MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Life
  • Food
  • ಮೋದಿ ಸವಿದ ಜಲ್ಮುರಿಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್​: ಮನೆಯಲ್ಲೇ ತಯಾರಿಸೋದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

ಮೋದಿ ಸವಿದ ಜಲ್ಮುರಿಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್​: ಮನೆಯಲ್ಲೇ ತಯಾರಿಸೋದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ 10 ರೂಪಾಯಿಯ ಜಲ್ಮುರಿ ಸವಿದಿದ್ದು, ಈ ತಿನಿಸು ಭಾರೀ ಜನಪ್ರಿಯವಾಗಿದೆ. ಸಾಮಾನ್ಯ ಮಂಡಕ್ಕಿಗಿಂತ ಭಿನ್ನವಾದ, ಸಾಸಿವೆ ಎಣ್ಣೆಯ ವಿಶೇಷ ಸ್ಪರ್ಶವಿರುವ ಈ ಜಲ್ಮುರಿಯನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

2 Min read
Author : Suchethana D
Published : Apr 20 2026, 11:47 AM IST
Share this Photo Gallery
  • FB
  • TW
  • Linkdin
  • Whatsapp
16
ಮೋದಿ ಸವಿದ ಜಲ್ಮುರಿ
Image Credit : Asianet News

ಮೋದಿ ಸವಿದ ಜಲ್ಮುರಿ

ಪಶ್ಚಿಮ ಬಂಗಾಳದ ಚುನಾವಣೆ ಇನ್ನೇನು ಸಮೀಪ ಆಗ್ತಿದೆ. 23 ಮತ್ತು 29ರಂದು ಎರಡು ಹಂತಗಳಲ್ಲಿ ಈ ಚುನಾವಣೆ ನಡೆಯಲಿದೆ. ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರಚಾರದಲ್ಲಿ ತೊಡಗಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ದೀದೀ ಆಡಳಿತಕ್ಕೆ ತಿಲಾಂಜಲಿ ಇತ್ತು, ಮೋದಿ ಆಡಳಿತ ತರಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದರ ನಡುವೆಯೇ, ನಿನ್ನೆ ಪ್ರಧಾನಿ ಅಲ್ಲಿಯ ಚಿಕ್ಕ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು 10 ರೂಪಾಯಿಗಳ ಜಲ್ಮುರಿ ಖರೀದಿ ಮಾಡಿದರು, ಅಲ್ಲಿದ್ದವರಿಗೆ ಹಂಚಿದರು. ಇದಕ್ಕಾಗಿ ಈ ಜಲ್ಮುರಿಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್​ ಬಂದಿದೆ. ಹಾಗಿದ್ದರೆ ಏನಿದು ಜಲ್ಮುರಿ, ಇದನ್ನು ಮಾಡೋದು ಹೇಗೆ ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೇಲ್​ಪುರಿ, ಕಡ್ಲೆ ಪುರಿಗಿಂತ ತುಸು ಭಿನ್ನ
Image Credit : X@Narendramodi

ಬೇಲ್​ಪುರಿ, ಕಡ್ಲೆ ಪುರಿಗಿಂತ ತುಸು ಭಿನ್ನ

ಸಾಮಾನ್ಯವಾಗಿ ಮಸಾಲೆ ಮಂಡಕ್ಕಿ, ಬೇಲ್​ಪುರಿ, ಕಡ್ಲೆ ಪುರಿ ಎಂದೆಲ್ಲಾ ನಮ್ಮಲ್ಲಿ ಕರೆಯೋದು ಮಾಮೂಲು. ನೋಡಲು ಅದೇ ರೀತಿ ಇರುತ್ತೆ ಜಲ್ಮುರಿ. ಆದರೆ ಇದನ್ನು ಮಾಡುವ ವಿಧಾನ ಸ್ವಲ್ಪ ವ್ಯತ್ಯಾಸ ಇರುವ ಕಾರಣ, ಟೇಸ್ಟ್​ನಲ್ಲಿಯೂ ತುಂಬಾ ವ್ಯತ್ಯಾಸ ಇರುತ್ತದೆ. ಜಲ್ಮುರಿಯಲ್ಲಿ ಅಗತ್ಯವಾಗಿ ಬೇಕಾದದ್ದು ಸಾಸಿವೆ ಎಣ್ಣೆ ಒಂದೆರಡು ಚಮಚ. ಇದನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿ ಮಾಡುವ ವಿಧಾನ ಎಲ್ಲವುಗಳ ಬಗ್ಗೆ ಇಲ್ಲಿ ಡಿಟೇಲ್ಸ್​ ನೀಡಲಾಗಿದೆ.

