ಗ್ಯಾಸ್ ಸ್ಟೌವ್‌ ಬರ್ನರ್‌ಗಳನ್ನು ಹೀಗೆ ಸ್ವಚ್ಛಗೊಳಿಸಿದ್ರೆ ಗ್ಯಾಸ್ ಉಳಿಸಬಹುದು !

ಇಂಧನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಗ್ಯಾಸ್‌ನ್ನು ಉಳಿಸೋಕೆ ಯಾರು ತಾನೇ ಪ್ರಯತ್ನ ಪಡುವುದಿಲ್ಲ ಹೇಳಿ. ಮಿತವಾಗಿ ಬಳಸುವ ಮೂಲಕ ಗ್ಯಾಸ್‌ನ್ನು ಉಳಿಸಬಹುದು ನಿಜ. ಆದರೆ ಅದಲ್ಲದೆಯೂ ಗ್ಯಾಸ್‌ ಸ್ಟವ್‌ (Gas stove) ಬರ್ನರ್‌ (Burner)ಗಳನ್ನು ಸರಿಯಾಗಿ ಸ್ವಚ್ಛ (Clean)ಗೊಳಿಸುವ ಮೂಲಕವೂ ಗ್ಯಾಸ್ ಉಳಿಸಬಹುದು ಅನ್ನೋದು ನಿಮ್ಗೆ ಗೊತ್ತಾ ?

How To Clean The Burners On A Gas Stove To Save Gas Vin

ದುನಿಯಾ ಭಾರೀ ದುಬಾರಿಯಾಗುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆಯಂತೂ ಏರಿಕೆಯಾಗುತ್ತಲೇ ಇದೆ. ಇಂಧನ (Fuel)ಗಳ ಬೆಲೆಯನ್ನಂತೂ ಕೇಳೋದೆ ಬೇಡ. ಆದರೆ ಬೆಲೆ ಎಷ್ಟು ಹೆಚ್ಚಾದರೂ ಪ್ರತಿ ದಿನದ ಅಗತ್ಯಕ್ಕೆ ಬೇಕಾಗುವ ಕೆಲವೊಂದು ವಸ್ತುಗಳನ್ನು ನಾವು ಖರೀದಿಸಲೇ ಬೇಕಲ್ಲ. ಬೆಲೆ ಹೆಚ್ಚಾಯ್ತು ಅನ್ನೋ ಕಾರಣಕ್ಕೆ ಅದನ್ನು ಬಳಸದೇ ಇರಲಾಗುವುದಿಲ್ಲ. ಅಂಥವುಗಳಲ್ಲೊಂದು ಗ್ಯಾಸ್‌. ಗ್ಯಾಸ್‌ (Gas stove) ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಗೃಹಿಣಿಯರು (Homemaker) ಬೆಲೆ ಎಷ್ಟು ಹೆಚ್ಚಾದರೂ ಬೈದುಕೊಂಡೇ ಹೋಗಿ ಗ್ಯಾಸ್‌ ತಂದುಬಿಡುತ್ತಾರೆ. ಆ ಬಳಿಕ ಗ್ಯಾಸ್ ಆದಷ್ಟು ಬೇಗ ಮುಗಿಯದಂತೆ ಮಿತವಾಗಿ ಅದನ್ನು ಬಳಸಲು ತೊಡಗುತ್ತಾರೆ. ಆದ್ರೆ ಇದಲ್ಲದೆಯೂ ಗ್ಯಾಸ್‌ ಉಳಿಸೋಕೆ ಇನ್ನೊಂದು ದಾರಿಯಿದೆ ಆ ಬಗ್ಗೆ ನಿಮ್ಗೆ ಗೊತ್ತಾ ?

ಸಾಮಾನ್ಯವಾಗಿ ಅಡುಗೆ ಮನೆ (Kitchen)ಯಲ್ಲಿ ಹಲವಾರು ಉಪಕರಣಗಳಿಗೆ ಹೋಲಿಸಿದರೆ, ಅಡುಗೆಮನೆಯಲ್ಲಿ ಇರುವ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್ ಪ್ರಮುಖ ಸಾಧನ ಎಂದೇ ಹೇಳಬಹುದು! ಯಾಕೆಂದರೆ ಸಿಟಿ ಲೈಫ್ ನಲ್ಲಿ ಗ್ಯಾಸ್ ಸ್ಟವ್ ಅಥವಾ ಗ್ಯಾಸ್ ಇಲ್ಲದಿದ್ದರೆ, ಅಡುಗೆ ಮಾಡುವುದಕ್ಕೆ ಸಾಧ್ಯವೇ ಇಲ್ಲ! ಹೀಗಾಗಿ ಇವೆರಡರ ಅವಶ್ಯಕತೆ ತುಂಬಾನೇ ಇದೆ. ಹೀಗಾಗಿ ನಮಗೆ ದಿನನಿತ್ಯದ ಅಡುಗೆಗಳನ್ನು ಮಾಡಲು ಸಹಾಯ ಮಾಡುವ ಗ್ಯಾಸ್ ಸ್ಟವ್ ಬಗ್ಗೆ ನಾವು ಕೂಡ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಗ್ಯಾಸ್‌ ಸ್ಟವ್‌ ಕ್ಲೀನ್‌ (Clean) ಇಟ್ಟುಕೊಂಡರೆ ಗ್ಯಾಸ್‌ನ್ನು ಸಹ ಉಳಿಸಿಕೊಳ್ಳಬಹುದಂತೆ.

ಗ್ಯಾಸ್ ಸ್ಟೌವ್ ಹೊರಸೂಸುವ ಅನಿಲಗಳಿಂದ ಶ್ವಾಸಕೋಶಕ್ಕೆ ವಿಪರೀತ ಹಾನಿ: ಅಧ್ಯಯನ!

ಗ್ಯಾಸ್‌ ಸ್ಟವ್‌ ಕ್ಲೀನಾಗಿ ಇಲ್ಲದಿದ್ದರೆ ಗ್ಯಾಸ್‌ ಎಲ್ಲೆಡೆ ಸೋರಿ ಹೋಗುತ್ತದೆ. ಹೀಗಾಗಿ ಗ್ಯಾಸ್‌ನ್ನು ಆಗಾಗ ಕ್ಲೀನ್ ಮಾಡುವುದು ತುಂಬಾ ಮುಖ್ಯ. ಹೆಚ್ಚಾಗಿ ಗ್ಯಾಸ್ ಸ್ಟವ್ ಬಳಸಿ ಅಡುಗೆ ಮಾಡುವ ಸಂದರ್ಭದಲ್ಲಿ, ಅಕ್ಕ ಪಕ್ಕದಲ್ಲಿ ಸುರಿದು ಹಾಗೆಯೇ ದಪ್ಪಗೆ ಸ್ಟವ್ ಮೇಲೆ ಅಂಟಿಕೊಂಡು ಬಿಡುತ್ತದೆ! ಕೆಲವೊಮ್ಮೆ ಅವಸರದಲ್ಲಿರುವಾಗ, ಇದನ್ನು ಆ ಕೂಡಲೇ ಸ್ವಚ್ಚ ಮಾಡಿಟ್ಟು ಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ ದಿನಗಳಲ್ಲಿ ಕೂಡ ನಾವು ಉದಾಸೀನ ಮಾಡುವುದರಿಂದ, ಈ ಕಲೆಗಳು ಗ್ಯಾಸ್ ಸ್ಟವ್ ನಲ್ಲಿ ಹಾಗೆಯೇ ಉಳಿದು ಬಿಟ್ಟು, ಸ್ಟವ್‌ನ ಅಂದ ಹಾಳಾಗುವುದರ ಜೊತೆಗೆ ಬೆಂಕಿ ಅವಘಡ ಕೂಡ ಸಂಭವಿಸುವ ಅಪಾಯ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಿದ್ರೆ ಗ್ಯಾಸ್‌ನ್ನು ಹೀಗೆ ಕ್ಲೀನ್ ಮಾಡ್ಬೋದು ತಿಳಿಯೋಣ.

ಗ್ಯಾಸ್ ಸ್ಟವ್‌ ಕ್ಲೀನ್ ಮಾಡುವುದು ಹೇಗೆ ?
ಸ್ಟೌವ್ ನ ಬರ್ನರ್ ಮತ್ತು ಹೊರಗಿನ ಭಾಗವನ್ನು ತೆಗೆದು  ಟವೆಲ್ ಬಳಸಿಕೊಂಡು ಕೊಳೆಯನ್ನು ನೀಟಾಗಿ ಒರೆಸಿಕೊಳ್ಳಿ. ಒಂದು ಪಿಂಗಾಣಿಯಲ್ಲಿ ಉಗುರುಬೆಚ್ಚಗಿನ ನೀರಿಗೆ ಡಿಶ್ ವಾಷಿಂಗ್ ಲಿಕ್ವಿಡ್ ಹಾಕಿಕೊಳ್ಳಿ. ಇವೆರಡರ ಮಿಶ್ರಣದಿಂದ ಸ್ಟೌವ್ ನಲ್ಲಿ ಇರುವಂತಹ ಕೊಳೆ ಮತ್ತು ಧೂಳನ್ನು ಒರೆಸಿ ತೆಗೆಯಿರಿ. ಸ್ಪಾಂಜ್ ತೆಗೆದುಕೊಂಡು ಸ್ಟೌವ್ ನ್ನು ಸ್ಕ್ರಬ್ ಮಾಡಿ. ಹಳೆಯ ಟೂತ್‌ಬ್ರಶ್‌ ಬಳಸಿ ಸಹ ಅಲ್ಲಲ್ಲಿ ಸೇರಿರುವ ಕೊಳೆಯನ್ನು ನೀಟಾಗಿ ತೆಗೆಯಬಹುದು. ಈಗ ಒದ್ದೆ ಬಟ್ಟೆಯನ್ನು ಬಳಸಿಕೊಂಡು ಅದರಿಂದ ಸ್ಟೌವ್ ನ್ನು ಒರೆಸಿಕೊಳ್ಳಿ.

