ತಿನ್ನೋದೇನು ಕಡಿಮೆ ಮಾಡ್ಬೇಕಿಲ್ಲ, ತಿನ್ನೋ ರೀತಿ ಚೇಂಜ್ ಮಾಡ್ಕೊಂಡ್ರೆ ಸಾಕು ತೂಕ ಹೆಚ್ಚಾಗಲ್ಲ
ತೂಕ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುವ ಸಮಸ್ಯೆ. ಇದ್ರಿಂದ ಹಲವು ಕಾಯಿಲೆಗಳು ಬರೋ ಭಯಾನೂ ಕಾಡುತ್ತದೆ. ಹೀಗಾಗಿ ಹೆಚ್ಚಿನವರು ತೂಕ ಕಡಿಮೆ ಮಾಡ್ಕೊಳ್ಳೋಕೆ ಊಟ ಸ್ಕಿಪ್ ಮಾಡುತ್ತಾರೆ. ಆದ್ರೆ ಹೀಗೆ ಮಾಡದೆಯೇ ತೂಕ ಕಡಿಮೆ ಮಾಡ್ಕೊಬೋದಾ ನಿಮ್ಗೊತ್ತಾ?

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ತೂಕ ಹೆಚ್ಚಳದ ಸಮಸ್ಯೆ ಹಲವರನ್ನು ಕಾಡುತ್ತಿದೆ. ಸಾಲದ್ದಕ್ಕೆ ಕಾಯಿಲೆಗಳು ಸಹ ಸುಲಭವಾಗಿ ವಕ್ಕರಿಸಿಕೊಂಡು ಬಿಡುತ್ತವೆ. ಅಧಿಕ ತೂಕ, ಅತಿಯಾಗಿ ತಿನ್ನುವುದು ಮತ್ತು ಅನಾರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ಆದರೆ ಫುಡ್ಡೀಗಳು ತೂಕ ಕಡಿಮೆಯಾಗಬೇಕೆಂದು ಅಂದುಕೊಂಡರೂ ಕಡಿಮೆ ಫುಡ್ ತಿನ್ನೋದಕ್ಕೆ ಇಷ್ಟಪಡೋದಿಲ್ಲ.
ಅಷ್ಟೇ ಅಲ್ಲ ತೂಕ ಕಳೆದುಕೊಳ್ಳೋಕೆ ಕಡಿಮೆ ಫುಡ್ ತಿನ್ನೋದು ಆಯ್ಕೆ ಕೂಡಾ ಅಲ್ಲ. ಹೆಚ್ಚಿನವರು ತೂಕ ಕಡಿಮೆ ಮಾಡ್ಕೊಳ್ಳೋಕೆ ಊಟ ಸ್ಕಿಪ್ ಮಾಡುತ್ತಾರೆ. ಆದ್ರೆ ಹೀಗೆ ಮಾಡದೆಯೇ ತೂಕ ಕಡಿಮೆ ಮಾಡ್ಕೊಬೋದಾ ನಿಮ್ಗೊತ್ತಾ?
ಹೈ-ಪ್ರೋಟೀನ್ ಊಟವನ್ನು ಆರಿಸಿಕೊಳ್ಳಿ
ತೂಕ ಕಳೆದುಕೊಳ್ಳಬೇಕೆಂದು ಕಡಿಮೆ ತಿನ್ನಲು ಹೋದರೆ ಆರೋಗ್ಯ ಸಮಸ್ಯೆ ಕಾಡೋದು ಖಂಡಿತ. ಹಾಗಾಗಿ ಆ ತಪ್ಪನ್ನು ಎಂದೂ ಮಾಡಬೇಡಿ. ಬದಲಿಗೆ
ಹೆಚ್ಚಿನ ಪ್ರೋಟೀನ್ ಆಯ್ಕೆಗಳು ಸಾಮಾನ್ಯವಾಗಿ ಆರೋಗ್ಯಕರವಾಗಿರುತ್ತವೆ ಮತ್ತು ನೀವು ಪೂರ್ಣವಾಗಿರಲು ಸಹಾಯ ಮಾಡುತ್ತದೆ. ಇದು ಆಗಾಗ ಹಸಿವಾಗುವುದನ್ನು ತಡೆಯುತ್ತದೆ.
