MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ದೋಸೆ ಮಾಡುವಾಗ ಜನರು ಈ 5 ತಪ್ಪು ಮಾಡ್ತಾರೆ, ಅದಕ್ಕಾಗಿಯೇ ಗರಿಗರಿಯಾಗಿ ಬರಲ್ಲ, ಅಂಟಿಕೊಳ್ಳುತ್ತೆ

ದೋಸೆ ಮಾಡುವಾಗ ಜನರು ಈ 5 ತಪ್ಪು ಮಾಡ್ತಾರೆ, ಅದಕ್ಕಾಗಿಯೇ ಗರಿಗರಿಯಾಗಿ ಬರಲ್ಲ, ಅಂಟಿಕೊಳ್ಳುತ್ತೆ

Dosa Making Mistakes: ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಖಾದ್ಯ. ಇದನ್ನು ಕೇವಲ ಉಪಾಹಾರವಾಗಿ ಮಾತ್ರವಲ್ಲದೆ, ಪೂರ್ಣ ಪ್ರಮಾಣದ ಊಟವಾಗಿಯೂ ಸೇವಿಸಲಾಗುತ್ತದೆ. ದೋಸೆ ತಯಾರಿಸುವಾಗ ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. 

2 Min read
Author : Ashwini HR
Published : Feb 25 2026, 05:06 PM IST
Share this Photo Gallery
  • FB
  • TW
  • Linkdin
  • Whatsapp
16
ಈ 5 ತಪ್ಪುಗಳಿಂದ ದೂರವಿರಿ
Image Credit : pixabay

ಈ 5 ತಪ್ಪುಗಳಿಂದ ದೂರವಿರಿ

ರುಚಿಯಾದ ಮತ್ತು ಕುರುಕುಲಾದ ದೋಸೆಯನ್ನು ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈಗಂತೂ ದೋಸೆಯಲ್ಲಿ ಅನೇಕ ವಿಧಗಳಿವೆ. ಹಾಗಾಗಿ ಜನರು ಮನೆಯಲ್ಲೇ ಮಾಡಲು ಇಷ್ಟಪಡುತ್ತಾರೆ. ಆದರೆ ಹಲವು ಬಾರಿ ಹೋಟೆಲ್ ಶೈಲಿಯ ಕ್ರಿಸ್ಪಿ ದೋಸೆ ಬರುವುದಿಲ್ಲ. ಶೆಫ್ ಸಂಜೀವ್ ಕಪೂರ್ ಅವರ ಪ್ರಕಾರ, ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳೇ ಇದಕ್ಕೆ ಕಾರಣ. ಹೋಟೆಲ್‌ನಂತೆ ಗೋಲ್ಡನ್ ಬಣ್ಣದ, ಕ್ರಿಸ್ಪಿ ದೋಸೆ ಬರಬೇಕೆಂದರೆ ಈ 5 ತಪ್ಪುಗಳಿಂದ ದೂರವಿರಿ..

26
1. ಸರಿಯಾದ ಹಿಟ್ಟು ಅಂದರೆ ಸರಿಯಾದ ದೋಸೆ
Image Credit : Pinterest

1. ಸರಿಯಾದ ಹಿಟ್ಟು ಅಂದರೆ ಸರಿಯಾದ ದೋಸೆ

ದೋಸೆಯ ಅಸಲಿ ರಹಸ್ಯ ಅದರ ಹಿಟ್ಟಿನಲ್ಲಿ ಅಡಗಿದೆ ಎಂದು ಶೆಫ್ ಸಂಜೀವ್ ಕುಮಾರ್ (ಕಪೂರ್) ಹೇಳುತ್ತಾರೆ. ಹಲವರು ಹಿಟ್ಟನ್ನು ಸರಿಯಾಗಿ ಹುದುಗಲು (Ferment) ಬಿಡುವುದಿಲ್ಲ ಅಥವಾ ಅತಿಯಾಗಿ ಫರ್ಮೆಂಟ್ ಮಾಡುತ್ತಾರೆ.
ಕಡಿಮೆ ಹುದುಗುವಿಕೆ: ದೋಸೆ ಗಟ್ಟಿಯಾಗುತ್ತದೆ.
ಅತಿಯಾದ ಹುದುಗುವಿಕೆ: ದೋಸೆ ರುಚಿ ಹುಳಿಯಾಗುತ್ತದೆ ಮತ್ತು ವಿನ್ಯಾಸ (Texture) ಹಾಳಾಗುತ್ತದೆ.
ಪರಿಹಾರ: ಹಿಟ್ಟು ಹಗುರವಾಗಿ, ನೊರೆಯಿಂದ ಕೂಡಿದಂತೆ ಕಾಣಬೇಕು. ಹವಾಮಾನಕ್ಕೆ ಅನುಗುಣವಾಗಿ 8 ರಿಂದ 12 ಗಂಟೆಗಳ ಕಾಲ ಹಿಟ್ಟನ್ನು ನೆನೆಯಲು ಬಿಡುವುದು ಸೂಕ್ತ.

