MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಜಿಮ್‌ ಇಲ್ಲ, ಫ್ಯಾನ್ಸಿ ಡಯೆಟ್‌ ಮಾಡದೆ 20kg ತೂಕ ಇಳಿಸಿಕೊಂಡ್ರು; ಹುಬ್ಬಳ್ಳಿಯ ಪ್ರವೀಣ್‌ ಗುಡಿ ಸೀಕ್ರೇಟ್‌ ಇದು!

ಜಿಮ್‌ ಇಲ್ಲ, ಫ್ಯಾನ್ಸಿ ಡಯೆಟ್‌ ಮಾಡದೆ 20kg ತೂಕ ಇಳಿಸಿಕೊಂಡ್ರು; ಹುಬ್ಬಳ್ಳಿಯ ಪ್ರವೀಣ್‌ ಗುಡಿ ಸೀಕ್ರೇಟ್‌ ಇದು!

Praveen Gudi Weight Loss: ಲೈಫ್‌ಕೋಚ್‌, ಮೋಟಿವೇಶನಲ್‌ ಸ್ಪೀಕರ್‌, ಹುಬ್ಬಳ್ಳಿಯ ಪ್ರವೀಣ್‌ ಗುಡಿ ಅವರು ಜಿಮ್‌ಗೆ ಹೋಗದೆ, ಫ್ಯಾನ್ಸಿ ಡಯೆಟ್‌ ಮಾಡದೆ ಸಣ್ಣ ಆಗಿದ್ದಾರೆ. ಒಟ್ಟಾರೆಯಾಗಿ 20kg ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ಮಾತನಾಡಿದ್ದಾರೆ. 

3 Min read
Author : Padmashree Bhat| AFP
Published : May 19 2026, 07:30 AM IST
Share this Photo Gallery
  • FB
  • TW
  • Linkdin
  • Whatsapp
17
ತೂಕ ಕಳೆದುಕೊಳ್ಳುವ ಮನಸ್ಸು ಹೇಗೆ ಬಂತು?
Image Credit : Asianet News

ತೂಕ ಕಳೆದುಕೊಳ್ಳುವ ಮನಸ್ಸು ಹೇಗೆ ಬಂತು?

ನನ್ನ ತಂದೆ-ತಾಯಿ ಇಬ್ಬರಿಗೂ ಶುಗರ್‌ ಕಾಯಿಲೆ ಇತ್ತು. ತಂದೆ ಶುಗರ್‌ ಕಾಯಿಲೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಅವರು 22 ಬಾರಿ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದರು. ತಂದೆ ಅನುಭವಿಸಿದ ಕಷ್ಟ ಒಂದುಕಡೆಯಾದರೆ, ಇನ್ನೊಂದು ಕಡೆ ಅವರನ್ನು ನೋಡಿಕೊಳ್ಳಲು ನಾವು ಸಮಯ ಕೊಡಬೇಕು, ಹಣದ ವ್ಯಯ ಕೂಡ ಆಗುವುದು. ಆಸ್ಪತ್ರೆಯಲ್ಲಿ ರೋಗಿ ಅನುಭವಿಸುವ ನೋವು ಒಂದುಕಡೆಯಾದರೆ, ಅವರನ್ನು ನೋಡಿಕೊಳ್ಳುವವರು ಕೂಡ ಇನ್ನೊಂದಿಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

Add Asianetnews Kannada as a Preferred SourcegooglePreferred
27
ದಪ್ಪ ಆಗಿದ್ದಕ್ಕೆ ಏನೇನು ಸಮಸ್ಯೆ ಆಗಿತ್ತು?
Image Credit : Asianet News

ದಪ್ಪ ಆಗಿದ್ದಕ್ಕೆ ಏನೇನು ಸಮಸ್ಯೆ ಆಗಿತ್ತು?

