- Home
- Life
- Food
- ಚಪಾತಿ ರಟ್ಟಿನಂತೆ ಗಟ್ಟಿಯಾಗ್ತಿದ್ರೆ ಹೀಗೆ ಬೇಯಿಸಿ, ಮಧ್ಯಾಹ್ನವಾದ್ರೂ ಆಗಷ್ಟೇ ಮಾಡಿದ ಹಾಗೆ ಫ್ರೆಶ್ ಆಗಿರ್ತವೆ
ಚಪಾತಿ ರಟ್ಟಿನಂತೆ ಗಟ್ಟಿಯಾಗ್ತಿದ್ರೆ ಹೀಗೆ ಬೇಯಿಸಿ, ಮಧ್ಯಾಹ್ನವಾದ್ರೂ ಆಗಷ್ಟೇ ಮಾಡಿದ ಹಾಗೆ ಫ್ರೆಶ್ ಆಗಿರ್ತವೆ
How to make soft chapatis: ಈ 8 ಸಣ್ಣ ಟಿಪ್ಸ್ ಫಾಲೋ ಮಾಡಿದ್ರೆ ಚಪಾತಿ ನಾಳೆಯದ್ರೂ ತುಂಬಾ ಸಾಫ್ಟ್ ಆಗಿರುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲ, ಆಗಷ್ಟೇ ಪ್ಯಾನ್‌ನಿಂದ ಹೊರತೆಗೆದಂತೆ ಅನಿಸುತ್ತದೆ.

ಈ ಸರಳ ಟಿಪ್ಸ್ ಫಾಲೋ ಮಾಡಿ
ನಾವು ಬೆಳಗ್ಗೆ ತಯಾರಿಸುವ ತಿಂಡಿಗಳಲ್ಲಿ ದೋಸೆ, ಇಡ್ಲಿ ಜೊತೆಗೆ ಚಪಾತಿಯೂ ಫೇಮಸ್. ಬೆಳಗ್ಗೆ ತಯಾರಿಸಿದ ತಿಂಡಿಗಳನ್ನು ಸಾಮಾನ್ಯವಾಗಿ ಮಧ್ಯಾಹ್ನದ ಬಾಕ್ಸ್‌ಗೂ ಒಯ್ಯುತ್ತೇವೆ. ಆದರೆ ಮಧ್ಯಾಹ್ನದ ಬಾಕ್ಸ್‌ಗೆ ತೆಗೆದುಕೊಂಡು ಹೋಗುವ ವೇಳೆಗೆ ಚಪಾತಿ ರಟ್ಟಿನಂತೆ ಗಟ್ಟಿಯಾಗಿರುತ್ತವೆ. ನಿಮಗೂ ಹೀಗೆ ಆಗುತ್ತಿದ್ರೆ ಚಪಾತಿ ಬಿಸಿ ಬಿಸಿಯಾಗಿ, ಸಾಫ್ಟ್ ಆಗಿರಲು ಕೆಲವು ಸರಳ ವಿಧಾನಗಳಿವೆ. ಹಾಗಾಗಿ ಊಟದ ಸಮಯದವರೆಗೂ ನಿಮ್ಮ ಚಪಾತಿಯನ್ನು ಫ್ರೆಶ್ ಆಗಿ ಮತ್ತು ಮೃದುವಾಗಿಡಲು ನೀವು ಈ ಸರಳ ಟಿಪ್ಸ್ ಫಾಲೋ ಮಾಡ್ಬೋದು.
ಉಗುರು ಬೆಚ್ಚಗಿನ ನೀರಿನಿಂದ ಕಲಸಿದ ಹಿಟ್ಟು
ಹಿಟ್ಟನ್ನು ಬೆರೆಸುವಾಗ ತಣ್ಣೀರಿನ ಬದಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದು ಹಿಟ್ಟನ್ನು ಹೆಚ್ಚು ತಗ್ಗುವಂತೆ ಮಾಡುತ್ತದೆ ಮತ್ತು ಚಪಾತಿ ಮೃದುವಾಗಿರುತ್ತವೆ.
ಹಿಟ್ಟಿನಲ್ಲಿ ತುಪ್ಪ/ಎಣ್ಣೆಯನ್ನು ಬೆರೆಸಲು ಮರೆಯಬೇಡಿ.
ಹಿಟ್ಟನ್ನು ಬೆರೆಸುವಾಗ 1-2 ಚಮಚ ಎಣ್ಣೆ ಅಥವಾ ತುಪ್ಪ ಸೇರಿಸಿ. ಇದು ಚಪಾತಿ ಒಣಗುವುದನ್ನು ತಡೆಯುತ್ತದೆ ಮತ್ತು ಅದಕ್ಕೆ ಹೆಚ್ಚು ಸಾಫ್ಟ್‌ನೆಸ್ ನೀಡುತ್ತದೆ.
ಗಂಟಾದಾಗ ಸಾಫ್ಟ್ ಮಾಡಲು
ಹಿಟ್ಟನ್ನು ಕನಿಷ್ಠ 8-10 ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿಕೊಳ್ಳಿ. ಇದರಿಂದ ಅದು ನಯವಾಗಿ, ನಿಮಗೆ ಬೇಕಾದ ಆಕಾರಕ್ಕೆ ಬರುತ್ತದೆ.
ಅರ್ಧ ಗಂಟೆಯ ನಂತರ ಮಾಡಿ
ನಾದಿಟ್ಟ ಹಿಟ್ಟನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಅತ್ಯಂತ ಮುಖ್ಯವಾದ ಹಂತ.
ಈಗ ಚಪಾತಿ ಬೇಯಿಸುವ ವಿಧಾನ ನೋಡೋಣ..
ಚಪಾತಿಯ ಮೃದುತ್ವವು ಹಿಟ್ಟಿನ ಮೇಲೆ ಮಾತ್ರವಲ್ಲದೆ, ಅದನ್ನು ಬೇಯಿಸುವ ಮತ್ತು ಸಂಗ್ರಹಿಸುವ ವಿಧಾನದ ಮೇಲೂ ಅವಲಂಬಿತವಾಗಿರುತ್ತದೆ.
ಮಧ್ಯಮ ಉರಿಯಲ್ಲಿ ಬೇಯಿಸಿ
ಯಾವಾಗಲೂ ಮಧ್ಯಮ ಉರಿಯಲ್ಲಿ ಚಪಾತಿ ಬೇಯಿಸಿ. ಹೆಚ್ಚಿನ ಉರಿಯಲ್ಲಿ ಬೇಯಿಸುವುದರಿಂದ ಅದು ಬೇಗನೆ ಗಟ್ಟಿಯಾಗುತ್ತದೆ. ಮಧ್ಯಮ ಉರಿಯಲ್ಲಿ ಬೇಯಿಸುವುದರಿಂದ ಚಪಾತಿ ಚೆನ್ನಾಗಿ ಮೇಲೇರಲು ಮತ್ತು ಮೃದುವಾಗಿ ಉಳಿಯಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

