- Home
- Life
- Food
- ರಾತ್ರಿ ಮಿಕ್ಕ ಅನ್ನಕ್ಕೆ ರವೆ ಮಿಕ್ಸ್ ಮಾಡಿದ್ರೆ ತಯಾರಾಗುತ್ತೆ ರುಚಿಯಾದ ರೆಸಿಪಿ, ಬೆಳಿಗ್ಗೆ ಮಿಸ್ ಮಾಡ್ದೆ ತಯಾರಿಸಿ
ರಾತ್ರಿ ಮಿಕ್ಕ ಅನ್ನಕ್ಕೆ ರವೆ ಮಿಕ್ಸ್ ಮಾಡಿದ್ರೆ ತಯಾರಾಗುತ್ತೆ ರುಚಿಯಾದ ರೆಸಿಪಿ, ಬೆಳಿಗ್ಗೆ ಮಿಸ್ ಮಾಡ್ದೆ ತಯಾರಿಸಿ
Leftover rice suji crispy healthy Paddu : ರಾತ್ರಿ ಏನೇ ಮಾಡಿದ್ರೂ ಅನ್ನ ಉಳಿಯುತ್ತೆ. ಅದ್ರಲ್ಲಿ ಫ್ರೈಡ್ ರೈಸ್, ಚಿತ್ರಾನ್ನ ಮಾಡಿ ಮನೆಯವರಿಂದ ಬೈಸಿಕೊಂಡಾಗಿರುತ್ತೆ. ಅನ್ನ ಎಸೆಯೋದು ಕಷ್ಟ, ಬೇರೆ ರೆಸಿಪಿ ಗೊತ್ತಿಲ್ಲ ಅಂದ್ರೆ ಈ ಸ್ಟೋರಿ ಮಿಸ್ ಮಾಡ್ಬೇಡಿ.

ಮಿಕ್ಕ ಅನ್ನ ಎಸೆಯಬೇಡಿ
ರಾತ್ರಿ ಅನ್ನ ಮಿಕ್ಕೇ ಮಿಕ್ಕುತ್ತೆ. ಬೆಳಿಗ್ಗೆ ಅದೇ ಚಿತ್ರಾನ್ನ, ಫ್ರೈಡ್ ರೈಸ್ ತಿನ್ನೋಕೆ ಮನಸ್ಸಿರೋದಿಲ್ಲ. ಹಾಗಂತ ಬೇರೆ ರೆಸಿಪಿಗೆ ತಯಾರಿ ನಡೆದಿರೋದಿಲ್ಲ. ಅನೇಕ ಮಹಿಳೆಯರು, ʻʻಅಯ್ಯೋ, ಅಕ್ಕಿ ನೆನೆ ಹಾಕಿಲ್ಲ, ಕಡಲೆ ನೆನೆಸಿಲ್ಲ ನಾಳೆ ಬೆಳಿಗ್ಗೆ ಪಡ್ಡು ಮಾಡೋದು ಹೇಗೆʼʼ ಅಂತ ಚಿಂತೆಯಲ್ಲಿರ್ತಾರೆ. ಇನ್ಮುಂದೆ ಈ ಟೆನ್ಷನ್ ಬಿಟ್ಬಿಡಿ. ಮಿಕ್ಕ ಅನ್ನದಲ್ಲೇ ಪಡ್ಡು ಟ್ರೈ ಮಾಡಿ.
ಅನ್ನದ ಪಡ್ಡು ಮಾಡಲು ಅಗತ್ಯವಿರುವ ಪದಾರ್ಥ
ಉಳಿದ ಅನ್ನ 1 ಕಪ್. ರವೆ 1/2 ಕಪ್, ಮೊಸರು 1/2 ಕಪ್, ನುಣ್ಣಗೆ ಕತ್ತರಿಸಿದ ತರಕಾರಿಗಳು 1/2 ಕಪ್ (ಈರುಳ್ಳಿ, ಕ್ಯಾರೆಟ್ ಸೇರಿ ನಿಮ್ಮ ಆಯ್ಕೆಯ ತರಕಾರಿಗಳು), ಹಸಿರು ಮೆಣಸಿನಕಾಯಿ 1-2, ಕೊತ್ತಂಬರಿ ಸೊಪ್ಪು 2 ಚಮಚ, ಶುಂಠಿ ಪೇಸ್ಟ್ 1/2 ಟೀಸ್ಪೂನ್, ಬೇಕಿಂಗ್ ಸೋಡಾ 1/2 ಕಪ್ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಸಾಸಿವೆ ಮತ್ತು ಜೀರಿಗೆ ಒಗ್ಗರಣೆಗೆ ತಲಾ ಅರ್ಧ ಟೀಚಮಚ, ಎಣ್ಣೆ ಸ್ವಲ್ಪ.
ಅಕ್ಕಿ ಪಡ್ಡು ಮಾಡುವ ವಿಧಾನ
ಮೊದಲು ಉಳಿದ ಅನ್ನ, ರವೆ, ಮೊಸರು , ಮತ್ತು ಸ್ವಲ್ಪ ನೀರನ್ನು ಮಿಕ್ಸರ್ ಜಾರ್ಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಪೇಸ್ಟ್ ತುಂಬಾ ತೆಳುವಾಗಿರಬಾರದು. ಅದು ಇಡ್ಲಿ ಬ್ಯಾಟರ್ನ ಸ್ಥಿರತೆಯಾಗಿರಬೇಕು. ನಂತ್ರ ಈ ಮಿಶ್ರಣವನ್ನು ದೊಡ್ಡ ಬೌಲ್ ಗೆ ಹಾಕಿ ನುಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ ಪೇಸ್ಟ್ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬ್ಯಾಟರ್ ಅನ್ನು ಮುಚ್ಚಿ 10-15 ನಿಮಿಷಗಳ ಕಾಲ ಬಿಡಿ ಇದರಿಂದ ರವೆ ಉಬ್ಬಿಕೊಳ್ಳುತ್ತದೆ.
ಮಿಶ್ರಣ ಹೀಗಿರಲಿ
ಒಂದು ಸಣ್ಣ ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆಯನ್ನು ಹುರಿದು, ಕರಿಬೇವು ಸೇರಿಸಿ ಒಗ್ಗರಣೆ ತಯಾರಿಸಿ ಅದನ್ನು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣಕ್ಕೆ ನೀವು ಒಂದು ಚಿಟಿಕೆ ಅಡಿಗೆ ಸೋಡಾ ಸೇರಿಸಿ, ಅಗತ್ಯವಿದ್ರೆ ನೀರು ಮಿಕ್ಸ್ ಮಾಡಿ, ಚೆನ್ನಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಪಡ್ಡು ಹೀಗೆ ತಯಾರಿಸಿ
ಪಡ್ಡು ಮಾಡುವ ಪ್ಯಾನ್ ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಪ್ಯಾನ್ ಬಿಸಿ ಆಗ್ತಿದ್ದಂತೆ ಮಿಶ್ರಣವನ್ನು ಹಾಕಿ. ನಂತ್ರ ಗ್ಯಾಸ್ ಉರಿ ಕಡಿಮೆ ಮಾಡಿ. ಪಡ್ಡುವನ್ನು 3-4 ನಿಮಿಷ ಬೇಯಿಸಿ. ಕೆಳಭಾಗ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ ಅವುಗಳನ್ನು ಚಮಚದ ಸಹಾಯದಿಂದ ತಿರುಗಿಸಿ. ಮತ್ತೆ 2-3 ನಿಮಿಷಗಳ ಕಾಲ ಗರಿಗರಿಯಾಗುವವರೆಗೆ ಬೇಯಿಸಿ. ನಿಮ್ಮಿಷ್ಟದ ತೆಂಗಿನಕಾಯಿ ಚಟ್ನಿ, ಮಸಾಲೆಯುಕ್ತ ಹಸಿರು ಚಟ್ನಿ ಅಥವಾ ಟೊಮೆಟೊ ಕೆಚಪ್ನೊಂದಿಗೆ ಸರ್ವ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