ಲೈಫ್‌ ಕೋಚ್‌, ಮೋಟಿವೇಶನ್‌ ಸ್ಪೀಕರ್‌ ಆಗಿರುವ ನಾನು ತಿಂಗಳಲ್ಲಿ ಹದಿನೈದು ದಿನ ನಾನು ಟ್ರಾವೆಲ್‌ ಮಾಡಲೇಬೇಕಿತ್ತು. ಕೆಲಸದಲ್ಲಿ ನಿಷ್ಠೆಯಲ್ಲಿದ್ದ ನಾನು ಊಟ, ತಿಂಡಿ- ವ್ಯಾಯಾಮದ ಕಡೆ ಗಮನ ಕೊಡಲಿಲ್ಲ. ಕ್ಯಾಲರಿ ಬಗ್ಗೆ ಅರಿಯದೆ, ನನ್ನ ಹೊಟ್ಟೆಯನ್ನು ಕಸದ ಬುಟ್ಟಿ ಥರ ಮಾಡ್ಕೊಂಡಿದ್ದೆ, ಸಿಕ್ಕಿದ್ದೆಲ್ಲವನ್ನು ತಿನ್ನುತ್ತಿದ್ದೆ. ಹೀಗಾಗಿ ನಾನು 88kg ತೂಕ ದಪ್ಪ ಆಗಿದ್ದೆ. ಇದರಿಂದ ಒಂದಿಷ್ಟು ಆರೋಗ್ಯ ಸಮಸ್ಯೆಗಳು ಆದವು. ಇನ್ನು ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಬಿಪಿ, ಶುಗರ್‌ ಕಾಯಿಲೆಗಳು ಬರೋದು ಸಹಜ. ಇವುಗಳು ಬರದಂತೆ ತಡೆಯಲು ನಮ್ಮ ಲೈಫ್‌ಸ್ಟೈಲ್‌ನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.

Related Articles

Related image1
ಕಡಿಮೆ ಎಣ್ಣೆ ಬಳಸುವಂತೆ ಪ್ರಧಾನಿ ಮನವಿ… OIL ಇಲ್ಲದೇ ಈ ರೀತಿ ಟೇಸ್ಟಿ ಆಹಾರ ತಯಾರಿಸಿ
Related image2
ಆಹಾರ ಪ್ರಿಯರನ್ನು ಹುಚ್ಚರನ್ನಾಗಿ ಮಾಡ್ತಿರೋ ಕೊಂಕಣಿ ಶೈಲಿಯ 'ಅಂಬಾಟ ಬಟಾಟ' ರೆಸಿಪಿ
37
ಡಾಕ್ಟರ್‌ ಹತ್ರ ಹೋಗಿಲ್ಲ
Image Credit : Asianet News

ಡಾಕ್ಟರ್‌ ಹತ್ರ ಹೋಗಿಲ್ಲ

ಯಾವುದೇ ಫಂಕ್ಷನ್‌ಗೆ ಹೋದರೂ, ಹೊರಗಡೆ ಹೋದರೂ ಕೂಡ ಪ್ರೋಟೀನ್‌ಯುಕ್ತ ಆಹಾರವನ್ನು ಸೇವನೆ ಮಾಡ್ತೀನಿ. ಇದರಲ್ಲಿ ನಾನು ರಾಜಿ ಆಗುವುದಿಲ್ಲ. ನನಗೋಸ್ಕರ ನಾನು ದಿನದಲ್ಲಿ ಒಂದಿಷ್ಟು ಸಮಯ ಮೀಸಲಿಟ್ಟು ವಾಕಿಂಗ ಮಾಡ್ತೀನಿ, ಡಯೆಟ್‌ ಮಾಡ್ತೀನಿ. ಇದನ್ನು ಬೇರೆಯವರು ಕೂಡ ಗೌರವಿಸಬೇಕು. ಆರಂಭದಲ್ಲಿ ಕೆಲವರು ಇದನ್ನು ಟೀಕೆ ಮಾಡಿದರೂ, ನೆಗೆಟಿವ್‌ ಮಾತನಾಡಿದರೂ ಕೂಡ ನಾನು ಮಾತ್ರ ತಲೆ ಕೆಡಿಸಿಕೊಳ್ಳದೆ ನಿರಂತರತೆ ಕಾಪಾಡಿಕೊಂಡು ಬಂದಿದ್ದಕ್ಕೆ ಇಂದು 38 ವರ್ಷವಾದರೂ ಕೂಡ 30ರ ಹುಡುಗನ ಥರ ಕಾಣ್ತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಕಳೆದ ಎರಡು ವರ್ಷಗಳಿಂದ ನಾನು ಅನಾರೋಗ್ಯ ಎಂದು ಡಾಕ್ಟರ್‌ ಬಳಿ ಹೋಗಿಲ್ಲ, ಸಣ್ಣ ಪುಟ್ಟ ನೆಗಡಿ, ಜ್ವರ ಬಂದಿರಬಹುದೇ ವಿನಃ ನನಗೆ ದೊಡ್ಡ ಆರೋಗ್ಯ ಸಮಸ್ಯೆ ಬಂದಿಲ್ಲ.