Related Articles

Related image1
Cooking Tips: ಕೇವಲ 1 ಗಂಟೆಯಲ್ಲಿ ದೋಸೆ ಹಿಟ್ಟು ಹುದುಗುವಂತೆ ಮಾಡುವುದು ಹೇಗೆ?
Related image2
ಹಿಟ್ಟು ಎಲ್ಲೂ ಅಂಟಿಕೊಳ್ಳದೆ, ಹರಿಯದೆ ಸುಲಭವಾಗಿ ಮೇಲೇಳುತ್ತೆ ದೋಸೆ, ಉಪ್ಪಿನ ಟ್ರಿಕ್ಸ್ ತಿಳ್ಕೊಳ್ಳಿ
36
2. ತವಾವನ್ನು ಸರಿಯಾಗಿ ಕಾಯಿಸದಿರುವುದು
Image Credit : Pinterest

2. ತವಾವನ್ನು ಸರಿಯಾಗಿ ಕಾಯಿಸದಿರುವುದು

ಜನರು ಅವಸರದಲ್ಲಿ ತವಾ ಸರಿಯಾಗಿ ಕಾಯುವ ಮೊದಲೇ ದೋಸೆ ಹಿಟ್ಟು ಹಾಕುತ್ತಾರೆ.
ತವಾ ಅತಿಯಾಗಿ ಕಾಯ್ದಿದ್ದರೆ: ಹಿಟ್ಟು ಸರಿಯಾಗಿ ಹರಡಲು ಸಾಧ್ಯವಾಗುವುದಿಲ್ಲ.
ತವಾ ತಣ್ಣಗಿದ್ದರೆ: ದೋಸೆ ತವಾವನ್ನು ಅಂಟಿಕೊಳ್ಳುತ್ತದೆ.
ಪರಿಹಾರ: ತವಾ ಮಧ್ಯಮ ಬಿಸಿಯಲ್ಲಿರಬೇಕು. ಪರೀಕ್ಷಿಸಲು ತವಾ ಮೇಲೆ ಸ್ವಲ್ಪ ನೀರು ಚಿಮುಕಿಸಿ, ನೀರಿನ ಹನಿಗಳು ನರ್ತಿಸಿ ತಕ್ಷಣ ಆವಿಯಾದರೆ ತಾಪಮಾನ ಸರಿಯಾಗಿದೆ ಎಂದರ್ಥ. ಪ್ರತಿ ದೋಸೆ ಹಾಕುವ ಮೊದಲು ಸ್ವಲ್ಪ ಎಣ್ಣೆ ಸವರಿ ಬಟ್ಟೆ ಅಥವಾ ಅರ್ಧ ಈರುಳ್ಳಿಯಿಂದ ತವಾವನ್ನು ಒರೆಸಿ.

46
3. ಹಿಟ್ಟಿನ ಹದ (Consistency) ಸರಿಯಾಗಿರಲಿ
Image Credit : Pinterest

3. ಹಿಟ್ಟಿನ ಹದ (Consistency) ಸರಿಯಾಗಿರಲಿ

ಹಿಟ್ಟಿನ ಹದ ಸರಿಯಾಗಿಲ್ಲದಿದ್ದರೆ ದೋಸೆ ಚೆನ್ನಾಗಿ ಬರುವುದಿಲ್ಲ.
ಗಟ್ಟಿಯಾದ ಹಿಟ್ಟು: ದೋಸೆಯನ್ನು ದಪ್ಪವಾಗಿಸುತ್ತದೆ.
ಅತೀ ತೆಳುವಾದ ಹಿಟ್ಟು: ದೋಸೆ ಹರಡುವಾಗಲೇ ಒಡೆಯಲಾರಂಭಿಸುತ್ತದೆ.
ಪರಿಹಾರ: ಚಮಚದಿಂದ ಹಿಟ್ಟನ್ನು ಕೆಳಗೆ ಹಾಕಿದಾಗ ಅದು ತೆಳುವಾದ ಧಾರೆಯಂತೆ ಬೀಳಬೇಕು. ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಹದಕ್ಕೆ ತನ್ನಿ.

56
4. ದೋಸೆ ಹರಡುವ ತಪ್ಪು ವಿಧಾನ
Image Credit : Pinterest

4. ದೋಸೆ ಹರಡುವ ತಪ್ಪು ವಿಧಾನ

ಹಲವರು ಹಿಟ್ಟು ಹಾಕಿ ಪದೇ ಪದೇ ಹರಡಲು ಪ್ರಯತ್ನಿಸುತ್ತಾರೆ. ಇದರಿಂದ ದೋಸೆಯ ಮೇಲ್ಮೈ ಹಾಳಾಗುತ್ತದೆ ಮತ್ತು ಅದು ಜಾಲಿಬಂದಂತೆ (ರಂಧ್ರಯುಕ್ತವಾಗಿ) ಕಾಣುವುದಿಲ್ಲ.
ಸರಿಯಾದ ಕ್ರಮ: ಹಿಟ್ಟನ್ನು ತವಾವಿನ ಮಧ್ಯಭಾಗಕ್ಕೆ ಹಾಕಿ, ಒಂದೇ ದಿಕ್ಕಿನಲ್ಲಿ ಹಗುರವಾದ ಕೈಗಳಿಂದ ವೃತ್ತಾಕಾರವಾಗಿ ಹರಡಿ. ಅತಿಯಾದ ಒತ್ತಡ ಹಾಕಬೇಡಿ. ಕೈ ಎಷ್ಟು ಹಗುರವಾಗಿದ್ದರೆ ದೋಸೆ ಅಷ್ಟು ತೆಳುವಾಗಿ ಮತ್ತು ಕ್ರಿಸ್ಪಿಯಾಗಿ ಬರುತ್ತದೆ.

66
5. ಎಣ್ಣೆ ಅಥವಾ ತುಪ್ಪದ ತಪ್ಪು ಬಳಕೆ
Image Credit : Pinterest

5. ಎಣ್ಣೆ ಅಥವಾ ತುಪ್ಪದ ತಪ್ಪು ಬಳಕೆ

ಕೆಲವರು ದೋಸೆ ಹಾಕಿದ ತಕ್ಷಣವೇ ಅತಿಯಾದ ಎಣ್ಣೆ ಹಾಕುತ್ತಾರೆ. ಇದರಿಂದ ದೋಸೆ ಎಣ್ಣೆಯಲ್ಲಿ ಕರಿದಂತೆ ಕಾಣುತ್ತದೆಯೇ ಹೊರತು ಕ್ರಿಸ್ಪಿಯಾಗುವುದಿಲ್ಲ.
ಪರಿಹಾರ: ದೋಸೆ ಸ್ವಲ್ಪ ಒಣಗಲು ಪ್ರಾರಂಭಿಸಿದಾಗ ಅದರ ಅಂಚುಗಳಲ್ಲಿ ಮತ್ತು ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಇದರಿಂದ ಅಂಚುಗಳು ತಾವಾಗಿಯೇ ಮೇಲೇಳುತ್ತವೆ ಮತ್ತು ದೋಸೆ ಸುಂದರವಾದ ಗೋಲ್ಡನ್ ಬಣ್ಣಕ್ಕೆ ತಿರುಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಸೇಬು ಹಣ್ಣು ತಿನ್ನೋದೊಂದೇ ಅಲ್ಲ, ಬಲು ಅಪರೂಪದ ಅಡುಗೆ ಹೇಳಿಕೊಟ್ಟ 'ಬೆಳದಿಂಗಳ ಬಾಲೆ' Suman Nagarkar
Recommended image2
ಪ್ರತಿ ವರ್ಷ ಅದೇ ಚಿಕನ್ ಗ್ರೇವಿನಾ? ಟ್ರೈ ಮಾಡಿ ಐದು ಬಗೆಯ ರುಚಿಕರ ಡ್ರೈ ಚಿಕನ್ ರೆಸಿಪಿ
Recommended image3
Best Soft Idli Recipe: ಒಂದೇ ಒಂದು ಟ್ರಿಕ್! ನಿಮ್ಮ ಮನೆಯ ಇಡ್ಲಿ ಇನ್ನು ಮುಂದೆ ಕಲ್ಲಿನಂತೆ ಆಗಲ್ಲ
Related Stories
Recommended image1
Cooking Tips: ಕೇವಲ 1 ಗಂಟೆಯಲ್ಲಿ ದೋಸೆ ಹಿಟ್ಟು ಹುದುಗುವಂತೆ ಮಾಡುವುದು ಹೇಗೆ?
Recommended image2
ಹಿಟ್ಟು ಎಲ್ಲೂ ಅಂಟಿಕೊಳ್ಳದೆ, ಹರಿಯದೆ ಸುಲಭವಾಗಿ ಮೇಲೇಳುತ್ತೆ ದೋಸೆ, ಉಪ್ಪಿನ ಟ್ರಿಕ್ಸ್ ತಿಳ್ಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved