ಗ್ಯಾಸ್ ಉಳಿಸಲು ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ
LPG ಬೆಲೆ ಏರುತ್ತಲೇ ಇವೆ. ಹಾಗಾಗಿ, ಅನೇಕ ಬಾರಿ ನಾವು ಗ್ಯಾಸ್ ಸೇವ್ ಮಾಡೋ ಬಗ್ಗೆ ಯೋಚಿಸುತ್ತೇವೆ. ಆದರೆ ನಮಗೆ ಅದನ್ನು ಉಳಿಸಲು ಸಾಧ್ಯವಾಗೋದಿಲ್ಲ. ಇದಕ್ಕೆ ಕಾರಣ ಗ್ಯಾಸ್ ಸೇವ್ ಮಾಡೋ ಸರಿಯಾದ ಮಾರ್ಗ ನಿಮಗೆ ತಿಳಿಯದೇ ಇರುವುದು. ನೀವು ಸಹ ಗ್ಯಾಸ್ ಉಳಿಸಲು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಸರಿಯಾದ ಉಳಿತಾಯ ಟಿಪ್ಸ್ ಇಲ್ಲಿದೆ. ಇವುಗಳನ್ನು ಬಳಸುವ ಮೂಲಕ ಹೀಗೆ ಗ್ಯಾಸ್ ಉಳಿಸಿ.
ನೀವು ಪ್ರತಿ ತಿಂಗಳು ಸ್ವಲ್ಪ ಗ್ಯಾಸ್(Gas) ಉಳಿಸಿದರೆ, ಅದು ನಿಮ್ಮ ಬಜೆಟ್ಟನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸುತ್ತೆ. ಅಡುಗೆ ಅನಿಲವನ್ನು ಉಳಿಸುವ ಸರಿಯಾದ ಮಾರ್ಗ ತಿಳಿಯಲು ಇಲ್ಲಿವೆ ಟಿಪ್ಸ್. ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಎಲ್‌ಪಿ ಜಿಯನ್ನು ದೊಡ್ಡ ಪ್ರಮಾಣದಲ್ಲಿ ಉಳಿಸಬಹುದು. ಕೆಲವು ಸುಲಭ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ಯಾನ್ ಬದಲಿಗೆ ಕುಕ್ಕರ್(Cooker) ಬಳಸಿ
ನೀವು ಬಾಣಲೆಯಲ್ಲಿ ತರಕಾರಿ ಬೇಯಿಸುವ ಅಭ್ಯಾಸ ಹೊಂದಿದ್ದರೆ, ಈ ಅಭ್ಯಾಸವನ್ನು ಬದಲಿಸಿ. ಬದಲಾಗಿ, ಕುಕ್ಕರ್ ನಲ್ಲಿ ತರಕಾರಿಗಳನ್ನು ಬೇಯಿಸಿ. ಕುಕ್ಕರ್ ನಲ್ಲಿ ತರಕಾರಿಗಳನ್ನು ಬೇಯಿಸೋದರಿಂದ ಗ್ಯಾಸ್ ಉಪಯೋಗ ಕಡಿಮೆ ಆಗುತ್ತೆ. ತರಕಾರಿಗಳು ಕೂಡ ಬಹಳ ಬೇಗ ಬೇಯುತ್ತೆ.
ಸಣ್ಣ ಸೈಜ್(Size) ಪಾತ್ರೆ ಬಳಸಿ
ಅಡುಗೆ ಮಾಡುವಾಗ ಯಾವಾಗಲೂ ಸಣ್ಣ ಸೈಜ್ ಪಾತ್ರೆ ಬಳಸಿ. ಒಂದು ದೊಡ್ಡ ಬಾಣಲೆಯನ್ನು ಬಳಸೋದರಿಂದ ಅದು ಬಿಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ, ಇದರಿಂದಾಗಿ ಗ್ಯಾಸ್ ಬಳಕೆ ಹೆಚ್ಚಾಗುತ್ತೆ. ಆದ್ದರಿಂದ ಸಣ್ಣ ಗಾತ್ರದ ಬಾಣಲೆ ಬಳಸಿ. ಇದು ನಿಮಗೆ ಹೆಚ್ಚು ಉಪಯುಕ್ತ.
ಫ್ರೋಜನ್ ಫೂಡ್ಸ್ ನ್ನು(Frozen food) 2 ಗಂಟೆ ಮೊದಲೇ ಫ್ರಿಡ್ಜ್ ನಿಂದ ತೆಗೆದಿಡಿ
ಫ್ರಿಡ್ಜ್ ನಲ್ಲಿ ಇರಿಸಲಾದ ಯಾವುದನ್ನಾದರೂ ನೀವು ಬಿಸಿ ಮಾಡಲು ಅಥವಾ ಬೇಯಿಸಲು ಹೊರಟರೆ, ಕನಿಷ್ಠ 1 ರಿಂದ 2 ಗಂಟೆಗಳ ಮುಂಚಿತವಾಗಿ ಅದನ್ನು ಫ್ರಿಜ್ ನಿಂದ ತೆಗೆಯಿರಿ. ಹೀಗೆ ಮಾಡೋದರಿಂದ ನೀವು ಹೆಚ್ಚಿನ ಮಟ್ಟದಲ್ಲಿ ಗ್ಯಾಸ್ ಉಳಿಸಬಹುದು.