47
ಮಗ ಕೂಡ ಸಣ್ಣ ಆಗಿದ್ದಾನೆ
Image Credit : Asianet News

ಮಗ ಕೂಡ ಸಣ್ಣ ಆಗಿದ್ದಾನೆ

ನನ್ನ ಮಗ ಕೂಡ ಅವನ ವಯಸ್ಸಿಗಿಂತ ಜಾಸ್ತಿ ದಪ್ಪ ಇದ್ದನು. 12 ವರ್ಷದ ನನ್ನ ಮಗ 68kg ತೂಕ ಇದ್ದನು. ಅವನು ಕೂಡ ಈಗ ಸಮತೋಲಿತ ಆಹಾರ ತಿಂದು ಎರಡು ತಿಂಗಳಲ್ಲಿ 9kg ತೂಕ ಇಳಿಸಿಕೊಂಡಿದ್ದಾನೆ. ಅವನ ಶ್ರದ್ಧೆಯಿಂದ ಇಷ್ಟು ಡಯೆಟ್‌ ಮಾಡಲು ಸಾಧ್ಯವಾಗಿದೆ. ಚಿಕ್ಕ ಮಕ್ಕಳಲ್ಲಿ ಕೂಡ obscenity ಬರುತ್ತಿದೆ. ಪಾಲಕರು ಕೂಡ ಮಕ್ಕಳಿಗೆ ಸಮತೋಲನ ಆಹಾರ ಸೇವನೆ ಮಾಡುವಂತೆ ಮಾಡಬೇಕು, ಜಾಗೃತಿ ಮೂಢಿಸಬೇಕು. 

57
ಕ್ರೇವಿಂಗ್ಸ್‌ ಕಂಟ್ರೋಲ್‌ ಮಾಡೋದು ಹೇಗೆ?
Image Credit : Asianet News

ಕ್ರೇವಿಂಗ್ಸ್‌ ಕಂಟ್ರೋಲ್‌ ಮಾಡೋದು ಹೇಗೆ?

ನನ್ನ ಹೈಟ್ ಎಷ್ಟಿದೆಯೋ, ಅದಕ್ಕಿಂತ ಹೆಚ್ಚಿನ ತೂಕ ಇದ್ದಿದ್ದಕ್ಕೆ ನನಗೆ ಕಾಲು ನೋವು ಇತ್ತು, ಅಷ್ಟೇ ಅಲ್ಲದೆ ಡಿಸ್ಕ್‌ ಸಮಸ್ಯೆ ಕೂಡ ಇತ್ತು. ಇಂದು ಅದೆಲ್ಲವೂ ಮಾಯವಾಗಿದೆ, ಅಷ್ಟು ಸಮಸ್ಯೆ ಮಾಡ್ತಿಲ್ಲ. ಸಿಹಿ ತಿಂಡಿ, ಕರಿದ ತಿಂಡಿ, ಮೈದಾ ಬಿಟ್ಟಿರುವುದಕ್ಕೆ ನನಗೆ ಎಸಿಡಿಟಿ ಸಮಸ್ಯೆ ಕೂಡ ಇಲ್ಲ. ನಮ್ಮ ನಾಲಿಗೆಗೆ ರುಚಿ ಕೊಡಬೇಕು ಎಂದು ಬೇಕಾಗಿದ್ದನ್ನೆಲ್ಲ ತಿಂದರೆ, ನಮ್ಮ ಹೊಟ್ಟೆಗೆ ಮೋಸ ಮಾಡಿದ ಹಾಗೆ ಆಗುತ್ತದೆ. ನಮ್ಮ ಹೊಟ್ಟೆಗೆ ರುಚಿ ಗೊತ್ತಾಗೋದಿಲ್ಲ ಎಂದು ನಾನು ನಂಬ್ತೀನಿ. ಈಗ ನಾನು ನನ್ನ ಆರು ವರ್ಷದ ಮಗಳ ಜೊತೆ ಆರಾಮಾಗಿ ಆಟ ಆಡ್ತೀನಿ, ನಿತ್ಯವೂ ಆಕ್ಟಿವ್‌ ಆಗಿರ್ತೀನಿ. ಒಟ್ಟಿನಲ್ಲಿ ಆರೋಗ್ಯಯುತ ಜೀವನವನ್ನು ಮಾಡ್ತಿದ್ದೀನಿ.

67
ಡಯೆಟ್‌ ಹೇಗಿತ್ತು?
Image Credit : Asianet News

ಡಯೆಟ್‌ ಹೇಗಿತ್ತು?