ಅಡುಗೆ ಮಾಡುವಾಗ ಕೈ ಸುಟ್ಟು ಕೊಂಡ್ರಾ? ಈ ತಪ್ಪು ಮಾಡಬೇಡಿ!!

ಬರ್ನರ್‌ ಕ್ಲೀನ್ ಮಾಡುವುದು ಹೇಗೆ ?
ಗ್ಯಾಸ್‌ ಸ್ಟೌವ್ ನ ಮೇಲ್ಮೈಯನ್ನು ಶುಚಿ ಮಾಡುವುದು ಸುಲಭ. ಆದರೆ ಅದರ ಬರ್ನರ್ ನ್ನು ಹೇಗೆ ಕ್ಲೀನ್ ಮಾಡುವುದು ಎಂದು ಹಲವರಿಗೆ ತಿಳಿದಿರುವುದಿಲ್ಲ. ಅದರಲ್ಲಿ ಅಂಟಿಕೊಂಡಿರುವಂತಹ ಜಿಡ್ಡಿನ ಕಲೆ ಮತ್ತು ಸುಟ್ಟಿರುವಂತಹ ಆಹಾರವನ್ನು ತೆಗೆಯುವುದು ತುಂಬಾ ಕಷ್ಟ. ಈ ಸಂದರ್ಭದಲ್ಲಿ ನೀವು ಸ್ಟವ್‌ ಖರೀದಿಸುವಾಗ ದೊರಕಿರುವ ಮಾಹಿತಿ ಕಾರ್ಡ್‌ನ್ನು ಬಳಸಿಕೊಳ್ಳಬಹುದು. ಸ್ಟೌವ್ ಉತ್ಪಾದಕರ ಸಲಹೆಗಳನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ. ಇದರಿಂದ ನೀವು ತುಂಬಾ ಸುರಕ್ಷಿತವಾಗಿ ಬರ್ನರ್ ನ್ನು ತೆಗೆಯಬಹುದು.
ಗ್ಯಾಸ್ ಬರ್ನರ್ ನ್ನು ಶುಚಿ ಮಾಡುವುದು ಹೇಗೆ ಎಂದು ಕೂಡ ಅದರಲ್ಲಿ ಬರೆದಿರುತ್ತದೆ. ಇದರಿಂದ ಗ್ಯಾಸ್ ಸ್ಟೌವ್ ನ್ನು ದೀರ್ಘಕಾಲ ಬಳಸಲು ಸಾಧ್ಯವಾಗುತ್ತದೆ.

ಗ್ಯಾಸ್ ಸ್ಟೌವ್ ನ ವಿವಿಧ ಭಾಗವನ್ನು ಮೊದಲಿಗೆ ತೆಗೆಯಿರಿ. ಬಳಿಕ ಎಲ್ಲವನ್ನು ಬಿಸಿ ಸೋಪ್ ನೀರಿನಲ್ಲಿ ಅದ್ದಿಟ್ಟುಕೊಳ್ಳಿ. ನಂತರ ಎರಡು ಚಮಚ ಡಿಶ್ ವಾಶ್ ಲಿಕ್ವಿಡ್ ನ್ನು ಅರ್ಧ ಬಕೆಟ್ ನೀರಿಗೆ ಹಾಕಿ ಇದರಲ್ಲಿ 40-60 ನಿಮಿಷ ಕಾಲ ನೀವು ಅದ್ದಿಟ್ಟುಕೊಳ್ಳಿ. ಇದರ ಬಳಿಕ ಸ್ಪಾಂಜ್ ಬಳಸಿಕೊಂಡು ಅದನ್ನು ಸ್ಕ್ರಬ್ ಮಾಡಿಕೊಳ್ಳಿ. ಪ್ರತಿಯೊಂದನ್ನು ಒಂದೊಂದಾಗಿ ಶುಚಿ ಮಾಡಿ ಮನೀರಿಗೆ ಹಿಡಿಯಿರಿ. ಇದರ ಬಳಿಕ ಒಣ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಿ. ಇದನ್ನು ಸ್ಟೌವ್ ನಲ್ಲಿ ಸರಿಯಾಗಿ ಅಳವಡಿಸಿಕೊಳ್ಳಿ. ತೊಳೆದು ಶುಚಿ ಮಾಡಿದ ಬರ್ನರ್ ನ್ನು ನೀವು ಒಂದು ಸಲ ಅಳವಡಿಸಿದ ಬಳಿಕ ಅದನ್ನು ಪರೀಕ್ಷೆ ಮಾಡಿಕೊಳ್ಳಿ. ಬೆಂಕಿಯು ಅಸಾಮಾನ್ಯವಾಗಿದ್ದರೆ, ಆಗ ಬರ್ನರ್ ಸರಿಯಾಗಿ ಕುಳಿತುಕೊಂಡಿಲ್ಲ ಎಂದು ಅರ್ಥೈಸಿಕೊಳ್ಳಿ.

Latest Videos
Follow Us:
Download App:
  • android
  • ios