ಆಗಾಗ್ಗೆ ಬಿಸಿ(Heat) ಮಾಡೋದನ್ನು ತಪ್ಪಿಸಿ
ನೀವು ನೀರನ್ನು ಪದೇ ಪದೇ ಬಿಸಿಮಾಡಿ ಕುಡಿಯುತ್ತಿದ್ದರೆ, ಅದರಿಂದ ಹೆಚ್ಚು ಗ್ಯಾಸ್ ಬಳಕೆಯಾಗುತ್ತೆ. ಆದ್ದರಿಂದ ನೀರನ್ನು ಒಮ್ಮೆ ಬಿಸಿ ಮಾಡಿಡಿ, ನಂತರ ಅದನ್ನು ಫ್ಲಾಸ್ಕ್ ನಲ್ಲಿ ಇರಿಸಿ. ಇದರಿಂದ ಗ್ಯಾಸನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಬಹುದು. ಫ್ಲಾಸ್ಕ್ ನಲ್ಲಿದ್ದ ನೀರು ದೀರ್ಘ ಕಾಲ ಬಿಸಿಯಾಗಿರುತ್ತೆ.
ಕಡಿಮೆ ಉರಿಯಲ್ಲಿ(Low flame) ಬೇಯಿಸಿ
ಕಡಿಮೆ ಉರಿಯಲ್ಲಿ ಅಡುಗೆ ಮಾಡೋದರಿಂದ ಆಹಾರದ ಪೌಷ್ಠಿಕಾಂಶವನ್ನು ಉಳಿಸಿಕೊಳ್ಳಬಹುದು. ಹಾಗೇಯೇ ಗ್ಯಾಸ್ ಹೆಚ್ಚು ವೇಸ್ಟ್ ಆಗೋದಿಲ್ಲ. ಪ್ಯಾನ್ ಗೆ ಬಿಸಿ ತಾಗಿದ ನಂತರ ಗ್ಯಾಸ್ ಫ್ಲೇಮ್ ಲೊ ಮಾಡೋದ್ರಿಂದ ಹೆಚ್ಚು ಗ್ಯಾಸ್ ಸೇವ್ ಮಾಡ್ಬಹುದು. ಇದನ್ನು ನೀವು ಮಾಡಲು ಮರೆಯಬೇಡಿ.
ಸಾಧ್ಯವಾದಾಗಲೆಲ್ಲಾ ನಿಮ್ಮ ಪಾತ್ರೆಗಳನ್ನು ಮುಚ್ಚಿ ಬೇಯಿಸಿ. ತೆರೆದ ಕುಕ್ ವೇರ್ ನಿಂದ(Cookware) ಶಾಖ ಹೆಚ್ಚು ವೇಗವಾಗಿ ಹೊರ ಹೋಗುತ್ತೆ. ಹಾಗಾಗಿ ಆದಷ್ಟು ಅಡುಗೆ ಮಾಡುವಾಗಲೆಲ್ಲಾ ಪಾತ್ರೆ ಮುಚ್ಚಿ ಬೇಯಿಸೋದ್ರಿಂದ ಗ್ಯಾಸ್ ಹೆಚ್ಚು ಸೇವ್ ಮಾಡ್ಬಹುದು. ಆದುದರಿಂದ ಪ್ರತಿ ಬಾರಿ ಇದನ್ನು ಮಾಡಲು ಮರೆಯಬೇಡಿ.
ನಿಮ್ಮ ಸ್ಟೌನ ಬರ್ನರ್ ಅನ್ನು(Burner) ಯಾವಾಗಲೂ ಸ್ವಚ್ಛವಾಗಿರಿಸಿ. ಅದಕ್ಕಾಗಿ ಮೊದಲು ಪ್ರೊಟೆಕ್ಟಿವ್ ಗ್ರಾಟ್ ಗಳನ್ನು ತೆಗೆದು, ಒದ್ದೆಯಾದ ಪೇಪರ್ ಟವೆಲ್ ನಿಂದ ಬರ್ನರ್ ಒರೆಸಿ. ಇನ್ನೊಂದು ಉಪಾಯ ಎಂದರೆ, ಬರ್ನರ್ ಗಳ ಸುತ್ತಲಿನ ಪ್ರದೇಶವನ್ನು ಸೋಪ್ ನೀರಿನಿಂದ ಉಜ್ಜಿ, ಹೀಗೆ ಮಾಡೋದ್ರಿಂದ ಹೆಚ್ಚು ಕ್ಲೀನ್ ಆಗುತ್ತೆ