ಎರಡು ವರ್ಷಗಳ ಹಿಂದೆ ಅಂಡಮಾನ್‌ನಲ್ಲಿದ್ದೆ. ಆಗ ಮನಸ್ಸು ಮಾಡಿ ಯಾವಾಗ? ಎಷ್ಟು? ಏನು? ಆಹಾರ ತಗೋಬೇಕು ಎಂದು ರಿಸರ್ಚ್‌ ಮಾಡಿದೆ. ಈ ಹಿಂದೆ ಪಠ್ಯದಲ್ಲಿದ್ದರೂ ಕೂಡ ನಾವು ಸಮತೋಲನ ಆಹಾರದ ಬಗ್ಗೆ ಓದಿ ಸುಮ್ಮನಾಗಿರುತ್ತೇವೆ. ಆ ಜ್ಞಾನವನ್ನು ನಾನು ಈಗ ನನ್ನ ಜೀವನಕ್ಕೆ ಅಳವಡಿಸಿದೆ.

ಸಸ್ಯಾಹಾರಿಯಾಗಿದ್ದು ನನ್ನ ಆಹಾರದಲ್ಲಿ ಬದಲಾವಣೆ ಮಾಡಿಕೊಂಡೆ. ನಿತ್ಯವೂ ನನ್ನ ದೇಹಕ್ಕೆ ಎಷ್ಟು ಕ್ಯಾಲರಿ ಆಹಾರ ಬೇಕು? ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಇದರ ಮಧ್ಯೆ ತಿಂಡಿ ತಿಂದಾಗ ಎಷ್ಟು ಕ್ಯಾಲರಿ ಸೇವನೆ ಮಾಡುತ್ತೇನೆ ಎಂದು ಲೆಕ್ಕ ಹಾಕಿದೆ. ಇದರ ಆಧಾರದ ಮೇಲೆ ಆಹಾರ ಸೇವನೆ ಮಾಡುತ್ತ ಬಂದೆ. ನನ್ನ ದೇಹಕ್ಕೆ 1600 ಕ್ಯಾಲರಿ ಬೇಕು ಎಂದಾಗ, ಅದಕ್ಕಿಂತ ಸ್ವಲ್ಪ ಕಡಿಮೆ ಸೇವನೆ ಮಾಡಿರುತ್ತೇವೆ. ಇದರ ಜೊತೆಗೆ ವ್ಯಾಯಾಮ ಮಾಡಿದಾಗ ಒಂದಿಷ್ಟು ಕ್ಯಾಲರಿ ಬರ್ನ್‌ ಆಗುತ್ತದೆ. ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಾಗ, ನಮ್ಮ ದೇಹದಲ್ಲಿರುವ ಫ್ಯಾಟ್‌ ಬರ್ನ್‌ ಆಗಿ ಸಣ್ಣ ಆಗುತ್ತೇವೆ. ನಾನು ಜಿಮ್‌ಗೆ ಹೋಗದೆ, ನಿತ್ಯವೂ 15 ಸಾವಿರದಿಂದ 20 ಸಾವಿರದವರೆಗೆ Steps ವಾಕಿಂಗ್‌ ಮಾಡ್ತೀನಿ. ಇದರಿಂದ ಸರಿಸುಮಾರು 800 ಕ್ಯಾಲರಿ ಬರ್ನ್‌ ಆಗುವುದು. ಇದರ ಜೊತೆಗೆ ನಿತ್ಯವೂ 4 ಲೀಟರ್‌ ನೀರು ಕುಡಿಯುತ್ತೇನೆ.

ನಾನು ಕಡಿಮೆ ತಿಂತೀನಿ, ಆದರೂ ಸಣ್ಣ ಆಗ್ತಿಲ್ಲ ಎಂದು ಕೆಲವರು ಹೇಳೋದುಂಟು. ಒಂದು ಚಾಕೋಲೇಟ್‌ ಸಣ್ಣದಾಗಿ ಕಂಡರೂ ಅದರಲ್ಲಿ ಎಷ್ಟು ಕ್ಯಾಲರಿ ಇರುತ್ತದೆ, ಒಂದು ಚಪಾತಿಯಲ್ಲಿ ಎಷ್ಟು ಕ್ಯಾಲರಿ ಇರುತ್ತದೆ ಎಂದು ಅರಿವು ಇರಬೇಕು. ಆಗ ನಿಜಕ್ಕೂ ನಾವು ನಿಜಕ್ಕೂ ಕಡಿಮೆ ತಿನ್ನುತ್ತಿದ್ದೇವೋ ಅಥವಾ ಹೆಚ್ಚು ತಿನ್ನುತ್ತೇವೆಯೋ ಎಂದು ಗೊತ್ತಾಗುತ್ತದೆ.