ಕ್ಯಾಲೋರಿ ಕೌಂಟ್ ಗಮನಿಸಿಕೊಳ್ಳಿ
ಉದಾಹರಣೆಗೆ, ಅನೇಕ ಬರ್ಗರ್‌ಗಳು 1000 ಕ್ಯಾಲೊರಿಗಳಿಗಿಂತ ಹೆಚ್ಚು ಇರಬಹುದು ಮತ್ತು ನಮಗೆ ತಿಳಿದಿರುವುದಿಲ್ಲ. ಜಂಕ್ ಫುಡ್‌ಗಳು ಸಾಮಾನ್ಯವಾಗಿ ಹೆಚ್ಚು ಕ್ಯಾಲೋರಿ ಹೊಂದಿರುತ್ತವೆ. ಇವುಗಳನ್ನು ಅವಾಯ್ಡ್ ಮಾಡಿ. ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಿ.
ಸಸ್ಯಾಹಾರ ಹೆಚ್ಚು ತಿನ್ನಿ
ಸಸ್ಯಾಹಾರಿಗಳು ಹೆಚ್ಚು ಆರೋಗ್ಯಕರವಾಗಿದೆ. ಏಕೆಂದರೆ ಅವುಗಳು ಫೈಬರ್‌ನಲ್ಲಿ ಅಧಿಕವಾಗಿರುತ್ತವೆ. ಹೆಚ್ಚಿನ ಪ್ರೊಟೀನ್, ವಿಟಮಿನ್, ಫೈಬರ್ ಮೊದಲಾದ ಅಂಶಗಳನ್ನು ಹೊಂದಿರುತ್ತದೆ. ಕಾಯಿಲೆಗಳು ಬರುವುದು ತಡೆಯುತ್ತದೆ.
ವ್ಯಾಯಾಮ ಮಾಡಿ
ತೂಕವನ್ನು ಕಡಿಮೆ ಮಾಡಲು ಬಯಸಿದರೆ ಆರೋಗ್ಯಕರವಾಗಿ ತಿನ್ನುವುದರ ಜೊತೆಗೆ ಆಗಾಗ ವ್ಯಾಯಾಮ ಮಾಡುವ ಅಭ್ಯಾಸ ಇರಬೇಕು. ಕೆಲವರು, ಊಟದ ನಿರ್ಧಾರಗಳನ್ನು ಮಾಡುವಾಗ, ವಿಶೇಷವಾಗಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವಾಗ ಮಿತವಾಗಿರುವುದು ಇನ್ನೂ ಅಗತ್ಯ ಎಂಬುದನ್ನು ಮರೆತು ಬಿಡುತ್ತಾರೆ.
ಅಗತ್ಯವಿದ್ದಷ್ಟೇ ನಿದ್ದೆ ಮಾಡಿ
ಆರೋಗ್ಯ ಚೆನ್ನಾಗಿರಲು ನಿದ್ದೆ ಅತೀ ಅಗತ್ಯ. ಆದರೆ ಅತಿಯಾದ ನಿದ್ದೆಯೂ ಆರೋಗ್ಯಕ್ಕೆ ಹಾನಿಕರ. ಇದು ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಹೀಗಾಗಿ ದಿನಕ್ಕೆ ಕೇವಲ 7ರಿಂದ 8 ಗಂಟೆಯ ತನಕದ ನಿದ್ದೆಯಷ್ಟೇ ದೇಹಕ್ಕೆ ಸಾಕಾಗುತ್ತದೆ. ಹಗಲು ಮಲಗುವ ಅಭ್ಯಾಸವೂ ಆರೋಗ್ಯಕ್ಕೆ ಒಳ್ಳೆಯದಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.