Related Articles

Related image1
TMC Vs NDA: ಪಶ್ಚಿಮ ಬಂಗಾಳದಲ್ಲಿ ದೀದಿನೊ, ಮೋದಿನೊ? ಜ್ಯೋತಿಷಿಗಳಿಂದ ಶಾಕಿಂಗ್​ ಭವಿಷ್ಯ
Related image2
ಡಾ.ರಾಜ್​ ಚಿತ್ರದ ಹಾಡನ್ನು ಶೇರ್​ ಮಾಡಿದ ಪಿಎಂ ಮೋದಿ: ಕನ್ನಡಿಗರಿಂದ ಧನ್ಯವಾದಗಳ ಮಹಾಪೂರ
36
ಬೇಕಾಗುವ ಸಾಮಗ್ರಿಗಳು:
Image Credit : X@Narendramodi

ಬೇಕಾಗುವ ಸಾಮಗ್ರಿಗಳು:

  • 1-2 ಚಮಚ ಸಾಸಿವೆ ಎಣ್ಣೆ (ಇದೇ ಈ ತಿನಿಸಿನ ಹೈಲೈಟ್​- ಇದು ಅತ್ಯಗತ್ಯ)
  • ಮಂಡಕ್ಕಿ (ಕಡ್ಲೆಪುರಿ- puffed rice) 2-3 ಕಪ್
  • 1 ಮಧ್ಯಮ ಗಾತ್ರದ ಈರುಳ್ಳಿ,
  • 1 ಟೊಮೆಟೊ,
  • 1 ಸೌತೆಕಾಯಿ
  • 1 ಚಿಕ್ಕ ಬೇಯಿಸಿದ ಆಲೂಗಡ್ಡೆ

ಇವೆಲ್ಲವನ್ನೂ ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು.

46
ಇನ್ನಷ್ಟು ಸಾಮಗ್ರಿಗಳು
Image Credit : X@Narendramodi

ಇನ್ನಷ್ಟು ಸಾಮಗ್ರಿಗಳು

  • 1/2 ಕಪ್ : ಯಾವುದಾದರೂ mixture (ಸೇವ್​, ಬಾಂಬೆ ಮಿಕ್ಸ್​ ಇತ್ಯಾದಿ)
  • 2-3 ಚಮಚ: ಹುರಿದ ಕಡಲೆಕಾಯಿ
  • 1/2 ಚಮಚ: ಹುರಿದ ಜೀರಿಗೆ ಪುಡಿ
  • ರುಚಿಗೆ ತಕ್ಕಷ್ಟು: ಉಪ್ಪು,
  • (ಸಾಮಾನ್ಯ ಉಪ್ಪಿನ ಜೊತೆ ಬ್ಲ್ಯಾಕ್​ ಸಾಲ್ಟ್​ ಸೇರಿಸಿದರೆ ಇನ್ನಷ್ಟು ಟೇಸ್ಟ್​ ಬರುತ್ತದೆ)
  • 1-2: ಹಸಿರು ಮೆಣಸಿನಕಾಯಿ
  • ನಿಂಬೆ ರಸ: 1 ಚಮಚ
  • ಕೊತ್ತಂಬರಿ ಸೊಪ್ಪು: ಚಿಕ್ಕದ್ದಾಗಿ ಕತ್ತರಿಸಿದ್ದು
56
ಮಾಡುವ ವಿಧಾನ
Image Credit : X@Narendramodi