77
ಇದು ಮೂರು ತಿಂಗಳ ಕೋರ್ಸ್‌ ಅಲ್ಲ!
Image Credit : praveen gudi instagram

ಇದು ಮೂರು ತಿಂಗಳ ಕೋರ್ಸ್‌ ಅಲ್ಲ!

ಇಂದು ಸಾಕಷ್ಟು ಕಂಪೆನಿಗಳು ತೂಕ ಇಳಿಕೆ, ತೂಕ ಏರಿಕೆ ಎಂದು ಒಂದಿಷ್ಟು ಪ್ರಾಡಕ್ಟ್‌ಗಳನ್ನು ಕೊಡುತ್ತವೆ, ಅವುಗಳ ಮೊರೆ ಹೋಗದೆ, ವೇಟ್‌ ಲಾಸ್‌ನ್ನು ಒಂದು ತಿಂಗಳು ಅಥವಾ ಮೂರು ತಿಂಗಳು ಎಂದು ಸೀಮಿತ ಮಾಡಬಾರದು. ಬದಲಿಗೆ ಇದನ್ನು ನಾವು ಜೀವನದಾದ್ಯಂತ ರೂಢಿ ಮಾಡಿಕೊಂಡು ಹೋಗಬೇಕು. ಅಂದು ಸಣ್ಣ ಆಗು ಎಂದ ಡಾಕ್ಟರ್‌, ಇಂದು ನನ್ನ ಬಳಿ ಹೇಗೆ ಸಣ್ಣ ಆದೆ ಎಂದು ಟಿಪ್ಸ್‌ ಕೇಳ್ತಾರೆ. ಕೆಲ ಡಾಕ್ಟರ್‌ಗಳು ಅವರು ಯಾವ ವಿಷಯದಲ್ಲಿ ಅಧ್ಯಯನ ಮಾಡಿರುತ್ತಾರೋ ಅವರಿಗೆ, ಅದರ ಜ್ಞಾನ ಇರುತ್ತದೆ, ಆದರೆ ಸಮತೋಲನ ಆಹಾರದ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.

ಜಿಮ್‌ ಬಿಟ್ಟೆ, ದಪ್ಪ ಆದೆ ಎನ್ನುತ್ತಾರೆ. ಅದು ಜಿಮ್‌ ತಪ್ಪಲ್ಲ. ಇದನ್ನೆಲ್ಲ ಮೂರು ತಿಂಗಳು ಎಂದು ಕೋರ್ಸ್‌ ರೀತಿ ಮಾಡದೆ, ಜೀವನಪೂರ್ತಿ ಲೈಫ್‌ಸ್ಟೈಲ್‌ ಆಗಿ ರೂಢಿಸಿಕೊಳ್ಳಬೇಕು, ಫಾಲೋ ಮಾಡಬೇಕು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ತೂಕ ಇಳಿಕೆ
ಹುಬ್ಬಳ್ಳಿ
ಆರೋಗ್ಯ
ಆಹಾರ

Latest Videos
Recommended Stories
Recommended image1
ಮಜ್ಜಿಗೆಗೆ ಈ ಒಂದು ಪುಡಿ ಹಾಕಿ ಕುಡಿದು ನೋಡಿ, ಶುಗರ್‌ ಲೆವಲ್ ಕಂಟ್ರೋಲ್ ಜೊತೆಗೆ ಯಂಗ್ ಆಗ್ತೀರಾ!
Recommended image2
Tamarind Water: ಪ್ರತಿದಿನ ಹುಣಸೆ ರಸ ಕುಡಿಬಹುದಾ? ಮ್ಯಾಜಿಕ್ ಮಾಡುತ್ತಾ ಅಥವಾ ಡ್ಯಾಮೇಜ್ ಆಗುತ್ತಾ?
Recommended image3
Varicose Veins: ಕಾಲುಗಳಲ್ಲಿ ನೀಲಿ ರಕ್ತನಾಳಗಳು ಕಾಣಿಸ್ತಿದ್ಯಾ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
Related Stories
Recommended image1
ಕಡಿಮೆ ಎಣ್ಣೆ ಬಳಸುವಂತೆ ಪ್ರಧಾನಿ ಮನವಿ… OIL ಇಲ್ಲದೇ ಈ ರೀತಿ ಟೇಸ್ಟಿ ಆಹಾರ ತಯಾರಿಸಿ
Recommended image2
ಆಹಾರ ಪ್ರಿಯರನ್ನು ಹುಚ್ಚರನ್ನಾಗಿ ಮಾಡ್ತಿರೋ ಕೊಂಕಣಿ ಶೈಲಿಯ 'ಅಂಬಾಟ ಬಟಾಟ' ರೆಸಿಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved