ಹುರಿದ ಪಕೋಡ ದಿನವಿಡೀ ಗರಿಗರಿಯಾಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
Keep pakoras crispy: ಮೂರರಿಂದ ನಾಲ್ಕು ಗಂಟೆಗಳ ನಂತರವೂ ನಿಮ್ಮ ಪಕೋಡ ಗರಿಗರಿಯಾಗಿಡಲು ಸಹಾಯ ಮಾಡುವ ಕೆಲವು ಸರಳ ಸಲಹೆಗಳನ್ನು ನಾವಿಲ್ಲಿ ಶೇರ್ ಮಾಡ್ತಿದ್ದೇವೆ. ನೀವು ಪ್ಯಾನ್‌ನಿಂದ ಬಿಸಿ ಪಡಕೋಡ ತೆಗೆದು ಒಂದರ ಮೇಲೊಂದು ಜೋಡಿಸಿದರೆ..

ಸ್ವಲ್ಪ ಸಮಯದ ನಂತರ ಮುದ್ದೆಯಂತಾಗುತ್ತವೆ
ಇದು ಶೀತ ಹವಾಮಾನ. ಆದ್ದರಿಂದ ಈ ಸಮಯದಲ್ಲಿ ಬಿಸಿಯಾದ ಏನನ್ನಾದರೂ ತಿನ್ನಬೇಕೆಂಬ ಹಂಬಲ ಬರುತ್ತೆ. ಅಂದರೆ ಚಹಾದೊಂದಿಗೆ ಪಕೋಡಾ ಬಜ್ಜಿ ತಿನ್ನೋದು ಬಹುತೇಕರ ಆಯ್ಕೆ. ಸಾಮಾನ್ಯವಾಗಿ ಪಕೋಡಾ ಬಿಸಿಯಾಗಿ ತಿಂದಾಗ ತುಂಬಾ ಗರಿಗರಿಯಾಗಿರುತ್ತವೆ. ಎಂಜಾಯ್ ಮಾಡ್ಬೋದು. ಆದರೆ ಸ್ವಲ್ಪ ಸಮಯದ ನಂತರ ಅವು ಮುದ್ದೆಯಂತಾಗುತ್ತವೆ. ಎಲ್ಲಾ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ. ಇದಲ್ಲದೆ ಬಿಸಿಯಾಗಿ ಇದ್ದಾಗ ಇದ್ದ ಪರಿಮಳ ಆಮೇಲೆ ಅಂದ್ರೆ ಮೃದುವಾದ ಮೇಲೆ ಇರಲ್ಲ.
ಕೆಲವು ಸರಳ ಸಲಹೆ
ಆದ್ದರಿಂದ ಈ ಲೇಖನದಲ್ಲಿ ಮೂರರಿಂದ ನಾಲ್ಕು ಗಂಟೆಗಳ ನಂತರವೂ ನಿಮ್ಮ ಪಕೋಡ ಗರಿಗರಿಯಾಗಿಡಲು ಸಹಾಯ ಮಾಡುವ ಕೆಲವು ಸರಳ ಸಲಹೆಗಳನ್ನು ನಾವಿಲ್ಲಿ ಶೇರ್ ಮಾಡ್ತಿದ್ದೇವೆ.
ಕಡಲೆ ಹಿಟ್ಟಿಗೆ ಸ್ವಲ್ಪ ಆರೋರೂಟ್ ಪುಡಿ ಸೇರಿಸಿ
ನಿಮ್ಮ ಪಕೋಡ ದೀರ್ಘಕಾಲದವರೆಗೆ ಗರಿಗರಿಯಾಗಿರಲು ಬಯಸಿದರೆ ಕಡಲೆ ಹಿಟ್ಟಿಗೆ ಆರೋರೂಟ್ ಪುಡಿ ಸೇರಿಸುವುದು ಸುಲಭ ಮಾರ್ಗವಾಗಿದೆ. ಒಂದು ಕಪ್ ಕಡಲೆ ಹಿಟ್ಟಿಗೆ 1-2 ಚಮಚ ಆರೋರೂಟ್ ಪುಡಿ ಮಿಶ್ರಣ ಮಾಡಿ. ಇದು ಹಿಟ್ಟನ್ನು ಲೈಟಾಗಿ, ಪಕೋಡ ಗರಿಗರಿಯಾಗುವಂತೆ ಮಾಡುತ್ತದೆ.
ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ
ಪಕೋಡಗಳನ್ನು ಗರಿಗರಿಯಾಗಿ ಮಾಡಲು ಇದು ಮತ್ತೊಂದು ಉತ್ತಮ ಸಲಹೆ. ಒಂದು ಕಪ್ ಕಡಲೆ ಹಿಟ್ಟನ್ನು ಎರಡು ಚಮಚ ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ. ಆರೋರೂಟ್ ಪುಡಿ ಲಭ್ಯವಿಲ್ಲದಿದ್ದರೆ ನೀವು ಅಕ್ಕಿ ಹಿಟ್ಟನ್ನು ಬಳಸಬಹುದು. ಇದು ಬಹಳ ಸಮಯದ ನಂತರವೂ ಪಕೋಡಗಳು ಮುದ್ದೆಯಾಗದಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ಈರುಳ್ಳಿ ಮತ್ತು ಆಲೂಗಡ್ಡೆ ಪಕೋಡಗಳನ್ನು ತಯಾರಿಸುವಾಗ ಅಕ್ಕಿ ಹಿಟ್ಟು ಉಪಯುಕ್ತವಾಗಿದೆ.
ಹಿಟ್ಟಿನ ಸ್ಥಿರತೆಗೆ ಗಮನ ಕೊಡಿ
ಪಕೋಡಗಳನ್ನು ತಯಾರಿಸುವಾಗ ಮತ್ತು ಅವು ದೀರ್ಘಕಾಲದವರೆಗೆ ಗರಿಗರಿಯಾಗಿರಬೇಕೆಂದು ಬಯಸಿದರೆ ನೀವು ಹಿಟ್ಟಿನ ಸ್ಥಿರತೆಗೆ ವಿಶೇಷ ಗಮನ ನೀಡಬೇಕು. ಹಿಟ್ಟು ತುಂಬಾ ತೆಳುವಾಗಿರಬಾರದು. ಸ್ವಲ್ಪ ದಪ್ಪವಾದ ಹಿಟ್ಟು ಸೂಕ್ತವಾಗಿದೆ. ಏಕೆಂದರೆ ತೆಳುವಾದ ಹಿಟ್ಟು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಪಕೋಡಗಳು ಕಾಲಾನಂತರದಲ್ಲಿ ಮುದ್ದೆಯಾಗುತ್ತವೆ.
ಪಕೋಡಗಳನ್ನು ಹೊರತೆಗೆದ ತಕ್ಷಣ ತಟ್ಟೆಯಲ್ಲಿ ಒಟ್ಟಿಗೆ ಇಡಬೇಡಿ
ಇದು ಒಂದು ಸಣ್ಣ ತಪ್ಪು. ನೀವು ಪ್ಯಾನ್‌ನಿಂದ ಬಿಸಿ ಪಡಕೋಡ ತೆಗೆದು ಒಂದರ ಮೇಲೊಂದು ಜೋಡಿಸಿದರೆ, ಕೆಳಭಾಗದಲ್ಲಿರುವವುಗಳು ಬೇಗನೆ ಮೃದುವಾಗುತ್ತವೆ. ಆದ್ದರಿಂದ ನೀವು ಪಕೋಡ ಮಾಡುವಾಗ ಅವುಗಳನ್ನು ವೈರ್ ರಾ ಕ್‌ನಲ್ಲಿ ಅಥವಾ ಪತ್ರಿಕೆಯ ಮೇಲೆ ಹರಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