ಮಾಡುವ ವಿಧಾನ

  • ಮಂಡಕ್ಕಿ ಅಥವಾ ಪುರಿ ಗರಿಗರಿ ಇಲ್ಲದಿದ್ದರೆ ಮೊದಲು ಅದನ್ನು 1 ನಿಮಿಷ ಡ್ರೈ ಫ್ರೈ ಮಾಡಿಕೊಳ್ಳಿ
  • ಇದಕ್ಕೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಬೇಯಿಸಿದ ಆಲೂಗಡ್ಡೆ, ಕಡಲೆಕಾಯಿ ಮತ್ತು ಮಿಕ್ಸರ್​ ಸೇರಿಸಿ.
  • ಬಳಿಕ ಬ್ಲ್ಯಾಕ್​ ಸಾಲ್ಟ್​, ಮಾಮೂಲು ಉಪ್ಪು, ಹುರಿದ ಜೀರಿಗೆ ಪುಡಿ, ಹಸಿರು ಮೆಣಸಿನಕಾಯಿ ಸೇರಿಸಿ.
  • ಕೊನೆಯಲ್ಲಿ 1-2 ಟೀ ಚಮಚ ಖಾರದ ಸಾಸಿವೆ ಎಣ್ಣೆಯನ್ನು ಸೇರಿಸಿ.
  • ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ನಂತರ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಮೇಲಕ್ಕೆ ಹಾಕಿ. ತಕ್ಷಣ ಸೇವಿಸಬೇಕು. ಇಲ್ಲದಿದ್ದರೆ ಅವು ಪಿಚಿಪಿಚಿಯಾಗಿ ತಿನ್ನಲು ಚೆನ್ನಾಗಿರುವುದಿಲ್ಲ.
66
ಸಲಹೆಗಳು:
Image Credit : ANI

ಸಲಹೆಗಳು:

ಉಪ್ಪಿನಕಾಯಿ ಎಣ್ಣೆ: ನಿಜವಾದ ಸುವಾಸನೆಗಾಗಿ ಸಾಸಿವೆ ಎಣ್ಣೆಯ ಬದಲಿಗೆ ಮಾವಿನ ಉಪ್ಪಿನಕಾಯಿ ಎಣ್ಣೆಯನ್ನು ಬಳಸಬಹುದು.

ಗರಿಗರಿಯಾದ ಸೇವ್ ಅಥವಾ ಭುಜಿಯಾ ಬಳಸಿದರೆ ಸಕತ್​ ಟೇಸ್ಟ್​ ಸಿಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪಶ್ಚಿಮ ಬಂಗಾಳ
ನರೇಂದ್ರ ಮೋದಿ
ರಾಜಕೀಯ ಸುದ್ದಿ
ಭಾರತ ಸುದ್ದಿ
ಆಹಾರ
ಆರೋಗ್ಯ
 

Latest Videos
Recommended Stories
Recommended image1
ಮಜ್ಜಿಗೆ ಹುಳಿ ಸಂಜೆಯಾದ್ರೂ ಹುಳಿಯಾಗಬಾರದೆಂದರೆ ಇಷ್ಟು ಮಾಡಿ ಸಾಕು
Recommended image2
ಸಮಯ ಕಡಿಮೆ ಇದ್ದಾಗ ಮಾಡ್ಕೊಳ್ಳಿ ಸೋಂಬೇರಿ ರೈಸ್‌ ಬಾತ್; ಕಡಿಮೆ ಮಸಾಲೆ, ಹದವಾದ ಅಡುಗೆ
Recommended image3
BRICS ಊಟದಲ್ಲಿ ಪನೀರ್ ಪದಾರ್ಥಕ್ಕೆ ಈರುಳ್ಳಿ ಬದಲು ಶಾಲೆಟ್ಸ್ ಬಳಕೆ, ಈರುಳ್ಳಿಗೂ ಶಾಲೆಟ್ಸ್‌ಗೂ ವ್ಯತ್ಯಾಸ ಏನು?
Related Stories
Recommended image1
TMC Vs NDA: ಪಶ್ಚಿಮ ಬಂಗಾಳದಲ್ಲಿ ದೀದಿನೊ, ಮೋದಿನೊ? ಜ್ಯೋತಿಷಿಗಳಿಂದ ಶಾಕಿಂಗ್​ ಭವಿಷ್ಯ
Recommended image2
ಡಾ.ರಾಜ್​ ಚಿತ್ರದ ಹಾಡನ್ನು ಶೇರ್​ ಮಾಡಿದ ಪಿಎಂ ಮೋದಿ: ಕನ್ನಡಿಗರಿಂದ ಧನ್ಯವಾದಗಳ ಮಹಾಪೂರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved