಕೆಳಗಿನ ಚಪಾತಿ, ರೊಟ್ಟಿ ಒದ್ದೆಯಾಗಿ ಮುದ್ದೆಯಂತೆ ಆಗ್ತಿದ್ಯಾ? ಇಲ್ಲಿದೆ ಬಟ್ಟಲಿನ ಟ್ರಿಕ್
Hot box roti hacks: ಬಿಸಿಬಿಸಿ ಚಪಾತಿ ಅಥವಾ ರೊಟ್ಟಿ ಹಾಟ್ ಬಾಕ್ಸ್‌ನಲ್ಲಿ ಇಟ್ಟಾಗ ತಳದಲ್ಲಿರುವ ಕೊನೆಯ ರೊಟ್ಟಿ ಹಬೆಯ ನೀರಿನಿಂದ ನೆನೆದು ಹಿಟ್ಟಿನಂತೆ ಮೆತ್ತಗಾಗಿ ಹಾಳಾಗುತ್ತಿದೆಯೇ? ಹಾಗಾದರೆ ಪ್ರತಿದಿನ ರೊಟ್ಟಿ ವ್ಯರ್ಥವಾಗುವುದನ್ನು ತಪ್ಪಿಸಲು, ಕೇವಲ ಒಂದು ಸಣ್ಣ ಬಟ್ಟಲನ್ನು ಬಳಸಿ ನೋಡಿ.
ಚಪಾತಿ, ರೊಟ್ಟಿ ನೀರು ನೀರಾಗಿ ಹಾಳಾಗುತ್ತಿದೆಯೇ?
ಚಪಾತಿ, ರೊಟ್ಟಿ ನೀರು ನೀರಾಗಿ ಹಾಳಾಗುತ್ತಿದೆಯೇ?
ಬಿಸಿಬಿಸಿ ಚಪಾತಿ, ರೊಟ್ಟಿಯನ್ನು ಕ್ಯಾಸರೋಲ್ ಅಥವಾ ಹಾಟ್‌ಬಾಕ್ಸ್‌ನಲ್ಲಿ ಇಟ್ಟಾಗ ತಳದಲ್ಲಿರುವ ಕೊನೆಯ ಚಪಾತಿ ಅಥವಾ ರೊಟ್ಟಿ ಹಬೆಯ ನೀರಿನಿಂದ ನೆನೆದು ಹಿಟ್ಟಿನಂತೆ ಮೆತ್ತಗಾಗಿ ತಿನ್ನಲು ಬರುವುದಿಲ್ಲ. ಇದರಿಂದ ಪ್ರತಿದಿನ ಕನಿಷ್ಠ ಒಂದೆರಡು ಚಪಾತಿ, ರೊಟ್ಟಿಗಳು ವ್ಯರ್ಥವಾಗಿ ಕಸದಬುಟ್ಟಿಗೆ ಸೇರುತ್ತವೆ.
ಒದ್ದೆಯಾಗಲು ಅಸಲಿ ಕಾರಣವೇನು?
ಒದ್ದೆಯಾಗಲು ಅಸಲಿ ಕಾರಣವೇನು?
ಬಿಸಿ ರೊಟ್ಟಿ ಅಥವಾ ಚಪಾತಿಯಿಂದ ಬರುವ ಹಬೆಯು ಹಾಟ್‌ಬಾಕ್ಸ್ ಮುಚ್ಚಿದಾಗ ಹೊರಹೋಗಲು ಜಾಗವಿಲ್ಲದೆ ತಣ್ಣಗಾಗಿ ನೀರಿನ ಹನಿಗಳಾಗಿ ಮಾರ್ಪಡುತ್ತದೆ. ಈ ಹನಿಗಳೆಲ್ಲ ಹಾಟ್‌ಬಾಕ್ಸ್ ತಳದಲ್ಲಿ ಶೇಖರಣೆಯಾಗಿ ಅಲ್ಲಿರುವ ಮೊದಲ ರೊಟ್ಟಿ ಅಥವಾ ಚಪಾತಿಯನ್ನು ಸಂಪೂರ್ಣವಾಗಿ ಒದ್ದೆ ಮಾಡಿಬಿಡುತ್ತವೆ.
ಬೇಕಾಗಿರುವುದು ಕೇವಲ 1 ಸಣ್ಣ ಬಟ್ಟಲು
ಬೇಕಾಗಿರುವುದು ಕೇವಲ 1 ಸಣ್ಣ ಬಟ್ಟಲು
ಆಗ ನೀವು ಬಾಕ್ಸ್ ಬದಲಾಯಿಸುವುದಾಗಲೀ ಅಥವಾ ಯಾವುದೇ ಹೊಸ ಬಾಕ್ಸ್‌ನಲ್ಲಿಡುವುದಾಗಲೀ ಮಾಡುವ ಅಗತ್ಯವಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಒಂದು ಸಣ್ಣ ಸ್ಟೀಲ್ ಬಟ್ಟಲು ಹಾಗೂ ಒಂದು ಕಾಟನ್ ಬಟ್ಟೆ ಬಳಸಿದರೆ ಸಾಕು.
ಈ ವಿಧಾನ ಹೇಗೆ ಕೆಲಸ ಮಾಡುತ್ತೆ?
ಈ ವಿಧಾನ ಹೇಗೆ ಕೆಲಸ ಮಾಡುತ್ತೆ?
*ಹಾಟ್‌ಬಾಕ್ಸ್‌ನ ತಳಭಾಗದ ಮಧ್ಯದಲ್ಲಿ ಸಣ್ಣ ಸ್ಟೀಲ್ ಬಟ್ಟಲನ್ನು ಉಲ್ಟಾ (ಬೋರಲು) ಹಾಕಿಡಿ.
*ಈಗ ಆ ಬಟ್ಟಲಿನ ಮೇಲ್ಭಾಗವನ್ನು ಆವರಿಸುವಂತೆ ಒಂದು ಸ್ವಚ್ಛವಾದ ಕಾಟನ್ ಬಟ್ಟೆ ಅಥವಾ ರೊಟ್ಟಿ ರುಮಾಲನ್ನು ಹರಡಿ.
*ನಂತರ ಅದರ ಮೇಲೆ ಬಿಸಿಬಿಸಿ ಚಪಾತಿ ಅಥವಾ ರೊಟ್ಟಿಗಳನ್ನು ಒಂದರ ಮೇಲೊಂದು ಜೋಡಿಸಿ ಮುಚ್ಚಳ ಮುಚ್ಚಿ.
ನೇರವಾಗಿ ನೀರು ತಾಗುವುದಿಲ್ಲ
ನೇರವಾಗಿ ನೀರು ತಾಗುವುದಿಲ್ಲ
*ಬಟ್ಟಲನ್ನು ಬೋರಲು ಹಾಕುವುದರಿಂದ ರೊಟ್ಟಿಗಳು ಹಾಟ್‌ಬಾಕ್ಸ್‌ನ ತಳಭಾಗಕ್ಕಿಂತ ಕೊಂಚ ಎತ್ತರದಲ್ಲಿ (ಪ್ಲಾಟ್‌ಫಾರ್ಮ್ ಮೇಲೆ) ಕುಳಿತುಕೊಳ್ಳುತ್ತವೆ.
*ಹಬೆಯಿಂದ ಉತ್ಪತ್ತಿಯಾಗುವ ನೀರಿನ ಹನಿಗಳು ಬಟ್ಟಲಿನ ಪಕ್ಕದ ಸಂದುಗಳ ಮೂಲಕ ಕೆಳಗೆ ಇಳಿಯುತ್ತವೆ, ಆದರೆ ರೊಟ್ಟಿ ಅಥವಾ ಚಪಾತಿಗೆ ನೇರವಾಗಿ ತಾಗುವುದೇ ಇಲ್ಲ!
ಕೊನೆಯ ರೊಟ್ಟಿ, ಚಪಾತಿಯೂ ಬಿಸಿ ಮತ್ತು ಸಾಫ್ಟ್!
ಕೊನೆಯ ರೊಟ್ಟಿ, ಚಪಾತಿಯೂ ಬಿಸಿ ಮತ್ತು ಸಾಫ್ಟ್!
*ಮೊದಲ ರೊಟ್ಟಿ, ಚಪಾತಿಯಿಂದ ಹಿಡಿದು ಕೊನೆಯ ರೊಟ್ಟಿಯವರೆಗೂ ಎಲ್ಲವೂ ಹಬೆಯ ನೀರಿಲ್ಲದೆ, ಒಣದಾಗಿ ಮತ್ತು ಮೃದುವಾಗಿ ಉಳಿಯುತ್ತವೆ.
*ಇನ್ಮುಂದೆ ಹಾಟ್‌ಬಾಕ್ಸ್‌ನಲ್ಲಿಟ್ಟ ರೊಟ್ಟಿ ಅಥವಾ ಚಪಾತಿ ಎಂದಿಗೂ ವ್ಯರ್ಥವಾಗುವುದಿಲ್ಲ! ಇಂದೇ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.